ಸದಸ್ಯ:Sampriyakashiptna/sandbox

ವಿಕಿಪೀಡಿಯ ಇಂದ
Jump to navigation Jump to search

ಕೃಷಿ ಪರಿಸರ---- ಶಿವಾನಂದ ಕಳವೆ

     ವರ್ತಮಾನದ ತಲ್ಲಣಗಳು

" ಊರು ಕೇರಿಗಳ ಒಡನಾಡಿ ಬೆಳೆದ ರೈತ ಮಕ್ಕಳು ಮರ್ಯಾದೆಗೆ ಅಂಜುತ್ತಾರೆ. ಬೆಂಗಳೂರಲ್ಲಿ ಕಿಸೆಗಳ್ಳತನ ಮಾಡಿ ಪ್ರಕರಣ ದಾಖಲಾದರೂ ವ್ಯಕ್ತಿ ನಗುತ್ತ ಓಡಾಡಿಕೊಂಡಿರಬಹುದು, ನಮ್ಮ ಹಳ್ಳಿಗಳಲ್ಲಿ ಹತ್ತು ರೂಪಾಯಿ ಸಾಲಕ್ಕೂ ತಲೆತಗ್ಗಿಸುವ ಸ್ಥಿತಿಯಿದೆ. ಕಷ್ಟದಲ್ಲಿರುವವರು,ಬಡವರನ್ನು ಬದುಕಿಸುವ ಬದಲು ನಕ್ಕು ಹೀಯಾಳಿಸುವ ಗುಣ ಎಂಥವರನ್ನೂ ನಡುಗಿಸುತ್ತದೆ."-ಶಿವಾನಂದ ಕಳವೆ

ನಂಬಿಕೆಯ ತಳಪಾಯ ಕುಸಿದಿದೆ ಕೃಷಿತಲ್ಲಣ ಬೆಳೆದಿವೆ.

     ನಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೃಷಿ ಪಾಠಗಳಿಲ್ಲ,ಕೃಷಿ ಮಹತ್ವ ಏನೆಂದು ಶಿಕ್ಷಣ ತಜ್ಞರಿಗೆ ಗೊತ್ತಿಲ್ಲ. ಊರ ಮಕ್ಕಳಿಗೆ ಕೃಷಿ ಯಶಸ್ಸಿನ ಅರಿವು,ಅನುಭವ ಹಂಚುವುದು ಬಿಟ್ಟು ಎಲ್ಲರನ್ನೂ ನಗರಕ್ಕೆ ಸೆಳೆಯುವ ನೀತಿ ರೂಪಿಸಿದ ನಮ್ಮ ಶಿಕ್ಷಣ ತಜ್ಞರು ಅನ್ನ ತಿನ್ನುತ್ತಾರೋ?ಗೊತ್ತಿಲ್ಲ.
     ಬೀದರಿನ ಸೂರ್ಯಬಾನ್ ವಿಠ್ಠಲ್ರಾವ್ ಮೂದಗಡೆ ಕಬ್ಬು ಬೆಳೆಯುತ್ತಾರೆ. ಇವರಿಗೆ ಆರು ಎಕರೆ ಭೂಮಿಯಿದೆ. ಕಳೆದ ವರ್ಷ ಇವರ ಕೃಷಿ ನೋಡಲು ಹೋಗಿದ್ದೆ. ಎರಡು ಎಕರೆಯಲ್ಲಿ ಸಾಲಿನಿಂದ ಸಾಲಿಗೆ ಎಂಟು ಅಡಿಯ ಅಂತರದಲ್ಲಿ ಕಬ್ಬು ನಾಟಿ ಮಾಡಿದ್ದರು. ನವೆಂಬರ್ ದಲ್ಲಿ ಕಬ್ಬು ನಾಟಿ ಮಾಡಿದ ಮೂದಗಡೆ ಕಬ್ಬಿನ ಸಾಲಿನ ನಡುವಿನ ಜಾಗದಲ್ಲಿ ಬದನೆ ನೆಟ್ಟಿದ್ದರು. ಎರಡು ಎಕರೆಯಿಂದ ಸುಮಾರು ೬೦ಟನ್ ಕಬ್ಬು ಬೆಳೆಯಿತು. ಕಬ್ಬಿನ ಸಾಲಿನ ನಡುವೆ ಹಾಕಿದ ಬದನೆಯ ಕೊಯ್ಲು ಫೆಬ್ರವರಿಯಿಂದ ಅಗಸ್ಟವರೆಗೆ ನಡೆಯಿತು. ಬದನೆಯಿಂದ ಒಂದೂವರೆ ಲಕ್ಷ ರೂಪಾಯಿ ನಿವ್ವಳ ಆದಾಯ ದೊರೆಯಿತು. ಉಳುಮೆ,ಗೊಬ್ಬರ,ನೀರಅವರಿ, ರಕ್ಷಣೆ ಕೆಲಸಗಳು ಕಬ್ಬಿನ ಬೇಸಾಯದ ಜೊತೆಗೆ ನಡೆಯಿತು, ವಿಶೇಷ ಖರ್ಚು ಬದನೆ ಬೆಳೆಯಲು ಬೇಕಾಗಲಿಲ್ಲ. ಸೊಲ್ಲಾಪುರ, ಬೀದರ್,ಬಸವಕಲ್ಯಾಣ,ಹೈದ್ರಾಬಾದ್ ಮಾರುಕಟ್ಟೆಗೆ ಮನೆಯವರೇ ಆರಕ್ಕೆ ಸೈಕಲ್ ಗಾಡಿಯಲ್ಲಿ ಬದನೆ ಹಾಖಿಕೊಂಡು ಬೀದಿ ಬೀದಿ ತಿರುಗಿದರು. ಮಕ್ಕಳಾದ ಜ್ಞಾನೇಶ್ವರ್ ಸುರೇಬಾನ್(೨೫),ವಿಷ್ಣು(೨೨)ಕೃಷಿಯಲ್ಲಿ ತಂದೆಯ ಜೊತೆ ನೆರವಾದರು. ಹೆಂಡತಿ ಲಕ್ಷ್ಮೀಬಾಯಿಯೂ ದುಡಿದಳು. ಕಬ್ಬಿನ ಹಸಿ ಎಲೆಗಳನ್ನು ಕತ್ತರಿಸಿ ದನಕರು ಮೇವಿಗೆ ಹಾಕುವುದು, ನೀರು ಗೊಬ್ಬರ ,ಕೊಯ್ಲು, ಮಾರಾಟದ ಪ್ರತಿ ಹಂತದಲ್ಲಿ ಮನೆಯವರೆಲ್ಲ ಒಂದಾಗಿ ನಿಂತರು, ಕೃಷಿಯಲ್ಲಿ ಗೆದ್ದರು.
    ಒಂದು ವರ್ಷ ಟೊಮೆಟೋ,ಮತ್ತೊಂದು ವರ್ಷ ಮೆಣಸು, ಬದನೆ ಹೀಗೆ ಕಬ್ಬಿನ ನಡುವೆ ವಿವಿಧ ಬೆಳೆ ಬೆಳೆಯುತ್ತ ಬದುಕುವ ಕಲೆಯನ್ನು ಕುಟುಂಬ ಕಲಿಯಿತು. ಕುಟುಂಬದವರೆಲ್ಲ ನಿತ್ಯ ಹೊಲಕ್ಕೆ ಹೋಗುತ್ತಿರುವುದರಿಂದ ಅಲ್ಲಿನ ನೀರಿನ ಲಭ್ಯತೆ, ಮಣ್ಣಿನ ಗುಣ, ಗೊಬ್ಬರ, ಕಳೆ ಬೆಳೆ ರೋಗದ ಅರಿವು ಎಲ್ಲರಿಗೂ ದೊರೆಯಿತು. ಇಡೀ ಮನೆಯವರು ಉತ್ಪನ್ನ ಮಾರಾಟಕ್ಕೆ ಮಾರುಕಟ್ಟಗೂ ಹೋಗಿದ್ದರಿಂದ ಗ್ರಾಹಕರ ಅಗತ್ಯ, ಬೆಲೆ ವಿಶೇಷಗಳು ತಿಳಿದವು. ಕೃಷಿ ಹಾಗೂ ಮಾರುಕಟ್ಟೆಯ ಸಮಸ್ಯೆ ಸವಾಲುಗಳು ಕುಟುಂಬಕ್ಕೆ ದೊರೆತದ್ದರಿಂದ ನೆಲ ನೆಮ್ಮದಿಯ ದಾಋಇ ತೋರಿಸಿತು. ಮರಾಠಿಗಳು