ಸದಸ್ಯ:Sharat Shetty S/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿರಿಪಾಡ್ದನ[ಬದಲಾಯಿಸಿ]

ಸಿರಿ ಎನ್ನುವ ಪದಕ್ಕೆ ಅನೇಕ ಅರ್ಥವ್ಯಾಪ್ತಿ ಇದ್ದರೂ ಒಟ್ಟಾರೆ ಅರ್ಥ ಸಿರಿ ಎನ್ನುವುದು ಸಮೃದ್ಧಿ, ಅಭಿವೃದ್ಧಿ, ಫಲವಂತಿಕೆಯನ್ನು ಸೂಚಿಸುತ್ತದೆ.

ಪಿಂಗಾರದ ಪುಷ್ಪದಲ್ಲಿ, ಕುಂಕುಮದ ಹರಳಿನಲ್ಲಿ, ಗಂಧದ ಗುಳಿಗೆಯಲ್ಲಿ ಕನ್ಯೆರೂಪದಲ್ಲಿ ಒಮ್ಮೆಲೆ ಪ್ರಕಟಗೊಂಡವಳು. ಅವಳ ಬಾಲ್ಯದ ಬಗ್ಗೆ ಪಾಡ್ದನಗಳು ಮೌನವಾಗಿವೆ. ಮಾಮೂಲಿ ಹೆಣ್ಣಿನಂತೆ ಅವಳನ್ನು ಯುವಕ ಕಾಂತಾಳ್ವನಿಗೆ ವಿವಾಹ ಮಾಡಿಕೊಡಲಾಗುತ್ತದೆ. ವಿವಾಹಾನಂತರ ಕೂಡಾ ಬಯಕೆಯ ದಿನದ ವರೆಗೆ ಸಿರಿಯ ಸಂಘರ್ಷ ದಾಖಲಾಗಿಲ್ಲ. ಬಯಕೆಯ ದಿನ ಆಕೆ ಗಂಡನ ಸೂಳೆಯ ಸಂಗವನ್ನು ನೆರೆದ ಅತಿಥಿಗಳ ಮುಂದೆ ಬಯಲುಗೊಳಿಸಿದ ರೀತಿ ಸಿರಿಯ ಕಥೆಯನ್ನು ಬೆಳೆಸುತ್ತದೆ.

ಸಿರಿಯ ಸಂಘರ್ಷ ಸನ್ನಿವೇಶ[ಬದಲಾಯಿಸಿ]

  1. ಸಿರಿ ಗಂಡನ ಸೂಳೆ ಸಂಗವನ್ನು ಪ್ರಶ್ನಿಸಿದ ಸಂದರ್ಭ.
  2. ಸಿರಿಯು ಅಜ್ಜನ ಶವವನ್ನು ತಾನೇ ಹೊತ್ತು ಶವಸಂಸ್ಕಾರ ಮಾಡಿದ ಸಂದರ್ಭ.
  3. ಪತ್ತೆರಿ ಕೂಟದವರು ಸಿರಿಯನ್ನು ಕಟುಮಾತುಗಳಿಂದ ನಿಂದಿಸುವ ಸನ್ನಿವೇಶ.
  4. ಸಿರಿಯು ತನ್ನ ಗಂಡ ಕಾಂತು ಪೂಂಜನಿಂದ ಬರ ಪಡೆಯುವ ಸನ್ನಿವೇಶ.
ಇಷ್ಟಲ್ಲದೆ ಲೋಕನಾಡಿನ ನಾಗೋಜಿ ಬ್ರಾಹ್ಮಣನ ದೂಷಣೆ ಮತ್ತು ಓಡದ ಕುಂಞನ ದೂಷಣೆಯಲ್ಲಿಯೂ ಸಿರಿಯು ಕಟುಮಾತುಗಳನ್ನು ಕೇಳುತ್ತಾಳೆ.

ಸಿರಿ ಕಾವ್ಯದಲ್ಲಿ “ಸಂಬರ್ ಮೀರಿ ಕಜಿಪು …. ತಮೆರಿ ಮೀರಿ ಪೆಣ್ಣು …. ದಾಡೆ ಮೀರಿ ದೋಡೆ ….. ಪೆಣ್ಣಗ್ ಅರಸ್ತನನಾ …” ಎಂಬಿತ್ಯಾದಿ ಬೈನುಡಿಗಳು ಆ ಕಾಲದ ಹೆಣ್ಣಿನ ಸ್ವಾತಂತ್ರ್ಯದ ಮಿತಿಯನ್ನು ಸೂಚಿಸುತ್ತವೆ. ಭಿನ್ನ ಪಾಡ್ದನಗಳಲ್ಲಿ ಕೂಡಾ ಸಿರಿಗೆ ಹೇಳುವ ಬೈನುಡಿ ಕಟುವಾಗಿಯೇ ಇದೆ. ಹಾಗೂ ಅಷ್ಟೇ ಗಟ್ಟಿಯಾಗಿ ಸಿರಿಯ ಪ್ರತಿಭಟನೆಯು ದಾಖಲಾಗಿದೆ. ಪಾಡ್ದನದ ಉದ್ದೇಶವೇ ಪುರುಷ ಪ್ರಧಾನ ಸಮಾಜದ ದಬ್ಬಾಳಿಕೆಗಳ ನಿರಾಕರಣೆ ಎಂಬಂತೆ ಪಾಡ್ದನದುದ್ದಕ್ಕೂ ಸಿರಿಯ ಪ್ರತಿಭಟನೆ ಎದ್ದುಕಾಣುತ್ತದೆ. ಅಚ್ಚರಿ ಹುಟ್ಟಿಸುತ್ತದೆ. ಸಿರಿಯ ಸೀಮಂತದವರೆಗೆ ಅವಳ ಗಂಡನ ಮನೆಯಲ್ಲಿ ಅವಳ ಸಂಘರ್ಷ ಕರ್ಗಿ ಸೆಡ್ತಿ ಹಾಡಿದ ಪಾಡ್ದನದಲ್ಲಿ ಮಾತ್ರ ನಿರೂಪಿಸಲಾಗಿದೆ. ಅಶೋಕ ಆಳ್ವ ಅವರು ಸಿರಿ ಕಾವ್ಯಗಳ ತುಲನಾತ್ಮಕ ವಿಮರ್ಶೆ ನಡೆಸುತ್ತಾ ಹೀಗೆ ಬರೆಯುತ್ತಾರೆ. “ಸಿರಿಯ ಸೀಮಂತದ ಸೀರೆಯೊಡನೆ ಸೂಳೆ ಸಿದ್ದುವಿನಲ್ಲಿಗೆ ಹೋದ ಕಾಂತು ಪೂಂಜನ ಕೈಯಿಂದ ಸಿದ್ದು ಸೀರೆ ತೆಗೆದುಕೊಂಡು ಉಡುತ್ತಾಳೆ. ಆಳ್ವ (ಪೂಂಜ) ಅದನ್ನು ನೋಡಿ ‘ಮಾನ ತೆಗೆದೆ’ ಎಂದು ಹೇಳುತ್ತಾನೆ. ಸಿದ್ದು ಹಿಂದಿನಂತೆಯೇ ಮಡಚಿ ಮರಳಿ ಕೊಡುತ್ತಾಳೆ. ಆಳ್ವ (ಪೂಂಜ) ಸೀರೆಯನ್ನು ತಂದು ಕಬ್ಬಿಣದ ಕಲೆಂಬಿಯಲ್ಲಿಡುತ್ತಾನೆ. ಇಲ್ಲಿ ಕಾಂತು ಪೂಂಜ ಸಂಕರು ಪೂಂಜೆದಿಯರಿಬ್ಬರೂ ಸೀಮಂತ ಮಾಡಲು ಹಿಂಜರಿಯುವ ಬಗ್ಗೆ ಹೇಳಲಾಗಿದೆ ಮತ್ತು ಆ ಮೂಲಕ ಸೀಮಂತಕ್ಕೆ ಮೊದಲೇ ಸಿರಿಗೆ ಗಂಡ ಮತ್ತು ಅತ್ತೆಯ ಜೊತೆಯಲ್ಲಿ ನೆಮ್ಮದಿಯ ಸಂಸಾರ ಇರಲಿಲ್ಲ ಎಂಬುದನ್ನು ಹೇಳಲಾಗಿದೆ. ಮೊತ್ತ ಮೊದಲಿಗೆ ಸಿರಿಯು ಬಯಕೆಯ ಸೀರೆಯನ್ನು ನಿರಾಕರಿಸುವುದು ಬಹಳ ಸೂಕ್ಷ್ಮ ಸನ್ನಿವೇಶದಲ್ಲಿ. ಅದುವರೆಗೆ ಅವಳ ಗಂಡ ಕಾಂತು ಪೂಂಜನ ಸೂಳೆ ಸಂಗದ ಮಾತು ಬರುವುದಿಲ್ಲ. ಗಂಡನ ಸೂಳೆ ಸಿದ್ದು ಉಟ್ಟು ಮಾಸಿದ ಮೈಲಿಗೆ ಸೀರೆಯನ್ನು ಸತ್ಯ (ಶಕ್ತಿ)ದ ಮಗಳು ತಾನು ಮೈಗೆ ಹಾಕಲಾರೆ ಎಂದು ನೆರೆದ ಸಭೆಯ ಮುಂದೆ ಹೇಳುತ್ತಾಳೆ. ರಾಮಕ್ಕ ಮುಗೆರ್ದಿಯ ಪಾಡ್ದನದಲ್ಲಿ, ಸೇರಿದ ಸಭೆಯ ಮಂದಿ ಕೂಡಾ ಸಿರಿಯನ್ನು ದಂಡಿಸುತ್ತಾರೆ. ಆಗ “ಒಮ್ಮೆ ಸೀರೆಗೆ ಕೈಕೊಟ್ಟು ನನ್ನ ಮಾನ ಉಳಿಸು” ಎಂದು ಅಂಗಲಾಚುತ್ತಾರೆ. ಗಿಡೆಗೆರೆ ರಾಮಕ್ಕ ಮುಗೆರ್ದಿಯ ಪಾಡ್ದನದಲ್ಲಿ ಈ ಭಾಗ ಸುಂದರವಾಗಿ ಕಾವ್ಯಾತ್ಮಕವಾಗಿ ನಿರೂಪಿತವಾಗಿದೆ. ಅಜ್ಜ ಬೆರ್ಮಾಳುವರು ಅವಳಲ್ಲಿ ಸೀರೆ ಪಡೆಯಲು ಒತ್ತಾಯಿಸುತ್ತಾರೆ. ಆಗ ಸಿರಿ ಎಡಕೈಯಿಂದ ಸೀರೆ ಪಡೆದು ತಾನು ಕುಳಿತು ಕೊಳ್ಳಬೇಕಾಗಿದ್ದ ದಂಡಿಗೆಯ ಮೇಲೆ ಆ ಸೀರೆಯನ್ನು ಬೀಸಿ ಹರಡುತ್ತಾಳೆ: “ಇದು ಕಡೆರಿ ಕಾರ್ಲದ ಕೊಡಿ ಕಂಬುಲದ ಸೂಳೆ ಸಿದ್ದುನ ಪಟ್ಟೆಯಾ, ಸಾವಿರ ಮನುಷ್ಯರು ಉಟ್ಟ ಸೂಳೆ ಸಿದ್ದುವಿನ ಪಟ್ಟೆಯಾ, ಇದನ್ನು ನನ್ನ ಮೈಮೇಲೆ ಹಾಕಲಾರೆ..” ಎನ್ನುತ್ತಾಳೆ. ಕರ್ಗಿಸೆಡ್ತಿ ಹಾಡಿದ ಪಾಡ್ದನದಲ್ಲಿ ಸಿರಿ ಸೀಮಂತ ಮುಗಿಸಿ ತವರಿಗೆ ಹೊರಡುವಾಗ ತಾನು ಕುಳಿತ ದಂಡಿಗೆಗೆ ಆಕೆಯ ಗಂಡ ಕಾಂತು ಪೂಂಜ ಹೆಗಲು ಕೊಟ್ಟು ಎಬ್ಬಿಸಬೇಕು ಎನ್ನುವ ಸನ್ನಿವೇಶ ನಿರೂಪಿತವಾಗಿದೆ. ಆಗ ಕಾಂತು ಪೂಂಜ ಅವಳ ಮಾತನ್ನು ನಿರಾಕರಿಸಿ ಹೋಗುತ್ತಾನೆ. ಅದಕ್ಕೆ ಸಿರಿಯ ಪ್ರತಿಕ್ರಿಯೆ ಹೀಗಿದೆ: “ನಾರಾಯಿನ ಗಂಡುಸೇ ದಂಡಿಗೆಯನ್ನು ಕಲ್ಲು ಮಾಡಿಯೇನು. ಕೈಹಿಡಿದ ದೋಷ ಎಂದು ನೋಡಲಾರೆ ಕಲ್ಲು ಮಾಡಿಯೇನು. ಅಹಂಕಾರದ ಗಂಡುಸೇ, ಮೀಸೆ ಹೊಂದಿ ಹುಟ್ಟಿದ ಗಂಡುಸೇ ಎದೆಯಲ್ಲಿ ಮೊಲೆಹೊಂದಿ ಹುಟ್ಟಿದ ಹೆಣ್ಣು ನಾನೂ…” ಸತ್ಯನಾಪುರದ ಉತ್ತರಾಧಿಕಾರಿ ತಾನಾಗಬೇಕು ಇಲ್ಲವಾದರೆ ಅಜ್ಜನ ಶವ ಎತ್ತಲು ಬಿಡಲಾರೆ ಎಂದು ಸಿರಿಯ ಮುಂದೆ ಸೂಡದ ಅನ್ನು ಸೆಟ್ಟಿ ಮಗ ಶಂಕರಾಳ್ವ ಹೇಳುವಾಗ ಸಿರಿ ಕೆರಳಿ ಸಿಡಿಗುಂಡಿನಂತೆ ಸಿಡಿಯುತ್ತಾಳೆ: “ನಾನು ಹೆಣ್ಣು ಸಂಕರಾಳುವ ಗಂಡು ನೀನು. ಇಂದು ನನ್ನ ತಲೆಯ ಮೇಲೆ ಅಜ್ಜನನ್ನು ಹೊತ್ತು ಆಕಾಶಕ್ಕೆ ಹೊಗೆ, ಭೂಮಿಗೆ ವಿಭೂತಿ ಮಾಡುವ ಚಂದ ನೋಡು” ಎನ್ನುತ್ತಾ ಜಯವುಳ್ಳ ಬೆರ್ಮರನ್ನು ನೆನೆಯುತ್ತಾಳೆ. ಈ ಸಂದರ್ಭದಲ್ಲಿ ಸಿರಿಯ ಅಲೌಕಿಕ ಶಕ್ತಿಯ ಪ್ರದರ್ಶನವಾಗುತ್ತದೆ. ಆಕೆಯ ಆಶಯದಂತೆ ಸತ್ಯನಾಪುರದಲ್ಲಿ ಅಜ್ಜನಿಗೆ ಕಾಟ/ಚಿತೆ ಸಿದ್ಧವಾಗುತ್ತದೆ. ಸಿರಿ ತಾನೇ ತಲೆಯ ಮೇಲೆ ಹೊತ್ತು ಅಜ್ಜನ ಶವಸಂಸ್ಕಾರ ಮಾಡುತ್ತಾಳೆ.

