ಸದಸ್ಯ:Shanaz aks/sandbox

ವಿಕಿಪೀಡಿಯ ಇಂದ
Jump to navigation Jump to search

ತೆರಿಗೆ

ತೆರಿಗೆ ಎಂಬುದು ಸರ್ಕಾರದ ಆರ್ಥಿಕ ವ್ಯವಸ್ಥೆಯ ಒಂದು ಭಾಗ. ಕಂದಾಯವು ಸ್ಥೂಲವಾಗಿ ತೆರಿಗೆ ಎಂಬ ಅರ್ಥದಲ್ಲಿ ಕನ್ನಡದಲ್ಲಿ ಪ್ರಚಲಿತವಾಗಿರುವ ಶಬ್ದ. ತೆರಿಗೆಯು ಒಂದು ಸರ್ಕಾರ ಅಥವಾ ಅದರ ಕಾರ್ಯಾತ್ಮಕ ಸಮಾನವಾದ ಸಂಸ್ಥೆಯು ತೆರಿಗೆದಾರನ ಮೇಲೆ ಹೇರುವ ಶುಲ್ಕ. ಮಾರಾಟಗಾರ ಮತ್ತು ಕೊಳ್ಳುವವರ ಮಧ್ಯೆ ವಸ್ತುವೊಂದು ಮಾರಲ್ಪಟ್ಟಾಗ ಸ್ಥಳೀಯ ವಾಣಿಜ್ಯ ತೆರಿಗೆ ಇಲಾಖೆಯು ಸದರಿ ವಸ್ತುವಿನ ಮೇಲೆ ವಿಧಿಸುವ ಶುಲ್ಕವನ್ನು ತೆರಿಗೆಯೆಂದು ಹೇಳಬಹುದು. ಗಮನಿಸಬೇಕಾದ ಅಂಶವೆಂದರೆ,ಇಲ್ಲಿ ಮಾರಲ್ಪಡುವ ವಸ್ತು ಕಣ್ಣಿಗೆ ಕಾಣಿಸುವ ಮತ್ತು ಅದೃಶ್ಯರೂಪದ್ದಾದರೂ ಆಗಿರಬಹುದು. ಸ್ಥಳೀಯ ಸರ್ಕಾರ ಈ ತೆರಿಗೆಯನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಸಂಬಳಕ್ಕೆ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ವ್ಯಯ ಮಾಡುತ್ತದೆ. ಹಾಗೆಯೇ ಸುಂಕ ಕೂಡ ತೆರಿಗೆಯ ಇನ್ನೊಂದು ರೂಪವೇ ಆಗಿದೆ. ತೆರಿಗೆದಾರರು ತೆರಿಗೆಯನ್ನು ಪೂರ್ಣವಾಗಿ ಭರಿಸದ ಸಂದರ್ಭದಲ್ಲಿ ಅವರಿಗೆ ಶಿಕ್ಷೆ ವಿಧಿಸಬಹುದಾಗಿದೆ.

ತೆರಿಗೆಯ ವಿಧಗಳು ಸರ್ಕಾರವು ಅನೇಕ ರೀತಿಯ ತೆರಿಗೆಗಳನ್ನು ನಾನಾ ಹಂತದಲ್ಲಿ ವಿಧಿಸುತ್ತದೆ. ಅವು ಕೆಳಗಿನಂತಿವೆ.

ಮೌಲ್ಯವರ್ಧಿತ ತೆರಿಗೆ - ವ್ಯಾಟ್ ವೃತ್ತೀಯ ತೆರಿಗೆ ಮನರಂಜನಾ ತೆರಿಗೆ ಮಾರಾಟ ತೆರಿಗೆ ಆದಾಯ ತೆರಿಗೆ ಆಬಕಾರಿ ಸುಂಕ ಸಂಪತ್ತಿನ ತೆರಿಗೆ ಮೇಲಿನ ತೆರಿಗೆ ಸೇವಾ ತೆರಿಗೆ ತಲೆಗಂದಾಯ ಆಸ್ತಿಯ ಮೇಲಿನ ತೆರಿಗೆ

ಭೂಕಂದಾಯ ಇದು ಅತ್ಯಂತ ಪ್ರಾಚೀನ ತೆರಿಗೆ ಎಂಬುದು ಕೆಲವರ ಅಭಿಮತ. ಆದರೆ ತಲೆಗಂದಾಯ ಮತ್ತು ಗುಡಿಸಲು ತೆರಿಗೆ ಭೂಕಂದಾಯಕ್ಕಿಂತ ಪ್ರಾಚೀನವಾದುದು ಎಂದು ಮತ್ತೆ ಕೆಲವರು ಅಭಿಪ್ರಾಯಪಡುತ್ತಾರೆ. ಇವುಗಳಲ್ಲಿ ಯಾವುದು ಮೊದಲು ರೂಢಿಗೆ ಬಂತೆಂದು ಹೇಳುವುದು ಕಷ್ಟವಾದರೂ ಇವೆರಡೂ ಪ್ರಾಚೀನ ತೆರಿಗೆಗಳೆಂಬುದರಲ್ಲಿ ಸಂಶಯವಿಲ್ಲ.

