ಸದಸ್ಯ:Samprabha chandrahas shetty/sandbox

ವಿಕಿಪೀಡಿಯ ಇಂದ
Jump to navigation Jump to search
          ರಿ.ನಂ.೧೫೨೩೦೫
          ಪ್ರಥಮ ಬಿ.ಎಸ್ಸಿ
          (ಪಿ.ಸಿಎಸ್.ಎಮ್)                 

---ಅನ್ಯ ಗ್ರಹಗಳಲ್ಲಿ ಜೀವಿಗಳಿವೆಯೇ???---

   ಅನ್ಯಗ್ರಹ ಜೀವಾನ್ವೇಷಣೆಯ ಪಯಣ ಬಹಳ ರೋಚಕತೆ ಮತ್ತು ಕುತೂಹಲಗಳಿಂದ ಕೂಡಿದೆ.ಅಂತಹ ರೋಚಕ ಘಟನೆಯೊಂದಿಗೆ ಶುರು ಮಾಡೋಣ.

ಕಾರ್ನೆಲ್ ವಿಶ್ವವಿದ್ಯಾಲಯದ ಸಂಗೀತ ಸಭಾಂಗಣದಲ್ಲಿ ಅಂದು ಬಹಳ ಜನಪ್ರಿಯ ರಾಕ್ ಸಂಗೀತ ಸಭೆ ಏರ್ಪಾಡಾಗಿತ್ತು.ಆಸನಗಳೆಲ್ಲವೂ ಭರ್ತಿಯಾಗಿದ್ದವು.ರಾಕ್ ಸಂಗೀತವು ಅಲೆ ಅಲೆಯಾಗಿ ತೇಲಿಬರುತ್ತಿರಲು ಎಲ್ಲರೂ ಸಮ್ಮೋಹನಕ್ಕೆ ಒಳಗಾದವರಂತೆ ತಲೆದೂಗುತ್ತಿದ್ದರು.ಆದರೆ ಅಂದಿನ ಸಭೆಗೆ ಬಂದಿದ್ದ ಖಗೋಳಶಾಸ್ತ್ರಜ್ಞ ಪಿಲಿಫ್ ಮಾರಿಸನ್ ಅವರ ತಲೆಯಲ್ಲಿ ಮಾತ್ರ ಹೊಸದೊಂದು ವಿಚಾರಲಹರಿ ಮಿಂಚಿನಂತೆ ಮೂಡಿತು.ಪಿಲಿಫ್ ಮಾರಿಸನ್ ಅನ್ಯಗ್ರಹ ಜೀವಿಗಳ ಬಗ್ಗೆ ಅತೀವ ಆಸೆಯುಳ್ಳವರಾಗಿದ್ದರು.ಅನ್ಯಗ್ರಹ ಜೀವಿಗಳನ್ನು ಸಂಪರ್ಕ ಮಾಡುವುದು ಹೇಗೆ ಎಂದು ಬಹಳ ದಿನಗಳಿಂದ ಅವರ ತಲೆಯನ್ನು ತಿನ್ನುತ್ತಿದ್ದ ಪ್ರಶ್ನೆಗೆ ಈ ಸ೦ಗೀತ ಸಭೆ ಸರಿಯಾದ ಉತ್ತರ ದೊರಕಿಸಿಕೊಟ್ಟಿತು.ಸಂಗೀತದ ಅಲೆಗಳಂತೆ ರೇಡಿಯೋ ಅಲೆಗಳು ಸಹ,ತರಂಗಗಳ ರೂಪದಲ್ಲಿ ಬಹು ದೂರ ಸಾಗಬಲ್ಲವು.ಆದ್ದರಿಂದ ರೇಡಿಯೋ ತರಂಗಗಳ ಮೂಲಕ ಅನ್ಯ ಗ್ರಹಗಳಲ್ಲಿರಬಹುದಾದ ಜೀವಿಗಳಿಗೆ ನಾವ್ಯಾಕೆ ಸಂದೇಶ ಕಳುಹಿಸಬಾರದು ಎಂದು ಅವರಿಗೆ ಆ ಕ್ಷಣ ಹೊಳೆಯಿತು.ಈ ಘಟಣೆ ನಡೆದದ್ದು ೧೯೫೬ರಲ್ಲಿ.ರೇಡಿಯೋ ರಂಗಗಳನ್ನು ಬಿತ್ತರಿಸಿ ಸಂಪರ್ಕ ಸಾಧಿಸಲು ಅಂದಿನಿಂದ ಆರಂಭಗೊಂಡ ಈ ಶೋಧ ಇಂದಿಗೂ ತುಂಬಾ ಭರದಲ್ಲಿ ಸಾಗಿದೆ ಎಂದು ಹೇಳಬಹುದು.. ಇಲ್ಲಿ ಎಸ್.ಟಿ.ಇ.ಐ ಎಂಬ ಕಾರ್ಯಕ್ರಮವನ್ನು ಖಂಡಿತ ಉಲ್ಲೇಖಿಸಲೇಬೇಕು.ಸರ್ಚ್ ಫಾರ್ ಎಕ್ಸ್ ಟ್ರಾ ಟೆರಿಸ್ಟ್ರಿಯಲ್ ಇಂಟಲಿಜೆನ್ಸ್ ಎಂಬುದರ ಸಂಕ್ಷೀಪ್ತ ರೂಪವೇ ಎಸ್.ಟಿ.ಇ.ಐ. ಬ್ರಹ್ಮಾಂಡದಲ್ಲಿ ನಾವು ಒಬ್ಬಂಟಿಗರೇ ಬೇರೆ ಕಡೆ ಜೀವಿಗಳು ಇಲ್ಲವೇ? ಇದ್ದರೆ ಎಂತಿರಬಹುದು.ಈ ಎಲ್ಲಾ ಕುತೂಹಲ ಭರಿತ ಹಾಗೂ ರಹಸ್ಯಮಯ ಪ್ರಶ್ನೆಗಳಿಗೆ ಉತ್ತರ ದೊರಕಿಸುವುದು ಎಸ್.ಟಿ.ಇ.ಐ. ಕಾರ್ಯಕ್ರಮದ ಮೂಲ ಉದ್ದೇಶಗಳು.

  ನಾವು ಒಬ್ಬಂಟಿಗರೇ???

ಈ ಬ್ರಹ್ಮಾಂಡ ಅಪಾರ,ಅನಂತ.ಇಲ್ಲಿ ಹಲವಾರು ಶತಕೋಟಿ ನಕ್ಷತ್ರಗಳಿವೆ ದಶಕೋಟಿಗಟ್ಟಲೇ ಗ್ರಹವ್ಯೂಹಗಳಿವೆ(ಸೂರ್ಯನೆಂಬ ನಕ್ಷತ್ರದ ಸುತ್ತ ಗ್ರಹಗಳಿರುವಂತೆ,ಬೇರೆ ಬೇರೆ ನಕ್ಷತ್ರಗಳಿಗೆ ತಮ್ಮದೇ ಆದ ಗ್ರಹಗಳ ವ್ಯೂಹವಿದೆ).

 ನಮ್ಮ ಭೂಮಿ ಇರುವ ಕ್ಷೀರಪಥದಲ್ಲಿಯೇ ನೂರು ಶತಕೋಟಿ ನಕ್ಷತ್ರಗಳಿವೆ.ಅಂದ ಮೇಲೆ ಇಡೀ ಬ್ರಹ್ಮಾಂಡದ ನಕ್ಷತ್ರ,ಗ್ರಹಗಳ ಸಂಖ್ಯೆ ನಮ್ಮ ಎಣಿಕೆಗೆ ಮೀರಿದ್ದು ಎಂದರೆ ಅತಿಶಯೋಕ್ತಿತಯಾಗಲಾರದು.ಹೀಗಿರುವಾಗ ನಮ್ಮ ಭೂಮಿಯಲ್ಲಿ ಮಾತ್ರವೇ ಜೀವ ಉಗಮವಾಗಿ ವಿಕಾಸ ಹೊಂದಿದೆಯೇ?ಬೇರೆಲ್ಲಿಯೂ ಇಲ್ಲವೇ? ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.