ಕಾಪ್ ಪಂಚಾಯಿತಿ[ಬದಲಾಯಿಸಿ]

ಪುರುಷ ಪ್ರಧಾನ ಪತ್ತೇರಿ ಕೂಟ (ಕಾಪ್ ಪಂಚಾಯಿತಿಯಂತೆ) ಸತ್ಯನಾಪುರದ ಸಿರಿಯ ಹಕ್ಕನ್ನು ಶಂಕರಾಳ್ವನಿಗೆ ಕೊಡುವ ಉದ್ದೇಶದಿಂದ ಸಿರಿಯನ್ನು ಅಪರಾಧಿಯಂತೆ ಕೂಟದ ಕಳಕ್ಕೆ ಕರೆಸುತ್ತದೆ. ಅಪರಾಧಿ ಮಹಿಳೆಯಂತೆ ಪತ್ತೇರಿ ಕೂಟದ ಕಳಕ್ಕೆ ಸಿರಿ ಹೋಗುತ್ತಾಳೆ. ಸಿರಿಯನ್ನು ಗೌರವಯುತವಾಗಿ ಕೂಟದ ಕಲದ ಪಾಲವರು ಎದುರ್ಗೊಳ್ಳುತ್ತಾರೆ ಹಾಗೂ ಕೂರಲು ಆಸನ ತೋರಿಸುತ್ತಾ, “ನಮ್ಮ ಸೋದರಿಯರು, ಸೊಸೆಯರು ಬೇರೆ ಅಲ್ಲ, ಸಿರಿಯೇ ನೀನು ಬೇರೆ ಅಲ್ಲವೇ ಕೂಟದ ಕಲಕ್ಕೆ ಬರಬೇಕು ಬಂದು ಕುಳಿತುಕೊಳ್ಳಬೇಕು ನ್ಯಾಯ ಸತ್ಯ ಅರುಹಬೇಕು” ಎಂದು ಹತ್ತು ಜನ ಪಾಲವರು ಸಿರಿಯನ್ನು ಬಾಮಿಸುವಾಗ ಸಿರಿಯು ಏಳೇಳು ಹತ್ತು ಹದಿನಾರು ಲೋಕದ ಕೋಪವನ್ನು ಕೋಪಿಸುತ್ತಾಳೆ. “ನನ್ನಂತಹ ಸೋದರಿ ಸೊಸೆಯರನ್ನು ನೀವು ಬೆನ್ನಿಗೆ ಕಟ್ಟಿಕೊಂಡು (ಜೊತೆಗೆ) ಹತ್ತು ಮಂದಿ ಸೇರಿದ ಕೂಟದ ಕಳಕ್ಕೆ ಕರೆದು ಬಂದಿರುವಿರೆ?” ಎನ್ನುತ್ತಾಳೆ. “ಸೂಡದಲ್ಲಿ ಜನಿಸಿದ ಅಣ್ಣುಸೆಟ್ಟಿ ಮಗ ಸಂಕರಾಲ್ವಗೆ ಕೊಡಬೇಕು” ಎನ್ನುವಾಗ ಸಂಕಾರು ಅಲುವ ಹೇಳುವರು “ಒಳಗಿನ ಏಲಿಕೆ ವ್ಯವಹಾರ ನೀನೇ ನೋಡಿಕೊಂಡಿರಬೇಕು ಸಿರಿಯೇ”. ಒಂದು ಒಡೆದ ಮಡಿಕೆಯಲ್ಲಿ ಎರಡು ನಾಯಿಗಳು ಒಟ್ಟಿಗೆ ಗಂಜಿನೀರು ನೆಕ್ಕವು ಎನ್ನುತ್ತಾ “ಹತ್ತು ಕೂಡಿ ಪಾಲವರನ್ನೂ ಸಂಕರಾಲ್ವನನ್ನೂ ಕೂಟದ ಕಲದಲ್ಲಿಯೇ ಕಲ್ಲುಮಾಡಿಯೇನು” ಎಂದು ಒಲ್ಲು ಎತ್ತಿ ಬಿಸಾಕಲು ಎತ್ತಿದಾಗ ಕೂಟದ ಪಾಲವರು ಅವಳ ಬಳಿ ಕ್ಷಮೆಯಾಚಿಸುತ್ತಾರೆ. ಕೂಟದ ಕಳ ವಿಸರ್ಜಿಸುತ್ತಾರೆ. ಅಮೃತ ಸೋಮೇಶ್ವರರ ಪಾಡ್ದನದಲ್ಲಿ, ಅರಮನೆಯ ಆಡಳಿತ ಇತ್ಯಾದಿ ತನಗಲ್ಲದೆ ಅನ್ಯರಿಗೆ ಬಿಟ್ಟುಕೊಡಲಾರೆ ಎಂಬ ಸಿರಿಯ ಧೃತಿಗೆಡದ ನುಡಿಗೆ ಪಾಲವರು ಹೇಳುತ್ತಾರೆ- “ಹೆಣ್ಣಿಗೆ ಪಟ್ಟ (ಸಿಂಹಾಸನ) ನೀಡಿದರೆ ಹೆಣ್ಣಾಳಿಕೆ ನಡೆಯಬಹುದು ಅದಾಗದು ಸಿರಿಯೇ”. ನನ್ನ ಅಜ್ಜನ ಅರಮನೆಯ ಪಟ್ಟ ನನಗಲ್ಲದೆ ಹೊರಗಿನ ಜನಕ್ಕೆ ನಾನು ಬಿಟ್ಟುಕೊಡಲಾರೆ ಎಂದು ಸಿರಿ ಘೋಷಿಸುತ್ತಾಳೆ. ಆಗ ಪಾಲವರು “ನೀನು ‘ದಾಡೆ ಮೀರಿದ ದೋಡೆ’ಯೇ ತಮೆರಿ ಇಲ್ಲದ ಹೆಣ್ಣು ನಿನಗೆ ಹೆಣ್ಣಾಳ್ವಿಕೆಯೇ ಸಿರಿ” ಎಂದು ಕೇಳುತ್ತಾರೆ. ಇದರಿಂದ ಕಡುರೋಷಗೊಂಡು “ಓ ನಾರಾಯಿನ ಪುರುಷರೇ …” ಎನ್ನುತ್ತಾ ಕೆರಳಿ “ಇಂತಹ ನ್ಯಾಯದ ಕಟ್ಟೆಗೆ ನನಗೆ ಬರಹೇಳಿದಿರಾ ?” ಎಂದು ಸಿರಿ ಪ್ರಶ್ನಿಸುತ್ತಾಳೆ. ಈ ರೀತಿಯ ಪಂಚಾಯತಿಯ ಕೂಟದ ಕಳವೇ ತನಗೆ ಬೇಡವೆಂದು ಕಳ ಇಳಿದು ಹೋಗುತ್ತಾಳೆ. ಕರ್ಗಿಸೆಡ್ತಿ ಪಾಡ್ದನದಲ್ಲಿ `ಓ ನಾರಾಯಿನ ಪುರುಷರೇ ಕೇಳಿದಿರೇ….’ ಎಂದು ಸಿರಿ ಪ್ರಯೋಗಿಸುವ ಭಾಷೆ ಉದ್ದೇಶಪೂರ್ವಕವಾಗಿ ಇದ್ದಂತೆ ಇದೆ. `ನಾಲ್ಕೂರ ಗುರಿಕಾರರು ಎಂಟು ಮಾಗಣೆಯ ಪಾಲವರು’ ಎಲ್ಲರೂ ಪುರುಷರು. ಈ ಕೂಟ ಪುರುಷರ ಕೂಟ. ಇಲ್ಲಿ ಅಪರಾಧಿ ಮಹಿಳೆಯರಿಗೆ ಮಾತ್ರ ಪ್ರವೇಶ. ಆಳುವ ಮನೆಗಳಲ್ಲಿ ಪುರುಷರು ಇಲ್ಲವಾದರೂ ಆ ಆಳುವ ಮನೆಯ ಸಹೋದರ ಗುತ್ತಿನ ಯಜಮಾನ ಪುರುಷ, ಕೂಟದ ಕಳಕ್ಕೆ ಆಳುವ ಮನೆಯನ್ನು ಪ್ರತಿನಿಧಿಸಿ ಹೋಗುವುದು ಪದ್ಧತಿ. ಆಳುವ ಮನೆಯಲ್ಲಿ ಪುರುಷ ಸಂತಾನ ಇಲ್ಲವಾದರೂ ಆ ಮನೆಯ ಪಿರಿಯರಸಿ, ಪಟ್ಟದಬ್ಬೆಗೂ ಕೂಟದ ಕಳಕ್ಕೆ ಪ್ರವೇಶ ಇಲ್ಲ. ಹೆಣ್ಣಾಳ್ವಿಕೆಯನ್ನು ಮಾತೃಸಂಸ್ಕøತಿಯ ಪುರುಷರು ಒಪ್ಪಲು ಸಿದ್ಧರಿಲ್ಲ. ಅಂದೂ ಒಪ್ಪಿಲ್ಲ. ಇಂದೂ ಒಪ್ಪುವುದಿಲ್ಲ. ಸಿರಿ ಪಾಡ್ದನದಲ್ಲಿ ಸಿರಿಯು ಈ ಪುರುಷಪರ ವ್ಯವಸ್ಥೆಯನ್ನು ಪ್ರತಿಭಟಿಸುತ್ತಾಳೆ. ಅವಳ ಪ್ರತಿಭಟನೆಯ ಉಗ್ರತೆಯನ್ನು ಗಮನಿಸಿದರೆ ಅದುವರೆಗೆ ಹೆಣ್ಣಾಳ್ವಿಕೆಯು ತುಳುನಾಡಿನಲ್ಲಿ ಇತ್ತೇನೋ ಎಂಬ ಸಂದೇಹ ಉಂಟಾಗುತ್ತಿದೆ. ಆದರೂ ಕೂಟದ ಕಳದವರು ಸಿರಿಯ ಹಕ್ಕನ್ನು ಮಾನ್ಯ ಮಾಡುವುದಿಲ್ಲ. ಶೀನಪ್ಪ ಹೆಗ್ಗಡೆಯವರ ಕಥಾಭಾಗದಲ್ಲಿ ಸತ್ಯನಾಪುರ ತೊರೆದು ಲಂಕೆಲೋಕನಾಡಿನ ಹರಕೆ ತೀರಿಸಿದ ಕೂಡಲೇ ಸಿರಿ, “ಎತ್ತು ನೊಗದಲ್ಲಿ ಹೆಣ್ಣು ಗಂಡನ ಬರದಲ್ಲಿ ಸಿಕ್ಕಿಕೊಂಡಿರಬಾರದು” ಎನ್ನುವ ಮಾತಿದೆ. ಗಿಡಿಗೆರೆಯವರ ಪಾಡ್ದನದಲ್ಲಿ ಕಾಂತು ಪೂಂಜ ಸಿರಿಯನ್ನು ಬೈಯ್ಯುವ ಸನ್ನಿವೇಶ ಇದೆ. “ಹಲ್ಲು ಮುರಿದ ಅಹಂಕಾರಿ ಎಂದರೆ ನೀನೇನಾ ಸಿರಿಯೆ, ಶುಂಠಿ ಹೆಚ್ಚಾದ ಕಷಾಯ ಎಂದರೆ ನೀನೇನೇ, ತವರ ಭಯ ಇಲ್ಲದ ಹೆಣ್ಣೆಂದರೂ ನೀನೇನೇ?” ಎಂದು ಜರಿಯುತ್ತಾನೆ. ಆಗ ಸಿರಿ ಅದೇ ಮಾತುಗಳನ್ನು ಪುನರುಚ್ಚರಿಸುತ್ತಾ “ನಾನೇ…ನಾನೇ…..” ಎನ್ನುತ್ತಾ ವಿಚ್ಛೇದನ ಕೇಳುತ್ತಾಳೆ. ಇಲ್ಲೂ ತಮೆರಿಯನ್ನು ಕೇಳುವಾಗ ಸಿರಿಯು ಕೈಯ ಬಳೆ, ಮೂಗಿನ ಮುತ್ತೈದೆತನ, ಕತ್ತಿನ ಕರಿಮಣಿ, ಹಣೆಯ ಕುಂಕುಮ ಅಳಿಸಿ “ನೀವು ಗಂಡಿಗೆ ಗಂಡು ಸರಿ ಬಂಟನೇ (ವೀರ ಎಂಬರ್ಥದಲ್ಲಿ) ಆದರೆ ಬರ ನೀಡಿ ನನ್ನ ಕೈಸೆರಿ ಬಿಡಿಸಿ” ಎನ್ನುತ್ತಾಳೆ. ಇನ್ನೊಂದು ಕಥೆಯಲ್ಲಿ ಸಿರಿ ವಿಚ್ಛೇದನ ಕೇಳುವಾಗ ಅವಳಿಗೆ ಗಂಡ ಬೈನುಡಿಗಳನ್ನು ಹೇಳುತ್ತಾನೆ. ಗಂಡ ತಮೆರಿಯನ್ನು (ಅಂದರೆ ತವರ ರಕ್ಷಕ) ಕರೆದು ತಾ ಎಂದು ಕೇಳಿದಾಗ ಸಿರಿ ಮೊದಲು ಬೇಲಿಯ ಗೂಟ ತೆಗೆದು ಅದನ್ನು `ತಮೆರಿ’ ಸ್ಥಾನಕ್ಕೆ ನಿಲ್ಲಿಸುತ್ತಾಳೆ. ಗಂಡ ತಮೆರಿ ಇಲ್ಲದವಳು ಎಂದು ಹಂಗಿಸುವಾಗ ತಾನು ಹೆತ್ತ ಮಗನನ್ನೆ ತನ್ನ ತಮೆರಿ ಎಂದು ಮುಂದೊಡ್ಡುತ್ತಾಳೆ. ಆಗ “ನನಗೆ ಜನಿಸಿದ ಮಗುವನ್ನು ನನ್ನ ಮುಂದೊಡ್ಡಿದೆಯಾ?” ಎನ್ನುತ್ತಾ ಆತ ಕಾಲು ನೋಯುವಷ್ಟು ಸಿರಿಗೆ ಒದೆಯುತ್ತಾನೆ, ಕೈ ನೋಯುವಷ್ಟು ಸಿರಿಗೆ ಹೊಡೆಯುತ್ತಾನೆ. “ನೀನು ಆರ್ಯ ಬನ್ನಾಯ ಬಳಿ ಹೇಳು, ಪುತ್ತ ಬನ್ನಾರರ ಬಳಿ ಕಟ್ಟು ಎನ್ನುತ್ತಾನೆ.” ಈ ಸಂದರ್ಭದಲ್ಲಿ ಸಿರಿ ಕೈಯ `ಕೊಂಕೆ ಬಳೆ’ (ಕೊಕ್ಕೆ?)ತೆಗೆದು, ಕತ್ತಿನ ಕರಿಮಣಿ ತೆಗೆದು, ಮೂಗಿನ ಮುತ್ತೈದೆತನವನ್ನು ಕಳಚಿ, ಆರ್ಯ ಬನ್ನಾಯ ಬಳಿ ಹೇಳಿ, ಪುತ್ರಬನ್ನಾಯ ಬಳಿ ಕಟ್ಟಿ ಅಲ್ಲಿಂದ ಅಜ್ಜನ ಹರಕೆ ತೀರಿಸಲು ಹೊರಡುತ್ತಾಳೆ. ಬೇರೆ ಪಾಡ್ದನ ಪಠ್ಯಗಳಲ್ಲಿ ಕಾಂತು ಪೂಂಜ ಮಡದಿಗೆ ಹೊಡೆಯುವ ಚಿತ್ರಣ ಇಲ್ಲ.

