ವಿಷಯಕ್ಕೆ ಹೋಗು

ಸದಸ್ಯ:Sharanugudadur/ನನ್ನ ಪ್ರಯೋಗಪುಟ೩

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಸ್. ಕೆ. ಗುರುನಾಥನ್

[ಬದಲಾಯಿಸಿ]

ಭಾರತದ ಒಬ್ಬ ಕ್ರೀಡಾ ಪತ್ರಕರ್ತ


ಎಸ್. ಕೆ. ಗುರುನಾಥನ್ (1 ಆಗಸ್ಟ್ 1908 - 5 ಮೇ 1966) ಭಾರತದ ಒಬ್ಬ ಕ್ರೀಡಾ ಪತ್ರಕರ್ತ ಹಾಗೂ ಕ್ರಿಕೆಟ್ ಸಂಖ್ಯಾಶಾಸ್ತ್ರ ತಜ್ಞರಲ್ಲಿ ಒಬ್ಬರು.

ಆರಂಭದಲ್ಲಿ ಗುರುನಾಥನ್ ಮದ್ರಾಸ್‌ನ ಟ್ರಿಪಲಿಕೇನ್‌ನಲ್ಲಿರುವ ಹಿಂದೂ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆದರು. 1928 ರಿಂದ ದಿ ಹಿಂದೂ ಪತ್ರಿಕೆಯ ಜಾಹೀರಾತು ವಿಭಾಗದಲ್ಲಿ ತಮ್ಮ ಪತ್ರಿಕೋದ್ಯಮದ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು 1938 ರಲ್ಲಿ ವರದಿಗಾರರಾದರು ಮತ್ತು 1958 ರಿಂದ ತಮ್ಮ ಮರಣದವರೆಗೂ ಕ್ರೀಡಾ ಸುದ್ದಿ ವಿಭಾಗದ ಸಂಪಾದಕರಾಗಿದ್ದರು. 1940 ರ ದಶಕದಲ್ಲಿ ಸ್ಥಳೀಯ ಕ್ರಿಕೆಟ್ ಮತ್ತು ಇತರ ಕ್ರೀಡೆಗಳನ್ನು ಒಳಗೊಂಡಿರುವ ಮದ್ರಾಸ್ ಸ್ಪೋರ್ಟ್ಸ್ ವಾರ್ಷಿಕವನ್ನು ಸ್ಥಾಪಿಸಿದರು. ದಿ ಹಿಂದೂ ಪತ್ರಿಕೆಯಲ್ಲಿದ್ದಾಗ, ಸ್ಪೋರ್ಟ್ ಅಂಡ್ ಪಾಸ್ಟೈಮ್ ಎಂಬ ನಿಯತಕಾಲಿಕೆ (ಪತ್ರಿಕೆ) ಪ್ರಾರಂಭಿಸಿದರು. ಇದು ಸುಮಾರು ಇಪ್ಪತ್ತು ವರ್ಷಗಳ ಕಾಲ ಸುಗಮವಾಗಿ ನಡೆಯಿತು ಮತ್ತು ಅವರ ಮರಣದ ನಂತರ ಕಾರ್ಮಿಕರ ತೊಂದರೆಗಳಿಂದಾಗಿ ಪ್ರಕಟಣೆಯನ್ನು ನಿಲ್ಲಿಸಲಾಯಿತು. 1949-1950 ರಲ್ಲಿ ಗುರುನಾಥನ್ ಅವರು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೊದಲ ಗೌರವಾನ್ವಿತ ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞರಾಗಿದ್ದರು. ರವರೆಗೆ ಅವರ ಮರಣದ ತನಕ ಇದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. []


ಗುರುನಾಥನ್ ಅವರು 1946 ರಲ್ಲಿ 'ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್' ಎಂಬದನ್ನು ಸ್ಥಾಪಿಸಿ ಅವರ ಮರಣದವರೆಗೂ ಅದರ ಸಂಪಾದಕರಾಗಿದ್ದರು. ಅವರು ವಿಸ್ಡನ್‌ನ ಭಾರತೀಯ ವಿಭಾಗಕ್ಕೆ ನಿಯಮಿತವಾಗಿ ಕೊಡುಗೆ ನೀಡಿದರು. ಇವರು ಭಾರತೀಯ ಪ್ರವಾಸಗಳು ಸೇರಿದಂತೆ 50 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಒಳಗೊಂಡ 1947-48 ರಲ್ಲಿ ಆಸ್ಟ್ರೇಲಿಯಾ, 1952 ರಲ್ಲಿ ಇಂಗ್ಲೆಂಡ್ ಮತ್ತು 1954-55 ರಲ್ಲಿ ಪಾಕಿಸ್ತಾನದ ಮತ್ತು 1961-62 ಎಮ್‌ಸಿಸಿ ಭಾರತದ ಪ್ರವಾಸವನ್ನು ಟೈಮ್ಸ್‌ಗಾಗಿ ವರದಿ ಮಾಡಿದರು. 12 ವರ್ಷಗಳ ರಣಜಿ ಟ್ರೋಫಿಯನ್ನು, ಸ್ಟೋರಿ ಆಫ್ ದಿ ಟೆಸ್ಟ್‌ಸ್ ಎಂಬ ಶೀರ್ಷಿಕೆಯಲ್ಲಿ ಮೂರು ಸಂಪುಟಗಳ ಬರೆದಿದ್ದಾರೆ. ಗುರುನಾಥನ್ 1963-64ರಲ್ಲಿ ಮದ್ರಾಸ್ ಸ್ಪೋರ್ಟ್ಸ್ ರೈಟರ್ಸ್ ಕ್ಲಬ್‌ನ ಸ್ಥಾಪಸಿ ಅದರ ಅಧ್ಯಕ್ಷರಾದರು.

ಗುರುನಾಥನ್ ತಮ್ಮ ಯೌವನದಲ್ಲಿ ಸ್ಟೈಲಿಶ್ ವಿಕೆಟ್ ಕೀಪರ್ ಆಗಿದ್ದರು ಮತ್ತು ಮದ್ರಾಸ್ ಲೀಗ್ ಪಂದ್ಯಗಳಲ್ಲಿ ಸುಂದರ್ ಸಿ.ಸಿ. ತಂಡವನ್ನು ಪ್ರತಿನಿಧಿಸಿದ್ದರು. ಇವರು ದಿ ಹಿಂದೂ ನಿಂದ ನಿವೃತ್ತರಾಗುವ ಕೆಲವು ತಿಂಗಳುಗಳ ಮೊದಲು ನಿಧನರಾದರು. [] .[]

ಟಿಪ್ಪಣಿ

[ಬದಲಾಯಿಸಿ]
  • ಈ ಲೇಖನಕ್ಕಾಗಿ ಬಳಸಲಾದ ಉಲ್ಲೇಖಗಳು ಹಲವಾರು ವಿವರಗಳಲ್ಲಿ ಭಿನ್ನವಾಗಿವೆ. ಪಿ.ಎನ್. ಸುಂದರೇಶನ್ (ಇಪ್ಪತ್ತು ವರ್ಷಗಳ ಕಾಲ ಗುರುನಾಥನ್ ಅವರೊಂದಿಗೆ ಕೆಲಸ ಮಾಡಿದವರು), ಇವರ ಪ್ರಕಾರ ಗುರುನಾಥನ್ ಅವರು 1 ಜುಲೈ 1908 ರಂದು ಜನಿಸಿದರು ಮತ್ತು 1937 ರಲ್ಲಿ ದಿ ಹಿಂದೂ ನಲ್ಲಿ ಕ್ರೀಡಾ ವರದಿಗಾರರಾದರು.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Sudhir Vaidya, Guru, Anka - the official journal of the Association of the Cricket Statisticians and Scorers of India, July–September 2001, pp. 3–5
  2. SK Gurunathan, CricketArchive. Retrieved 2022-06-09. (subscription required)