ನಮ್ಮ ಈ ಭೂಮಿಯೊಂದೇ ಜೀವಿಗಳ ಉಗಮಕ್ಕೆ ಪ್ರಾಶಸ್ತ್ಯವಾದದ್ದು ಎಂದು ಹೇಳುವುದು ತರ್ಕಬದ್ಧವಾಗಲಾರದು.ಇದಕ್ಕೆ ಹಲವಾರು ಕಾರಣಗಳಿವೆ.ನಮ್ಮ ಭೂಗ್ರಹದಲ್ಲಿ ಅನ್ವಯವಾಗುವ ರಾಸಾಯನಿಕ ಮತ್ತು ಭೌತಿಕ ನಿಯಮಗಳೇ ವಿಶ್ವದ ಇತರ ಗ್ರಹ ಹಾಗೂ ನಕ್ಷತ್ರಗಳಲ್ಲಿಯೂ ಅನ್ವಯವಾಗುತ್ತವೆ.ಆದ್ದರಿಂದ ಈ ನಿಯಮಗಳಿಗೆ ಅನುಸಾರವಾಗಿ ಭೂಮಿಯಲ್ಲಿ ಜೀವಿಗಳು ಉಗಮವಾಗಿರಬೇಕಾದರೆ,ಇತರೆಡೆ ಯಾಕಾಗಿರಬಾರದು?ನಮ್ಮಲ್ಲಿ ಜೀವಿಗಳು ಉಗಮವಾಗಲು ಇಂಗಾಲ,ಸಾರಜನಕ ಮತ್ತು ರಂಜಕಗಳಂತಹ ಧಾತುಗಳು ಮೂಲಾಧಾರ ವಸ್ತುಗಳಾಗಿವೆ.ಆದರೆ,ಇತರ ಬೇರೆ ಬೇರೆ ರಾಸಾಯನಿಕಗಳಿಂದಲೂ ಜೀವಿಗಳ ಉಗಮ ಅಸಂಭವವೇನಲ್ಲಾ. ಭೂಮಿಯಲ್ಲಿ ಜೀವ ಉಗಮವು,ಇಂತಹ ರಾಸಾಯನಿಕಗಳ ಯಾದ್ರಾಚ್ಛಿಕ ಘಟನೆಯನ್ನು ವಿವರಿಸಲು ಒಂದು ಹೋಲಿಕೆಯನ್ನು ನೀಡಬಹುದು.ನೀವು ಟೈಪ್ ರೈಟರ್ ಒಂದರ ಮೇಲೆ ನಿಮ್ಮ ಮನಸ್ಸಿಗೆ ತೋಚಿದಂತೆ ಬೆರಳೊತ್ತುತ್ತಿದ್ದೀರಿ ಎಂದು ಊಹಿಸಿಕೊಳ್ಳಿ.ಆಗ ಮೂಡುವ ಬೆರಳಚ್ಚು ಅಸಂಬದ್ಧ ಹಾಗೂ ಅವ್ಯವಸ್ಥಿತವಾಗಿದ್ದು ಅರ್ಥರಹಿತವಾಗಿರುತ್ತವೆ.ಆದರೆ ಹೀಗೆಯೇ ನೀವು ಬೆರಳಚ್ಚನ್ನು ಮೂಡಿಸುತ್ತ ಹೋದರೆ ಒಂದಲ್ಲ ಒಂದುಸಾರಿ ಅರ್ಥ ಪೂರ್ಣ ವಾಕ್ಯವೊಂದು ಮೂಡುವುದು ಅಸಾಧ್ಯವೇನಲ್ಲ.ಅದೇ ರೀತಿ ಭೂಮಿಯಲ್ಲಿಯೂ ಜೀವ ಉಗಮಕ್ಕೆ ಮೊದಲು ಯಾದ್ರಾಚ್ಛಿಕವಾಗಿ ಭೌತಿಕ ಮತ್ತು ರಾಸಾಯನಿಕ ಕ್ರಿಯೆ/ಘಟನೆಗಳು ನಡೆದು ಕೊನೆಗೊಮ್ಮೆ ಜೀವಿಗಳು ಉದ್ಭವಿಸಿವೆ. ಬ್ರಹ್ಮಾಂಡದ ಹಲವಾರು ಗ್ರಹಗಳಲ್ಲಿ ಈ ರೀತಿ ಯಾದ್ರಾಚ್ಛಿಕ ಘಟನೆಗಳಿಂದ ಜೀವ ಉಗಮದ ಸಂಭವನೀಯತೆ ಖಂಡಿತ ಇದೆ.ಹಲವು ಗ್ರಹಗಳಲ್ಲಿ ಇದೀಗ ತಾನೆ ಜೀವ ಉಗಮದ ಆರಂಭದ ಕ್ಷಣಗಳಿರಬಹುದು.ಇನ್ನು ಕೆಲವದರಲ್ಲಿ ಜೀವ ಉಗಮವಾಗಿ,ವಿಕಾಸ ಹೊಂದಿರಬಹುದು ಹಾಗೂ ತಾಂತ್ರಿಕತೆ ನಮ್ಮಷ್ಟೇ ಅಥವಾ ನಮಗಿಂತಲೂ ಮುಂದಿರಬಹುದು...

               **********************************************