ಅರ್ಚಕನಿಂದ ಅವಮಾನ[ಬದಲಾಯಿಸಿ]

ಮುಂದೆ ಲೋಕನಾಡಿಗೆ ಹರಕೆ ಹಾಕಲು ಸಿರಿ ಹೋಗುತ್ತಾಳೆ. ಅಲ್ಲಿ ಅರ್ಚಕ ಪೂಜೆ ಮುಗಿಸಿ ಹೋಗುವಾಗ ಎದುರಾದ ಸಿರಿಯನ್ನು ಹೆಣ್ಣೆಂದು ಹಂಗಿಸಿ ಅವಮಾನಿಸುತ್ತಾನೆ. ಬೇರೆ ಬೇರೆ ಪಾಡ್ದನಗಳಲ್ಲಿ ಭಿನ್ನ ನಿರೂಪಣೆ ಇದೆ. “ಎಲ್ಲಿಂದ ಬಂದ ಓ ಲಗಾಮು ಇಲ್ಲದ ಕುದುರೆಗಳು ಲಗಾಮು ಇಲ್ಲದ ಕುದುರೆಗಳು ನೀವು. ನಾಗ ನರ್ತನದ ಹೆಣ್ಣುಗಳು ನೀವು, ಯಾವ ಊರು ನಾಶ ಮಾಡಿ ಬಂದಿರಪ್ಪ… ಯಾವ ಊರು ನಾಶ ಮಾಡಲು ಹೊರಟವರು, ಯಾವೊಂದು ಮನೆ ತೆಗೆದಿರಿ (ನಾಶ ಮಾಡಿದಿರಿ) ನೀವು” ಎಂದು ಕೇಳಿ ಅವಮಾನ ಮಾಡುತ್ತಾನೆ. ಎಲ್ಲಾ ಪಾಡ್ದನಗಳಲ್ಲಿ ಲಂಕೆ ಲೋಕನಾಡಿನ ಅರ್ಚಕ ಮತ್ತು ಓಡದ ಕುಂಞನು ಸಿರಿಗೆ ಅವಮಾನಿಸುವ ಸನ್ನಿವೇಶಗಳ ನಿರೂಪಣೆ ಇದೆ. ಪಿತೃ ಸಂಸ್ಕೃತಿಯೊಂದಿಗೆ ಮಾತೃ ಸಂಸ್ಕೃತಿಯ ಮುಖಾಮುಖಿ : ಪಿತೃ ಸಂಸ್ಕೃತಿಯ ನಿಕಷದಲ್ಲಿ ಇಟ್ಟು ಇತ್ತೀಚೆಗೆ ಸಿರಿ ಪಠ್ಯವನ್ನು ತುಲನೆ ಮಾಡುವ ಸ್ತ್ರೀ ಪುರುಷ ವಿಮರ್ಶಕರ ಸಂಖ್ಯೆ ಹೆಚ್ಚಾಗಿದೆ. ಇಂತಹ ವಿಮರ್ಶಕರಲ್ಲಿ ಮಾತೃ ಸಂಸ್ಕೃತಿಯ ಪರಿಚಯ ಇರುವವರು, ಅಧ್ಯಯನ ಮಾಡಿದವರು ಕಡಿಮೆ. ಕೆಲವು ಪಾಡ್ದನಗಳಲ್ಲಿ ಸಿರಿಯ ಕುಮಾರ ತನ್ನ ತಾಯಿಯನ್ನು ಪ್ರಶ್ನಿಸುವ ಪ್ರಸಂಗ ಇದೆ. ಸಿರಿ ಬೋಳಬಾರಿ ಕ್ಷತ್ರಿಯರ ಸೋದರಿಯಾಗಿ ಬೋಲದರಮನೆಗೆ ಹೋಗೋಣ ಎಂದಾಗ ಕುಮಾರ “ಒಬ್ಬ ತಂದೆಗೆ ಹುಟ್ಟಿ ಮತ್ತೊಂದು ತಂದೆಯನ್ನು ತಂದೆ ಎನ್ನಲಾರೆ” ಎನ್ನುತ್ತಾನೆ. ಈ ವಿಷಯಗಳೆಲ್ಲ ಪಿತೃ ಸಂಸ್ಕೃತಿಯಿಂದ ಪ್ರೇರಿತವಾದ ಅಂಶಗಳು. ಮಾತೃ ಸಂಸ್ಕøತಿಯಲ್ಲಿ ವಿಚ್ಛೇದನ, ಮರುಮದುವೆಗೆ ಮಾನ್ಯತೆ ಇದೆ. ಇಂತಹ ಅಸಂಬದ್ಧ ಧೋರಣೆಗಳು ವೈದಿಕ ಸಮಾಜದ ಪಿತೃ ಪ್ರಧಾನತೆಯ ಪ್ರಭಾವವನ್ನು ತೋರಿಸುತ್ತದೆ. ಸಿರಿಯ ನಡತೆಯ ಮೌಲ್ಯ ಮಾಪನವನ್ನು ಪಿತೃಸಂಸ್ಕೃತಿಯ ಸಮಾಜ ಪದ್ಧತಿಯ ನೆಲೆಯಿಂದ ಮಾಡಲಾಗುತ್ತದೆ. ರಾಮಕ್ಕ ಮುಗೇರ್ತಿ ಅವರ ಸಿರಿ ಪಾಡ್ದನದ ಪ್ರಸ್ತಾವನೆಯಲ್ಲಿ ನಾವಡ ಅವರು,ಸಿರಿಯ ಕೌಟುಂಬಿಕ ಸಾಮಾಜಿಕ ಸಂದರ್ಭ, ವಿಚ್ಛೇದನ, ಮರು ಮದುವೆ, ಉತ್ತರಾಧಿಕಾರತ್ವ, ಸ್ತ್ರೀತ್ವ ಮತ್ತು ಪರಿಶುದ್ಧತೆಯ ಕಲ್ಪನೆಗಳು, ಗಂಡಿನ ಮೋಸ ಅನ್ಯಾಯ, ಪುರುಷ ಪ್ರಭುತ್ವದ ಹೇರಿಕೆಯ ಪ್ರಯತ್ನಗಳು, ಅದರ ವಿರುದ್ಧ ಹೆಣ್ಣಿನ ಹೋರಾಟ ಮತ್ತು ವಿಜಯಗಳು ದಾಖಲಾಗಿವೆ ಎನ್ನುತ್ತಾರೆ. ಲಭ್ಯ ಇರುವ ಎಲ್ಲಾ ಸಿರಿ ಪಾಡ್ದನಗಳನ್ನು ಅವಲೋಕಿಸಿದರೂ ಎಲ್ಲೂ ಸಿರಿ ವಿಜಯ ಸಾಧಿಸುವುದಿಲ್ಲ. ಆದರೆ ಆಕೆ ಸೋಲುವುದಿಲ್ಲ, ಧೃತಿಗೆಡುವುದಿಲ್ಲ. ಸಿರಿಯ ವೈಶಿಷ್ಟ್ಯ ಇರುವುದು ಆಕೆಯು ಪರಿಸ್ಥಿತಿಯನ್ನು ಎದುರಿಸಿದ ಬಗೆಯಲ್ಲಿ. ಮಾತೃ ಸಂಸ್ಕೃತಿಯ ದೈವೀಶಕ್ತಿ ಸಿರಿ ಗಂಡನಿಂದ ಕ್ರೌರ್ಯಕ್ಕೆ ಒಳಗಾಗುವ ಚಿತ್ರಣ ಸಿರಿ ಕಾವ್ಯದಲ್ಲಿದೆ. ಸಿರಿಯ ಗಂಡ ಸೂಳೆ ಸಿದ್ದುನ ಸಂಗ ಮಾಡಿದ್ದನ್ನು ಮರೆಯುತ್ತಾಳೆ. ಹೆರಿಗೆಯ ನಂತರ ಗಂಡ ತನ್ನನ್ನು ನೋಡಲು ಬಾರದೆ ಇದ್ದಾಗ ಗಂಡನಿಗೆ ಓಲೆ ಕಳುಹಿಸುತ್ತಾಳೆ. ಸಿರಿ ಗಂಡನ ತಪ್ಪನ್ನು ಕ್ಷಮಿಸಿದರೂ `ಸಿರಿ ಪೂಸೀರೆ’ ನಿರಾಕರಿಸಿದುದನ್ನು ಮರೆಯಲು ಕಾಂತುಪೂಂಜ ಸಿದ್ಧನಿರಲಿಲ್ಲ. ಸಿರಿಯನ್ನು ಅವಳ ಸತ್ಯನಾಪುರದ ಆಸರೆಯಿಂದ ಹೊರಹಾಕಬೇಕು, ಆಕೆಯ ಸತ್ಯನಾಪುರ ಅನ್ಯರ ಪಾಲಾಗಬೇಕು, ಆಕೆ ನಿರ್ಗತಿಕಳಾಗಿ ತನ್ನ ಬಳಿ ಬರಬೇಕು, ಆಗ ಆಕೆಯ ಸೊಕ್ಕು ಮುರಿಯಬೇಕು ಎಂಬಿತ್ಯಾದಿ ದುರಾಲೋಚನೆಯಿಂದ ಸತ್ಯನಾಪುರವನ್ನು ಸಿರಿಯ ಕೈ ತಪ್ಪುವಂತೆ ಕಾಂತು ಪೂಂಜ ತಂತ್ರ ಹೂಡುತ್ತಾನೆ. ಗಂಡನ ಅನಾಚಾರಗಳನ್ನು ಕಂಡು ರೋಸಿ ಹೋಗಿದ್ದ ಸಿರಿ, ಅಂತಹ ಗಂಡನೇ ಬೇಡ ಎಂಬ ನಿರ್ಣಯಕ್ಕೆ ಬರುತ್ತಾಳೆ. ಸಿರಿಯ ಈ ನಿರ್ಣಯದ ಹಿಂದೆ ಹೆಣ್ಣಿನ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಮಾತೃ ಸಂಸ್ಕೃತಿಗೆ ಶಕ್ತಿ ಇದೆ. ಗಂಡ ನೀಡುವ ಹಿಂಸೆಯನ್ನು ಸಹಿಸಿ ಹೆಂಡತಿ ಆತನೊಂದಿಗೆ ಬಾಳಬೇಕಾಗಿಲ್ಲ ಎಂಬ ಪಾಠ ಇದೆ. ಜೊತೆಗೆ ಗಂಡನು ಹೆಂಡತಿಯನ್ನು ತೊತ್ತಾಗಿ ಕಾಣಬಾರದು ಎಂಬ ಸಂದೇಶ ಇದೆ. ಗಂಡ ಮಡದಿಗೆ ಹಿಂಸೆ ನೀಡಿದರೆ ಮಡದಿಯ `ತಮೆರಿ`ಗಳು ತವರಿಗೆ ಕರೆಸಿಕೊಳ್ಳುವ ಸಾಮಾಜಿಕ ಪದ್ಧತಿ ತುಳು ಸಂಸ್ಕೃತಿಯಲ್ಲಿ ಇದೆ. ಅಳಿಯ ಕಟ್ಟು ಕಟ್ಟಲೆಯಲ್ಲಿ ಹೆಣ್ಣು ಗಂಡನ ಮನೆಯಲ್ಲಿ ತೊತ್ತಾಗಿ ಬಾಳಬೇಕಿಲ್ಲ. ಆಕೆಯನ್ನು ತವರಿನ ತಮೆರಿ ತವರಿಗೆ ಕರೆಸಿಕೊಳ್ಳಬೇಕು. ಅವಳಿಗೆ ತವರಿನ ಬಾಗಿಲು ತೆರೆದಿರುತ್ತದೆ. ತವರಿನಲ್ಲಿ ಆಕೆ ಅಧಿಕಾರದ ಮಗಳು ಎನ್ನುವುದು ಗಮನಾರ್ಹ. ಸಿರಿ ವಿಚ್ಛೇದನ ನೀಡಿ ಗುರಿ ಇಲ್ಲದ ಹೆಜ್ಜೆ ಇಟ್ಟು ನಡೆಯುವಾಗ, ಎದುರಾದ ಎಲ್ಲಾ ಜಾತಿ ಮತದ ಮಹಿಳೆಯರಿಗೆ ವರನೀಡುತ್ತಾಳೆ. ತನ್ನ ಗಂಡನ ಸೂಳೆ ಸಿದ್ದುಗೂ ವರ ನೀಡುತ್ತಾಳೆ. ಸೂಳೆಗಾರಿಕೆಯೂ ಸಾಂದರ್ಭಿಕ ಅನಿವಾರ್ಯತೆ ಎಂಬ ಸೂಚನೆ ಈ ಪಠ್ಯದಲ್ಲಿ ಸಿಗುತ್ತದೆ. ಆದರೆ ಸಿರಿ ತನಗೆ ತೊಂದರೆ ಕೊಟ್ಟ ಪುರುಷರಿಗೆ ಶಾಪ ನೀಡುತ್ತಾ ನಡೆಯುತ್ತಾಳೆ. ಸಿರಿ ಪಾಡ್ದನ ರಚನೆಯಾದ ಕಾಲಘಟ್ಟ ಯಾವುದಿರಬಹುದು ಎಂಬ ಪ್ರಶ್ನೆ ತುಳುನಾಡಿನ ಇತಿಹಾಸ ಓದಿದಾಗ ಸಹಜವಾಗಿ ಏಳುತ್ತದೆ. ಹದಿಮೂರನೆಯ ಶತಮಾನದಲ್ಲಿ ಆಳುಪ ರಾಣಿ ಬಲ್ಲಮಹಾದೇವಿ ತುಳುನಾಡಿನಲ್ಲಿ ಒಡ್ಡೋಲಗಗೊಟ್ಟು ರಾಜ್ಯಭಾರ ಮಾಡಿದ್ದಾಳೆ. ಅವಳ ನಂತರ ಆಳುಪ/ರಾಣಿ ಮೂರನೆಯ ಹೊಯ್ಸಳನ ಬಲ್ಲಾಳನ ಪಟ್ಟದ ರಾಣಿ ಕಿಕ್ಕಾಯಿ ತಾಯಿ, ಉಳ್ಳಾಳದ ರಾಣಿ ಅಬ್ಬಕ್ಕ ಮಾತ್ರವಲ್ಲ ಇನ್ನೂ ಅನೇಕ ರಾಣಿಯರು ರಾಜ್ಯಭಾರ ಮಾಡಿದ್ದಾರೆ. ಇವರಲ್ಲಿ ಕೆಲವರು ಪತಿಯ ಮನೆಯಲ್ಲೂ ಕೆಲವು ಕಾಲ ನೆಲಸಿದ್ದಾರೆ. ಅಂತಹ ಮಹಿಳಾ ಪ್ರಧಾನ ಅಥವಾ ಮಾತೃಪ್ರಧಾನ ಸಾಮಾಜಿಕ ಹಿನ್ನೆಲೆಯ ತುಳುನಾಡಿನಲ್ಲಿ ಹುಟ್ಟಿದ ಸಿರಿ ಕಥೆಯಲ್ಲಿ ಪುರುಷಪ್ರಧಾನತೆ ಇಷ್ಟೊಂದು ಮಟ್ಟಿಗೆ ವಿಜೃಂಭಿಸಬೇಕಾದರೆ, ಅದನ್ನು ಅಷ್ಟೇ ಗಟ್ಟಿ ದನಿಯಿಂದ ಸಿರಿಯು ಪ್ರತಿಭಟಿಸಬೇಕಾದರೆ ಸಿರಿಯ ಪಾಡ್ದನ ಕಟ್ಟಿದ್ದ ಕಾಲ ಬ್ರಿಟಿಷ್ ಸರಕಾರದ ಕಾಲ ಇರಬಹುದೋ ಏನೋ ಎಂಬ ಅನುಮಾನ ಹುಟ್ಟುತ್ತದೆ. ಆದ್ದರಿಂದಲೇ ಸಿರಿ ಕಥೆಯಲ್ಲಿ ಸ್ತ್ರೀ ಪ್ರಧಾನ ಸಂಸ್ಕøತಿ ಮತ್ತು ಪುರುಷ ಪ್ರಧಾನ ಸಂಸ್ಕೃತಿಯನು

ಕಾಪ್ ಪಂಚಾಯಿತಿ[ಬದಲಾಯಿಸಿ]

ಪುರುಷ ಪ್ರಧಾನ ಪತ್ತೇರಿ ಕೂಟ (ಕಾಪ್ ಪಂಚಾಯಿತಿಯಂತೆ) ಸತ್ಯನಾಪುರದ ಸಿರಿಯ ಹಕ್ಕನ್ನು ಶಂಕರಾಳ್ವನಿಗೆ ಕೊಡುವ ಉದ್ದೇಶದಿಂದ ಸಿರಿಯನ್ನು ಅಪರಾಧಿಯಂತೆ ಕೂಟದ ಕಳಕ್ಕೆ ಕರೆಸುತ್ತದೆ. ಅಪರಾಧಿ ಮಹಿಳೆಯಂತೆ ಪತ್ತೇರಿ ಕೂಟದ ಕಳಕ್ಕೆ ಸಿರಿ ಹೋಗುತ್ತಾಳೆ. ಸಿರಿಯನ್ನು ಗೌರವಯುತವಾಗಿ ಕೂಟದ ಕಲದ ಪಾಲವರು ಎದುರ್ಗೊಳ್ಳುತ್ತಾರೆ ಹಾಗೂ ಕೂರಲು ಆಸನ ತೋರಿಸುತ್ತಾ, “ನಮ್ಮ ಸೋದರಿಯರು, ಸೊಸೆಯರು ಬೇರೆ ಅಲ್ಲ, ಸಿರಿಯೇ ನೀನು ಬೇರೆ ಅಲ್ಲವೇ ಕೂಟದ ಕಲಕ್ಕೆ ಬರಬೇಕು ಬಂದು ಕುಳಿತುಕೊಳ್ಳಬೇಕು ನ್ಯಾಯ ಸತ್ಯ ಅರುಹಬೇಕು” ಎಂದು ಹತ್ತು ಜನ ಪಾಲವರು ಸಿರಿಯನ್ನು ಬಾಮಿಸುವಾಗ ಸಿರಿಯು ಏಳೇಳು ಹತ್ತು ಹದಿನಾರು ಲೋಕದ ಕೋಪವನ್ನು ಕೋಪಿಸುತ್ತಾಳೆ. “ನನ್ನಂತಹ ಸೋದರಿ ಸೊಸೆಯರನ್ನು ನೀವು ಬೆನ್ನಿಗೆ ಕಟ್ಟಿಕೊಂಡು (ಜೊತೆಗೆ) ಹತ್ತು ಮಂದಿ ಸೇರಿದ ಕೂಟದ ಕಳಕ್ಕೆ ಕರೆದು ಬಂದಿರುವಿರೆ?” ಎನ್ನುತ್ತಾಳೆ. “ಸೂಡದಲ್ಲಿ ಜನಿಸಿದ ಅಣ್ಣುಸೆಟ್ಟಿ ಮಗ ಸಂಕರಾಲ್ವಗೆ ಕೊಡಬೇಕು” ಎನ್ನುವಾಗ ಸಂಕಾರು ಅಲುವ ಹೇಳುವರು “ಒಳಗಿನ ಏಲಿಕೆ ವ್ಯವಹಾರ ನೀನೇ ನೋಡಿಕೊಂಡಿರಬೇಕು ಸಿರಿಯೇ”. ಒಂದು ಒಡೆದ ಮಡಿಕೆಯಲ್ಲಿ ಎರಡು ನಾಯಿಗಳು ಒಟ್ಟಿಗೆ ಗಂಜಿನೀರು ನೆಕ್ಕವು ಎನ್ನುತ್ತಾ “ಹತ್ತು ಕೂಡಿ ಪಾಲವರನ್ನೂ ಸಂಕರಾಲ್ವನನ್ನೂ ಕೂಟದ ಕಲದಲ್ಲಿಯೇ ಕಲ್ಲುಮಾಡಿಯೇನು” ಎಂದು ಒಲ್ಲು ಎತ್ತಿ ಬಿಸಾಕಲು ಎತ್ತಿದಾಗ ಕೂಟದ ಪಾಲವರು ಅವಳ ಬಳಿ ಕ್ಷಮೆಯಾಚಿಸುತ್ತಾರೆ. ಕೂಟದ ಕಳ ವಿಸರ್ಜಿಸುತ್ತಾರೆ. ಅಮೃತ ಸೋಮೇಶ್ವರರ ಪಾಡ್ದನದಲ್ಲಿ, ಅರಮನೆಯ ಆಡಳಿತ ಇತ್ಯಾದಿ ತನಗಲ್ಲದೆ ಅನ್ಯರಿಗೆ ಬಿಟ್ಟುಕೊಡಲಾರೆ ಎಂಬ ಸಿರಿಯ ಧೃತಿಗೆಡದ ನುಡಿಗೆ ಪಾಲವರು ಹೇಳುತ್ತಾರೆ- “ಹೆಣ್ಣಿಗೆ ಪಟ್ಟ (ಸಿಂಹಾಸನ) ನೀಡಿದರೆ ಹೆಣ್ಣಾಳಿಕೆ ನಡೆಯಬಹುದು ಅದಾಗದು ಸಿರಿಯೇ”. ನನ್ನ ಅಜ್ಜನ ಅರಮನೆಯ ಪಟ್ಟ ನನಗಲ್ಲದೆ ಹೊರಗಿನ ಜನಕ್ಕೆ ನಾನು ಬಿಟ್ಟುಕೊಡಲಾರೆ ಎಂದು ಸಿರಿ ಘೋಷಿಸುತ್ತಾಳೆ. ಆಗ ಪಾಲವರು “ನೀನು ‘ದಾಡೆ ಮೀರಿದ ದೋಡೆ’ಯೇ ತಮೆರಿ ಇಲ್ಲದ ಹೆಣ್ಣು ನಿನಗೆ ಹೆಣ್ಣಾಳ್ವಿಕೆಯೇ ಸಿರಿ” ಎಂದು ಕೇಳುತ್ತಾರೆ. ಇದರಿಂದ ಕಡುರೋಷಗೊಂಡು “ಓ ನಾರಾಯಿನ ಪುರುಷರೇ …” ಎನ್ನುತ್ತಾ ಕೆರಳಿ “ಇಂತಹ ನ್ಯಾಯದ ಕಟ್ಟೆಗೆ ನನಗೆ ಬರಹೇಳಿದಿರಾ ?” ಎಂದು ಸಿರಿ ಪ್ರಶ್ನಿಸುತ್ತಾಳೆ. ಈ ರೀತಿಯ ಪಂಚಾಯತಿಯ ಕೂಟದ ಕಳವೇ ತನಗೆ ಬೇಡವೆಂದು ಕಳ ಇಳಿದು ಹೋಗುತ್ತಾಳೆ. ಕರ್ಗಿಸೆಡ್ತಿ ಪಾಡ್ದನದಲ್ಲಿ `ಓ ನಾರಾಯಿನ ಪುರುಷರೇ ಕೇಳಿದಿರೇ….’ ಎಂದು ಸಿರಿ ಪ್ರಯೋಗಿಸುವ ಭಾಷೆ ಉದ್ದೇಶಪೂರ್ವಕವಾಗಿ ಇದ್ದಂತೆ ಇದೆ. `ನಾಲ್ಕೂರ ಗುರಿಕಾರರು ಎಂಟು ಮಾಗಣೆಯ ಪಾಲವರು’ ಎಲ್ಲರೂ ಪುರುಷರು. ಈ ಕೂಟ ಪುರುಷರ ಕೂಟ. ಇಲ್ಲಿ ಅಪರಾಧಿ ಮಹಿಳೆಯರಿಗೆ ಮಾತ್ರ ಪ್ರವೇಶ. ಆಳುವ ಮನೆಗಳಲ್ಲಿ ಪುರುಷರು ಇಲ್ಲವಾದರೂ ಆ ಆಳುವ ಮನೆಯ ಸಹೋದರ ಗುತ್ತಿನ ಯಜಮಾನ ಪುರುಷ, ಕೂಟದ ಕಳಕ್ಕೆ ಆಳುವ ಮನೆಯನ್ನು ಪ್ರತಿನಿಧಿಸಿ ಹೋಗುವುದು ಪದ್ಧತಿ. ಆಳುವ ಮನೆಯಲ್ಲಿ ಪುರುಷ ಸಂತಾನ ಇಲ್ಲವಾದರೂ ಆ ಮನೆಯ ಪಿರಿಯರಸಿ, ಪಟ್ಟದಬ್ಬೆಗೂ ಕೂಟದ ಕಳಕ್ಕೆ ಪ್ರವೇಶ ಇಲ್ಲ. ಹೆಣ್ಣಾಳ್ವಿಕೆಯನ್ನು ಮಾತೃಸಂಸ್ಕøತಿಯ ಪುರುಷರು ಒಪ್ಪಲು ಸಿದ್ಧರಿಲ್ಲ. ಅಂದೂ ಒಪ್ಪಿಲ್ಲ. ಇಂದೂ ಒಪ್ಪುವುದಿಲ್ಲ. ಸಿರಿ ಪಾಡ್ದನದಲ್ಲಿ ಸಿರಿಯು ಈ ಪುರುಷಪರ ವ್ಯವಸ್ಥೆಯನ್ನು ಪ್ರತಿಭಟಿಸುತ್ತಾಳೆ. ಅವಳ ಪ್ರತಿಭಟನೆಯ ಉಗ್ರತೆಯನ್ನು ಗಮನಿಸಿದರೆ ಅದುವರೆಗೆ ಹೆಣ್ಣಾಳ್ವಿಕೆಯು ತುಳುನಾಡಿನಲ್ಲಿ ಇತ್ತೇನೋ ಎಂಬ ಸಂದೇಹ ಉಂಟಾಗುತ್ತಿದೆ. ಆದರೂ ಕೂಟದ ಕಳದವರು ಸಿರಿಯ ಹಕ್ಕನ್ನು ಮಾನ್ಯ ಮಾಡುವುದಿಲ್ಲ. ಶೀನಪ್ಪ ಹೆಗ್ಗಡೆಯವರ ಕಥಾಭಾಗದಲ್ಲಿ ಸತ್ಯನಾಪುರ ತೊರೆದು ಲಂಕೆಲೋಕನಾಡಿನ ಹರಕೆ ತೀರಿಸಿದ ಕೂಡಲೇ ಸಿರಿ, “ಎತ್ತು ನೊಗದಲ್ಲಿ ಹೆಣ್ಣು ಗಂಡನ ಬರದಲ್ಲಿ ಸಿಕ್ಕಿಕೊಂಡಿರಬಾರದು” ಎನ್ನುವ ಮಾತಿದೆ. ಗಿಡಿಗೆರೆಯವರ ಪಾಡ್ದನದಲ್ಲಿ ಕಾಂತು ಪೂಂಜ ಸಿರಿಯನ್ನು ಬೈಯ್ಯುವ ಸನ್ನಿವೇಶ ಇದೆ. “ಹಲ್ಲು ಮುರಿದ ಅಹಂಕಾರಿ ಎಂದರೆ ನೀನೇನಾ ಸಿರಿಯೆ, ಶುಂಠಿ ಹೆಚ್ಚಾದ ಕಷಾಯ ಎಂದರೆ ನೀನೇನೇ, ತವರ ಭಯ ಇಲ್ಲದ ಹೆಣ್ಣೆಂದರೂ ನೀನೇನೇ?” ಎಂದು ಜರಿಯುತ್ತಾನೆ. ಆಗ ಸಿರಿ ಅದೇ ಮಾತುಗಳನ್ನು ಪುನರುಚ್ಚರಿಸುತ್ತಾ “ನಾನೇ…ನಾನೇ…..” ಎನ್ನುತ್ತಾ ವಿಚ್ಛೇದನ ಕೇಳುತ್ತಾಳೆ. ಇಲ್ಲೂ ತಮೆರಿಯನ್ನು ಕೇಳುವಾಗ ಸಿರಿಯು ಕೈಯ ಬಳೆ, ಮೂಗಿನ ಮುತ್ತೈದೆತನ, ಕತ್ತಿನ ಕರಿಮಣಿ, ಹಣೆಯ ಕುಂಕುಮ ಅಳಿಸಿ “ನೀವು ಗಂಡಿಗೆ ಗಂಡು ಸರಿ ಬಂಟನೇ (ವೀರ ಎಂಬರ್ಥದಲ್ಲಿ) ಆದರೆ ಬರ ನೀಡಿ ನನ್ನ ಕೈಸೆರಿ ಬಿಡಿಸಿ” ಎನ್ನುತ್ತಾಳೆ. ಇನ್ನೊಂದು ಕಥೆಯಲ್ಲಿ ಸಿರಿ ವಿಚ್ಛೇದನ ಕೇಳುವಾಗ ಅವಳಿಗೆ ಗಂಡ ಬೈನುಡಿಗಳನ್ನು ಹೇಳುತ್ತಾನೆ. ಗಂಡ ತಮೆರಿಯನ್ನು (ಅಂದರೆ ತವರ ರಕ್ಷಕ) ಕರೆದು ತಾ ಎಂದು ಕೇಳಿದಾಗ ಸಿರಿ ಮೊದಲು ಬೇಲಿಯ ಗೂಟ ತೆಗೆದು ಅದನ್ನು `ತಮೆರಿ’ ಸ್ಥಾನಕ್ಕೆ ನಿಲ್ಲಿಸುತ್ತಾಳೆ. ಗಂಡ ತಮೆರಿ ಇಲ್ಲದವಳು ಎಂದು ಹಂಗಿಸುವಾಗ ತಾನು ಹೆತ್ತ ಮಗನನ್ನೆ ತನ್ನ ತಮೆರಿ ಎಂದು ಮುಂದೊಡ್ಡುತ್ತಾಳೆ. ಆಗ “ನನಗೆ ಜನಿಸಿದ ಮಗುವನ್ನು ನನ್ನ ಮುಂದೊಡ್ಡಿದೆಯಾ?” ಎನ್ನುತ್ತಾ ಆತ ಕಾಲು ನೋಯುವಷ್ಟು ಸಿರಿಗೆ ಒದೆಯುತ್ತಾನೆ, ಕೈ ನೋಯುವಷ್ಟು ಸಿರಿಗೆ ಹೊಡೆಯುತ್ತಾನೆ. “ನೀನು ಆರ್ಯ ಬನ್ನಾಯ ಬಳಿ ಹೇಳು, ಪುತ್ತ ಬನ್ನಾರರ ಬಳಿ ಕಟ್ಟು ಎನ್ನುತ್ತಾನೆ.” ಈ ಸಂದರ್ಭದಲ್ಲಿ ಸಿರಿ ಕೈಯ `ಕೊಂಕೆ ಬಳೆ’ (ಕೊಕ್ಕೆ?)ತೆಗೆದು, ಕತ್ತಿನ ಕರಿಮಣಿ ತೆಗೆದು, ಮೂಗಿನ ಮುತ್ತೈದೆತನವನ್ನು ಕಳಚಿ, ಆರ್ಯ ಬನ್ನಾಯ ಬಳಿ ಹೇಳಿ, ಪುತ್ರಬನ್ನಾಯ ಬಳಿ ಕಟ್ಟಿ ಅಲ್ಲಿಂದ ಅಜ್ಜನ ಹರಕೆ ತೀರಿಸಲು ಹೊರಡುತ್ತಾಳೆ. ಬೇರೆ ಪಾಡ್ದನ ಪಠ್ಯಗಳಲ್ಲಿ ಕಾಂತು ಪೂಂಜ ಮಡದಿಗೆ ಹೊಡೆಯುವ ಚಿತ್ರಣ ಇಲ್ಲ.

