ಸದಸ್ಯ:Sandhya m r/sandbox

ವಿಕಿಪೀಡಿಯ ಇಂದ
Jump to navigation Jump to search

ಚೀನಾ - ನೇಪಾಳ ನಡುವೆ ರೈಲು ಸಂಪರ್ಕ ಒಪ್ಪಂದ[ಬದಲಾಯಿಸಿ]

ಬಿಜಿಂಗ್: ಭಾರತದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ನೇಪಾಳ ಚೀನಾದ ಆಸರೆ ಕೇಳಿ

ಅಲ್ಲದೇ ನೇಪಾಳ - ಚೀನಾ ಸಂಪರ್ಕವನ್ನು ಬಲಗೊಳಿಸಲು, ರೈಲು ಮಾರ್ಗ ನಿರ್ಮಾಣ ಮಾಡುವಂತೆ, ಪ್ರಧಾನಿ ಕೆ.ಪಿ.ಓಲಿ ಚೀನಾ ಪ್ರಧಾನಿ ಲಿ ಕೇಕಿಯಾಂಗ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಭಾನುವಾರದಿಂದ ಏಳು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಕೆ.ಪಿ. ಓಲಿ ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಯಿತು. ಉಭಯ ಪ್ರಧಾನಿಗಳ ನಡುವೆ ನಡೆದ ಮಾತುಕತೆ ವೇಳೆ, ಐತಿಹಾಸಿಕ ಸಾರಿಗೆ ವ್ಯಾಪಾರ ಸೇರಿ 10ಕ್ಕೂ ಹೆಚ್ಚು ಒಪ್ಪಂದಗಳಿಗೆ ಅಂಕಿತ ಹಾಕಲಾಯಿತು.

ಮಾತುಕತೆ ಬಳಿಕ ಮಾತನಾಡಿದ ಚೀನಾದ ವಿದೇಶಾಂಗ ಇಲಾಖೆ ಉಪ ಮುಖ್ಯಸ್ಥ ಹು ಯಾಂಕಿ, ನೇಪಾಳ ಪ್ರಧಾನಿ ದೇಶಕ್ಕೆ ಎರಡು ರೈಲು ಮಾರ್ಗಗಳ ನಿರ್ಮಾಣ ಮಾಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಚೀನಾ ಈಗಾಗಲೇ ಯೋಜನೆ ರೂಪಿಸಿದ್ದು,ಟಿಬೆಟ್‌ನ ಸಿಗಾತ್ಸೆ ಯಿಂದ ನೇಪಾಳ ಗಡಿಭಾಗದ ಗಿರಾಂಗ್ ವರಿಗೆ ರೈಲು ಮಾರ್ಗಗಳನ್ನು ವಿಸ್ತರಿಸಲು ನಿರ್ಧರಿಸಿದೆ. ಆದರೆ ಈ ಯೋಜನೆ ದೀರ್ಘ ಕಾಲಿಕವಾಗಿದು, ಬೌಗೋಳಿಕ, ತಾಂತ್ರಿಕ ಹಾಗೂ ಹಣಕಾಸು ಒದಗಿಸುವ ಸಾಮರ್ಥ್ಯವನ್ನು ಅವಲಂಬಿಸಿದೆ. ಆದರೆ ಈ ಮಾರ್ಗಗಳ ವಿಸ್ತರಣೆಯಿಂದ ಎರಡೂ ರಾಷ್ಟ್ರಗಳ ನಡುವೆ ರೈಲು ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಉಭಯ ರಾಷ್ಟ್ರಗಳ ನಡುವಣೆ ಮಾತುಕತೆ ವೇಳೆ, ದ್ವಿಪಕ್ಷೀಯ ಸಂಬಂಧಗಳ ಪ್ರಗತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಲಾಯಿತು. ಎರಡೂ ರಾಷ್ಟ್ರಗಳ ನಡುವೆ ಇನ್ನೂ ಹೆಚ್ಚಿನ ಸಹಕಾರ, ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವ ಏರ್ಪಡಿಸಲು ಸಹಮತಕ್ಕೆ ಬರಲಾಯಿತು ಎಂದು ನೇಪಾಳ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.