ಯಾವತ್ತು ಕೃಷಿ ವಿಚಾರದಲ್ಲಿ ಇಡೀ ಕುಟುಂಬವನ್ನು ತೊಡಗಿಸುವಲ್ಲಿ ಸಿದ್ಧಹಸ್ತರು. ಚಿಕ್ಕಮಕಗ್ಕಳಿಗೆ ದುಡಿತಯುವ,ಭವಿಷ್ಯಕ್ಕೆ. ವ್ಯಕ್ತಿಯನ್ನು ಪರಸ್ಪರ ಅರ್ಥಮಾಡಿಕೊಳ್ಳಬೇಕೆಂದರೆ ಜೊತೆ ಕೆಲಸ ಮಾಡಬೇಕು,ಊಟ ಮಾಡಬೇಕು, ವ್ಯವಹರಿಸಬೇಕು ಎಂಬ ಸೂತ್ರವಿದೆ. ಕುಟುಂಬದವರೆಲ್ಲ ಪರಸ್ಪರ ಒಂದಾಗಿ ಕಾರ್ಯ ನಿರ್ವಹಿಸುವಾಗೆಲ್ಲರ ಮನಸ್ಸು ಕೃಷಿಯನ್ನು ಅರ್ಥಮಾಡಿಕೊಳ್ಳತ್ತದೆ. ಸಮಸ್ಯೆ ಅರಿವಾಗಿ ಎಲ್ಲರೂ ಒಂದಾಗಿ ನಿರ್ಧರಿಸಿ ಪರಿಹಾರದ ದಾಋಇ ಹುಡುಕಿದಾಘ ಯಶಸ್ಸು ದೊರೆಯುತ್ತದೆ. ಬೀದರ್ ಮೂದಗಡೆಯ ಒಂದು ಚಿಕ್ಕ ಕುಟುಂಬದಿಂದ ಕೃಷಿ ಕಲಿಕೆಯ ಹಲವು ಸಂಗತಿಗಳಿವೆ.
      ಈಗ ದಿನವೂ ರೈತ ಆತ್ಮಹತ್ಯೆಯ ಸರಣಿ ಮುಂದುವರಿದಿದೆ. ಸಾವಿನ ಲೆಕ್ಕ ಹಾಕುವದಷಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ಇದೆ. ಒಬ್ಬ ಕಿರಾಣಿ ಅಂಗಡಿಯ ವೃತ್ತಿ ಆರಂಭಿಸಿದ ಹೊಸತರಲ್ಲಿ ಜೋಳ,ರಾಗಿಯನ್ನು ಅಂಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಾಟಕ್ಕೆ ಇಟ್ಟಿರಬಹುದು . ಸರಹದ್ದಿನ ಗ್ರಾಹಕರು ಅಕ್ಕಿ ಮಾತ್ರ ಬಳಸುತ್ತಾರೆಂದು ತಿಳಿದ ಬಳಿಕ ನಿಧಾನಕ್ಕೆ ವ್ಯಾವಹಾರಿಕ ಚುರುಕುತನ ಬಳಸಿಕೊಂಡು ಜೋಳ, ರಾಗಿಯ ದಾಸ್ತಾನು ಕಡಿಮೆ ಮಾಡಬಹುದು. ವೃತ್ತಿಯ ಗೆಲುವಿಗೆ ಇಲ್ಲಿ ಇನ್ನೊಂದು ಸವಾಲಿನ ದಾರಿಯೂ ಇದೆ. ಜೋಳ, ರಾಗಿ ಕಾಳುಗಳನ್ನು ಮಾಡಬಹುದು. ಕಾಳು ಪರಿಚಯಿಸಿ ಮಾರುವ ಕಷ್ಟವನ್ನು ಅಂಗಡಿಕಾರರು ಸಾಮಾನ್ಯವಾಗಿ ಮೈಮೇಲೆಎಳೆದುಕೊಳ್ಳುವುದಿಲ್ಲ, ಗಿರಾಕಿಗಳಿಗೆ ಬೇಕಾದುದನ್ನು ಮಾರುತ್ತಬದುಕುವ ದಾರಿ ಹುಡುಕುತ್ತಾರೆ. ಹೊಲದಲ್ಲಿ ಬೆಳೆರ ಬೆಳೆಯುವ ರೈತರ ಕತೆ ಇಷ್ಟ ಸರಳವಿಲ್ಲ. ಮಾರುಕಟ್ಟೆ ನೋಡಿಕೊಂಡುಬೆಳೆ ಬೆಳೆಯುವುದು, ಭೂಮಿಯ ಸಾಮರ್ಥ ಅರಿತು ಬೆಳೆಯುವುದು, ಭೂಮಿಯ ಮಣ್ಣು, ಪರಿಸರ ಬದಲಿಸುವ ಸೂತ್ರವರಿತು ಕೃಷಿ ನಡೆಸುವ ದಾರಿಗಳಿವೆ. ಮಾರುಕಟ್ಟೆ ನೋಡಿಕೊಂಡು ಬೆಳೆಯಲು ಹೊರಟರೆ ಭೂಮಿ ಕೈ ಕೊಡಬಹುದು, ಭೂಮಿಯಲ್ಲಿ ಒಳ್ಳೆಯ ಫಲ ದೊರಕಿದರೆ ಮಾರುಕಟ್ಟೆಯಲ್ಲಿ ಸೋಲಾಗಬಹುದು. ಕೃಷಿಯ ಯಶಸ್ಸು ಸುಲಭವಲ್ಲ..
     ಒಂದು ಕಾಳದಲ್ಲಿ ಉತ್ತರ ಕರ್ನಾಟಕ, ಹೈದ್ರಬಾರ್ ಕರ್ನಾಟಕದಲ್ಲಿಅಜ್ಜ ತೋರಿಸಿದ ದಾರಿಯಲ್ಲಿ ಬೇಸಾತಯ ನಡೆಸುತ್ತಿದ್ದರು. ಇಂದು ವಿಜ್ಞಾನ, ತಂತ್ರಜ್ಙಾನ ಜೊತೆಗೆ ನಿಂತಿದೆ. ಮಳೆ ಆಶ್ರಿತವಾಗಿ ಬೆಳೆ ಬೆಳೆಯುವ ನೆಲೆಯಲ್ಲಿ ನೀರಾರಿ ಕಾಲುವೆ, ಕೊಳವೆ ಬಾವಿ ಮೂಲಕ ಹೊಸ ವಾಣಿಜ್ಯ ಬೆಳೆ ಬೆಳೆಯಬಹುದು. ಹೊಸಪೇಟೆಯಲ್ಲಿ ತುಂಗಭದ್ರಾ ಅಣೆಕಟ್ಟೆ ರಚನೆಯಾದ ಬಳಿಕ ೨೦ ದಶಕದ ನಂತರದಲ್ಲಿ ಸಿಂಧನೂರು, ಗಂಗಾವತಿಯಲ್ಲಿ ಭತ್ತದ ಬೇಸಾಯ ಶುರುವಾದದ್ದನ್ನು ಗಮನಿಸಬಹುದು. ಬೆಳಖಗಾವಿಯ ಪ್ರದೇಶದಲ್ಲಿ ಕೃಷ್ಣೆಯ ನೆರವಿನಿಂದ ಕಬ್ಬು ವಿಸ್ತರಿಸಿದ ವಿಶೇಷ ನೋಡಬಹುದು. ಸುಲಭದಲ್ಲಿ ಕೃಷಿ ಮಾಡಬಹುದಾದ ಮೆಕ್ಕೆಜೋಳ, ಸೋಯಾ ಅವರೆ, ಸೂರ್ಯಕಾಂತಿಯ ಹಿಂದೆ ರೈತ ಸಮೂಹ ಓಡುತ್ತ ಹಳೆಯ ಬೆಳೆಗಳನ್ನು ಮರೆತ ಕಾಲವಿದು. ಹಿಂದಿನ ಬೆಳೆ ಬೆಳೆಯಲು ಗೊತ್ತಿಲ್ಲ, ಹೊಸಬೆಳೆಗೆ ಮಾರುಕಟ್ಟೆಯಿಲ್ಲದ ಸ್ಥಿತಿಯನ್ನು ಅನುಭವಿಸುತಿದ್ದಾಋಎ. ಈರುಳ್ಳಿ, ಟೊಮೆಟೋ ಕಬ್ಬು, ಮೆಕ್ಕಜೋಳ ಪ್ರತಿ ಬೆಳೆಯೂ ಹೊಸ ಸವಾಲು ನೀಡುತ್ತಿದೆ.