ಪ್ರಾಚೀನ ಕಾಲದಿಂದಲೂ ಎಲ್ಲ ರಾಷ್ಟ್ರಗಳಲ್ಲೂ ಭೂಕಂದಾಯ ರಾಜಸ್ವದ ಒಂದು ಮುಖ್ಯ ಮೂಲವಾಗಿದೆ. ಈಚಿನ ದಿನಗಳಲ್ಲಿ ಬೇರೆ ತೆರಿಗೆಗಳಿಂದ ದೊರಕುವ ಆದಾಯ ಹೆಚ್ಚಾಗಿರುವುದರಿಂದ ಭೂಕಂದಾಯದಿಂದ ದೊರಕುವ ಆದಾಯ ಇತರ ತೆರಿಗೆಗಳಿಂದ ದೊರಕುವ ಆದಾಯಕ್ಕೆ ಹೋಲಿಸಿದಾಗ ಕಡಿಮೆಯಾಗಿ ಕಾಣುತ್ತದೆ. ಆದರೂ ಇದರ ಮೂಲಕ ಸರ್ಕಾರ ಆದಾಯ ಪಡೆಯುವುದು ತಪ್ಪಿಲ್ಲ. ಭೂಕಂದಾಯವನ್ನು ಸರ್ಕಾರ ಯಾವ ಆಧಾರದ ಮೇಲೆ ವಿಧಿಸುತ್ತದೆಂಬುದನ್ನು ಅರಿಯುವುದು ಆವಶ್ಯಕ. ಈ ಬಗ್ಗೆ ಎಲ್ಲ ರಾಷ್ಟ್ರಗಳಲ್ಲೂ ಒಂದೇ ಪದ್ಧತಿ ಜಾರಿಯಲ್ಲಿಲ್ಲ: ಭಾರತದಲ್ಲೇ ಎಲ್ಲ ಭಾಗಗಳಲ್ಲೂ ಒಂದೇ ಪದ್ಧತಿ ರೂಢಿಯಲ್ಲಿಲ್ಲ. ಕಂದಾಯವನ್ನು ನಿರ್ಧರಿಸಲು ಅನುಸರಿಸುವ ಆಧಾರ ಕಾಲದಿಂದ ಕಾಲಕ್ಕೆ ಬದಲಾವಣೆಯಾಗಿದೆ. ವಸೂಲಿ ಮಾಡುವ ವಿಧಾನದಲ್ಲೂ ಕಾಲದಿಂದ ಕಾಲಕ್ಕೆ ವ್ಯತ್ಯಾಸವಾಗಿದೆ. ಪ್ರಾರಂಭದಲ್ಲಿ ಭೂವಿಸ್ತೀರ್ಣ ಭೂಕಂದಾಯದ ದರವನ್ನು ನಿರ್ಧರಿಸಲು ಆಧಾರವಾಗಿತ್ತು. ರೋಮಿನಲ್ಲಿ ಒಂದುನೂರು ಎಕರೆಗೆ ಇಂತಿಷ್ಟು ಕಂದಾಯ ಎಂದು ನಿರ್ಧರಿಸಲಾಗುತ್ತಿತ್ತು. ೧೯೧೫ಕ್ಕೆ ಮೊದಲು ಫ್ರಾನ್ಸಿನಲ್ಲಿ ಭೂಮಿಯ ಮೌಲ್ಯಕ್ಕೆ ಅನುಗುಣವಾಗಿ ಭೂಕಂದಾಯವನ್ನು ನಿರ್ಧರಿಸಲಾಗುತ್ತಿತ್ತು. ಉತ್ಪನ್ನದ ಆಧಾರದ ಮೇಲೆ ಭೂಕಂದಾಯವನ್ನು ವಿಧಿಸುವುದೂ ಇತರ ಪದ್ಧತಿಗಳಂತೆಯೇ ಪ್ರಾಚೀನವಾದುದೆಂದು ಹೇಳಲಾಗಿದೆ. ಭೂಮಿಯ ಸಾರಗುಣ, ನೀರಾವರಿ ಸೌಲಭ್ಯ, ಮಾರುಕಟ್ಟೆಯ ಸಾಮೀಪ್ಯ ಮುಂತಾದ ಅಂಶಗಳನ್ನು ಆಧಾರವಾಗಿ ಪರಿಗಣಿಸುವುದು ಕಾಲಕ್ರಮದಲ್ಲಿ ಜಾರಿಗೆ ಬಂತು. ಭೂಕಂದಾಯವನ್ನು ಪಡೆಯುವ ರೀತಿಯಲ್ಲೂ ಪ್ರಮುಖ ಬದಲಾವಣೆಯುಂಟಾಗಿದೆ. ಪ್ರಾರಂಭದಲ್ಲಿ ಭೂಮಿಯಿಂದ ಪಡೆಯುವ ಧಾನ್ಯದ ರೂಪದಲ್ಲಿ ಕಂದಾಯ ಕೊಡಬೇಕಾಗಿತ್ತು. ಅನಂತರ ಹಣದ ರೂಪದಲ್ಲಿ ಕಂದಾಯ ಕೊಡುವುದು ರೂಢಿಗೆ ಬಂತು.

ತಲೆಗಂದಾಯ ಪ್ರಾಚೀನ ತೆರಿಗೆಗಳಲ್ಲಿ ಒಂದಾದ ತಲೆಗಂದಾಯ ಈಗ ಕೇವಲ ಚಾರಿತ್ರಿಕ ಅಂಶವಾಗಿದೆ. ರೋಮನರು ಬ್ರಿಟಿಷರ ಮೇಲೆ ಈ ತೆರಿಗೆಯನ್ನು ವಿಧಿಸುತ್ತಿದ್ದರೆಂದು ಇತಿಹಾಸದಿಂದ ತಿಳಿದುಬರುತ್ತದೆ. ಯುದ್ಧದಲ್ಲಿ ಸೋತು ರಾಷ್ಟ್ರದ ಮೇಲೆ ಗೆದ್ದ ರಾಷ್ಟ್ರದ ಸರ್ಕಾರ ಈ ಕಂದಾಯವನ್ನು ವಿಧಿಸುವುದು ರೂಢಿಯಲ್ಲಿತ್ತು. ಗ್ರೀಸಿನಲ್ಲಿ ಈ ಕಂದಾಯವನ್ನು ಕೊಡುವುದು ಗುಲಾಮಗಿರಿಯ ಚಿಹ್ನೆ ಎಂಬ ಭಾವನೆಯಿತ್ತು. ಫ್ರೆಂಚ್ ಮಾದರಿಯನ್ನನುಸರಿಸಿ ಇಂಗ್ಲೆಂಡಿನಲ್ಲಿ ೧೩೭೭ರಲ್ಲಿ ವಿಧಿಸಲಾದ ತಲೆಗಂದಾಯದ ಬಗ್ಗೆ ಇಂಗ್ಲಿಷರ ಇತಿಹಾಸದಲ್ಲಿ ಮೊದಲ ವಿವರಣೆ ದೊರಕುತ್ತದೆ. ಹದಿನಾಲ್ಕು ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ಹೆಂಗಸರು ಮತ್ತು ಗಂಡಸರೆಲ್ಲರೂ ತಲಾ ನಾಲ್ಕು ಪೆನ್ನಿಯಂತೆ ಈ ಕಂದಾಯವನ್ನು ಕೊಡಬೇಕಾಗಿತ್ತು. ನಿಜವಾದ ಭಿಕ್ಷುಕರಿಗೆ ವಿನಾಯಿತಿಯಿತ್ತು. ಅಮೆರಿಕದಲ್ಲೂ ತಲೆಗಂದಾಯ ಹಿಂದಿನಕಾಲದಲ್ಲಿದ್ದುದಷ್ಟೇ ಅಲ್ಲದೆ ಅಲ್ಲಿಯ ಹಲವು ರಾಜ್ಯಸರ್ಕಾರಗಳು ಈಗಲೂ ಇದನ್ನು ವಿಧಿಸುತ್ತವೆ. ಆ ದೇಶದ ಸಂವಿಧಾನದ ಪ್ರಕಾರ ಹದಿಮೂರು ರಾಜ್ಯಗಳು ತಲೆಗಂದಾಯ ವಿಧಿಸುವ ಅಧಿಕಾರ ಹೊಂದಿವೆ. ಇವುಗಳಲ್ಲಿ ಒಂಬತ್ತು ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳು ಈ ಕಂದಾಯ ವಿಧಿಸುತ್ತವೆ. ಭಾರತದಲ್ಲಿ ಮೊಗಲರ ಕಾಲದಲ್ಲಿ ಈ ಕಂದಾಯ ವಿಧಿಸಲಾಗಿತ್ತು. ಹಿಂದೂಗಳು ಮಾತ್ರ ಕೊಡಬೇಕಾಗಿದ್ದ ಜಿಸಿóಯಾ ತಲೆಗಂದಾಯ ಭಾರತದ ಇತಿಹಾಸದಲ್ಲಿ ಕುಖ್ಯಾತಿ ಗಳಿಸಿದೆ. ತಲೆಗಂದಾಯದಿಂದ ದೊರಕಿದ ಆದಾಯವನ್ನು ರಸ್ತೆಗಳ ನಿರ್ಮಾಣ ಮತ್ತು ಪಾಠಶಾಲೆಗಳ ವ್ಯವಸ್ಥೆಗಳಿಗೆ ಉಪಯೋಗಿಸುವುದು ಸಾಮಾನ್ಯವಾಗಿತ್ತು. ಕೆಲಸ ಮಾಡುವ ಶಕ್ತಿಯಿದ್ದ ವಯಸ್ಕರ ಮೇಲೆ ಮಾತ್ರ ಈ ಕಂದಾಯ ವಿಧಿಸುತ್ತಿದ್ದುದು ಈ ಕಾರಣದಿಂದಲೇ. ಒಂದು ವೇಳೆ ಕಂದಾಯ ಕೊಡಲಾಗದಿದ್ದರೆ ರಸ್ತೆಯ ಕೆಲಸದಲ್ಲಿ ಶ್ರಮದಾನ ಮಾಡುವುದರ ಮೂಲಕ ಕಂದಾಯ ತೀರಿಸಬಹುದಾಗಿತ್ತು. ತಲೆಗಂದಾಯದ ಕೆಲವು ವಿಶೇಷ ಲಕ್ಷಣಗಳಿವು : ಮೊದಲನೆಯದಾಗಿ, ಪ್ರತಿಯೊಬ್ಬ ನಾಗರಿಕನೂ ಆತನ ಆದಾಯ ಮತ್ತು ಆಸ್ತಿಯ ಮಟ್ಟ ಏನೇ ಇದ್ದರೂ ಇದನ್ನು ಕಡ್ಡಾಯವಾಗಿ ಪಾವತಿ ಮಾಡಲೇಬೇಕು. ವಿನಾಯಿತಿ ದೊರಕುವುದೇನಿದ್ದರೂ ವಯಸ್ಸಿನ ಆಧಾರದ ಮೇಲೆ. ಯಾವ ಆಸ್ತಿಯಿಂದಲೂ ದುಡಿಮೆಯಿಂದಲೂ ಆದಾಯವಿಲ್ಲದೆ, ಭಿಕ್ಷದಿಂದ ಜೀವನ ನಡೆಸುವವರಿಗೂ ವಿನಾಯಿತಿ ಇರುತ್ತಿತ್ತು. ಎರಡನೆಯದಾಗಿ, ಈ ಕಂದಾಯವನ್ನು ಯಾರ ಮೇಲೆ ವಿಧಿಸಲಾಗುತ್ತದೊ ಸಾಮಾನ್ಯವಾಗಿ ಅವರ ಮೇಲೆಯೇ ಇದರ ಹೊರೆ ಅಂತಿಮವಾಗಿ ಬೀಳುತ್ತದೆ. ಇದು ಸಾಮಾನ್ಯವಾಗಿ ಅಲ್ಪದರದಲ್ಲಿ ವಿಧಿಸಲ್ಪಡುವುದರಿಂದ ಹೊರೆಯನ್ನು ವರ್ಗಾಯಿಸುವ ಪ್ರಯತ್ನವಿರುವುದಿಲ್ಲ. ಆದರೆ ಹೆಚ್ಚಿನ ದರದಲ್ಲಿ ವಿಧಿಸಿದಾಗ ಕೂಲಿಯನ್ನು ಹೆಚ್ಚಿಸುವಂತೆ ಮಾಡಿ ಉದ್ಯೋಗದಾತರಿಗೆ ಹೊರೆಯನ್ನು ಕೆಲಸಗಾರರು ವರ್ಗಾಯಿಸಬಹುದು. ಮತ್ತು ಉದ್ಯೋಗದಾತರು ಬೆಲೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸಬಹುದು ಮೂರನೆಯದಾಗಿ, ಪ್ರಾರಂಭದಲ್ಲಿ ಸಮವಾದ ದರದಲ್ಲಿ ಎಲ್ಲರ ಮೇಲೆ ತಲೆಗಂದಾಯ ಬೀಳುತ್ತಿತ್ತು. ಕ್ರಮೇಣ ಕಂದಾಯದ ದರವನ್ನು ವರ್ಗಾನುಗುಣವಾಗಿ ವಿಂಗಡಿಸುವ ಪದ್ಧತಿ ಕೆಲವು ದೇಶಗಳಲ್ಲಿ ಜಾರಿಗೆ ಬಂತು. ಫ್ರಾನ್ಸಿನಲ್ಲಿ ೧೭೦೧ರಲ್ಲಿ ತಲೆಗಂದಾಯ ವಿಧಿಸುವುದಕ್ಕಾಗಿ ಜನರನ್ನು ಇಪ್ಪತ್ತೆರಡು ಗುಂಪುಗಳಾಗಿ ವಿಂಗಡಿಸಿ ಒಂದೊಂದು ಗುಂಪಿಗೆ ಒಂದೊಂದು ದರದ ಕಂದಾಯ ಹಾಕುವುದು ರೂಢಿಗೆ ಬಂತು. ರಷ್ಯದಲ್ಲಿ ಪೀಟರ್ ದೊರೆ ೧೭೮೦ರಲ್ಲಿ ತೆರಿಗೆದಾರರನ್ನು ಮೂರು ಗುಂಪುಗಳಾಗಿ ವಿಂಗಡಿಸಿದ. ೧೮೧೧ರಲ್ಲಿ ಪ್ರಷ್ಯದಲ್ಲಿ ತೆರಿಗೆದಾರರನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಯಿತು. ನಾಲ್ಕನೆಯದಾಗಿ, ಈ ಕಂದಾಯಕ್ಕೂ ರಾಜಕೀಯ ಹಕ್ಕುಬಾಧ್ಯತೆಗಳಿಗೂ ಒಂದು ರೀತಿಯ ಸಂಬಂಧವಿದೆ. ಅಮೆರಿಕದಲ್ಲಿ ಈ ಕಂದಾಯವನ್ನು ಪಾವತಿ ಮಾಡದೆ ತಪ್ಪಿಸಿಕೊಂಡವರಿಗೆ ಚುನಾವಣೆಗಳಲ್ಲಿ ಮತ ನೀಡುವ ಹಕ್ಕು ಇಲ್ಲದಂತಾಗುತ್ತಿತ್ತು. ಮತ ನೀಡುವ ಹಕ್ಕನ್ನು ಈ ರೀತಿ ಮೊಟಕು ಮಾಡುವುದು ಸರಿಯಲ್ಲವೆಂಬುದು ವೇದ್ಯವಾಗಿ ೧೯೬೪ರ ಸಂವಿಧಾನದ ಇಪ್ಪತ್ನಾಲ್ಕನೆಯ ತಿದ್ದುಪಡಿಯಲ್ಲಿ ಈ ನಿರ್ಬಂಧವನ್ನು ತೆಗೆದುಹಾಕಲಾಯಿತು.


