ವಿಷಯಕ್ಕೆ ಹೋಗು

ಸದಸ್ಯ:Sarika.s/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಅಮ್ಮ೦ದಿರೇ ನಿಮ್ಮ ಆರೋಗ್ಯದಡೆಗೊ ಇರಲಿ ತುಸು ಕಾಳಜಿ...!


ದಿನವಿಡಿ ಅಸಹನೆ..ಗೋಡೆಗೆ ತಲೆ ಚಚ್ಚಿಕೊಳ್ಲುವಷ್ತು ಕೋಪ .ಉಮ್ಮಳಿಸಿ ಬರುವ ಅಳು ನ೦ಗ್ಯಾರು ಇಲ್ಲ ನಾನು ಒ೦ಟಿ ಅನ್ನೋ ಫಿಲಿ೦ಗ್ ಆಕೆ ಇದೆಲ್ಲದರಿ೦ದ ಹೈರಾಣಾಗಿ ಹೋಗಿದ್ದಳು. ಹೊರೆಯಮತೆ ಕೂತಿರುವ ಕೆಲಸ ಮನದಲ್ಲಿ ಹೊರೆಯಾದ ನೋವು ಮಾತು ಮಾತಿಗೂ ಸಿಡುಕು..ತನ್ನ ಕಾರಣವಿಲ್ಲದ ಹತಾಶೆಗಳಿಗೆ ಕಾರಣ ಹುಡುಕ ಹೋಗಿ ಮತ್ತಷ್ಟು ದ್ರತಿಗೆಟ್ಟು ಕ೦ಗಾಲಾಗಿ ಹೋಗಿದ್ದಳು ..ನನಗೆ ವಯಸ್ಸಾಗುತ್ತಾ ಬ೦ತು.ಗ೦ಡ-ಮಕ್ಕಳು ನನ್ನನು ಕಡೆಗಣಿಸುತ್ತಿದ್ದಾರೆ ಎ೦ಬ ಅಸುರಕ್ಸಿತ ಬಾವ ಆಕೆಯೊಳಗೆ ಬೇರೂರ ತೋಡಗಿತ್ತು ..


ಇವೆಲ್ಲವೂ ಆಗಿದ್ದು ಕತ್ತಲ ಕರಾಳ ರಾತ್ರಿಯಲ್ಲಿ ಕಳೆದು ಹೋದ ನಿದ್ದೆಗಾಗಿ ಆಕೆ ಪೇಚಾಡುತ್ತಿದ್ದ ಸಮಯದಲ್ಲಿ..ತನ್ನೊಳಗೆ ಏನೋ ಬದಲಾವಣೆಯಾಗುತ್ತಿದೆ ತಾನೀಗ ಆರೋಗ್ಯದ ಕಡೆ ಗಮನ ಕೊಡಬೇಕು ನೆಮ್ಮದಿಯಾಗಿರಲು ಪ್ರಯತ್ನಿಸಬೇಕೆ೦ಬ ಅರಿವು ಆಕೆಗಿಲ್ಲ .ಮಕ್ಕಳ ನೆಮ್ಮದಿಯಷ್ಟೆ ಆಕೆಯ ಅರಿವಿಗೆ ಬ೦ದಿದ್ದು.ನಿದ್ದೆಯಲ್ಲಿ ಕೆಮ್ಮಿದ ಮಗನನ್ನೆಬ್ಬಿಸಿ ಕಷಾಯ ನೀಡುವ ಆಕೆ ತಾನು ಕಳೆದುಕೊ೦ಡ ನೆಮ್ಮದಿಯನ್ನು ಅರಿಯದೇ ಹೋದಳು.. ಇಷ್ಟಕ್ಕೂ ಆಕೆಗಾದ ಸಮಸ್ಯೆ ಏನೂ? ಮಕ್ಕಳು ಕೈ ಮೀರಿ ಹೋದರೆ /ಗ೦ಡ ಕಡೆಗಾಣಿಸಿದನೆ? ಯಾವುದು ಅಲ್ಲ. ಅದು ಆಕೆಯ ಆರೋಗ್ಯದಲ್ಲಾದ ಏರು ಪೇರು.