     ಹೊಸ ಬೆಳೆ, ಹೊಸ ತಾಂತ್ರಿಕತೆ, ಮಾರುಕಟ್ಟೆ ಸಮಸ್ಯೆಗಳಿಂದ ಕೃಷಿಯ ಕಷ್ಟ ಹೆಚ್ಚುತ್ತ ಹೋಗಿದೆ. ಹವಾಮಾನದ ವ್ಯತ್ಯಾಸ ಕೃಷಿ ನಷ್ಟಕ್ಕೆ ನೆರವಾಗಿದೆ. ಕಡಿಮೆ ನೀರಿನಲ್ಲಿ ಕೃಷಿ ಮಾಡುವುದು, ಮಣ್ಣಿನ ಆರೋಗ್ಯ ಸಂರಕ್ಷಿಸುವ ಮರಗಿಡ , ಹೈನುಗಾರಿಕೆ ಉಳಿಸಿಕೊಂಡು ಬೇಸಾಯ ನಡೆಸುವ ಆಸಕ್ತಿ ಹೆಚ್ಚಿನವರಿಗಿಲ್ಲ. ಒಂದು ಬೆಳೆ ನಂಬಿ ಬದುಕಲು ಎಲ್ಲರೂ ಹೊರಟಿದ್ದೇವೆ. ಅಕ್ಕಡಿ ಸಾಲಿನ ಅರ್ಥಶಾಸ್ತ್ರ ಮರೆತು ಹೋಗಿದೆ. ನಮ್ಮ ಆಹಾರ, ದಿನಚರಿ, ದುಡಿಮೆ ವೈಖರಿಯಲ್ಲೂ ಬದಲಾವಣೆಯಾಗಿದೆ. ಕೃಷಿ ಭೂಮಿಯ ಆರೋಗ್ಯ ಹದಗೆಟ್ಟ ಘಳಿಗೆಯಲ್ಲಿ ಕೃಷಿಕರೂ ಸೋತಿದ್ದಾಋಎ. ಇಂದು ಬೀಜ ಚೆಲ್ಲಿ ನಾಳೆ ಬಂಗಾರ ಬೆಳೆಯುವ ಪವಾಡ ಯಾವತ್ತೂ ಘಟಿಸುವುದಿಲ್ಲ. ನಮ್ಮ ಕುಟುಂಬದ ಖರ್ಚು, ಕೃಷಿ ನಿವ‍ಹಣೆಯ ವೆಚ್ಚಗಳು ವಿಪರೀತ ಏರಿಕೆಯಾಗಿದೆ. ಹಾಸಿಗೆ ಇದ್ದಷ್ಟೇ ಕಾಲು ಚಾಚು ಬೇಕೆಂದು ನಮ್ಮ ಹರಿಯರು ಹೇಳಿದ್ದು ನೆನಪಿರಬಹುದು. ಸರಕಾರ ಸಬ್ಸಿಡಿ ನೀಡುತ್ತದೆಂದು ಹಲವು ಯಂತ್ರಗಳನ್ನು ತಂದು ದಾಸ್ತಾನು ಮಾಡಿದ್ದೇವೆ. ಸಬ್ಸಿಡಿ ನೀಡುತ್ತದೆಂದು ಹಲವು ಯಂತ್ರಗಳನ್ನು ತಂದು ದಾಸ್ತಾನು ಮಾಡಿದ್ದೇವೆ. ಸಸಬ್ಸಿಡಿ ವ್ಯವಹಾರದಲ್ಲಿ ಅಂಗಡಿಕಾರರು, ಇಲಾಖೆ ಅಧಿಕಾರಿಗಳಿಗೆ ಹೆಚ್ಚು ಅನುಕೂಲತೆ ದೊರಕಿದೆ. ಎಲ್ಲರ ಮನೆಯ ಬಾಗಿಲಲ್ಲೂ ಟ್ರ್ಯಾಕ್ಟರ್ ಬೇಕು, ಹೊಲಕ್ಕೆ ಹತ್ತು ಕೊಳವೆಬಾವಿ ಬೇಕೆಂದು ಓಡಿ ಸುಸ್ತಾಗಿದ್ದೇವೆ. ಯಂತ್ರ ಸ್ವಾವಲಂಬನೆಯ ಪ್ರವಾಹದಲ್ಲಿ ಪರಸ್ಪರ ಸಹಬಾಳ್ವೆಯ ವಾತಾವರಣ ಹಾಳಾಗಿದೆ. ಕುಟುಂಬದವರೆಲ್ಲ ದುಡಿದು ಫಲ ಉಣ್ಣುವ ಪರಿಸ್ಥಿತಿ ನೂರಕ್ಕೆ ಐದು ಕುಟುಂಬಲಲ್ಲಿಯೂ ಉಳಿದಿಲ್ಲ. ತಮ್ಮ ಕೃಷಿಯ ಪರಿಸ್ಥಿತಿ ಸ್ವತ: ಕೃಷಿ ಕುಟುಂಬಕ್ಕೆ ತಿಳಿದಿಲ್ಲ. ನೀತಿ ರೂಪಿಸುವ ಅಧಿಕಾರಿಗಳಿಗೆ ಹೇಗೆ ತಿಳಿದೀತು.?
  ರಾಜ್ಯದ ಯಾವುದೇ ತಾಲೂಕಾ ಕೇಂದ್ರದಿಂದ ರಾತ್ರಿ ಬೆಂಗಳೂರಿಗೆ ಕನಿಷ್ಟ ೧೫-೨೦ ಬಸ್ಗಳು ಹೋರಡುತ್ತವೆ. ಅದರಲ್ಲಿ ಬಹುತೇಕ ೨೦-೨೫ ವಷ‍ದ ಯುವಜಕರು ಹೊರಡುತ್ತಾರೆ. ಹಳ್ಳಿಯಲ್ಲಿ ದುಡಿಯಲಾರದ ಅಪ[fಪ, ಅಮ್ಮ ಉಳಿದಿರುವಾಗ ಉತ್ಪಾದನೆಯ ಪ್ರಶ್ನೆ ಜಟಿಲವಾಗಿದೆ. ಆತ್ನಹತ್ಯೆಯ ಮೂಲ ಹುಡುಕಿದರೆ ಇಂಥ ಕರುಣ ಕತಗಳು ಕಾಣಿಸುತ್ತವೆ. ಯುವಕರು ಹಳ್ಳಿಯ ಕೃಷಿ ಬದುಕು ಅಸಾಧ್ಯವೆಂದು ಸಾರಾಸಗಟಾಗಿ ವಲಸೆ ಹೊರಟಿದ್ದಾರೆ. ಬದುಕಿನ ಅಗತ್ಯಗಳು ಹೆಚ್ಚಿವೆ , ಹಣ ಹೆಚ್ಚು ಹೆಚ್ಚು ಬೇಕೆನಿಸಿ ನಗರದ ಹೊಸವೃತ್ತಿಯ ಶೋಧಕ್ಕೆ  ಯುವ ಪಡೆ ಹುಚ್ಚೆದ್ದಿದೆ. ಹೊಲ, ಪ್ಪ, ಅಮ್ಮನ ಸಂಬಂಧಗಳು ಕಡಿದಿವೆ. ಹಣವಿದ್ದರೆ ಸ್ಟಾರ್ ಹೋಟೆಲ್ ಮೆನುವಲ್ಲಿ ಬೇಕಾದ್ದು ಸಿಗುತ್ತದೆಂದು ಎಲ್ಲ ನಂಬಿರುವಾಗ ಬೇಸಾಯ ನಂಬಿಕೆಯ ತಳಪಾಯ ಕುಸಿದಿದೆ.
