ಸದಸ್ಯ:Shashank Balehonnur/sandbox
ವಿನಿಮಯ ದರದ ಕೆಲವು ಭಾವನೆಗಳು[ಬದಲಾಯಿಸಿ] ಸದ್ಯದ ದರ ಮತ್ತು ಮುಂಗುಡ ದರ ಸದ್ಯದ ದರವೆಂದರೆ ಈ ದರಕ್ಕೆ ಕೂಡಲೆ ವಿದೇಶಿ ವಿನಿಮಯವನ್ನು ಒದಗಿಸಬೇಕಾಗುವ ದರ.ಮುಂಗುಡ ದರವೆಂದರೆ ಈ ವಿನಿಮಯ ದರಕ್ಕೆ ಮುಂದೆ ವಿದೇಶಿ ವಿನಿಮಯ ದರವನ್ನು ಕೊಳ್ಳಲು ಇಲ್ಲವೆ ಮಾರಲು ಮುಂಗಡವಾಗಿ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ.ಈ ದರವು ಸದ್ಯದ ದರಕ್ಕಿಂತ ಹೆಚ್ಚು ಅಥವಾ ಕಡಿಮೆಯಾಗಿರಬಹುದು.
ಸ್ಥಿರವಾದ ದರ ಮತ್ತು ಬದಲಾಗುವ ಮತ್ತು ಹೊಂದಾಣಿಕೆಯ ದರ ಸ್ಥಿರವಾದ ವಿನಿಮಯದರವೆಂದರೆ ಒಂದು ದೇಶದ ಚಲಾವಣೆಯ ಹಣವನ್ನು ನಿರ್ದಿಷ್ಟವಾದ ಚಿನ್ನದ ರೂಪದಲ್ಲಿ ಅಥವಾ ವಿದೀಶನದಲ್ಲಿ ವ್ಯಕ್ತಪಡಿಸಲಾಗುವುದು. ಹೊಂದಾಣಿಕೆಯ ದರವೆಂದರೆ ಕೆಲವು ಅವಧಿಯವರೆಗೆ ವಿನಿಮಯ ದರವು ಸ್ಥಿರವಾಗಿರುತ್ತದೆ.ನಂತರ ಸ್ಥಿತಿ ಗತಿಗಳು ಬದಲಾಂದತೆ ಅವಶ್ಯಕತೆಗಳಿಗನುಗುಣವಾಗಿ ಆವಿನಿಮಯ ದರವನ್ನು ಬದಲಾಯಿಸಲಾಗುತ್ತದೆ.
ಬಹುಮುಖ ದರ ಒಂದು ರಾಷ್ಟ್ರವು ತನ್ನ ಚಲಾವಣೆಯ ಹಣವನ್ನು ಒಂದಕ್ಕಿಂತ ಹೆಚ್ಚು ವಿನಿಮಯ ದರಗಳಲ್ಲಿ ವ್ಯಕ್ತ ಪಡಿಸಿದಾಗ ಅದಕ್ಕೆ ಬಹಮುಖ ವಿನಿಮಯ ದರವೆಂದು ಕರೆಯುತ್ತಾರೆ. ಉದಾ:ಅದು ಆಮದಿಗಾಗಿ ಒಂದು ದರ ಮತ್ತು ರಫ್ತಿಗಾಗಿ ಇನ್ನೊಂದು ವಿನಿಮಯ ದರವನ್ನು ನಿರ್ದರಿಸಬಹುದು.
ಎರಡು ಹಂತದ ವಿನಿಮಯ ಪದ್ದತಿ ಒಂದು ದೇಶವು ಎರಡು ಹಂತದ ವಿನಿಮಯ ದರಗಳನ್ನು ನಿರ್ಧರಿಸುತ್ತದೆ. ಅದು ವಾಣಿಜ್ಯದ ವ್ಯವಹಾರಗಳಿಗಾಗಿ ಒಂದು ದರವನ್ನು (ಸಾಮಾನ್ಯವಾಗಿ ಹೆಚ್ಚಿನ ದರ) ನಿಗದಿ ಮಾಡಿದರೆ ಬಂಡವಾಳದ ವ್ಯವಹಾರಗಳಿಗಾಗಿ ಇನ್ನೊಂದು ದರವನ್ನು (ಕಡಿಮೆ ದರವನ್ನು) ನಿರ್ಧರಿಸುತ್ತದೆ.