ವ್ಯಾಪಾರೋದ್ಯಮ

ಅಸ್ತಿತ್ವದಲ್ಲಿರುವ ಮತ್ತು ಹೊಸದಾಗಿ ಗುರಿತಿಸಲ್ಪಟ್ಟ ಉತ್ಪನ್ನಗಳು ಮತ್ತು ಅಗತ್ಯಗಳ ಬಗ್ಗೆ ವ್ಯಕ್ತಿಗಳಿಗೆ ಅಥವಾ ಸಮುದಾಯಕ್ಕೆ ಸಂವಹನದ ಮೂಲಕ ತಿಳಿವಳಿಕೆ ನೀಡುವುದು ಹಾಗೂ ಅವುಗಳ ಪ್ರಯೋಜನ ಪಡೆಯಲು ಪ್ರೇರೇಪಿಸುವಂಥ ಪ್ರಕ್ರಿಯೆಯನ್ನು ವ್ಯಾಪಾರೋದ್ಯಮ ಎನ್ನಲಾಗಿದೆ.

ಗ್ರಾಹಕರನ್ನು ಸೃಷ್ಟಿಸಲು, ಉಳಿಸಿಕೊಳ್ಳಲು ಮತ್ತು ಅವರನ್ನು ಸಂತೃಪ್ತಿಗೊಳಿಸಲು ವ್ಯಾಪಾರೋದ್ಯಮಯನ್ನು ಬಳಸಲಾಗುವುದು. ವ್ಯಾಪಾರೋದ್ಯಮ ಗ್ರಾಹಕ ಕೇಂದ್ರಿತವಾದದ್ದು. ಆದ್ದರಿಂದ ಇಲ್ಲಿನ ಚಟುವಟಿಕೆಗಳನ್ನು ವ್ಯಾಪಾರ ನಿರ್ವಹಣೆಯ ಪ್ರಮುಖ ಅಂಶವೆಂದು ಪರಿಗಣಿಸಲಾಗಿದೆ. ಇದರ ಇನ್ನೊಂದು ತುದಿಗೆ ಕಾರ್ಯಾಚರಣೆ. ಮಾನವ ಸಂಪನ್ಮೂಲಗಳು, ಲೆಕ್ಕಪತ್ರ ಇಡುವಿಕೆ, ಕಾಯಿದೆ ಮತ್ತು ಕಾನೂನಿಗೆ ಸಂಬಂಧಿಸಿದ ಅಂಶಗಳಂತಹ ಇತರ ಸೇವೆಗಳು ಮತ್ತು ನಿರ್ವಹಣೆಗಳನ್ನು "ಸಂಸ್ಥೆಯೇ ಮಾಡಬಹುದು" ಅಥವಾ "ಹೊರ ಗುತ್ತಿಗೆ ನೀಡಬಹುದು"

" ಗ್ರಾಹಕರು, ಗಿರಾಕಿಗಳು, ಪಾಲುದಾರರು ಮತ್ತು ಸಮಾಜಕ್ಕೆ ಮೌಲ್ಯಾಧಾರಿತವಾದದ್ದನ್ನು ನಿರ್ಮಿಸಿ,ಅದನ್ನು ತಿಳಿಯಪಡಿಸಿ, ನೀಡಿ ಅಥವಾ ವಿನಿಮಯ ಮಾಡಿಕೊಳ್ಳುವ ಒಂದು ಪ್ರಕ್ರಿಯೇ ಮಾರಾಟ ವ್ಯವಸ್ಥೆ " ಎಂದು ಅಮೆರಿಕಾದ ಮಾರಾಟ ಸಂಸ್ಥೆಯು ವ್ಯಾಪಾರೋದ್ಯಮಯನ್ನು ವ್ಯಾಖ್ಯಾನಿಸಿದೆ. ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟಕ್ಕಾಗಿ ಅಕ್ಷರಶಃ ಮಾರುಕಟ್ಟೆಗೆ ಹೋಗಿ ಬರುತ್ತಿದ್ದ ಸನ್ನಿವೇಶದಿಂದ ಅಭಿವೃದ್ಧಿಗೊಂಡ ರೂಪವಿದು.