  'ಗಂಡ ಹೊಡೆದದ್ದಕ್ಕಿಂತ ನಾದಿನಿ ನೋಡಿದ ದ:ಖ ದೊಡ್ಡದು" ಎಂಬ ಮಾತಿದೆ. ಊರು ಕೇರಿಗಳಲ್ಲಿ ಒಡನಾಡಿ ಬೆಳೆದ ರೈತ ಮಕ್ಕಳು ಮರ್ಯಾದೆಗೆ ಅಂಜುತ್ತಾರೆ. ಬೆಂಗಳೂರಲ್ಲಿ ಕಿಸೆಗಳ್ಳತನ ಮಾಡಿ ಪ್ರಕರಣ ದಾಖಲಾದರೂ ವ್ಯಕ್ತಿ ನಗುತ್ತ ಓಡಾಡಿಕೊಂಡಿರುರಬಹುದು, ನಮ್ಮ ಹಳ್ಳಿಗಳಲ್ಲಿ ಹತ್ತು ರೂಪಾಯಿ ಸಾಲಕ್ಕೂ ತಲೆತಗ್ಗಿಸುವ ಸ್ಥಿತಿಯಿದೆ. ಕಷ್ಟದಲ್ಲಿರುವವರು,ಬಡವವರು,ಬಡವರನ್ನು ಬದುಕಿಸುವ ಬದಲು ನಕ್ಕು ಹೀಯಾಳಿಸುವ ಗುಣ ಎಂಥವರನ್ನೂ ನಡುಗಿಸುತ್ತದೆ. ನಮ್ಮ ರೈತರಿಗೆ ಹಗೇವು,ಕಣಜಗಳಲ್ಲಿ ಕಾಳು ಹಾಳಾಗದಂತೆ ಶೇಖರಿಸಿಡುವುದು ಗೊತ್ತಿದೆ. ಉತ್ತಮ ಬೆಳ ಬಂದಾಗ ದೊರಕಿದ ಹಣವನ್ನು ನಾಳಿನ ಭವಿಷ್ಯಕ್ಕೆ ಬಚ್ಚಿಡುವದು ಗೊತ್ತಿಲ್ಲ. ವಾಣಿಜ್ಯ ಬೆಳೆ ಬೆಳೆಯುವ ರೈತರು ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ,ಕೃಷಿಯೇತರ ವೆಚ್ಚಗಳು ಹೆಚ್ಚಿದ ಪರಿಣಾಮ ಸಾಲ ಹನುಮನ ಬಾಲವಾಗಿದೆ. ಹಣ ನಿರ್ವಹಣೆಯ ಜಾಣ್ಮೆ ಕಲಿಸುವ ಅಗತ್ಯವಿದೆ. ಕುಟುಂಬದವರೆಲ್ಲ ಒಂದಾಗಿ ದುಡಿಯುವ ಸ್ಥಿತಿಯಿಲ್ಲ, ಆಗ ಯಜಮಾನ ಹೇಗಿದ್ದಾನೆಂದು? ವ್ಯವಹಾರ ಹೇಗಿದೆಯೆಂದು ತಿಳಿಯುತ್ತಿತ್ತು. ಹಲವು ಕುಟುಂಬಗಳಿಗೆ ರೈತ ಸಾವನ್ನಪ್ಪಿದ ಬಳಿಕವೇ ಕುಟುಂಬದ ಸಾಲದ ಕತೆ ತಿಳಿಯುತ್ತಿದೆ, ಮನೆಯ ವ್ಯವಹಾಋ ರಹಸ್ಯವಾಗಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕೃಷಿ ಪಾಠಗಳಿಲ್ಲ,ಕೃಷಿ ಮಹತ್ವ ಏನೆಂದು ಶಿಕ್ಷಣ ತಜ್ಞರಿಗೆ ಗೊತ್ತಿಲ್ಲ. ಊರ ಮಕ್ಕಳಿಗೆ ಕೃಷಿ ಯಶಸ್ಸಿನ ಅರಿವು ಮೂಡಿಸುವದು ಬಿಟ್ಟು ಎಲ್ಲರನ್ನೂ ನಗರಕ್ಕೆ ಸೆಳೆಯುವ ನೀತಿ ರೂಪಿಸಿದ ಶಿಕ್ಷಣ ತಜ್ಞರು ಅನ್ನ ತಿನ್ನುತ್ತಾರೋ? ಗೊತ್ತಿಲ್ಲ.