ವಿಷಯಕ್ಕೆ ಹೋಗು

ಸದಸ್ಯ:Shamreen R A R

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]
ಚಿತ್ರ:Shamreen R A R.jpg
ಶಮ್ರೀನ್ ಆರ್.ಎ.ಆರ್

ನನ್ನ ಹೆಸರು ಶಮ್ರೀನ್ ಆರ್.ಎ.ಆರ್. ನನ್ನ ಜನ್ಮಸ್ಥಳ ತೀರ್ಥಹಳ್ಳಿ. ನನ್ನ ತಂದೆಯ ಹೆಸರು ರಜಬ್ .ಎ. ಆರ್. ನನ್ನ ತಾಯಿಯ ಹೆಸರು ಸಾರಮ್ಮ.ಎಂ. ನನ್ನ ತಂದೆ ವ್ಯಾಪಾರಸ್ಥರು ಮತ್ತು ನನ್ನ ತಾಯಿ ಗೃಹಿಣಿಯಾಗಿರುವರು. ದಿನಾಂಕ ೧೯-೦೬-೧೯೯೯ ರಂದು ನಾನು ಜಗತ್ತನ್ನು ಕಂಡೆನು. ನನಗೆ ಇಬ್ಬರು ಸಹೋದರಿಯರಿದ್ದಾರೆ. ಒಬ್ಬಳು ವೈದ್ಯಕೀಯಶಾಸ್ತ್ರವನ್ನು ಕಲಿಯುತ್ತಿದ್ದಾಳೆ. ಇನ್ನೊಬ್ಬಳು ಒಂಭತ್ತನೇ ತರಗತಿಯಲ್ಲಿ ವಿದ್ಯಭ್ಯಾಸ ಮಾಡುತ್ತಿದ್ದಾಳೆ.

ಶಿಕ್ಷಣ

[ಬದಲಾಯಿಸಿ]

ಕುವೆಂಪುರವರ ಸ್ಥಳವಾದ ತೀರ್ಥಹಳ್ಳಿಯಲ್ಲಿ ನಾನು ನನ್ನ ಪ್ರೌಢಶಾಲೆಯನ್ನು ಮುಗಿಸಿದೆನು. ನನ್ನ ಶಾಲೆಯ ಹೆಸರು ವಾಗ್ದೇವಿ. ಹೆಸರಿಗೆ ತಕ್ಕ ಹಾಗೆ ನನ್ನ ಶಾಲೆಯಲ್ಲಿ ವಿದ್ಯೆ ಅತ್ತ್ಯುತ್ತಮವಾಗಿತ್ತು. ಆದರೆ ಕ್ರೀಡೆಗೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಆದ್ದರಿಂದ ನನ್ನ ಕನಸಾದ ವಾಲಿಬಾಲ್ ರಾಜ್ಯಪ್ರಶಸ್ತಿ ಕನಸಾಗಿಯೆ ಉಳಿಯಿತು. ಆದರೆ ನನ್ನ ಶಾಲೆ ನನಗೆ ಕೊಟ್ಟ ಸಂಸ್ಕೃತಿ ಉನ್ನತವಾದದ್ದು.ನಾನು ಎಸ್ಎಸ್ಎಲ್ಲ್.ಸಿಯಲ್ಲಿ ಶೇ.೯೯.೦೨ರಷ್ಟು ಅಂಕವನ್ನು ಪಡೆಯುವುದರಲ್ಲಿ ನನ್ನ ಶಾಲೆಯ ಕೊಡುಗೆ ಅಪಾರ. ತದನಂತರ ನಾನು ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉಡುಪಿಗೆ ಹೋದೆನು. ನಾನು ನನ್ನ ಕಾಲೇಜನ್ನು ಪೂರ್ಣ ಪ್ರಜ್ನ ಕಾಲೇಜಿನಲ್ಲಿ ಮುಗಿಸಿದೆನು. ಉಡುಪಿ ನನ್ನ ತಂದೆ ತಾಯಿಯ ಜನ್ಮಸ್ಥಳವಾಗಿದ್ದರಿಂದ ನನಗೆ ಅವರ ಕೊರತೆ ಅಷ್ಟು ಕಾಡಲಿಲ್ಲ. ಆದರೆ ನನ್ನ ತೀರ್ಥಹಳ್ಳಿಯ ಪ್ರಕೃತಿಯ ಸೊಗಸು , ಶಾಂತಿ,ಸ್ನೇಹಿತರು ನನಗೆ ತುಂಬಾ ಕಾಡತೊಡಗಿದರು. ನಾನು ಶೇ.೯೭.೧೬ ರಷ್ಟು ಅಂಕವನ್ನು ಪಡೆದು ನನ್ನ ತಂದೆ ತಾಯಿಯ ಹೆಮ್ಮೆಯ ಮಗಳೆನಿಸಿಕೊಂಡೆನು. ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ನಾನು ಕ್ರಿಸ್ತ ವಿಶ್ವವಿದ್ಯಾನಿಲಯ,ಬೆಂಗಳೂರಿಗೆ ಬಂದೆನು. ನಾನು ಪ್ರಸ್ತುತ ಬಿ.ಎಸ್ಸಿ ಪದವಿಯನ್ನು ಮಾಡುತ್ತಿದ್ದೇನೆ.