ಕೊಳ್ಳುವ ಶಕ್ತಿಯ ಸರಿಸಮಾನತೆಯ ಸಿದ್ಧಾಂತ[ಬದಲಾಯಿಸಿ] ಈ ಸಿದ್ಧಾಂತವನ್ನು ಸ್ಟೀಡನ್ನಿನ ಅರ್ಥಶಾಸ್ತ್ರ ರಾದ 'ಗೊಸ್ಟೊ ಕಾಸೆಲ್'ರವರು ಪ್ರತಿಪಾದಿಸಿದ್ದಾರೆ. ಈ ಸಿದ್ಧಾಂತದ ಪ್ರಕಾರ ಎರಡು ರಾಷ್ಟ್ರಗಳು ಅಪರಿವರ್ತಿತ ಕಾಗದ ಹಣಪದ್ದತಿಯನ್ನು ಹೊಂದಿರುವಾಗ, ಅವೆರಡು ರಾಷ್ಟ್ರಗಳ ಹಣದ ವಿನಿಮಯ ದರವು ಆಯಾ ರಷ್ಟ್ರದ ಹಣದ ಆಂತರಿಕಕೊಳ್ಳುವ ಶಕ್ತಿಯಿಂದ ನಿರ್ಧಾರವಾಗುತ್ತದೆ.ಹಣದ ಆಂರಿಕಗೊಳ್ಳುವ ಶಕ್ತಿಯು ವಸ್ತುಗಳ ಬೆಲೆಯಿಂದ ನಿರ್ಧಾರವಾಗುತ್ತದೆ.ವಸ್ತುಗಳ ಬೆಲೆಗಳು ಏರಿದಾಗ ಹಣದಕೊಳ್ಳುವ ಶಕ್ತಿಯು ಕಡಿಮೆಯಾಗುತ್ತದೆ. ಆಗ ಅದರ ವಿನಿಮಯ ದರವೂ ಕಡಿಮೆಯಾಗುತ್ತದೆ. ವಸ್ತುಗಳ ಬೆಲೆಗಳು ಇಳಿದಾಗ ಹಣದಕೊಳ್ಳುವ ಶಕ್ತಿಯು ಅಧಿಕವಾಗುತ್ತದೆ.ಆಗ ಅದರ ವಿನಿಮಯ ದರವು ಅಧಿಕವಾಗುತ್ತದೆ.ಆದ್ದರಿಂದ ಎರಡೂ ರಾಷ್ಟ್ರಗಳ ಚಲಾವಣೆಯ ನಾಣ್ಯಗಳು ವಿನಿಮಯ ದರವು ಆ ಎರಡೂ ರಾಷ್ಟ್ರಗಳ ಬೆಲೆಗಳ ಸಂಬಂಧದಿಂದ ನಿರ್ಣಯವಾಗುತ್ತದೆ. ಇದನ್ನು ಒಂದು ಉದಾಹರಣೆ ಮೂಲಕ ವಿವರಿಸಬಹುದು. ಭಾರತ ಮತ್ತು ಅಮೇರಿಕ ರಾಷ್ಟ್ರಗಳು ಅಪರಿವರ್ತಿತ ಕಾಗದ ಹಣದ ಪದ್ಧತಿಯನ್ನು ಹೊಂದಿರುತ್ತದೆ.ಎರಡು ದೇಶಗಳ ಹಣದ ಚಲಾವಣೆ ಪದ್ಧತಿಗಳಲ್ಲಿ ಯಾವ ಸಂಬಂಧವೂ ಇರುವುದಿಲ್ಲ. ಆಗ ಈ ಎರಡು ದೇಶಗಳ ಚಲಾವಣೆಯ ನಾಣ್ಯಗಳ ವಿನಿಮಯ ದರವನ್ನು ನಿರ್ಧರಿಸಲು ಅವುಗಳ ಆಂತರಿಕಕೊಳ್ಳುವ ಶಕ್ತಿಯನ್ನು ಗಮನಿಸಬೇಕಾಗುತ್ತದೆ. ಭಾರತದ ಜನರು ಅಮೇರಿಕಾದಲ್ಲಿ ವಸ್ತುಗಳನ್ನು ಕೊಳ್ಳಲು ಡಾಲರನ್ನು ಆಪೆಕ್ಷಿಸುತ್ತಾರೆ.ಅದೇ ರೀತಿ ಅಮೇರಿಕಾದ ಜನರು ಭಾರತದಲ್ಲಿ ವಸ್ತುಗಳನ್ನು ಕೊಳ್ಳವಾಗ ರೂಪಾಯಿ ಕೊಳ್ಳವ ಶಕ್ತಿಯನ್ನು ವಿಚಾರಿಸುತ್ತಾರೆ. ಆದ್ದರಿಂದ ರೂಪಾಯಿ ಮತ್ತು ಡಾಲರ ಇವುಗಳ ವಿನಿಮಯ ದರವು ರೂಪಾಯಿಯ ಕೊಳ್ಳುವ ಶಕ್ತಿಯ ಡಾಲರಿನ ಕೊಳ್ಳುವ ಶಕ್ತಿಗೆ ಸಮವಾಗುವ ಮಟ್ಟದಲ್ಲಿ ನಿರ್ಧರವಾಗುತ್ತದೆ. ಎರಡು ಕರೆನ್ಸಿಗಳಕೊಳ್ಳುವ ಶಕ್ತಿಗಳು ಯಾವ ಪ್ರಮಾಣದಲ್ಲಿ ಸರಿಸಮಾನವಾಗುವವೋ ಅದೇ ಪ್ರಮಾಣದಲ್ಲಿ ಅವುಗಳ ವಿನಿಮಯ ದರವು ನಿರ್ಧರಿಸಲ್ಪಡುತ್ತವೆ.ಆದ್ದರಿಂದ ಇದಕ್ಕೆ ಕೊಳ್ಳುವ ಶಕ್ತಿಯ ಸರಿಸಮಾನತೆಯ ಸಿದ್ಧಾಂತವೆಂದು ಕರೆಯುತ್ತಾರೆ.
ಅಂತರಾಷ್ಟ್ರೀಯ ಹಣಕಾಸಿನ ಸಂಸ್ಥೆಗಳು[ಬದಲಾಯಿಸಿ] ಅಂತರಾಷ್ಟ್ರೀಯ ಹಣಕಾಸಿನ ನಿಧಿ[ಬದಲಾಯಿಸಿ] ಅಂತರಾಷ್ಟ್ರೀಯ ಹಣಕಾಸಿನ ನಿಧಿ ೧೯೪೫ ರಲ್ಲಿ ಸ್ಥಾಪನೆಯಾಗಿ,೧೯೪೭ ಮಾರ್ಚ್ ತಿಂಗಳಿನಿಂದ ತನ್ನ ಕಾರ್ಯವನ್ನು ಪ್ರಾಂರಂಭಿಸಿತು.ಅದು ಸ್ಥಾಪನೆಯಾದ ವೇಳೆಯಲ್ಲಿ ೪೪ ಸದಸ್ಯ ರಾಷ್ಟ್ರಗಳಿದ್ದವು. ಅದರ ಸದಸ್ಯರ ಸಂಖ್ಯೆ ೧೯೮೬ನೇ ಏಪ್ರಿಲ್ ೩೦ಕ್ಕೆ ೧೪೯ಕ್ಕೇರಿತು. ನಿಧಿಯ ಉದ್ದೇಶಗಳು : ಅಂತರಾಷ್ಟ್ರೀಯ ಹಣಕಾಸಿನ ನಿಧಿಯು ಕೆಳಗಿನ ಉದ್ದೇಶಗಳನ್ನು ಹೊಂದಿರುತ್ತದೆ.[೨]
ಅಂತರಾಷ್ಟ್ರೀಯ ಹಣಕಾಸಿನ ಸಹಕಾರ ವಿದೇಶಿ ವಿನಿಮಯ ದರದಲ್ಲಿ ಸ್ಥಿರತೆ ವಿದೇಶಿ ವಿನಿಮಯ ನಿಯಂತ್ರಣಗಳನ್ನು ತೆಗೆದುಹಾಕುವುದು ವ್ಯಾಪಾರ ಮತ್ತು ಉದ್ದಿಮೆಗಳ ಅಭಿವೃದ್ದಿಗೆ ಹಣಕಾಸಿನ ಸಹಾಯ ಮಾಡುವುದು ಬೇರೆ ಬೇರೆ ಕರೆನ್ಸಿಗಳ ಬಹು ಪಾರ್ಶ್ಚ ಪರಿವರ್ತನೆ ಸಾಧಿಸುವುದು. ಸಂದಾಯ ಬಾಕಿ ಕೊರತೆ ನಿವಾರಣೆಗೆ ಸದಸ್ಯ ರಾಷ್ಟ್ರಗಳಿಗೆ ಅಲ್ಪಕಾಲಾವಧಿ ಹಣಕಾಸಿನ ಸಹಾಯ ಮಾಡುವುದು ಸಂದಾಯ ಬಾಕಿ ಅಸಮತೋಲವನ್ನು ನಿವಾರಿಸುವುದು. ಮುಂದುವರಿದ ರಾಷ್ಟ್ರಗಳಿಗೆ ಅಭಿವೃದ್ದಿ ಶೀಲ ರಾಷ್ಟ್ರಗಳಲ್ಲಿ ಬಂಡವಾಳ ತೊಡಗಿಸಲು ಪ್ರೇರೇಪಿಸುವುದು