ಸದಸ್ಯ:Sathyanarayanabhattmg/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೇನು ನೊಣಗಳು ಸಸ್ಯ ಪ್ರಭೇದ ಪುಶ್ಪ/ಸಸ್ಯಚಿಗುರು/ಕೀಟಗಳ ವಿಸರ್ಜನೆ/ ಮುಂತಾದುವುಗಳಿದ ಮಕರಂದ/ ಸಿಹಿ ದ್ರವವನ್ನು ಹೀರಿ.ತಮ್ಮ ಮಧು ಕೋಶದಲ್ಲಿರಿಸಿ ತಂದು, ಇನ್ವರ್ರಟೇಜ್ ಕಿಣ್ವವನ್ನು ಬೆರೆಸಿ ರಾಸಾಯನಿಕ ಪರಿವತ೵ನೆಗೊಳಿಸಿ ತಯಾರಿಸಿ ಸಂಗ್ರಹಿಸುವ ಮಧುರ ದ್ರವ.ಇದರಲ್ಲಿ ಅನೇಕ ಅನ್ನಾಂಗಗಳು ಖನಿಜಾಂಶಗಳು ವಿವಿಧ ಶರ್ಕರಾಂಶಗಳು ಲಭ್ಯ.ಪಚನಾಂಗಗಳಿಗೆ ಹಾನಿಉಂಟು ಮಾಡದೆ ಬಹು ಸುಲುಭವಾಗಿ ಹಾಗೂ ಶೀಗ್ರವಾಗಿ ರಕ್ತ ಗತವಾಗುವ ನಿಸರ್ಗದತ್ತ ಆಹಾರ.ನಮ್ಮ ಆರೋಗ್ಯ ಕಾಪಾಡಿಕೊಳ್ಳಲು, ಹಲವು ಖಾಯಿಲೆಗಳನ್ನು ನಿವಾರಿಸಿಕೊಳ್ಳಲು ಮತ್ತು ಅತಿ ಶೀಘ್ರ ಶಕ್ತಿ ಸಂಚಯನಕ್ಕಾಗಿ ಬಳಸಬಹುದು ಜೇನು ತುಪ್ಪದಲ್ಲಿ ವಿವಿದತೆ ಇದೆ. ಪೆಟ್ಟಿಗೆಯಲ್ಲಿ ಸಾಕುವ ಯಂತ್ರದಿಂದ ತೆಗೆದ ಶುದ್ದ ಜೇನು ತುಪ್ಪ ಪ್ರಥಮ ಆಯ್ಕೆಯಾಗಿದೆ.


ಹೆಜ್ಜೇನುಗಳಿಂದ ಹಿಂಡಿತೆಗೆದ ತುಪ್ಪವೂ ದೊರಕವುದು, ಹಿಂಡಿ ಸಂಗ್ರಹಿಸಿದ ಜೇನಾದ್ದರಿಂದ ಕಶ್ಮಲ,ಹೆಚ್ಚಿನ ಪರಾಗ ಮುಂತಾದವು ಬೆರೆತಿರುವುದು. ಕೋಲು ಜೇನುಗಳಿದಲೂ ಅಲ್ಪ ಪ್ರಮಾಣದ ಜೇನು ತುಪ್ಪ ಸಂಗ್ರಮಾಡುವರು. ನಿಸರಿ (ಮಜಂಟಿ) ಜೇನುಗಳಿದಲೂ ಓಷಧೀಯ ಜೇನು ತುಪ್ಪ ಅಲ್ಪ ಪ್ರಮಾಣದಲ್ಲಿ ದೊರೆಯುವುದು. ಜೇನು ತುಪ್ಪವನ್ನು ಬಣ್ಣ, ಮಧುರತೆ,ಸಾಂದ್ರತೆ,ಪಾರದರ್ಶಕತೆ ಆಧರಿಸಿ ವರ್ಗಿಕರಿಸುವರು. ಜೇನು ತುಪ್ಪ಻ವನ್ನು ಬಹುಕಾಲ ಹುಳಿಬರದಂತೆ ಇರಿಸಲು ಪರೋಕ್ಷವಾಗಿ ಬಿಸಿಗೊಳಿಸಿ ಮೊಹರು ಮಾಡಿ ಇಡುವರು.