"ಗ್ರಾಹಕರ ಅಗತ್ಯಗಳನ್ನು ಗುರುತಿಸುವ, ನಿರೀಕ್ಷಿಸುವ ಮತ್ತು ಅವುಗಳನ್ನು ಲಾಭದಾಯಕವಾಗಿ ಪೂರೈಸುವ ಭರಿಸುವ ಜವಬ್ದಾರಿಗಳನ್ನು ಹೊತ್ತ ಆಡಳಿತ ಪ್ರಕ್ರಿಯೆಯೇ ಮಾರ್ಕೆಟಿಂಗ್" ಎಂದು ವ್ಯಾಪಾರೋದ್ಯಮಯನ್ನು ಚಾರ್ಟರ್ಡ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮಾರ್ಕೆಟಿಂಗ್‌ ಸಂಸ್ಥೆ ವ್ಯಾಖ್ಯಾನಿಸಿದೆ. ಜಾಹೀರಾತು ನೀಡುದು, ವಿತರಣೆ ಮಾಡುವುದು ಮತ್ತು ಮಾರಾಟದಲ್ಲಿ ತೊಡಗುವಂಥ ಸೃಜನಶೀಲ ಉದ್ಯಮದಂತೆ ಹಿಂದೆ ಇದು ತೋರುತ್ತಿತ್ತು. ಸಮಾಜಿಕ ವಿಜ್ಞಾನಗಳಾದ ಮನೋ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಅರ್ಥ ಶಾಸ್ತ್ರ, ಮಾನವ ವಿಕಾಸ ವಿಜ್ಞಾನ ಮತ್ತು ನರ ವಿಜ್ಞಾನದಂಥ ವಿಷಯಗಳನ್ನು ವ್ಯಾಪಾರೋದ್ಯಮಯ ಶೈಕ್ಷಣಿಕ ಅಧ್ಯಯನದಲ್ಲಿ ವ್ಯಾಪಕವಾಗಿ ಬಳಸಿಕೊಳ್ಳುಲಾಗುತ್ತದೆ. ಈ ವೃತ್ತಿಯನ್ನು ವಿಜ್ಞಾನವೆಂದು ಗುರುತಿಸಲಾಗಿದೆ. ಅಸಂಖ್ಯಾತ ವಿಶ್ವವಿದ್ಯಾಲಯಗಳು ವಿಜ್ಞಾನ ಸ್ನಾತಕೋತ್ತರ ಪದವಿ ನೀಡುತ್ತಿವೆ. ಸಮಗ್ರ ಪ್ರಕ್ರಿಯೆಯು ಮಾರುಕಟ್ಟೆ ಸಂಶೋಧನೆಯೊಂದಿಗೆ ಪ್ರಾರಂಭವಾಗಿ, ಮಾರುಕಟ್ಟೆ ವಿಭಜನೆ, ವ್ಯಾಪಾರ ಯೋಜನೆ ಮತ್ತು ಕಾರ್ಯಗತ ಮಾಡುವುದು-ಹೀಗೆ ಮುಂದುವರಿಯುತ್ತದೆ. ವ್ಯಾಪಾರ ಪೂರ್ವದ ವ್ಯಾಪಾರೋತ್ತರ ಮಾರಾಟ ಪ್ರಚಾರ ಚಟುವಟಿಕೆಗಳೊಂದಿಗೆ ಇದು ಕೊನೆಗೊಳ್ಳುತ್ತದೆ. ಹಲವಾರು ಸೃಜನಾತ್ಮಕ ಕಲೆಗಳೊಂದಿಗೆ ಇದರ ಸಂಬಂಧವಿದೆ. ವ್ಯಾಪಾರೋದ್ಯಮಯ ವಿಷಯದಲ್ಲಿ ಮರು-ಅನ್ವೇಷಣೆ ಆಗುತ್ತಲೇ ಇರುತ್ತದೆ. ಅದರ ಶಬ್ದಕೋಶ ಕಾಲದಿಂದ ಕಾಲಕ್ಕೆ, ಸಂಸ್ಕೃತಿಯನ್ನನುಸರಿಸಿ ತಂತಾನೇ ಅಭಿವೃದ್ಧಿಯಾಗುತ್ತದೆ.