ಹವ್ಯಾಸಗಳು

[ಬದಲಾಯಿಸಿ]

ಕವನ ಬರೆಯುವುದು,ಓದುವುದು, ಆಡುವುದು ಮತ್ತು ಕೊರಿಯನ್ ಡ್ರಾಮಗಳನ್ನು ನೊಡುವುದು ನನ್ನ ಹವ್ಯಾಸಗಳಾಗಿರುವುದು. ಗಣಿತಶಾಸ್ತ್ರ ಎಂದರೆ ನನಗೆ ಪಂಚಪ್ರಾಣ. ನಾನು ಮುಂದೆ ಗಣಿತಜ್ಞನಾಗಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದೇನೆ. ಕ್ರಿಸ್ತ ವಿಶ್ವವಿದ್ಯಾನಿಲಯವು ನನ್ನ ಬಾಲ್ಯದ ಕನಸಾದ ವಾಲಿಬಾಲ್ ರಾಜ್ಯಪ್ರಶಸ್ತಿಯನ್ನು ನನಸಾಗಿಸಲು ಸೂಕ್ತವಾದ ಸ್ಥಳ. ಹಾಗೆಯೆ ಒಂದು ಕಾದಂಬರಿಯನ್ನು ಬರೆಯುವುದು ನನ್ನ ಬಹುದಿನದ ಕನಸಾಗಿದೆ.

ಹೀಗೆ ನಾನು ಮನೆಯಿಂದ,ನನ್ನ ತಂದೆ-ತಾಯಿಯಿಂದ ದೂರವಾಗಿ ನನ್ನ ಸಾವಿರಾರು ಕನಸುಗಳನ್ನು ನನಸಾಗಿಸಲು ಯತ್ನಿಸುತ್ತಿದ್ದೇನೆ. ನಾನು 'ಮನಸಿದ್ದಿರೆ ಮಾರ್ಗ' ಎಂಬ ಗಾದೆಯನ್ನು ಅನುಸರಿಸುವ ವ್ಯಕ್ತಿಯಾಗಿರುವೆನು.

ಪ್ರಿಯ ಗೆಳೆಯ/ಗೆಳತಿಯರೆ, ನಾವು ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಧೈರ್ಯಗೆಡದೆ ನಮ್ಮ ಕನಸುಗಳನ್ನು ನನಸಾಗಲು ಶ್ರಮಪಡಬೇಕು. ಅಂತೆಯೇ ನಮ್ಮ ಸಮಾಜವನ್ನು ಸಾತ್ತ್ವಿಕಗೊಳಿಸಬೇಕು.