ಅರ್ಚಕನಿಂದ ಅವಮಾನ[ಬದಲಾಯಿಸಿ]

ಮುಂದೆ ಲೋಕನಾಡಿಗೆ ಹರಕೆ ಹಾಕಲು ಸಿರಿ ಹೋಗುತ್ತಾಳೆ. ಅಲ್ಲಿ ಅರ್ಚಕ ಪೂಜೆ ಮುಗಿಸಿ ಹೋಗುವಾಗ ಎದುರಾದ ಸಿರಿಯನ್ನು ಹೆಣ್ಣೆಂದು ಹಂಗಿಸಿ ಅವಮಾನಿಸುತ್ತಾನೆ. ಬೇರೆ ಬೇರೆ ಪಾಡ್ದನಗಳಲ್ಲಿ ಭಿನ್ನ ನಿರೂಪಣೆ ಇದೆ. “ಎಲ್ಲಿಂದ ಬಂದ ಓ ಲಗಾಮು ಇಲ್ಲದ ಕುದುರೆಗಳು ಲಗಾಮು ಇಲ್ಲದ ಕುದುರೆಗಳು ನೀವು. ನಾಗ ನರ್ತನದ ಹೆಣ್ಣುಗಳು ನೀವು, ಯಾವ ಊರು ನಾಶ ಮಾಡಿ ಬಂದಿರಪ್ಪ… ಯಾವ ಊರು ನಾಶ ಮಾಡಲು ಹೊರಟವರು, ಯಾವೊಂದು ಮನೆ ತೆಗೆದಿರಿ (ನಾಶ ಮಾಡಿದಿರಿ) ನೀವು” ಎಂದು ಕೇಳಿ ಅವಮಾನ ಮಾಡುತ್ತಾನೆ. ಎಲ್ಲಾ ಪಾಡ್ದನಗಳಲ್ಲಿ ಲಂಕೆ ಲೋಕನಾಡಿನ ಅರ್ಚಕ ಮತ್ತು ಓಡದ ಕುಂಞನು ಸಿರಿಗೆ ಅವಮಾನಿಸುವ ಸನ್ನಿವೇಶಗಳ ನಿರೂಪಣೆ ಇದೆ.

ಪಿತೃ ಸಂಸ್ಕೃತಿಯೊಂದಿಗೆ ಮಾತೃ ಸಂಸ್ಕೃತಿಯ ಮುಖಾಮುಖಿ[ಬದಲಾಯಿಸಿ]