ಒಂದು ವ್ಯವಸ್ಥೆಯ ದೃಷ್ಟಿಕೋನದಲ್ಲಿ ವ್ಯಾಪಾರೋದ್ಯಮಯನ್ನು ನೋಡಿದರೆ, ಮಾರಾಟ ಪ್ರಕ್ರಿಯೆ ನಿರ್ವಹಣೆಯಂತೆ ವ್ಯಾಪಾರೋದ್ಯಮಯು ಇತರ ಕ್ರಿಯೆಗಳೊಂದಿಗೆ ಅಂತರ ಸಂಬಂಧ ಹೊಂದಿದ ಮತ್ತು ಪರಸ್ಪರ ಅವಲಂಬಿತ ಪ್ರಕ್ರಿಯೆಗಳ ಒಂದು ಗುಚ್ಛ. ಸಂಬಂಧಪಟ್ಟ ವಿವಿಧ ಹೊಸ ಪ್ರಸ್ತಾಪಗಳನ್ನು ಬಳಸಿ ಅದರ ವಿಧಾನಗಳಲ್ಲಿ ಸುಧಾರಣೆ ತರಬಹುದು.


ಉತ್ಪನ್ನ

ಬ್ರ್ಯಾಂಡಿಂಗ್ ಬ್ರ್ಯಾಂಡ್ ಎಂರೆ ಮುದ್ರೆಯುಳ್ಳ ಸರಕು-ಅದರ ಹೆಸರು,ಪದ, ವಿನ್ಯಾಸ, ಚಿಹ್ನೆ ಅಥವಾ ಇತರ ವೈಶಿಷ್ಟ್ಯಗಳಿಂದ ಕೂಡಿದ್ದು, ಅದು ತನ್ನ ಪ್ರತಿಸ್ಪರ್ಧಿ ಸರಕಿನಿಂದ ಭಿನ್ನವಾಗಿ ಗೋಚರಿಸುವಂತೆ ಪ್ರತ್ಯೇಕವಾಗಿ ನಿಲ್ಲುತ್ತದೆ. ಬ್ರ್ಯಾಂಡ್ ಎಂಬುದು ಹೆಸರು, ವಿನ್ಯಾಸ ಅಥವಾ ಚಿಹ್ನೆಗಿಂತಲೂ ಅಧಿಕ ಮೌಲ್ಯವುಳ್ಳದ್ದು.ಬ್ರ್ಯಾಂಡ್ ಸಾಂಸ್ಥಿಕ ಸಂಸ್ಕೃತಿಯನ್ನು ಹೊಂದಿರುವ ಕಂಪನಿಯ ವ್ಯಕ್ತಿತ್ವದ ಪ್ರತಿಫಲನ.ನೀಡಲಾದ ಕ್ರಿಯಾತ್ಮಕ ಅಥವಾ ತಟಸ್ಥ ಭರವಸೆಯ ಆಧಾರದ ಮೇಲೆ ನಿರ್ದಿಷ್ಟ ಮೌಲ್ಯವನ್ನು ಗುರುತಿಸಲು ಸಾಧ್ಯವಾದುದನ್ನೇ ಬ್ರ್ಯಾಂಡ್ ಎಂದು ಹೇಳಲಾಗಿದೆ.ನಿರ್ದಿಷ್ಟ ಉತ್ಪನ್ನವೊಂದರ ಕಲ್ಪನೆಯನ್ನು ಮನದ ತೆರೆಯ ಮೇಲೆ ಮೂಡಿಸುವ ಸಾಮರ್ಥ್ಯಕ್ಕೆ ಬ್ರ್ಯಾಂಡಿಂಗ್‌ ಎನ್ನಲಾಗಿದೆ.ವ್ಯಾಪಾರೋದ್ಯಮ ಎರಡು ಅಥವಾ ಹೆಚ್ಚಿನ ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದರೆ ಅದಕ್ಕೆ ಕೊ-ಬ್ರ್ಯಾಂಡಿಂಗ್‌ ಎಂದು ಕರೆಸಿಕೊಳ್ಳುತ್ತದೆ. ವ್ಯಾಪಾರೋದ್ಯಮದ ಸಂಪರ್ಕ ವ್ಯವಸ್ಥೆ ಅಂತಿಮ-ಬಳಕೆದಾರರು, ಗ್ರಾಹಕರು ಮತ್ತು ಬಾಹ್ಯ ಪಕ್ಷಗಾರರೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಸಂಸ್ಥೆಯ ಕ್ರಮಕ್ಕೆ ವ್ಯಾಪಾರೋದ್ಯಮ ಸಂಪರ್ಕ ಎಂಬ ವಿವರಣೆ ಇದೆ. ವ್ಯಾಪಾರೋದ್ಯಮ ಸಂಪರ್ಕ ನಾಲ್ಕು ಬೇರೆ ಬೇರೆ ಉಪವರ್ಗಗಳನ್ನು ಹೊಂದಿದೆ. ಅವುಗಳೆಂದರೆ:

ವೈಯಕ್ತಿಕ ಮಾರಾಟ ಖರೀದಿ ಸಾಮರ್ಥ್ಯವುಳ್ಳ ಗ್ರಾಹಕ ಅಥವಾ ಗ್ರಾಹಕರ ಗುಂಪನ್ನು ಸಂಪರ್ಕಿಸುವ ಮಾರಾಟ ಪ್ರತಿನಿಧಿಯಿಂದ ಮೌಖಿಕ ಪ್ರಸ್ತುತಿಯನ್ನು ನೀಡಲಾಗುತ್ತದೆ:

ನೇರ, ಪರಸ್ಪರ ಸಂಬಂಧ ವೈಯಕ್ತಿಕ ಹಿತಾಸಕ್ತಿ ಲಕ್ಷ್ಯ ಮತ್ತು ಪ್ರತಿಕ್ರಿಯೆ ಅಭಿರುಚಿ ಹುಟ್ಟುವಂಥ ಪ್ರಸ್ತಾವನೆ ಸ್ಪಷ್ಟತೆ ಮತ್ತು ಪರಿಣತ

ಮಾರಾಟ ಪ್ರಚಾರ ಉತ್ಪನ್ನಗಳನ್ನು ಖರೀದಿಸಲು ಅಲ್ಪಾವಧಿಯ ಪ್ರೇರಕಗಳು: ತ್ವರಿತ ಮನವಿ ಮಾರಾಟದ ಉತ್ಸುಕತೆ ಮಾರಾಟದ ಮೇಲೆ ಕೂಪನ್‌ ನೀಡುವುದೊಂದು ಉದಾಹರಣೆ. ಜನ ಖರೀದಿಸಲೆಂದು ನೀಡಲಾಗುವ ಇಂಥ ಉತ್ತೇಜಕಗಳು ಗ್ರಾಹಕರ ನಿಷ್ಠೆಯನ್ನೂ ಬೆಳೆಸದು ಅಥವಾ ಖರೀಸುವ ಪುನರಾವರ್ತನೆಗೂ ಇಂಬು ನೀಡದು. ಪ್ರತಿಸ್ಪರ್ಧಿಗಳು ಸುಲಭವಾಗಿ ನಕಲು ಮಾಡುವುದೇ ಮಾರಾಟ ಪ್ರಚಾರ ತಂತ್ರದಲ್ಲಿರುವ ಪ್ರಮುಖ ಹಿನ್ನಡೆ. ಉತ್ಪನ್ನವೊಂದು ಪ್ರತ್ಯೇಕವಾಗಿ ನಿಲ್ಲಲು ಬಹುಕಾಲ ಉಳಿಯಲಾರದ ಸಾಧನವಿದು.

ಸಾರ್ವಜನಿಕ ಸಂಪರ್ಕ ಸಂಸ್ಥೆಯು ಗ್ರಾಹಕ/ಬಳಕೆದಾರನ ಮೇಲೆ ತನ್ನ ಉತ್ಪನ್ನದ ಛಾಪನ್ನು ಒತ್ತಲು, ತಾನು ಗುರಿ ಇಟ್ಟ ಮಾರುಕಟ್ಟೆಯಲ್ಲಿ ತನ್ನ ಶ್ರೇಷ್ಠತೆಯ ಕುರುಹನ್ನು ಸ್ಥಾಪಿಸಲು ಮಾಧ್ಯಮದ ಸಾಧನವನ್ನು ಬಳಸಿಕೊಳ್ಳುವುದು ಸಾರ್ವಜನಿಕ ಸಂಪರ್ಕ ವಿಭಾಗದ ಕೆಲಸ. ಸಂಸ್ಥೆತಯು ತನ್ನ ಸರಕು/ಸೇವೆಗೆ ಬೇಡಿಕೆ ಕುಗ್ಗುತ್ತಿದೆ ಎಂಬ ಕಾರಣದಿಂದ ವಿರೋಧ ವ್ಯಕ್ತ ಮಾಡುವುದಾಗಲೀ ಅಥವಾ ಉದ್ಭವವಾದ ಪ್ರತಿಕೂಲ ಪರಿಸ್ಥಿತಿಯಿಂದ ಕೋಪಿಸಿಕೊಂಡು ತನ್ನ ಮಾರುಕಟ್ಟೆ ಆಧಾರವನ್ನು ಕಳೆದುಕೊಳ್ಳುವುದಾಗಲೀ ಸಲ್ಲದು ಎಂಬ ಧ್ಯೇಯೋದ್ದೇಶದಿಂದ ಚಿಗುರೊಡೆದಿರುವುದೇ ಸಾರ್ವಜನಿಕ ಸಂಪರ್ಕ. ಗ್ರಾಹಕರಿಗೆ ಭರವಸೆ ನೀಡುವ ಮತ್ತು ಸಂಸ್ಥೆಗೆ ಮುಂದೊದಗಬಹುದಾದ ಋಣಾತ್ಮಕ ನಿಲುವುಗಳನ್ನು ಸೂಚಿಸುವ ಕಾರ್ಯ ಈ ವಿಭಾಗದ್ದು.

PR ವ್ಯಾಪ್ತಿ:

ಸಂದರ್ಶನಗಳು ಭಾಷಣಗಳು/ಪ್ರಸ್ತುತಿಗಳು ಉದ್ಯಮ ಸಾಹಿತ್ಯ (ಆರ್ಥಿಕ ಸ್ಥಿತಿಗತಿ, ಪರಿಚಯಾತ್ಮಕ ಸಾಹಿತ್ಯ ಇತ್ಯಾದಿ)