ವಿಷಯಕ್ಕೆ ಹೋಗು

ಸದಸ್ಯ:Sanjayaradhya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರವಾಸೋದ್ಯಮ ಅಥವಾ ಯೋಜಿತ ಪ್ರವಾಸವು ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶಗಳಿಗಾಗಿ ಮಾಡುವ ಪ್ರಯಾಣವಾಗಿದೆ. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಪ್ರವಾಸಿಗರು ಎಂಬ ಪದವನ್ನು, "ವಿರಾಮ, ವ್ಯವಹಾರ ಮತ್ತು ಇತರ ಉದ್ದೇಶಗಳಿಗಾಗಿ ತನ್ನ ಎಂದಿನ ಪರಿಸರದಿಂದ ಹೊರಗಿನ ಸ್ಥಳಗಳಿಗೆ ಪ್ರಯಾಣಿಸಿ, ಅಲ್ಲಿ ಇಪ್ಪತ್ನಾಲ್ಕು ಗಂಟೆಗಳಿಗಿಂತ ಹೆಚ್ಚು ಅವಧಿಗೆ ಉಳಿಯುವ ಮತ್ತು ಒಂದು ಸತತ ವರ್ಷಕ್ಕಿಂತ ಹೆಚ್ಚಾಗಿ ಉಳಿಯದ ಹಾಗೂ ತಾವು ಭೇಟಿ ನೀಡಿದ ಪ್ರದೇಶಗಳಲ್ಲಿ ಸಂಭಾವನೆ ಗಳಿಸುವ ಅಥವಾ ಪ್ರತಿಫಲ ಅಪೇಕ್ಷಿಸುವ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳದ ವ್ಯಕ್ತಿಗಳು" ಎಂಬುದಾಗಿ ವ್ಯಾಖ್ಯಾನಿಸಿದೆ. ಪ್ರವಾಸೋದ್ಯಮವು ವಿಶ್ವವ್ಯಾಪಕವಾಗಿ ಜನಪ್ರಿಯವಾಗಿರುವ ಒಂದು ವಿರಾಮದ ಚಟುವಟಿಕೆಯಾಗಿ ಮಾರ್ಪಟ್ಟಿದೆ. 2008ರಲ್ಲಿ 922 ದಶಲಕ್ಷಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನವು ದಾಖಲಾಗಿದ್ದು, 2007ಕ್ಕೆ ಈ ಪ್ರಮಾಣವನ್ನು ಹೋಲಿಸಿದಾಗ 1.9%ರಷ್ಟು ಬೆಳವಣಿಗೆ ಕಂಡಂತಾಗಿದೆ. 2008ರಲ್ಲಿ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂದಾಯವಾದ ಹಣದ ಪ್ರಮಾಣವು 944 ಶತಕೋಟಿ US$ನ್ನು (642 ಶತಕೋಟಿ ಯುರೊ) ಮುಟ್ಟಿದ್ದು, ಸಂಬಂಧಪಟ್ಟ ವಾಸ್ತವಿಕ ಆದಾಯದಲ್ಲಿ 1.8%ರಷ್ಟು ಏರಿಕೆ ಕಂಡಂತಾಗಿದೆ.


2000ರ ಕೊನೆಯ ಅವಧಿಯಲ್ಲಾದ ಆರ್ಥಿಕ ಹಿಂಜರಿತದ ಪರಿಣಾಮವಾಗಿ, ಉತ್ತರ ಧ್ರುವದ ಬೇಸಿಗೆ ತಿಂಗಳುಗಳ ಅವಧಿಯಲ್ಲಿ ವಿಶ್ವದಾದ್ಯಂತದ ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಆಗಮನಗಳಲ್ಲಿ 2%ರಷ್ಟು ಕುಸಿಯುವುದರೊಂದಿಗೆ, 2008ರ ಜೂನ್‌ನ ಪ್ರಾರಂಭದಲ್ಲಿ ಅಂತರರಾಷ್ಟ್ರೀಯ ಪ್ರಯಾಣದ ಬೇಡಿಕೆಯು ಭಾರಿ ಕುಸಿತವನ್ನು ಕಂಡಿತು. 2009ರ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರ ಆಗಮನಗಳಲ್ಲಿ 8%ರಷ್ಟು ಕುಸಿತವಾಗಿದ್ದರಿಂದಾಗಿ ಈ ಋಣಾತ್ಮಕ ಪರಿಸ್ಥಿತಿಯು ಮತ್ತಷ್ಟು ತೀವ್ರವಾಯಿತು. ಇದಾದ ನಂತರ, ಸಾಂಕ್ರಾಮಿಕವಾದ AH1N1 ವೈರಸ್‌ನ ತೀವ್ರಗತಿಯ ಹರಡುವಿಕೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ಈ ಇಳಿಕೆಯ ಪರಿಸ್ಥಿತಿಯು ಉಲ್ಬಣಗೊಂಡಿತು.


ಈಜಿಪ್ಟ್‌, ಗ್ರೀಸ್‌ ಮತ್ತು ಥೈಲೆಂಡ್‌ನಂತಹ ಅನೇಕ ದೇಶಗಳು ಮತ್ತು ದಿ ಬಹಮಾಸ್‌, ಫಿಜಿ, ಮಾಲ್ಡೀವ್ಸ್‌ ಮತ್ತು ಸೇಶೆಲ್ಸ್‌ನಂತಹ ಹಲವು ದ್ವೀಪ ರಾಷ್ಟ್ರಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ. ಪ್ರವಾಸೋದ್ಯಮದೊಂದಿಗೆ ತಳುಕುಹಾಕಿಕೊಂಡಿರುವ ಅವುಗಳ ಸರಕುಗಳು ಮತ್ತು ಸೇವೆಗಳೊಂದಿಗಿನ ವ್ಯವಹಾರಕ್ಕಾಗಿ ಮತ್ತು ಸೇವಾ ಉದ್ಯಮಗಳಲ್ಲಿನ ಉದ್ಯೋಗಾವಕಾಶಕ್ಕಾಗಿ ಬೃಹತ್‌ ಪ್ರಮಾಣದ ಹಣವನ್ನು ಸದರಿ ದೇಶಗಳು ಹೂಡಿರುತ್ತವೆಯಾದ್ದರಿಂದ ಅವುಗಳಿಗೆ ಪ್ರವಾಸೋದ್ಯಮವು ಅತ್ಯಾವಶ್ಯಕವಾಗಿದೆ.

ವಿಮಾನಯಾನ ಸಂಸ್ಥೆಗಳು, ವಿಹಾರ ನೌಕಾಯಾನದ ಹಡಗುಗಳು ಮತ್ತು ಟ್ಯಾಕ್ಸಿಗಳಂತಹ ಸಾರಿಗೆ ಸೇವೆಗಳು; ಹೊಟೇಲುಗಳು ಮತ್ತು ವಿಹಾರಧಾಮಗಳನ್ನೊಳಗೊಂಡ ವಸತಿ ಸೌಕರ್ಯಗಳು, ಮತ್ತು ಮನರಂಜನಾ ಉದ್ಯಾನಗಳು, ಮೋಜು ಮಂದಿರಗಳು, ವ್ಯಾಪಾರ ಕೇಂದ್ರಗಳು, ವಿವಿಧ ಸಂಗೀತ ತಾಣಗಳು ಮತ್ತು ರಂಗಮಂದಿರದಂತಹ ಮನರಂಜನಾ ತಾಣಗಳಂತಹ ಆತಿಥ್ಯ ಸೇವೆಗಳು ಈ ಸೇವಾ ವಲಯಗಳಲ್ಲಿ ಸೇರಿವೆ.