ಸದಸ್ಯ:Sanjay 153414/sandbox
ಮೈಸೂರು ಸಂಸ್ಥಾನ (೧೩೯೯ - ೧೯೪೭) ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. ೧೩೯೯ರಲ್ಲಿ ಯದುರಾಯರಿಂದ ಸ್ಥಾಪಿಸಲಾದ ಈ ಸಂಸ್ಥಾನ, ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. ೧೫೬೫ರವರೆಗೆ ವಿಜಯನಗರ ಸಾಮ್ರ್ಯಾಜ್ಯದ ಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು. ೧೭ನೇ ಶತಮಾನದಲ್ಲಿ ಸಂಸ್ಥಾನದ ವಿಸ್ತರಣೆ ಸಕ್ರಿಯಯವಾಗಿತ್ತು. ನರಸರಾಜ ಒಡೆಯರ್ ಮತ್ತು ಚಿಕ್ಕ ದೇವರಾಜ ಒಡೆಯರ್ ಆಳ್ವಿಕೆಯಲ್ಲಿ ಹೆಚ್ಚಿನ ವಿಸ್ತರಣೆ ನಡೆದು ಮೈಸೂರು ಸಂಸ್ಥಾನವು ದಕ್ಷಿಣ ಡೆಕ್ಕನ್ ಪ್ರಸ್ತಭೂಮಿಯಲ್ಲಿ ಶಕ್ತಿಯುತ ರಾಜ್ಯಾವಾಗಿ ಬೆಳೆಯಯಿತು. ಮೈಸೂರು ಸಂಸ್ಥಾನವು ಈಗಿನ ದಕ್ಷಿಣ ಕರ್ನಾಟಕ ಹಾಗು ತಮಿಳುನಾಡಿನ ಕೆಲವು ಜಿಲ್ಲೆಗಳನ್ನು ಹೊಂದಿತ್ತು. ಹೈದರ್ ಆಲಿ ಹಾಗು ಅವನ ಪುತ್ರ ಟಿಪ್ಪು ಸುಲ್ತಾನರು ೧೮ನೇ ಶತಮಾನದಲ್ಲಿ ಒಡೆಯರರನ್ನು ಗದ್ದುಗೆಯಿಂದ ಇಳಿಸಿ, ಮೈಸೂರು ಸಂಸ್ಥಾನವನ್ನು ತಮ್ಮ ಆಳ್ವಿಕೆಯಲ್ಲಿ ತೆಗೆದುಕೊಂಡರು. ಇವರ ಆಳ್ವಿಕೆಯಲ್ಲಿ ಸಂಸ್ಥಾನವು ತನ್ನ ಸೇನೆಯ ಬಲಾಡ್ಯತೆಯ ತುತ್ತತುದಿ ತಲುಪಿತು. ಇವರ ಆಳ್ವಿಕೆಯ ಸಮಯದಲ್ಲಿ ಸಮರಗಳು ಹೆಚ್ಚಾಗೆ ಸಾಗಿದ್ದವು - ಮರಾಠರ ವಿರುದ್ಧ, ಆಂಗ್ಲರ ವಿರುದ್ಧ ಹಾಗು ಗೋಲ್ಕೊಂಡದ ನಿಝಾಮರ ವಿರುದ್ಧ. ಈ ಸಮಯದಲ್ಲಿ ನಾಲ್ಕು ಆಂಗ್ಲೊ-ಮೈಸೂರು ಸಮರಗಳು ನಡೆದವು. ಮೊದಲೆರಡು ಆಂಗ್ಲೊ-ಮೈಸೂರು ಸಮರಗಳಲ್ಲಿ ಮೈಸೂರು ಜಯಗಳಿಸಿತು ಹಾಗು ಕೊನೆಯರಡರಲ್ಲಿ ಸೋಲಪ್ಪಿತು. ೧೭೯೯ರಲ್ಲಿ ನಾಲ್ಕನೇ ಸಮರದಲ್ಲಿ ಟಿಪ್ಪುವಿನ ಸಾವಿನ ನಂತರ ಸಂಸ್ಥಾನದ ಸಿಂಹಪಾಲು ಆಂಗ್ಲರ ಪಾಲಾಯಿತು. ತದನಂತರ ಆಂಗ್ಲರು ಒಡೆಯರನ್ನ ಮೈಸೂರು ಸಂಸ್ಥಾನದ ದೊರೆಗಳನ್ನಾಗಿ ಮಾಡಿದರು. ಒಡೆಯರ ಆಳ್ವಿಕೆಯು ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದವರೆಗೂ ಮುನಂದುವರೆಯಿತು. ೧೭೯೯-೧೯೪೭ರ ಅವಧಿಯಲ್ಲಿ ಒಡೆಯರ ಆಳ್ವೆಕಯಲ್ಲಿ ಆಂಗ್ಲರ ರಾಜ್ಯವಾಗಿದ್ದ ಮೈಸೂರು ಆಧುನೀಕರಣಕ್ಕೆ ಪ್ರಖ್ಯಾತಿ ಹೊಂದಿತ್ತು. ಮೈಸೂರು ರಾಜರು ಸಂಗೀತ ಮತ್ತು ಚಿತ್ರಕಲೆಯಲ್ಲಿ ಅತಿಯಾದ ಆಸಕ್ತಿ ಹೊಂದಿದ್ದರಿಂದ ಮೈಸೂರಿನಲ್ಲಿ ಈ ದಿನಕ್ಕೊ ಪ್ರಖ್ಯಾತಿ ಹೊಂದಿರುವ ಚಿತ್ರಕಲೆಗಳು ಮತ್ತು ಸಂಗೀತ ಸಂಸ್ಕೃತಿ ಬೆಳಿಯಿತು