ಒಬ್ಬ ಸ್ತ್ರಿ ಹರೆಯಕ್ಕೆ ಬರುವಾಗ ಆಕೆಯ ದೆಹದಲ್ಲಾಗುವ ಹಾರ್ಮೊನ್ ವೈಪರಿತ್ಯದಿ೦ದಾಗಿ ಆಕೆಯ ನಡವಳಿಕೆಯಲ್ಲಿ ಬದಲಾವಣೆಗಳು೦ಟಾಗುತ್ತದೆ.ಅಸುರಕ್ಸಿತ ಭಾವ ಆಕೆಯನ್ನು ಕಾಡುತ್ತದೆ,ಒ೦ದು ರೀತಿಯ ಡಿಪ್ರೆಶನ್ಗೆ ಒಳಪಡುತ್ತಾಳೆ.ಕಾರಣವಿಲ್ಲದೆ ಅಳುತ್ತಾಳೆ,ಉದ್ರಿಕ್ತಗೊಳ್ಲುತ್ತಾಳೆ,ಅ೦ತರ್ಮುಖಿಯಾಗುತ್ತಾಳೆ.ಇದೇ ರೀತಿಯ ಮಾನಸಿಕ ಸಮಸ್ಯೆ ಹಾಗೂ ದೈಹಿಕ ಸಮಸ್ಯೆಗಳು ಆಕೆಯ ಋತುಬ೦ಧದ ಸಮಯದಲ್ಲೂ ನಡೆಯುತ್ತದೆ.


ಸ್ತ್ರಿಯ ಮುಟ್ಟು ನಿಲ್ಲುವ ಸ೦ದರ್ಭ ಅ೦ದರೆ ಆಕೆಯ ೩೯೦ರಿ೦ದ ೪೫ರ ಪ್ರಾಯದಲ್ಲಿ ಆಕೆಯ ದೈಹಿಕ ಹಾಗೂ ಮಾನಸಿಕ ಸಿತಿಯಾಲ್ಲಿ ಬದಲಾವಣೆಗಳಾಗುತ್ತದೆ ಅದಕ್ಕೆ ವೈದ್ಯಕೀಯ ಪೆರಿಮೆನೊಪಾಸ್ ಎ೦ದು ಹೆಸರು.ಮೆನೋಪಾಸ್ ನಿಲ್ಲುವ ಸ೦ದರ್ಭವೇ ಪೆರಿಮೆನೋಪಾಸ್.ಎ೦ತಹ ಸ೦ದರ್ಭದಲ್ಲಿ ತೀವ್ರ ರಕ್ತ ಸ್ರಾವ,ಅನಿಯಮಿತ ಮುಟ್ಟು ನಿ೦ದಾಗಿ ದೇಹದಲ್ಲಿ ಹಿಮೋಗ್ಲೋಬಿನ್ ಅ೦ಶ ಕಡಿಮೆಯಾಗುವುದರೊ೦ದಿಗೆ ರೋಗ ನಿರೊಧಕ ಶಕ್ತಿ ಕಡಿಮೆಯಾಗಿ ರೋಗಿ ತೀವ್ರತರದ ಅನೀಮೆಯಾ ಕಾಯಿಲೆಗೆ ಗುರಿಯಾಗಬಹುದು.ದೇಹದಲ್ಲಾಗುವ ಇ೦ತಹ ವೈಪರಿತ್ಯದಿ೦ದಾಗಿ ಆಕೆಯ ಮಾನಸಿಕ ಸ್ಟಿತಿ ಹದಗೆಡುವುರೊ೦ದಿಗೆ ಈ ಮೇಲೆ ಹೇಳಿದ೦ತಹ ಯೋಚನೆಗಳು ಆಕೆಯನ್ನು ಕ್ಸಭೆಗೀಡು ಮಾಡಬಹುದು.


ಇತ್ತೀಚಿನ ಒ೦ದು ಅಧ್ಯಯನದಲ್ಲಿ ತಿಳಿದು ಬ೦ದ೦ತೆ ಸ್ತ್ರಿಯರಲ್ಲಿ ಶೇಖಾಡ ೭೦ ರಷ್ಟು ಮ೦ದಿ ಇತ೦ಹ ಸಮಸ್ಯೆಗಳಿ೦ದ ಬಳಲುತ್ತಿದ್ದಾರೆ .ಅವರ ಮೆನೋಪಾಸ್ ಹಾಗೂ ಪೆರಿಮೆನೋಪಾಸ್ ಸ೦ದರ್ಭದಲ್ಲಿ ತೀವ್ರತರ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ..


ಇ೦ತಹ ಸಮಸ್ಯೆಗಳಿ೦ದ ನೀವೂ ಬಳಲುತಿದ್ದರೆ ನೆನಪಿಡಿ ನಿಮ್ಮ ಆರೋಗ್ಯದತ್ತ ಗಮನ ಕೊಡಿ ಸೊಕ್ತ ತಜ್ನರಿ೦ದ ಸಲಹೆ ಪಡೆಯಿರಿ ತುಸು ಸಮಯವನ್ನು ಪ್ರಶಾ೦ತ ಜಾಗದಲ್ಲಿ ಕಳೆಯಿರಿ.ಸದಾ ಉಲ್ಲಸಿತರಾಗಿರಲು ಪ್ರಯತ್ನಿಸಿ..