ವಿಷಯಕ್ಕೆ ಹೋಗು

ಸದಸ್ಯ:Sharanugudadur/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಕ್ಷೇತ್ರ ಎಂ.ಗುಡದೂರ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಒಂದು ಗ್ರಾಮವಾಗಿದೆ. ಇಲ್ಲಿ ದೋಡ್ಡಬಸವೇಶ್ವರ ಮಠ, ಹನುಮಂತನ ಗುಡ್ಡ, ದುರ್ಗಾದೇವಿ ದೇವಸ್ಥಾನ ಸೇರಿದಂತೆ ಇನ್ನೀತರ ಪ್ರೇಕ್ಷಣಿಯ ಸ್ಥಳಗಳಿವೆ.

ಎಂ. ಗುಡದೂರ ಗ್ರಾಮದ ಹಿನ್ನೆಲೆ

[ಬದಲಾಯಿಸಿ]

ಕುಷ್ಟಗಿ ತಾಲೂಕಿನ ಹೀರೆಮನ್ನಾಪುರದಿಂದ ಐದು ಕಿಲೋ ಮೀಟರ್ ದೂರದಲ್ಲಿ ಎಂ. ಗುಡದೂರ ಗ್ರಾಮವಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹಳ ಪ್ರಖ್ಯಾತಿ ಪಡೆದುಕೊಂಡಿದೆ. ಈ ಗ್ರಾಮದ ಭಾಷೆ ಕನ್ನಡ ಆಗಿದ್ದು, ಇಲ್ಲಿ ೧೫೦೦ ಕ್ಕಿಂತ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಗ್ರಾಮದ ಜನರ ಮೂಲ ಕಸಬು ಕೃಷಿ ಆಗಿದೆ. []ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಯು ಕೂಡ ಇದೆ.

ದೋಡ್ಡಬಸವೇಶ್ವರ ಮಠ

[ಬದಲಾಯಿಸಿ]

ದೋಡ್ಡಬಸವೇಶ್ವರ ಮಠದ ಇತಿಹಾಸ ಕುರಿತು ಈಗಾಗಲೇ ಹಲವಾರು ಪುಸ್ತಕಗಳು ಪ್ರಕಟಣೆಯಾಗಿವೆ.[]ದೋಡ್ಡಬಸವೇಶ್ವರ ಮಠಕ್ಕೆ ಸಂಬಂಧಿಸಿದಂತೆ ಹಲವಾರು ದೇವಸ್ಥಾನಗಳು ಗ್ರಾಮದಲ್ಲಿವೆ. ಇಲ್ಲಿಗೆ ಪ್ರತಿದಿನ ವಿವಿಧ ಸ್ಥಳದಿಂದ ಭಕ್ತರು ಬರುತ್ತಾರೆ. ಪ್ರತಿ ಅಮಾವಾಸ್ಯೆಗೊಮ್ಮೆ ಅನ್ನದಾಸೋಹ ನಡೆಯುತ್ತದೆ. ದೋಡ್ಡಬಸವೇಶ್ವರ ಮಠದ ಆವರಣದಲ್ಲಿರುವಂತ ದೇವಸ್ಥಾನಗಳೆಂದರೆ, ಸಜ್ಜಲಗುಡ್ಡ ಶರಣಮ್ಮ ಅಮ್ಮನವರ ದೇವಸ್ಥಾನ, ಬಾಲಪ್ಪ ಅಜ್ಜನ ಗುಡಿ, ಗದ್ದುಗೆ ಇದಾವೆ.

ಹನುಮಂತನ ಗುಡ್ಡ

[ಬದಲಾಯಿಸಿ]

ಇದು ಗ್ರಾಮದಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಇದೆ. ಇಲ್ಲಿ ವಿಶ್ಮಯಕಾರಿ ಎನ್ನುವಂತೆ, ಒಂದು ಸಣ್ಣ ಕಲ್ಲಿನ ಲೋಟದ ಮೇಲೆ ದೊಡ್ದದಾದ ಗುಡ್ಡ ಕೂತಿದೆ. ಇದು ನೋಡಲು ತುಂಬಾ ಆಕರ್ಷಣಕಾರಿಯಾಗಿದೆ ಮತ್ತು ಇಲ್ಲಿ ಒಂದು ತಂಪಾದ ಹಿತ ನೀಡುವ ಬಚ್ಚಲವಿದೆ. ಇದು ಬೇಸಿಗೆಯಲ್ಲೂ ತಂಪಾಗಿರುತ್ತದೆ. ಇದನ್ನು


ಉಲ್ಲೇಖಗಳು

[ಬದಲಾಯಿಸಿ]