ಸದಸ್ಯ:Sampreeth S Bhat/ನನ್ನ ಪ್ರಯೋಗಪುಟ
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು Sampreeth S Bhat (ಚರ್ಚೆ | ಕೊಡುಗೆಗಳು) 155484537 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಜೀವರಾಸಾಯನಿಕ ಔಷಧಿಶಾಸ್ತ್ರ - ಔಷಧದ ಉಪಯೋಗದಿಂದ ದೇಹದಲ್ಲಿ ಉಂಟಾಗುವ ಜೀವರಾಸಾಯನಿಕ ಕ್ರಮ ವ್ಯತ್ಯಾಸಗಳ ವ್ಯಾಸಂಗ (ಬಯೊಕೆಮಿಕಲ್ ಫಾರ್ಮಕಾಲಜಿ). ಔಷಧಿಗಳು ರೋಗಗಳನ್ನು ಗುಣಪಡಿಸುವ ಕ್ರಿಯಾವಿಧಿ, ಔಷಧಿಯೊಂದರ ಚಿಕಿತ್ಸಾಗುಣಕ್ಕೂ ಅದರ ರಚನೆಗೂ ಇರುವ ಸಂಬಂಧದ ಅನ್ವೇಷಣೆ, ಮದ್ದಿನ ರಚನೆಯನ್ನು ಮಾರ್ಪಡಿಸುವುದರಿಂದ ಅದರ ಚಿಕಿತ್ಸಾ ಸಾಮಥ್ರ್ಯದಲ್ಲಿ ಆಗುವ ವ್ಯತ್ಯಾಸದ ಪರೀಕ್ಷೆ. ಚಯಾಪಚಯಕಗಳ (ಮೆಟಬೊಲೈಟ್ಸ್) ರಚನೆಯನ್ನು ಹೋಲುವ ರಾಸಾಯನಿಕ ವಸ್ತುಗಳ ಸಂಶ್ಲೇಷಣೆ ಮತ್ತು ಅವು ದೈಹಿಕ ವ್ಯವಸ್ಥೆಯಲ್ಲಿ ಉಂಟುಮಾಡುವ ಪರಿಣಾಮ, ಜೈವಿಕ ವ್ಯವಸ್ಥೆ ಮತತು ಈ ಸಂಶ್ಲೇಷಿತ ವಸ್ತುಗಳ ನಡುವಿನ ಆತ್ಮೀಯ ಕ್ರಿಯೆಗಳ ಅನ್ವೇಷಣೆ-ಇವೆಲ್ಲ ವಿಷಯಗಳೂ ಈ ಶಾಸ್ತ್ರದ ಪರಿಧಿಯೊಳಗಿವೆ.
ರೋಗದ ಚಿಹ್ನೆ
[ಬದಲಾಯಿಸಿ]ಜೀವಿ ಎಂದರೆ ನಾನಾ ಬಗೆಯ ಜೀವರಾಸಾಯನಿಕ ಕ್ರಿಯೆಗಳು ಕ್ರಮಬದ್ಧವಾಗಿ ನಡೆಯುವ ಒಂದು ಉತ್ಕಷ್ಟ ವ್ಯವಸ್ಥೆ. ಯಾವುದೊಂದು ಕ್ರಿಯೆಯಲ್ಲಿ ಅಥವಾ ಕ್ರಿಯಾಸಮಚ್ಚಯದಲ್ಲಿ ಏರುಪೇರು ತಲೆದೋರಿದಾಗ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಮಾನವದೇಹದ ಸಂದರ್ಭದಲ್ಲಿ ಹೇಳುವುದಾದರೆ ಸ್ವಾಭಾವಿಕ ಕ್ರಿಯೆಗಳಲ್ಲಿ ತಲೆದೋರುವ ಲೋಪಗಳಿರುವ ರೋಗ (ಉದಾಹರಣೆ ಅಲ್‍ಕ್ಸಾಫ್ಟೇನ ಯೂರಿಯ) ಹುಟ್ಟಬಹುದು. ಇಲ್ಲವೆ ರೋಗಾಣುಗಳ ಆಕ್ರಮಣದಿಂದ (ಉದಾಹರಣೆಗೆ ಇನ್‍ಪ್ಲೂಯೆಂಜಾ, ಕಾಲರ, ಪ್ಲೇಗ್ ಇತ್ಯಾದಿ) ಅದು ತಲೆದೋರಬಹುದು.
