ಸದಸ್ಯ:Satyanbr

ವಿಕಿಪೀಡಿಯ ಇಂದ
Jump to navigation Jump to search

ಡಾ. ಬಿ.ಆರ್. ಸತ್ಯನಾರಾಯಣ

ವೃತ್ತಿಯಿಂದ ಗ್ರಂಥಪಾಲಕರು, ಪ್ರವೃತ್ತಿಯಿಂದ ಸಂಶೋಧಕರೂ ಲೇಖಕರೂ ಆಗಿರುವ ಇವರು ಕೃಷಿಕರೂ ಹೌದು. ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ಬಾಳೆಹಳ್ಳಿಯಲ್ಲಿ ಜನನ. ಅದೇ ತಾಲ್ಲೂಕಿನ ಚಾಮರಾಜಪುರದಲ್ಲಿ ವಾಸ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ., ಮೈಸೂರು ವಿಶ್ವವಿದ್ಯಾಲಯದಿಂದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಶಾಸನಶಾಸ್ತ್ರ ಮತ್ತು ಜಾನಪದ ತರಗತಿಗಳಲ್ಲಿ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಡಾ. ದೇವರಕೊಂಡಾರೆಡ್ಡಿಯವರ ಮಾರ್ಗದರ್ಶನದಲ್ಲಿ "ಸರಸ್ವತಿ ದರ್ಶನ: ಸಾಹಿತ್ಯ, ಶಾಸನ, ಜಾನಪದ ಮತ್ತು ಶಿಲ್ಪಗಳ ಹಿನ್ನೆಲೆಯಲ್ಲಿ" ಎಂಬ ಪ್ರೌಢಪ್ರಬಂಧಕ್ಕೆ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಪ್ರಸ್ತುತ ಸುರಾನ ಕಾಲೇಜು ಗ್ರಂಥಪಾಲಕ.
ಕೃತಿಗಳು:

 1. ವೈತರಣೀ ದಡದಲ್ಲಿ (ಕವನಸಂಕಲನ),
 2. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ,
 3. ಮುಡಿ (ಕಥಾ ಸಂಕಲನ)
 4. ನನ್ನ_ಹೈಸ್ಕೂಲು_ದಿನಗಳು
 5. ಕಲ್ಯಾಣದ ಚಾಲುಕ್ಯರು
 6. ಸರಸ್ವತಿ ವಿಸ್ಮಯ ಸಂಸ್ಕೃತಿ
 7. ಕುವೆಂಪು ಕಾವ್ಯಯಾನ

ಸಂಪಾದಕರಾಗಿ:

 1. ಅಜ್ಞಾತಮಹಾಪುರುಷ ಅಲಿಗೆ ಪುಟ್ಟಯ್ಯನಾಯಕ
 2. 'ರೈತನಾಗುವ ಹಾದಿಯಲ್ಲಿ',
 3. ''ಕಾಗದದ ದೋಣಿ ಭಾಗ ೧ & ೨'
 4. ರೈತನೊಬ್ಬನ ನೆನಪುಗಳು
 5. ಕುಮಾರವ್ಯಾಸ ಭಾರತಭಾಷಾವೈಜ್ಞಾನಿಕ ವಿಶ್ಲೇಷಣೆ
 6. ಕುವೆಂಪು ನುಡಿತೋರಣ
 7. ಕುವೆಂಪು ಪು‍‍‍‍ಷ್ಪಗೀತೆ

ಸಹ ಸಂಪಾದಕರಾಗಿ:

 1. 'ತೇಜಸ್ವಿ ' (ವಿಚಾರ ಸಂಕಿರಣದಲ್ಲಿ ಮಂಡಿತವಾದ ಲೇಖನಗಳ ಸಂಗ್ರಹ)
 2. ಹಂಪನಾ ವಾಙ್ಮಯ (ಹಂಪನಾ ಪುಸ್ತಕಗಳ ಸಾರಸೂಚಿ)
 3. ತೇಜಸ್ವಿ ಬದುಕು ಬರೆಹ
 4. ಕುವೆಂಪು ಮಲೆನಾಡು
 5. ಶ್ರೀರಾಮಾಯಣ ದರ್ಶನಂ ಅನುಬಂಧಗಳು
 6. Quality Initiative and Bench-marking in Higher Education Institutions

ಸಂಶೋಧನೆ:

 1. 'ಸರಸ್ವತಿ : ವಿಸ್ಮಯ ಸಂಸ್ಕೃತಿ'

ಈ-ಪುಸ್ತಕಗಳು:

 1. ನನ್ನ ಹೈಸ್ಕೂಲ್ ದಿನಗಳು
 2. ಬುದ್ಧ ನಕ್ಕ
 3. ಆಯ್ದ ಹತ್ತು ಕಥೆಗಳು
 4. ಕುವೆಂಪು ಕಾವ್ಯಯಾನ
 5. ಸರಸ್ವತಿ ವಿಸ್ಮಯ ಸಂಸ್ಕೃತಿ
 6. ಕಾವ್ಯಾವಲೋಕನ

ವಿವಿಧ ನಿಯತಕಾಲಿಕೆಗಳಲ್ಲಿ ಹಲವಾರು ಸಂಶೋಧನಾ ಲೇಖನಗಳು ಪ್ರಕಟವಾಗಿರುತ್ತವೆ.
ಪುರಸ್ಕಾರಗಳು:

 • ಕರ್ಮವೀರ ಪತ್ರಿಕೆಯ ದೀಪಾವಳಿ ಕಥಾಸ್ಪರ್ಧೆ - ೨೦೦೧ರಲ್ಲಿ ’ಅಳಿದ ಮೇಲೆ’ ಕಥೆಗೆ ವಿಶೇಷ ಕಥೆ ಪುರಸ್ಕಾರ
 • ಎತ್ತಣಿಂದೆತ್ತಣ ಸಂಬಂಧವಯ್ಯಾ... ಕಥೆಗೆ ಕೃಷ್ಣಮೂರ್ತಿ ಪುರಾಣಿಕ ಸಾಹಿತ್ಯಪ್ರಶಸ್ತಿ
 • ೨೦೦೪ರಲ್ಲಿ ಕುವೆಂಪುಶ್ರೀ ಪುರಸ್ಕಾರ
 • ೨೦೦೪ರಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಆಯ್ಕೆಗೊಂಡು ಪ್ರಕಟಗೊಂಡ ಕಥಾಸಂಕಲನ ’ಮುಡಿ’
 • ಶ್ರೀ ಎಂ.ಜಿ. ರಂಗನಾಥನ್ ಸ್ಮಾರಕ ಪುಸ್ತಕ ಬಹುಮಾನ (೨೦೦೫) ’ಮುಡಿ’ ಕಥಾ ಸಂಕಲನಕ್ಕೆ