ಪಿತೃ ಸಂಸ್ಕೃತಿಯ ನಿಕಷದಲ್ಲಿ ಇಟ್ಟು ಇತ್ತೀಚೆಗೆ ಸಿರಿ ಪಠ್ಯವನ್ನು ತುಲನೆ ಮಾಡುವ ಸ್ತ್ರೀ ಪುರುಷ ವಿಮರ್ಶಕರ ಸಂಖ್ಯೆ ಹೆಚ್ಚಾಗಿದೆ. ಇಂತಹ ವಿಮರ್ಶಕರಲ್ಲಿ ಮಾತೃ ಸಂಸ್ಕೃತಿಯ ಪರಿಚಯ ಇರುವವರು, ಅಧ್ಯಯನ ಮಾಡಿದವರು ಕಡಿಮೆ. ಕೆಲವು ಪಾಡ್ದನಗಳಲ್ಲಿ ಸಿರಿಯ ಕುಮಾರ ತನ್ನ ತಾಯಿಯನ್ನು ಪ್ರಶ್ನಿಸುವ ಪ್ರಸಂಗ ಇದೆ. ಸಿರಿ ಬೋಳಬಾರಿ ಕ್ಷತ್ರಿಯರ ಸೋದರಿಯಾಗಿ ಬೋಲದರಮನೆಗೆ ಹೋಗೋಣ ಎಂದಾಗ ಕುಮಾರ “ಒಬ್ಬ ತಂದೆಗೆ ಹುಟ್ಟಿ ಮತ್ತೊಂದು ತಂದೆಯನ್ನು ತಂದೆ ಎನ್ನಲಾರೆ” ಎನ್ನುತ್ತಾನೆ. ಈ ವಿಷಯಗಳೆಲ್ಲ ಪಿತೃ ಸಂಸ್ಕೃತಿಯಿಂದ ಪ್ರೇರಿತವಾದ ಅಂಶಗಳು. ಮಾತೃ ಸಂಸ್ಕೃತಿಯಲ್ಲಿ ವಿಚ್ಛೇದನ, ಮರುಮದುವೆಗೆ ಮಾನ್ಯತೆ ಇದೆ. ಇಂತಹ ಅಸಂಬದ್ಧ ಧೋರಣೆಗಳು ವೈದಿಕ ಸಮಾಜದ ಪಿತೃ ಪ್ರಧಾನತೆಯ ಪ್ರಭಾವವನ್ನು ತೋರಿಸುತ್ತದೆ. ಸಿರಿಯ ನಡತೆಯ ಮೌಲ್ಯ ಮಾಪನವನ್ನು ಪಿತೃಸಂಸ್ಕೃತಿಯ ಸಮಾಜ ಪದ್ಧತಿಯ ನೆಲೆಯಿಂದ ಮಾಡಲಾಗುತ್ತದೆ. ರಾಮಕ್ಕ ಮುಗೇರ್ತಿ ಅವರ ಸಿರಿ ಪಾಡ್ದನದ ಪ್ರಸ್ತಾವನೆಯಲ್ಲಿ ನಾವಡ ಅವರು, ಸಿರಿಯ ಕೌಟುಂಬಿಕ ಸಾಮಾಜಿಕ ಸಂದರ್ಭ, ವಿಚ್ಛೇದನ, ಮರು ಮದುವೆ, ಉತ್ತರಾಧಿಕಾರತ್ವ, ಸ್ತ್ರೀತ್ವ ಮತ್ತು ಪರಿಶುದ್ಧತೆಯ ಕಲ್ಪನೆಗಳು, ಗಂಡಿನ ಮೋಸ ಅನ್ಯಾಯ, ಪುರುಷ ಪ್ರಭುತ್ವದ ಹೇರಿಕೆಯ ಪ್ರಯತ್ನಗಳು, ಅದರ ವಿರುದ್ಧ ಹೆಣ್ಣಿನ ಹೋರಾಟ ಮತ್ತು ವಿಜಯಗಳು ದಾಖಲಾಗಿವೆ ಎನ್ನುತ್ತಾರೆ. ಲಭ್ಯ ಇರುವ ಎಲ್ಲಾ ಸಿರಿ ಪಾಡ್ದನಗಳನ್ನು ಅವಲೋಕಿಸಿದರೂ ಎಲ್ಲೂ ಸಿರಿ ವಿಜಯ ಸಾಧಿಸುವುದಿಲ್ಲ. ಆದರೆ ಆಕೆ ಸೋಲುವುದಿಲ್ಲ, ಧೃತಿಗೆಡುವುದಿಲ್ಲ. ಸಿರಿಯ ವೈಶಿಷ್ಟ್ಯ ಇರುವುದು ಆಕೆಯು ಪರಿಸ್ಥಿತಿಯನ್ನು ಎದುರಿಸಿದ ಬಗೆಯಲ್ಲಿ. ಮಾತೃ ಸಂಸ್ಕೃತಿಯ ದೈವೀಶಕ್ತಿ ಸಿರಿ ಗಂಡನಿಂದ ಕ್ರೌರ್ಯಕ್ಕೆ ಒಳಗಾಗುವ ಚಿತ್ರಣ ಸಿರಿ ಕಾವ್ಯದಲ್ಲಿದೆ. ಸಿರಿಯ ಗಂಡ ಸೂಳೆ ಸಿದ್ದುನ ಸಂಗ ಮಾಡಿದ್ದನ್ನು ಮರೆಯುತ್ತಾಳೆ. ಹೆರಿಗೆಯ ನಂತರ ಗಂಡ ತನ್ನನ್ನು ನೋಡಲು ಬಾರದೆ ಇದ್ದಾಗ ಗಂಡನಿಗೆ ಓಲೆ ಕಳುಹಿಸುತ್ತಾಳೆ. ಸಿರಿ ಗಂಡನ ತಪ್ಪನ್ನು ಕ್ಷಮಿಸಿದರೂ `ಸಿರಿ ಪೂಸೀರೆ’ ನಿರಾಕರಿಸಿದುದನ್ನು ಮರೆಯಲು ಕಾಂತುಪೂಂಜ ಸಿದ್ಧನಿರಲಿಲ್ಲ. ಸಿರಿಯನ್ನು ಅವಳ ಸತ್ಯನಾಪುರದ ಆಸರೆಯಿಂದ ಹೊರಹಾಕಬೇಕು, ಆಕೆಯ ಸತ್ಯನಾಪುರ ಅನ್ಯರ ಪಾಲಾಗಬೇಕು, ಆಕೆ ನಿರ್ಗತಿಕಳಾಗಿ ತನ್ನ ಬಳಿ ಬರಬೇಕು, ಆಗ ಆಕೆಯ ಸೊಕ್ಕು ಮುರಿಯಬೇಕು ಎಂಬಿತ್ಯಾದಿ ದುರಾಲೋಚನೆಯಿಂದ ಸತ್ಯನಾಪುರವನ್ನು ಸಿರಿಯ ಕೈ ತಪ್ಪುವಂತೆ ಕಾಂತು ಪೂಂಜ ತಂತ್ರ ಹೂಡುತ್ತಾನೆ. ಗಂಡನ ಅನಾಚಾರಗಳನ್ನು ಕಂಡು ರೋಸಿ ಹೋಗಿದ್ದ ಸಿರಿ, ಅಂತಹ ಗಂಡನೇ ಬೇಡ ಎಂಬ ನಿರ್ಣಯಕ್ಕೆ ಬರುತ್ತಾಳೆ. ಸಿರಿಯ ಈ ನಿರ್ಣಯದ ಹಿಂದೆ ಹೆಣ್ಣಿನ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಮಾತೃ ಸಂಸ್ಕೃತಿಗೆ ಶಕ್ತಿ ಇದೆ. ಗಂಡ ನೀಡುವ ಹಿಂಸೆಯನ್ನು ಸಹಿಸಿ ಹೆಂಡತಿ ಆತನೊಂದಿಗೆ ಬಾಳಬೇಕಾಗಿಲ್ಲ ಎಂಬ ಪಾಠ ಇದೆ. ಜೊತೆಗೆ ಗಂಡನು ಹೆಂಡತಿಯನ್ನು ತೊತ್ತಾಗಿ ಕಾಣಬಾರದು ಎಂಬ ಸಂದೇಶ ಇದೆ. ಗಂಡ ಮಡದಿಗೆ ಹಿಂಸೆ ನೀಡಿದರೆ ಮಡದಿಯ `ತಮೆರಿ`ಗಳು ತವರಿಗೆ ಕರೆಸಿಕೊಳ್ಳುವ ಸಾಮಾಜಿಕ ಪದ್ಧತಿ ತುಳು ಸಂಸ್ಕೃತಿಯಲ್ಲಿ ಇದೆ. ಅಳಿಯ ಕಟ್ಟು ಕಟ್ಟಲೆಯಲ್ಲಿ ಹೆಣ್ಣು ಗಂಡನ ಮನೆಯಲ್ಲಿ ತೊತ್ತಾಗಿ ಬಾಳಬೇಕಿಲ್ಲ. ಆಕೆಯನ್ನು ತವರಿನ ತಮೆರಿ ತವರಿಗೆ ಕರೆಸಿಕೊಳ್ಳಬೇಕು. ಅವಳಿಗೆ ತವರಿನ ಬಾಗಿಲು ತೆರೆದಿರುತ್ತದೆ. ತವರಿನಲ್ಲಿ ಆಕೆ ಅಧಿಕಾರದ ಮಗಳು ಎನ್ನುವುದು ಗಮನಾರ್ಹ. ಸಿರಿ ವಿಚ್ಛೇದನ ನೀಡಿ ಗುರಿ ಇಲ್ಲದ ಹೆಜ್ಜೆ ಇಟ್ಟು ನಡೆಯುವಾಗ, ಎದುರಾದ ಎಲ್ಲಾ ಜಾತಿ ಮತದ ಮಹಿಳೆಯರಿಗೆ ವರನೀಡುತ್ತಾಳೆ. ತನ್ನ ಗಂಡನ ಸೂಳೆ ಸಿದ್ದುಗೂ ವರ ನೀಡುತ್ತಾಳೆ. ಸೂಳೆಗಾರಿಕೆಯೂ ಸಾಂದರ್ಭಿಕ ಅನಿವಾರ್ಯತೆ ಎಂಬ ಸೂಚನೆ ಈ ಪಠ್ಯದಲ್ಲಿ ಸಿಗುತ್ತದೆ. ಆದರೆ ಸಿರಿ ತನಗೆ ತೊಂದರೆ ಕೊಟ್ಟ ಪುರುಷರಿಗೆ ಶಾಪ ನೀಡುತ್ತಾ ನಡೆಯುತ್ತಾಳೆ. ಸಿರಿ ಪಾಡ್ದನ ರಚನೆಯಾದ ಕಾಲಘಟ್ಟ ಯಾವುದಿರಬಹುದು ಎಂಬ ಪ್ರಶ್ನೆ ತುಳುನಾಡಿನ ಇತಿಹಾಸ ಓದಿದಾಗ ಸಹಜವಾಗಿ ಏಳುತ್ತದೆ. ಹದಿಮೂರನೆಯ ಶತಮಾನದಲ್ಲಿ ಆಳುಪ ರಾಣಿ ಬಲ್ಲಮಹಾದೇವಿ ತುಳುನಾಡಿನಲ್ಲಿ ಒಡ್ಡೋಲಗಗೊಟ್ಟು ರಾಜ್ಯಭಾರ ಮಾಡಿದ್ದಾಳೆ. ಅವಳ ನಂತರ ಆಳುಪ/ರಾಣಿ ಮೂರನೆಯ ಹೊಯ್ಸಳನ ಬಲ್ಲಾಳನ ಪಟ್ಟದ ರಾಣಿ ಕಿಕ್ಕಾಯಿ ತಾಯಿ, ಉಳ್ಳಾಳದ ರಾಣಿ ಅಬ್ಬಕ್ಕ ಮಾತ್ರವಲ್ಲ ಇನ್ನೂ ಅನೇಕ ರಾಣಿಯರು ರಾಜ್ಯಭಾರ ಮಾಡಿದ್ದಾರೆ. ಇವರಲ್ಲಿ ಕೆಲವರು ಪತಿಯ ಮನೆಯಲ್ಲೂ ಕೆಲವು ಕಾಲ ನೆಲಸಿದ್ದಾರೆ. ಅಂತಹ ಮಹಿಳಾ ಪ್ರಧಾನ ಅಥವಾ ಮಾತೃಪ್ರಧಾನ ಸಾಮಾಜಿಕ ಹಿನ್ನೆಲೆಯ ತುಳುನಾಡಿನಲ್ಲಿ ಹುಟ್ಟಿದ ಸಿರಿ ಕಥೆಯಲ್ಲಿ ಪುರುಷಪ್ರಧಾನತೆ ಇಷ್ಟೊಂದು ಮಟ್ಟಿಗೆ ವಿಜೃಂಭಿಸಬೇಕಾದರೆ, ಅದನ್ನು ಅಷ್ಟೇ ಗಟ್ಟಿ ದನಿಯಿಂದ ಸಿರಿಯು ಪ್ರತಿಭಟಿಸಬೇಕಾದರೆ ಸಿರಿಯ ಪಾಡ್ದನ ಕಟ್ಟಿದ್ದ ಕಾಲ ಬ್ರಿಟಿಷ್ ಸರಕಾರದ ಕಾಲ ಇರಬಹುದೋ ಏನೋ ಎಂಬ ಅನುಮಾನ ಹುಟ್ಟುತ್ತದೆ. ಆದ್ದರಿಂದಲೇ ಸಿರಿ ಕಥೆಯಲ್ಲಿ ಸ್ತ್ರೀ ಪ್ರಧಾನ ಸಂಸ್ಕøತಿ ಮತ್ತು ಪುರುಷ ಪ್ರಧಾನ ಸಂಸ್ಕೃತಿಯನು