ತಲೆನೋವು, ಜ್ವರ, ಭೇದಿ, ವಾಂತಿ ಇತ್ಯಾದಿ ಸಾಮಾನ್ಯ ರೋಗಗಳನ್ನು ವಾಸಿಮಾಡಿಕೊಳ್ಳಲು ಮೊದಲಿಗೆ ಮನುಷ್ಯ ನೈಸರ್ಗಿಕವಾಗಿ ದೊರೆಯುವ ಗಿಡಮೂಲಿಕೆUಳನ್ನು ಅವಲಂಬಿಸಿದ, ಅನುಭವಜ್ಯವಾಗಿ ವಿಕಸಿಸಿ ಬಂದ ಈ ಚಿಕಿತ್ಸಾಕ್ರಮ ವೈಜ್ಞಾನಿಕ ತಳಹದಿಯ ಮೇಲೆ ನಿಂತಿರಲಿಲ್ಲ. ನೇರಿಳೆ ಚಕ್ಕೆಯ ಕಷಾಯ ಆಮಶಂಕೆಗೆ ಮದ್ದು ಎಂದು, ಸಿಂಕೋನಾ ಗಿಡದ ಚಕ್ಕೆಯ ಕಷಾಯ ಚಳಿಜ್ವರಕ್ಕೆ ಸಿದ್ಧೌಷಧ ಎಂದು ಅನುಭವದಿಂದ ತಿಳಿದಿದ್ದರೂ ರೋಗವನ್ನು ಗುಣ ಮಾಡುವ ಅಂಶ ಯಾವುದು, ಅದರ ಗುಣಗಳೇನು ಎಂಬುದರ ಅರಿವು ಇನ್ನೂ ಮೂಡಿರಲಿಲ್ಲ. ಕಾರ್ಬನಿಕ ರಸಾಯನಶಾಸ್ತ್ರ ಅಭಿವೃದ್ಧಿಗೊಂಡ ಬಳಿಕ ನೈಸರ್ಗಿಕ ಮೂಲಗಳಿಂದ ಪಡೆದ ಕಚ್ಚಾವಸ್ತುಗಳಿಂದ ಚಿಕಿತ್ಸಾ ಸಾಮಥ್ರ್ಯವುಳ್ಳ ಪಟು ವಸ್ತುಗಳನ್ನು ಬೇರ್ಪಡಿಸುವ ತಂತ್ರಗಳನ್ನು ಕರಗತ ಮಾಡಿಕೊಳ್ಳಲಾಯಿತಲ್ಲದೆ, ಈ ವಸ್ತುಗಳ ರಚನೆಯನ್ನು ಅನ್ವೇಷಿಸಿ ಅನೇಕ ಸಂದರ್ಭಗಳಲ್ಲಿ ಅವನ್ನು ಸಂಶ್ಲೇಷಿಸಲೂ ಸಾಧ್ಯವಾಯಿತು. ಜೀವರಸಾಯನಶಾಸ್ತ್ರ ಬೆಳೆದು ಬಂದ ತರುವಾಯ ಜೈವಿಕ ಕ್ರಿಯೆಗಳನ್ನು ಅಣ್ವಕ ಮಟ್ಟದಲ್ಲಿ ತಿಳಿದುಕೊಳ್ಳಲಾರಂಭಿಸಿದಾಗ ಸಹಜವಾಗಿಯೇ ಔಷಧದ ರಚನೆಗೂ ಅದರ ಚಿಕಿತ್ಸಾಗುಣಕ್ಕೂ ಇರುವ ಸಂಬಂಧವನ್ನು ಅರಿಯುವುದರ ಕಡೆಗೆ ಲಕ್ಷ್ಯ ಹರಿಯಿತು. ಮದ್ದುಗಳು ಜೀವಿಯಲ್ಲಿ ಉಂಟು ಮಾಡುವ ನಿರ್ದಿಷ್ಟ ಪರಿಣಾಮಗಳ ಅಧ್ಯಯನ, ಜೈವಿಕ ವ್ಯವಸ್ಥೆಯಲ್ಲಿ ಔಷಧಿಗಳೇ ಪರಿವರ್ತನೆಯಾಗುವ ರೀತಿಯ ಅನ್ವೇಷಣೆ ಇವೆರಡೂ ಸೇರಿ ಜೀವರಸಾಯನ ಔಷಧಿಶಾಸ್ತ್ರದ ಉಗಮವಾಯಿತು. ಇದಾದದ್ದು ಸುಮಾರಿಗೆ 1877ರಲ್ಲಿ ಎನ್ನಬಹುದು. ಆ ವರ್ಷದಲ್ಲಿ ಎಡಿನಬರೊ ವಿಶ್ವವಿದ್ಯಾಲಯದ ಕ್ರಾಮ್‍ಬ್ರೌನ್ ಮತ್ತು ತಾಮಸ್ ಫ್ರೇಸಿಯರ್ ಜಂಟಿಯಾಗಿ ನಡೆಸಿದ ಸಂಶೋಧನೆಗಳಿಂದ ಆಲ್ಕಲಾಯ್ಡ್ ಗುಂಪಿಗೆ ಸೇರಿದ ಸ್ಟ್ರಿಕ್ನೈನ್ ಬ್ಯೂಸಿನ್ ಮತ್ತು