ಸದಸ್ಯ:Sangeetha s kokrady/ನನ್ನ ಪ್ರಯೋಗಪುಟ
ಸಾರಸಂಗ್ರಹ
[ಬದಲಾಯಿಸಿ]ಸುಮಾರು 2500 ವರ್ಷಗಳಿಂದಲೂ ಜಾತಿಪದ್ಧತಿ ಮತ್ತು ಸಿದ್ಧಾಂತಗಳಿಂದ ಶೋಷಿತರನ್ನು ನಿಯಂತ್ರಿಸುತ್ತಿದ್ಧ ಬ್ರಾಹ್ಮಣ್ಯ ನೀತಿಯ ವಿರುದ್ಧ ಪ್ರತಿರೋಧ ಚಳುವಳಿಗಳು ನಡೆದವು.ಸಂಘಟಿತ ಮತ್ತು ಅಸಂಘಟಿತ ಹೋರಾಟಗಾರರು ಚಳುವಳಿ ಪ್ರಾರಂಭಿಸಿದವು.ವರ್ಣ ಮತ್ತು ಜಾತಿಯ ಹಿಂಸೆಯಿಂದ ಬೇಸತ್ತಿದ್ದ ಬುಡಕಟ್ಟು ಸಮುದಾಯಗಳು ಶೋಷಿತ ವ್ಯವಸ್ಥೆಯೊಳಗೆ ಬರಲೊಪ್ಪದೆ ಇದರ ವಿರುದ್ಧ ಧ್ವನಿ ಎತ್ತಿದವು.ಇನ್ನೊಂದೆಡೆ ಜಾತಿ ಪಸರಿಸುತ್ತಿದ್ದಂತೆ ಭದ್ರವಾಗಿ ನೆಲೆಯೂರುತ್ತಿದ್ದ ಜಾತಿಯ ಹಿಡಿತವನ್ನು ಸಡಿಲಗೊಳಿಸದ ಚಳುವಳಿಗಳು ನಡೆದವು.<<ref>ಪುಸ್ತಕ -ಜಾತಿ ವ್ಯವಸ್ಥೆಯ ವಿಕಾಸದ ಇತಿಹಾಸ ಹಾಗೂ ಜಾತಿ ವಿರೋಧಿ ಚಳವಳಿಗೆ ನಮ್ಮ ರೂಪು
ಬ್ರಾಹ್ಮಣ್ಯ ವಿರೋಧಿ ಬಂಡಾಯ ಚಳುವಳಿಗಳು
[ಬದಲಾಯಿಸಿ]ವೈದಿಕಶಾಹಿ ಧರ್ಮವೂ ತನ್ನ ಅಧಿಪತ್ಯವನ್ನು ಬಲಗೊಳಿಸಲು ಅವೈದಿಕ ಧರ್ಮ ವನ್ನು ಸೋಲಿಸುತ್ತಾ ,ದುರ್ಬಲಗೊಳಿಸುತ್ತಾ ಕ್ರಿ.ಪೂರ್ವ 6 ನೇ ಶತಮಾನದಿಂದ ಕ್ರಿ.ಶಕ 6 ನೇ ಶತಮಾನದವರೆಗೂ ನಡೆದು ಉತ್ತರದಿಂದ ದಕ್ಷಿಣದ ಕಡೆಗೂ ಸಾಗಿತು.
ಭಕ್ತಿ ಪಂಥ ಚಳುವಳಿ
[ಬದಲಾಯಿಸಿ]ಬ್ರಾಹ್ಮಣ್ಯ ನೀತಿಗಳು ಅತಿರೇಕ ಪ್ರಮಾಣದಲ್ಲಿ ನಡೆದಾಗ ಇದರ ವಿರುದ್ಧ ಹಲವು ಭಕ್ತಿ ಪಂಥಗಳು ಚಳುವಳಿಗೆ ಇಳಿದವು.ಅವುಗಳಲ್ಲಿ ಶೈವ ,ವೀರಶೈವ,ವೈಷ್ಣವ,ಕಬೀರಾ,ಹರೇಕಿಷ್ಣ ,ಸಿಖ್ ಪಂಥಗಳು ಹಲವು ರೂಪಗಳಲ್ಲಿ ಪ್ರತಿರೋಧ ವ್ಯಕ್ತಪಡಿಸಿದವು.ಭಕ್ಇ ಚಳುವಳಿಗಳಲ್ಲಿ ಎರಡು ಧಾರೆಗಳನ್ನು ಕಾಣಬಹುದು.ಮೊದಲನೆದಾಗಿ ಪ್ರವರ್ಧಮಾನಕ್ಕೆ ಬರತೊಡಗಿದ ಶೂದ್ರಹಿನ್ನೆಲೆಯ ಊಳಿಗಮಾನ್ಯ ಶಕ್ಕಿಗಳು ಬೆಂಬಲಿಸಿದ ಶೈವ ಪಂಥ ಇದು ಕ್ರಿ.ಶಕ 6 ರಿಂದ 10 ನೇ ಶತಮಾನದಲ್ಲಿ ನಡೆಯಿತು.ಸಮಾಜದಲ್ಲಿ ತನಗಿದ್ದ ಕೀಳು ಭಾವನೆಯನ್ನು ಒಪ್ದದ ಕುಶಲಕರ್ಮಿಗಳು ನಡೆಸಿದ ಚಳುವಳಿ.ಮುಖ್ಯವಾಗಿ ಇವರ ಬಂಡಾಯಕ್ಕೆ ಸಾಮಾಜಿಕ ಹಿನ್ನೆಲೆ ಕಾರಣವಾಗಿತ್ತು.ಕೆಲವು ಸುಧಾರಣಾವಾದಿ ಬ್ರಾಹ್ಮಣ ಸಂತರೂ ಇದ್ದರು. ಆರಂಭದಲ್ಲಿ ಬ್ರಾಹ್ಮಣ್ಯದ ವಿರುದ್ಧ ಕಡು ವಿರೋಧದ ನಿಲುವನ್ನು ತಾಳಿದ ಭಕ್ತಿ ಪಂಥ ಕ್ರಮೇಣ ತನ್ನ ಹರಿತವನ್ನು ಕಳೆದುಕೊಂಡಿತು.ಭಕ್ತಿ ಪಂಥವು ಜಾತಿ ವಯವಸ್ಥೆಯನ್ನು ಮುರಿಯದಿದ್ದರೂ ಬ್ರಾಹ್ಮಣ್ಯದ ನಿರಂಕುಶ ಸಾರ್ವಭೌಮತೆಯನ್ನು ಮುರಿಯಿತು.ಸಂಘರ್ಷದಲ್ಲಿ ತೊಡಗಿಸಿಕೊಂಡ ಸಮುದಾಯಗಳು ಹೊಸ ಪಂಥವನ್ನು ಹುಟ್ಟು ಹಾಕುವ ಮೂಲಕ ಜಾತಿ ಶ್ರೇಣಿಯಲ್ಲಿ ತಮಗಿದ್ದ ಕಟ್ಟುಪಾಡುಗಳನ್ನು ಸಡಿಲಗೊಳಿಸಿದವು.
ಮುಸ್ಲಿಂ ಆಳ್ವಿಕೆ ಮತ್ತು ಇಸ್ಲಾಂ ಧರ್ಮದ ಪ್ರಭಾವ
[ಬದಲಾಯಿಸಿ]ತುರ್ಕರ ಆಳ್ವಿಕೆಯೊಂದಿಗೆ ಇಸ್ಲಾಂ ಧರ್ಮದ ಪ್ರವೇಶ ಆಯಿತು.ಇದಾದ ಬಳಿಕ ಹೊಸ ಆಳ್ವಿಕೆಗೆ ಹತ್ತಿರವಾದ ಒಂದು ಗುಂಪು ಇಸ್ಲಾಂ ಧರ್ಮಕ್ಕೆ ಮತಂತರವಾಯಿತು.ಇದು ಮುಂದೆ ವೈದಿಕ ಧರ್ಮದ ಹಿಡಿತವನ್ನು ಸಡಿಲಗೊಳಿಸಿತು.ಆದರೆ ಅದೇ ಸಂದರ್ಭದಲ್ಲಿ ಇಸ್ಲಾಂ ಧರ್ಮವೂ ಕೂಡ ಜಾತಿ ಪದ್ದತಿ ಯಿಂದ ಹೊರತಾಗಿರಲಿಲ್ಲ.ಜಾತಿ ಪದ್ಧತಿಯ ಪ್ರಭಾವದಿಂದಾಗಿ ಇಸ್ಲಾಂ ಧರ್ಮದಲ್ಲೂ ಕೂಡ ಜಾತಿ ಹಿನ್ನೆಲೆಗನುಸಾರವಾಗಿ ವರ್ಗೀಕರಿಸಲಾಯಿತು.ಉತ್ತರ ಭಾರತದ ಮುಸಲ್ಮಾನರನ್ನು ಅಷ್ರಪ್ ಅಂದರೆ ಉಚ್ಛ ಜನ್ಮಕ್ಕೆಸೇರಿದವರು,ಅರ್ಜಲ್ ಅಂದರೆ ಮತಾಂತರ ಗೊಂಡವರು ಕೀಳು ಜನ್ನಕ್ಕೆ ಸೇರಿದವರೆಂದು ,ಅಜ್ಲಪ್ ಅಂದರೆ ಮತಾಂತರಗೊಂಡ ಕೆಳ ಸಮುದಾಯಗಳೆಂದು ವಿಂಗಡಿಸಲಾಗಿತ್ತು.ಮೊಗಲರ ಆಳ್ವಿಕೆಯ ಸಮಯದಲ್ಲಿ ಮೇಲ್ಜಾತಿ ಮತ್ತು ಬಲಾಢ್ಯ ಜಾತಿಗಳ ಭೂ ಮಾಲಿಕರು ಬಲಿಷ್ಟಗೊಂಡಿದ್ದರು.