ಸದಸ್ಯ:Santrasikkumar

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

santa rasika kumara .naanu icchepattu aarisikonda hesaru.Naa santa,naa rasika mattu naaninnoo kumaara.nanna havyaasagala patti balu udda.nanage saahitya adarallu bete saahitya,tejaswiyavara barahagalu,animation,parody,chutukagalu,kathegalu. idellakkinta hecchaagi saadhanegala bagge hecchu aasakti.naanu pashuvaidya vignaanavannu adyayana maaduttiddene mattu nanna vayassu kaanunu prakaaravaagi 21 mugidide. nanna blog puta :www.dextervet.blogspot.com

                                                        ಚನ್ನಗಿರಿ

ಮಲೆನಾಡ ಸೆರಗನ್ನು ಬಳಸಿರುವ ಪುಟ್ಟ ಪಟ್ಟಣ ಚನ್ನಗಿರಿ.ಚಿನ್ನದ ಗಿರಿ ಎಂಬ ಹೆಸರು ಕಾಲಾಂತರದಲ್ಲಿ ನಿವಾಸಿಗಳ ಬಾಯಲ್ಲಿ ಚನ್ನಗಿರಿ ಎಂದಾಯಿತೆಂದು ಪ್ರತೀತಿ. ಏಳೆಂಟು ವರ್ಷಗಳ ಹಿಂದೆ ಶಿವಮೊಗ್ಗೆ ಜಿಲ್ಲಾ ವ್ಯಾಪ್ತಿಯಲ್ಲಿದ್ದ್ದ ಚನ್ನಗಿರಿ ತಾಲೂಕು ಹೊಸದಾಗಿ ರಚಿಸಿದ ದಾವಣಗೆರೆ ಜಿಲ್ಲೆಯಲ್ಲಿ ಸೇರಿತು.ಆದರೂ ಶಿವಮೊಗ್ಗೆಯ ಜೊತೆ ಭಾವನಾತ್ಮಕ ನಂಟು ಕಳಚಿಲ್ಲ. ಚನ್ನಗಿರಿ ತಾಲೂಕು ಕರ್ನಾಟಕದಲ್ಲೇ ಅತಿ ಹೆಚ್ಚು ಹಳ್ಳಿಗಳನ್ನು ಹೊಂದಿದೆ.

ಹವಾಗುಣ ಮತ್ತು ಭೂ ಲಕ್ಷ್ಜಣಗಳು: ಚನ್ನಗಿರಿ ಅರೆಮಲೆನಾಡು ಪ್ರದೇಶ.ಶುಷ್ಕ ಹವೆಯ ಈ ಭಾಗದ ಪ್ರಶಸ್ತ ಕೆಂಪುಮಣ್ಣು ಅಡಿಕೆ ತೋಟಕ್ಕೆ ಹೇಳಿಮಾಡಿಸಿದಂತಿದೆ.ಆದ್ದರಿಂದಲೇ ಎತ್ತ ನೋಡಿದರಲ್ಲಿ ಅಡಿಕೆ ಮರಗಳು ಕಾಣಸಿಗುತ್ತವೆ.ನೀರಿನ ಸ್ರೋತ ಮುಖ್ಯವಾಗಿ ಅಂತರ್ಜಲ.ಕೆಲವು ಕಡೆ ಭದ್ರಾ ನದಿ ಕಾಲುವೆ ನೀರುಣಿಸುತ್ತದೆ.ಬಾಳೆ,ವೀಳ್ಯದೆಲೆ ಇನ್ನಿತರ ಮುಖ್ಯ ವಾಣಿಜ್ಯ ಬೆಳೆಗಳು.

ಇತಿಹಾಸ: ಚನ್ನಗಿರಿ ಯಾವಾಗ ರಚಿತವಾಯಿತೆಂದು ಸ್ಪಷ್ಟ ದಾಖಲೆಗಳಿಲ್ಲ(ಸದ್ಯಕ್ಕೆ ಈ ಲೇಖಕನ ಬಳಿ).ಇಲ್ಲಿ ಕೆಳದಿಯ ರಾಣಿ ಚೆನ್ನಮ್ಮ ಕಟ್ಟಿಸಿರುವ ಕೋಟೆಯಿದೆ.ಈ ಕೋಟೆಯಲ್ಲಿ ರಂಗನಾಥನ ದೇವಾಲಯವಿದೆ ಮತ್ತು ಪ್ರತಿ ವರ್ಷ ಇಲ್ಲಿ ರಂಗನಾಥನ ತೇರು ಉತ್ಸವ ನಡೆಯುತ್ತದೆ.ಪ್ರಶಾಂತ ವಾತಾವರಣ ಇರುವುದರಿಂದ ಹೆಚ್ಚು ಪ್ರಿಯವೆನಿಸುತ್ತದೆ.ಯುಗಾದಿಯ ಚಂದ್ರನನ್ನು ನೋಡಲು ಇಲ್ಲಿ ನೂರಾರು ಜನ ನೆರೆಯುತ್ತಾರೆ,ಆನಂದಿಸುತ್ತಾರೆ.

ಮುದ್ದೇನಹಳ್ಳಿಯ ಆಂಜನೇಯ ದೇವಾಲಯ,ಗದ್ದಿಗೆ ಮಠ ಪ್ರೇಕ್ಷಣೀಯ ಸ್ಥಳಗಳು.