ಅಟ್ರೊಪೀನ್ ಮೊದಲಾದ ವಸ್ತುಗಳ ರಚನೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಮಾಡಿದಾಗ ಅವುಗಳ ಗುಣಗಳಲ್ಲಿ ಗಾಢವಾದ ಪರಿಣಾಮವಾಗುತ್ತಿದ್ದುದು ತಿಳಿದುಬಂತು. ಕೆಲವು ರಾಸಾಯನಿಕಗಳನ್ನು ಅವುಗಳ ಚತುರ್ಥಕ (ಕ್ವಾರ್ಟರ್ನರಿ) ಅಮೋನಿಯಮ್ ಲವಣಗಳನ್ನಾಗಿ ಪರಿವರ್ತಿಸಿದಾಗ, ನರಗಳಿಂದ ಮಾಂಸಖಂಡಕ್ಕೆ ಪ್ರವಹಿಸುವ ಸಂದೇಶವನ್ನು ತಡೆಗಟ್ಟುವ ಗುಣ ಅವುಗಳಿಗೆ ಒದಗುವುದೆಂದು ಈ ವಿಜ್ಞಾನಿಗಳೇ ತೋರಿಸಿದರು.
ಜೀವರಸಾಯನದಲ್ಲಿ ನಡೆದಿರುವ ಸಂಶೋಧನೆಗಳು ಹೆಚ್ಚಿನ ಜೀವರಾಸಾಯನಿಕ ಕ್ರಿಯೆಗಳು ಕಿಣ್ವಗಳಿಂದ ವಿಶಿಷ್ಟರೀತಿಯಲ್ಲಿ ವರ್ಧಿತವಾಗುತ್ತವೆ ಎಂದು ತೋರಿಸಿಕೊಟ್ಟಿವೆ. ಎಂದರೆ ಕಿಣ್ವ ತನಗೆ ವಿಶಿಷ್ಟವಾದ ಕ್ರಿಯಾಧರವನ್ನು ಮಾತ್ರ ಪ್ರಭಾವಿಸುತ್ತದೆ ಎಂದಾಯಿತು. ಕಿಣ್ವಗಳ ಈ ಕ್ರಿಯೆಯನ್ನು ಅನೇಕ ಬಗೆಯ ಪ್ರತಿಬಂಧಕಗಳು ಕುಂಠಿತಗೊಳಿಸಬಲ್ಲವು. ಒಂದು ಔಷಧಿ ಕಿಣ್ವವೊಂದರ ಕ್ರಿಯಾಧರವನ್ನು ಭಾಗಶಃ ಅಥವಾ ಪೂರ್ಣವಾಗಿ ಹೋಲುವುದಾದರೆ ಜೈವಿಕ ವ್ಯವಸ್ಥೆಯನ್ನು ಪ್ರವೇಶಿಸಿದಾಗ ಅದು ಕಿಣ್ವದ ಪ್ರತಿಬಂಧಕದಂತೆ ವರ್ತಿಸಬಲ್ಲುದು. ಉದಾಹರಣೆಗೆ ಕೆಲವು ವರ್ಗಗಳಿಗೆ ಸೇರಿದ ಬ್ಯಾಕ್ಟೀರಿಯಗಳ ಬೆಳವಣಿಗೆಯನ್ನು ತಡೆಗಟ್ಟಲು, ಅರ್ಥಾತ್ ಈ ರೋಗಾಣುಗಳಿಂದ ಉಂಟಾಗುವ ರೋಗಗಳನ್ನು ತಡೆಗಟ್ಟಲು ಸಲ್ಫಾನಿಲ್ ಅಮೈಡನ್ನು ಔಷಧಿಯನ್ನಾಗಿ ಉಪಯೋಗಿಸಲಾಗಿದೆ. ಇದು ಕೆಲಸ ಮಾಡುವ ರೀತಿಯನ್ನು ಹೀಗೆ ವಿವರಿಸಲಾಗಿದೆ; ಬ್ಯಾಕ್ಟೀರಿಯಗಳ ಕೋಶಗಳ ಮರುವಿಭಜನೆಗೆ ಪೂರ್ವಭಾವಿಯಾಗಿ ನಡೆಯುವ ನ್ಯೂಕ್ಲಿಯಕ್ ಆಮ್ಲಗಳ ಸಂಶ್ಲೇಷಣೆಗೆ ಪ್ಯಾರಾ ಅಮೈನೋ ಬೆನ್‍ಜೋಯಿಕ್ ಆಮ್ಲ ಎಂಬ ಜೀವಸತ್ತ್ವದ ಅಗತ್ಯ ಉಂಟು. ಈಗ ಸಲ್ಪಾನಿಕ್ ಅಮೈಡಿನ ರಚನೆಗೂ ಪ್ಯಾರಾ ಅಮೈನೋ ಬೆನ್‍ಜೋಯಿಕ್ ಆಮ್ಲದ ರಚನೆಗೂ ಬಹಳ ಹೋಲಿಕೆ ಇದೆ. (ಚಿತ್ರ 1).
ಹೀಗಾಗಿ ಈ ಜೀವಸತ್ತ್ವವನ್ನು ಬಳಸುವ ಬ್ಯಾಕ್ಟಿರಿಯಗಳ ಪ್ರಜನನ ಕ್ರಿಯೆ ಸಲ್ಫಾನಿಲ್ ಅಮೈಡಿನಿಂದ ಕುಂಠಿತವಾಗುತ್ತದೆ. ಏಕೆಂದರೆ ಈ ಔಷಧಿ ಜೀವಸತ್ತ್ವದ ಬದಲು ತಾನು ಭಾಗಗೊಂಡು ಆಗಬೇಕಾದ ಕಾರ್ಯಕ್ಕೆ ತಡೆಯನ್ನು ಉಂಟುಮಾಡುತ್ತದೆ. ಇನ್ನೂ ಒಂದು ಉದಾಹರಣೆಯನ್ನು ಹೇಳಬಹುದು. ಆಗ್ರ್ಯಾನೋಫಾಸ್ಫೇಟ್ ಸಂಯುಕ್ತಗಳನ್ನು ಕೀಟನಾಶಕಗಳಂತೆ ಇತ್ತೀಚೆಗೆ ಬಳಸಲಾಗುತ್ತಿದೆ. ಇವುಗಳ ಪೈಕಿ ಒಂದಾದ ಡೈಐಸೋಪ್ರೋಪೈಲ್ ಪ್ಲೂರೋಫಾಸ್ಫೇಟ್ ಈ ರೀತಿ ವರ್ತಿಸುತ್ತದೆ; ನರಗಳ ವ್ಯವಸ್ಥೆಗಳ ಮೂಲಕ ಸಂದೇಶ ಸಾಗುವಾಗ ಅಸಿಟೈಲ್ ಕೋಲಿನ್ ಬಿಡುಗಡೆ ಆಗುತ್ತದೆ. ಬಹುಶೀಘ್ರದಲ್ಲಿಯೇ ಅಸಿಟೈಲ್ ಕೋಲೀನ್ ಎಸ್ಟರೇಸ್ ಕಿಣ್ವ ಇದನ್ನು ನಾಶಮಾಡುತ್ತದೆ. ಅಷ್ಟರಲ್ಲಿ ಅಸಿಟೈಲ್ ಕೋಲಿನ್ ಅಂಗಾಂಶವನ್ನು ಕ್ಷಣಿಕವಾಗಿ ಉತ್ತೇಜಿಸಿ ಸಂದೇಶ ಸಫಲವಾಗುವಂತೆ ಮಾಡಿರುತ್ತದೆ. ಅಸಿಟೈಲ್ ಕೋಲೀನ್ ನಾಶವಾಗದಿದ್ದ ಪಕ್ಷದಲ್ಲಿ ಅಂಗಾಂಶಗಳು ಬಹುಕಾಲಿಕವಾಗಿ ಉತ್ತೇಜಿತ ಸ್ಥಿತಿಯಲ್ಲೇ ಇದ್ದು ಬಹುವೇಳೆ ಜೀವಿ ಸಾಯುತ್ತದೆ. ಡೈಐಸೋಪ್ರೊಪೈಲ್ ಪ್ಲೂರೋ ಫಾಸ್ಫೇಟು ಕೋಲೀನ್ ಎಸ್ಟರೇಸಿನ ಕ್ರಿಯೆಗೆ ಅಡ್ಡಿ ಬರುತ್ತದೆ. ಎಂದರೆ ಅಸಿಟೈಲ್ ಕೋಲೀನ್ ನಾಶವಾಗುವುದಿಲ್ಲ. ಈ ಕಾರಣದಿಂದ ಪ್ಲೂರೊ ಫಾಸ್ಪೇಟ್ ಜೀವಿಯ ಪಾಲಿಗೆ ವಿಷ. ಕೋಲೀನ್ ಎಸ್ಟರೇಸಿನ ಕ್ರಿಯೆಗೆ ಪ್ಲೂರೋ ಫಾಸ್ಫೇಟ್ ಅಡ್ಡ ಬರುವುದರ ಕಾರಣವಿಷ್ಟೆ. ಕಿಣ್ವದ ಪಟುತ್ವ ಪ್ರದೇಶದಲ್ಲಿ ಸೀರೀನ್ ಎಂಬ ಅಮೈನೋ ಆಮ್ಲವಿದ್ದು ಅದರ -ಅಊ2ಔಊ ಪುಂಜ ಬಿಡುವಾಗಿರುತ್ತದೆ. ಆಗ್ರ್ಯಾನೋ ಫಾಸ್ಫೇಟ್ ಸಂಯುಕ್ತ ಈ ಪುಂಜದೊಡನೆ ವರ್ತಿಸಿ ಕಿಣ್ವ ಅಸಿಟೈಲ್ ಕೋಲೀನ್ ಇವೆರಡೂ ರೂಪಿಸುವ ಕ್ಲಿಷ್ಟವಸ್ತುವಿಗಿಂತ ಸ್ಥಿರವಾದ ಕೋವೆಲೆಂಟ್ ಸಂಯುಕ್ತವನ್ನು ರೂಪಿಸುತ್ತದೆ (ಚಿತ್ರ 2). ಇದರಿಂದಾಗಿ ಕಿಣ್ವ ಅಸಿಟೈಲ್ ಕೋಲೀನಿನ ಬದಲು ಆಗ್ರ್ಯಾನೋ ಫಾಸ್ಫೇಟಿನೊಡನೆ ವರ್ತಿಸಿ ಕಿಣ್ವದ ಸಹಜಕ್ರಿಯೆ ಬಹುಮಟ್ಟಿಗೆ ತಗ್ಗಿಹೋಗುತ್ತದೆ. ಆಗ್ರ್ಯಾನೋ ಫಾಸ್ಫೇಟ್ ಸಂಯುಕ್ತಗಳು ಒಂದಿಲ್ಲೊಂದು ದಿನ ಯುದ್ಧಭೂಮಿಯಲ್ಲಿ ಬಳಸುವ ಮಾರಕಾಸ್ತ್ರಗಳಾಗಬಹುದಾದ್ದರಿಂದಲೂ ಕೀಟನಾಶಕಗಳಂತೆ ಬಳಸಿದಾಗ ಮಾನವನಿಗೆ ಹಾಗೂ ಸಾಕು ಪ್ರಾಣಿಗಳಿಗೆ ಅಪಾಯ ಒದಗುವ ಸಾಧ್ಯತೆ ಇರುವುದರಿಂದಲೂ ಇವಕ್ಕೆ ವಿರೋಧಿಗಳನ್ನು ಶೋಧಿಸುವುದು ಅತ್ಯವಶ್ಯಕವಾಯಿತು. ಕುಂಠಿತವಾದ ಕಿಣ್ವದ ಕ್ರಿಯೆಯನ್ನು ಮರಳಿ ಬರಿಸಲು ಸಿರೀನೀನ ಆಕ್ಸಿಜನ್ನಿನೊಂದಿಗೆ ಸೇರಿರುವ ಫಾಸ್ಫೇಟ್ ಪುಂಜವನ್ನು ಸ್ಥಳಪಲ್ಲಟಿಸಬಲ್ಲ ನ್ಯೂಕ್ಲಿಯೋಫಿಲಿಕ್ ಅಭಿಕರ್ಮಕವನ್ನು ಬಳಸುವುದು ಅತ್ಯುತ್ತಮ ಮಾರ್ಗ ಎಂಬುದ ಸ್ವಯಂ ವ್ಯಕ್ತ. ಈ ತರ್ಕಕ್ಕೆ ಅನುಸಾರವಾಗಿ ಪಿರಿಡಿನ್-2-ಅಲ್ಡಾಕ್ಸಿಮ್ ಮೆಥಿಯೋಡೈಡ್ (Pಂಒ) ಎಂಬ ಸಂಯುಕ್ತವನ್ನು ಸಂಶ್ಲೇಷಿಸಲಾಯಿತು.
ನೀರೀಕ್ಷಣೆಗೆ ಅನುಸಾರವಾಗಿ ಇದು ಅತ್ಯಲ್ಪ ಪ್ರಮಾಣದಲ್ಲಿ ಸಹ ಆಗ್ರ್ಯಾನೋಫಾಸ್ಪೇಟುಗಳಿಂದ ರಕ್ಷಣೆಯನ್ನು ನೀಡಬಲ್ಲುದು. ಅನೇಕ ದೇಶಗಳಲ್ಲಿ Pಂಒ ಅನ್ನು ಆಗ್ಯಾನೋಫಾಸ್ಪೇಟ್ ಕೀಟನಾಶಕಗಳಿಗೆ ಮದ್ದನ್ನಾಗಿ ಉಪಯೋಗಿಸಲಾಗುತ್ತದೆ.
ಚಯಾಪಚಯಗಳ ರಚನೆಯನ್ನು ಅನುಕರಿಸುವ ಸಂಯುಕ್ತಗಳನ್ನು ಸಂಶ್ಲೇಷಿಸಿ ರೋಗಗಳನ್ನು ನಿವಾರಿಸಲು ನಡೆದಿರುವ ಪ್ರಯತ್ನಗಳಿಗೆ 5- ಪ್ಲೂರೋ ಯುರಾಸಿಲ್ಲಿನ ಬಳಕೆ ಒಂದು ಉತ್ತಮ ಉದಾಹರಣೆ. ನ್ಯೂಕ್ಲಿಯಿಕ್ ಆಮ್ಲಗಳ ಸಂಶ್ಲೇಷಣೆಗೆ ಬೇಕಾದ ಪಿರಿಮಿಡನ್ ಪ್ರತ್ಯಾಮ್ಲಗಳ ಪೈಕಿ ಒಂದಾದ ಯುರಾಸಿಲ್ ಬದಲು 5-ಪ್ಲೂರೋ ಯುರಾಸಿಲನ್ನು ಬಳಸಿ ನ್ಯೂಕ್ಲಿಯಿಕ್ ಆಮ್ಲಗಳ ಸಂಶ್ಲೇಷಣೆಯನ್ನು ತಗ್ಗಿಸಲು ಸಾಧ್ಯ. ಅರ್ಥಾತ್ ಕೋಶಗಳ ಬೆಳವಣಿಗೆಯನ್ನು ತಡೆಹಿಡಿಬಹುದು. ಏಡಿಗಂತಿ ರೋಗದ ಕೋಶಗಳ ಹತೋಟಿ ಮೀರಿದ ಬೆಳೆವಣಿಗೆಯನ್ನು ತಡೆಗಟ್ಟಲು ಈ ಮಾರ್ಗವನ್ನು ಅನುಸರಿಸಬಹುದು.
ಹಾರ್ಮೋನುಗಳ ರಚನೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವನ್ನು ಮಾಡಿ ಇಂಥ ಬದಲಾವಣೆಗಳ ಪರಿಣಾಮಗಳನ್ನು ಅಧ್ಯಯನ ಮಾಡಲಾಗಿದೆ. ಇದರಿಂದ ನೈಸರ್ಗಿಕ ಹಾರ್ಮೋನುಗಳಿಗಿಂತ ಹೆಚ್ಚಿನ ಸಾಮಥ್ರ್ಯವುಳ್ಳ ಸಂಯುಕ್ತಗಳನ್ನು ಸಂಶ್ಲೇಷಿಸಿ ಹಾರ್ಮೋನುಗಳ ಅಭಾವದಿಂದ ತಲೆದೋರುವ ಅನೇಕ ರೋಗಗಳನ್ನು ವಾಸಿಮಾಡಲು ಸಾಧ್ಯವಾಗಿದೆ.
ಬ್ಯಾಕ್ಟೀರಿಯಗಳ ಬೆಳೆವಣಿಗೆಗೂ ಜೀವಸತ್ತ್ವಗಳು ಬೇಕಾದ್ದರಿಂದ ಅವುಗಳ ಕಾರ್ಯನಿರ್ವಹಣೆಗೆ ಅಡ್ಡಿಬರುವ ಸಂಯುಕ್ತಗಳನ್ನು ಸಂಶ್ಲೇಷಿಸಿ ಅವನ್ನು ಔಷಧಿಯಂತೆ ಬಳಸುವ ಪ್ರಯತ್ನಗಳನ್ನು ಮಾಡಲಾಗಿದೆ. ಇಂಥ ಸಂಯಕ್ತಗಳ ಪೈಕಿ ಥಯಮೀನಿನ ಕಾರ್ಯಕ್ಕೆ ಕುಂದು ತರುವ ಪೈರಿಥಯಮೀನ್, ಪೋಲಿಕ್ ಆಮ್ಲಕ್ಕೆ ವಿರೋಧಿಯಾದ ಅಮಿನಾಪ್ಟೆರಿನ್ನುಗಳನ್ನು ಉದಾಹರಿಸಬಹುದು.
ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಪ್ರೋಸ್ಟಾಗ್ಲಾಂಡಿನ್ನುಗಳೆಂಬ ಗಣನೀಯ ರಾಸಾಯನಿಕ ವಸ್ತುಗಳ ಬಗ್ಗೆ ಅರವತ್ತರ ದಶಕದಿಂದೇಚೆಗೆ ಅಪಾರವಾದ ಸಂಶೋಧನೆ ನಡೆದಿದೆ. ಪ್ರಾರಂಭದಲ್ಲಿ ಇವು ಅನೈಚ್ಛಿಕ ಮಾಂಸಖಂಡಗಳನ್ನು ಸಂಕೋಚಗೊಳಿಸುತ್ತವೆ ಎಂಬುದನ್ನು ಗಮನಿಸಿದ್ದರಿಂದ ಪ್ರಸವವನ್ನು ಸುಗಮವಾಗಿಸಲು ಅಥವಾ ಗರ್ಭವನ್ನು ಅಂತ್ಯಗೊಳಿಸಲು ಇವನ್ನು ಬಳಸಿಲಾಯಿತು. ಇವು ಕೋಶಗಳಿಗೆ ರಕ್ತ ಪೂರೈಕೆಯಾಗುವ ದರವನ್ನು ನಿಯಂತ್ರಿಸುವುದರಲ್ಲಿ ಮತ್ತು ಬಾತುಕೊಳ್ಳುವ ಕ್ರಿಯೆಯಲ್ಲಿ ಪಾತ್ರವಹಿಸುತ್ತವೆ ಎಂದು ಈಚೆಗೆ ತಿಳಿದುಬಂದಿದೆ. ತಲೆನೋವು, ಜ್ವರ, ಮೈ ಕೈ ನೋವು ಇತ್ಯಾದಿ ಸಾಧಾರಣ ಅನಾರೋಗ್ಯಗಳಿಗೆ ಸಂಜೀವಿನಿಯಾದ ಆಸ್ಪಿರಿನ್ ದೇಹದಲ್ಲಿ ಪ್ರೋಸ್ಟಾಗ್ಲಾಂಡಿನ್ನುಗಳ ಸಂಶ್ಲೇಷಣೆಗೆ ಅಡ್ಡಿ ಬರುವುದರ ಮೂಲಕ ವರ್ತಿಸುತ್ತದೆ. ಪ್ರೋಸ್ಟಾಗ್ಲಾಂಡಿನ್ನುಗಳು ನೀರು ಮತ್ತು ಅಯಾನುಗಳ ಸಾಗಾಣಿಕೆಯಲ್ಲಿ ಹಾಗೂ ಅಂಗಾಂಶಗಳು ಹಾರ್ಮೋನುಗಳಿಗೆ ಓ ಕೊಡುವ ಕ್ರಿಯೆಯಲ್ಲಿ ಮಧ್ಯವರ್ತಿಯಾದ ಚಕ್ರೀಯ ಂಒP ಯ (ಸೈಕ್ಲಿಕ್ ಂಒP) ಮಟ್ಟವನ್ನು ನಿಯಂತ್ರಿಸುವುದರಲ್ಲಿ ಭಾಗವಹಿಸುತ್ತವೆ. ಪ್ರೋಸ್ಟಾಗ್ಲಾಂಡಿನ್ನುಗಳನ್ನು ಕೃತಕವಾಗಿ ಸಂಶ್ಲೇಷಿಸುವ ಸಾಧ್ಯತೆ ಇದೆಯಾಗಿ ಇವನ್ನು ಔಷಧಿಯನ್ನಾಗಿ ಮತ್ತು ಜನನ ನಿಯಂತ್ರಣಕ್ಕಾಗಿ ಬಳಸಬಹುದು.
ಲೋಹಗಳು ಮಾನವನಿಗೆ ವರವಾಗಬಹುದು ಅಥವಾ ಶಾಪವಾಗಬಹುದು ಎಂಬುದರ ಅರಿವು ಪ್ರಾಚೀನ ಕಾಲದಿಂದಲೂ ತಿಳಿದಿದೆ. ನಾಗರಿಕತೆಯ ಮುನ್ನಡೆಯಿಂದ ಮಾನವ ದೇಹ ಅನೇಕ ಮಾರಕ ಲೋಹಗಳಿಂದ ತೀವ್ರ ಅಪಾಯಕ್ಕೆ ಗುರಿಯಾಗುವ ಅಂಜಿಕೆ ಇಂದು ಹೆಚ್ಚಿದೆ. ಅದರಲ್ಲೂ ಪಾದರಸ, ಕ್ರಯಾಡ್ಮಿಯಮ್ ಮತ್ತು ಸೀಸಗಳ ಸಂಯುಕ್ತಗಳನ್ನು ಅನೇಕ ಉದ್ಯಮಗಳಲ್ಲಿ ಬಳಸಲಾಗುತ್ತಿದೆ ಮತ್ತು ಇವು ಅನಪೇಕ್ಷಿತ ಪರಿಮಾಣದಲ್ಲಿ ದೇಹಕ್ಕೆ ಸೇರುತ್ತಲಿವೆ. ಎಲ್ಲ ಪಾದರಸ ಸಂಯುಕ್ತಗಳು, ವಿಶೇಷತಃ ಆಗ್ರ್ಯಾನಿಕ್ ಪಾದರಸ ಸಂಯುಕ್ತಗಳು, ಕೋಶಗಳಿಗೆ ತೀವ್ರ ವಿಷಕಾರಿಗಳು. ಕೀಟಗಳಿಂದ ರಕ್ಷಣೆಯನ್ನು ಒದಗಿಸಲು ಬೀಜಗಳನ್ನು ಸಂಸ್ಕರಿಸುವ ಪದ್ದತಿ ಇರುವುದರಿಂದ ಇಂಥ ಬೀಜಗಳನ್ನು ಹಕ್ಕಿಗಳು ತಿಂದು ನಾಶವಾಗಿವೆ. ಈಚೆಗೆ ಇರಾಕಿನಲ್ಲಿ ಹೀಗೆ ಸಂಸ್ಕರಿಸಲ್ಪಟ್ಟ ಗೋದಿಯನ್ನು ತಿಂದು ಲಕ್ಷಕ್ಕೂ ಮೀರಿ ಜನರು ಸತ್ತು ಸಹಸ್ರಾರು ಮಂದಿ ಅಂಗವಿಕಲರಾಗಿದ್ದಾರೆ. ಕ್ಯಾಡ್ಮಿಯಮ್ಮು ಮೂತ್ರಕೋಶಕ್ಕೆ ಹಾನಿಯನ್ನು ಉಂಟುಮಾಡುವುದಲ್ಲದೆ ಮೂಳೆಯಿಂದ ಕ್ಯಾಲ್ಸಿಯಮ್ ಸೋರಿಹೋಗುವಂತೆ ಮಾಡಿ ಅದನ್ನು ಟೊಳ್ಳಾಗಿಸುತ್ತದೆ. ಕ್ಯಾಡ್ಮಿಯಮ್ ವಿಷಕ್ಕೆ ಗುರಿಯಾದವರು ತೀವ್ರವಾದ ಮೂಳೆಯ ಬಾಧೆಗೆ ಈಡಾಗುತ್ತಾರೆ. ದೇಹದಲ್ಲಿ ಸೀಸ ನಿಧಾನವಾಗಿ ಶೇಖರವಾಗುತ್ತದೆಯಾಗಿ ಇದರಿಂದ ಅಪಾಯ ತುಂಬ ಹೆಚ್ಚು. ಮೋಟಾರುವಾಹನಗಳು ಉಗುಳುವ ಹೊಗೆಯಲ್ಲಿ ಸೀಸದ ಆವಿ ಇದೆ. ಇದನ್ನು ದೀರ್ಘಕಾಲ ಸೇವಿಸುವವರು ರಕ್ತಹೀನತೆ, ಮೂತ್ರಪಿಂಡಗಳ ವ್ಯಾಧಿ ಮತ್ತು ನರಗಳ ದೌರ್ಬಲ್ಯಕ್ಕೆ ಗುರಿಯಾಗುತ್ತಾರೆ.
ಲೋಹಗಳಿಂದಾಗುವ ಅಪಾಯಕ್ಕೆ ಮದ್ದನ್ನು ಹುಡುಕುವುದು ಸುಲಭವಲ್ಲ. ಲೋಹಗಳ ಅಯಾನುಗಳನ್ನು ಸೆರೆಹಿಡಿಯಬಲ್ಲ ರಾಳಗಳು ಮತ್ತು ರಾಸಾಯನಿಕ ವಸ್ತುಗಳ (ಉದಾಹರಣೆಗೆ ಎಥಿಲಿನ್ ಡೈ ಅಮೀನ್ ಟೆಟ್ರಾ ಅಸಿಟೇಟ್) ಔಷಧಿಯಂತೆ ವರ್ತಿಸಬಲ್ಲೆವ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. (ಎಚ್.ಎಸ್.ಎಸ್.; ಟಿ.ಎಸ್.ಕೆ.)