ಸದಸ್ಯ:Satish.Kammar/ನನ್ನ ಪ್ರಯೋಗಪುಟ
ಎತ್ತು ನಾಲಿಗೆ (ಗೋಜಿಹ್ವ)
[ಬದಲಾಯಿಸಿ]ಸಂ: ಗೋಜಿಹ್ವ
ಹಿಂ: ಗಾರ್‍ಜವಾ
ಗು: ಬೋಪಾಥರಿ
ತೆ: ಎದ್ದು ನಾಲಿಕೆ
ತ: ಎಲಂದ ಪಳಂ
ವರ್ಣನೆ
[ಬದಲಾಯಿಸಿ]ಪುಟ್ಟಗಿಡ ಎಲೆಗಳು ಉದ್ದವಾಗಿ ಹಸಿರಾಗಿದ್ದು ಎಲೆಯ ಅಂಚು ಚಿತ್ರಾಕಾರವಾಗಿರುವುದು. ಹೂವು ಚಿನ್ನದ ಬಣ್ಣ ಹೊಂದಿದ್ದುದುಂಡಾಗಿರುತ್ತದೆ. ಎಲೆಗಳ ಮಧ್ಯದಲ್ಲಿ ಮೃದುವಾದ ರೋಮಗಳಿರುತ್ತವೆ. ಕಾಂಡದಿಂದ ಹೊರಟ ಹೂಗೊಂಚಲಿನ ತುದಿಯಲ್ಲಿಒಂದೆರಡು ಹೂಗಳು ಬಿಡುವುವು. ಹೂನಲ್ಲಿ ಸಾಮಾನ್ಯವಾಗಿ ಮೂರು ದಳಗಳಿದ್ದು ಪುಷ್ಪಪಾತ್ರೆ ಚಿಕ್ಕದಾಗಿರುವುದು.
ಸರಳ ಚಿಕಿತ್ಸೆಗಳು
[ಬದಲಾಯಿಸಿ]ಶೋಭೆಯಲ್ಲಿ
[ಬದಲಾಯಿಸಿ]ಚೆನ್ನಾಗಿ ಶೋಧಿಸಿದ ಗೋಮೂತ್ರದಲ್ಲಿ 10 ಗ್ರಾಂ ಎಲೆ ಚೂರ್ಣವನ್ನು ಸೇರಿಸಿ ಸ್ವಲ್ಪ ಶುದ್ಧ ಜೇನುತುಪ್ಪದೊಡನೆ 1/4 ಟೀ ಚಮಚ ಸೇವಿಸುವುದು. ದಿವಸಕ್ಕೆ ಎರಡು ಬಾರಿ.
ದೀರ್ಘಕಾಲದಿಂದ ವಾಸಿಯಾಗದ ಹುಣ್ಣುಗಳಿಗೆ
[ಬದಲಾಯಿಸಿ]ಎತ್ತುನಾಲಿಗೆ ಸಮೂಲವನ್ನು ಚೆನ್ನಾಗಿ ಜಜ್ಜಿ ಹುಣ್ಣುಗಳ ಮೇಲೆ ಕಟ್ಟುವುದು. ಹುಣ್ಣು ಆಳವಾಗಿದ್ದರೆ ಎತ್ತು ನಾಲಿಗೆ ಎಲೆಯನ್ನು ನಯವಾಗಿ ಅರೆದು ಹುಣ್ಣುಗಳಲ್ಲಿ ತುಂಬುವುದು. ಕೆಲವು ದಿವಸಗಳಲ್ಲಿ ಹುಣ್ಣುಗಳು ವಾಸಿಯಾಗುವುವು.
ಕಾಸ ಶ್ವಾಸ ಮತ್ತು ಕಫಕ್ಕೆ
[ಬದಲಾಯಿಸಿ]10 ಗ್ರಾಂ ಎತ್ತುನಾಲಿಗೆ ಸಮೂಲವನ್ನು ನುಣ್ಣಗೆ ಅರೆದು ನೀರಿನಲ್ಲಿ ಕದಡಿ ಸೇವಿಸುವುದು. ಹೀಗೆ ದಿವಸಕ್ಕೆರಡು ಬಾರಿ
ಅರುಚಿಗೆ=
[ಬದಲಾಯಿಸಿ]ಐದಾರು ಗ್ರಾಂ ಎತ್ತು ನಾಲಿಗೆ ಸಮೂಲವನ್ನು ನುಣ್ಣಗೆ ಅರೆದು ಸ್ವಲ್ಪ ಜೇನಿನೊಡನೆ ತೆಗೆದುಕೊಳ್ಳುವುದು.
ಮಲಬದ್ದತೆ ಮತ್ತು ರಕ್ತ ಶುದ್ಧಿಗಾಗಿ
[ಬದಲಾಯಿಸಿ]5 ಗ್ರಾಂ ಸಮೂಲವನ್ನು ನಯವಾಗಿಅರೆದು ಸ್ವಲ್ವ ಜೇನು ಸೇರಿಸಿ ಸೇವಿಸುವುದು.
ಹೃದಯದ ನಿಶ್ಯಕ್ತಿಯಲ್ಲಿ
[ಬದಲಾಯಿಸಿ]10 ಗ್ರಾಂ ಸಮೂಲ ಅಥವಾ 5 ಗ್ರಾಂ ಎತ್ತು ನಾಲಿಗೆಯ ಹೂವನ್ನು ತಂದು ನುಣ್ಣಗೆಅರೆದು ನೀರಿನಲ್ಲಿ ಕದಡಿ ಎರಡೆರಡು ಟೀ ಚಮಚ ಕುಡಿಯುವುದು.
ಕಣ್ಣಿಗೆ ಅಂಜನ
[ಬದಲಾಯಿಸಿ]ಎತ್ತುನಾಲಿಗೆ ಸೊಪ್ಪಿನರಸ, ಕರಿ ಉಮ್ಮತ್ತಿನರಸ, ಇವನ್ನು ಸಮ ತೂಕ ಮಣ್ಣಿನ ಪಾತ್ರೆಯ ಒಳಭಾಗಕ್ಕೆ ಲೇಪಿಸುವುದು. ಆಕಳು ತುಪ್ಪದಲ್ಲಿ ಮಂದವಾಗಿ ಕಲಸಿ ಅಂಜನವಿಡುವುದು. ಸರ್ವ ನೇತ್ರವ್ಯಾಧಿಗಳು ವಾಸಿಯಾಗುವುವು.
ಎಚ್ಚರಿಕೆ
[ಬದಲಾಯಿಸಿ]ವ್ಯಾಧಿಯಲ್ಲಿ ಪ್ರಮಾಣ ಮೀರಿ ಸೇವಿಸುವುದರಿಂದ ಅಹಿತಕರ ಪರಿಣಾಮಗಳಾಗಬಹುದು.ಇಂತಹ ಸಂದರ್ಭದಲ್ಲಿ ನೀರಿನಲ್ಲಿ ತೇದ ಶ್ರೀಗಂಧದ ಗಂಧವನ್ನು ನೆಕ್ಕಿಸುವುದು ಅಥವಾ ಗುಲಾಬಿ ಹೂದಳಗಳನ್ನು ಸಕ್ಕರೆಯೊಂದಿಗೆ ಸೇವಿಸುವುದು.
ಉಲ್ಲೇಖ
[ಬದಲಾಯಿಸಿ]ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು
ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್
ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು