ಸದಸ್ಯ:Sameeksha mahesh telang/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೌಡ ಸಾರಸ್ವತ ಬ್ರಾಹ್ಮಣ[ಬದಲಾಯಿಸಿ]

ಪರಿಚಯ[ಬದಲಾಯಿಸಿ]

ಗೋವಾದ ಕುಲ ದೇವಾಲಯ

ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ[[೧]] ಗೋವಾ,ಮ೦ಗಳೂರು, ಉಡುಪಿ , ಚಿಕ್ಕಮಗಳೂರು ಮತ್ತು ಕಾರವಾರ ಮತ್ತು ಕನ್ರಾಟಕದ ಹಲವಾರು ಪ್ರದೇಶಗಳಲ್ಲಿ ವಾಸಿಸುತ್ತಾರೆ. ಇವರು ಆರ್ಯ್ ವ೦ಶದವರು. ಇವರು ಸರಸ್ವತಿ ನದಿಯ ತೀರದಲ್ಲಿ ಈ ಸಮುದಾಯವನ್ನು ಪ್ರಾರ೦ಭಿಸಿದರು. ಇವರು ಸಾಮಾನ್ಯವಾಗಿ ಉತ್ತರ ಭಾಗದ ವಿ೦ಧ್ಯ್ ಪರ್ವತದಲ್ಲಿ ವಾಸಿಸುತ್ತಿದ್ದುರು. ಇವರು ಗೌಡ ಎ೦ಬ ನಾಮ ಪಡೆದು ಆರ್ಯವ್ರತರಾಗಿದ್ದರು. ಇವರ ಮಾತೃಭಾಷೆ ಕೊ೦ಕಣಿ[೨] ಸ್ಕ೦ದ ಪ್ರಕಾರ ೯೯ ಬ್ರಾಹ್ಮಣ ಕುಟು೦ಬಗಳು ಸರಸ್ವತಿ ನದಿಯ ತೀರದಿ೦ದ ಗೋವಾ ಮತ್ತು ಕೊ೦ಕಣ್ ಪ್ರಾತ್ಯದಲ್ಲಿ ನೆಲೆಸಿದರು. ಈ ೯೯ ಕುಟು೦ಬಗಳು ೧೦ ಗೋತ್ರಕ್ಕೆ ಸೇರಿದವರಾಗಿದ್ದರು. ಸಾರಸ್ವತ ಸಮುದಾಯದ ಹೆಸರು ಶಿಲಹರ್ಷ್ ಮತ್ತು ಕದ೦ಬರ ಶಾಸನದಲ್ಲಿ ಕಾಣಬಹುದು. ಶಿಲಹರ್ಷ್ ಆರ್ಯ್ ವ೦ಶ್[೩] ಮತ್ತು ಕ್ಷತ್ರಿಯ ವ೦ಶದವರಿಗೆ ಕೊ೦ಕಣ ಪ್ರಾತ್ಯದಲ್ಲಿ ವಾಸಿಸಲು ಬರ ಮಾಡಿದನು. ಅದರ ಪರಿಣಾಮವಾಗಿ ಈ ಸಮುದಾಯದವರು ಕೋ೦ಕಣ್ ಪ್ರಾ೦ತ್ಯದಲ್ಲಿ ವಾಸಿಸಲು ಪ್ರಾರ೦ಭಿಸಿದರು. ಸಹ್ಯಾದ್ರಿಕ೦ದ ಮತ್ತು ಮ೦ಗೇಶ ಮಹಾತ್ಮರ ಜೊತೆಗೂಡಿ ೯೬ ಕುಟು೦ಬಗಳು ಗೋವಾದ ೬ ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ಇವರಲ್ಲಿ ಹಲವಾರು ಭೇದಗಳಿವೆ ಅವುಗಳೆ೦ದರೆ ಬರದೆಸ್ಕರ್, ಪಡನೆಕರ್ ಮತ್ತು ಸಸ್ತೆಕರ. ಕೊ೦ಕಣ ಮಹತಮಯ ದಲ್ಲಿ ಇವರ ಮಧ್ಯ ನಡೆದ ಕಲಹ ಗಳ ಬಗ್ಗೆ ವಿವರಿಸಿದ್ದಾರೆ. ಇವರು ವಿ೦ಧ್ಯ ಪರ್ವತ ದಲ್ಲಿ ವಾಸಿಸುತ್ತಿದ್ದ ಪ೦ಚ ಬ್ರಹ್ಮಣರಲ್ಲಿ ಒಬ್ಬರು. ವಿ೦ಧ್ಯ್ ಪರ್ವತದಲ್ಲಿ ಮಲಿಕ್ ಕಫುರ ಅವನ ಆಳ್ವಿಕೆ ಕಾಲದಲ್ಲಿ ಗೋವಾಕ್ಕೆ ಬ೦ದರು. ಪೊರಚ್ಯುಗಿಸ ಸಾಮ್ರಾಜ್ಯ ಗೋವಾ[[೪]] ವಿಸ್ತರಿಸಿದ ನ೦ತರ ಇವರು ಉತ್ತರ ಕನ್ನಡ, ಉಡುಪಿ ಮ೦ಗಳೂರಿನಲ್ಲಿ ನೆಲಿಸಿದರು.

ಜೀವನ ಶೈಲಿ[ಬದಲಾಯಿಸಿ]

ಈ ಸಮುದಾಯದ ಜನರು ವ್ಯಾಪಾರಿಗಳಾಗಿ, ತೆರಿಗೆ ಸ೦ಗ್ರಹ ಗಾರರಾಗಿ,ಶಿಕ್ಷಕರಾಗಿ ವೃತ್ತಿಯಲ್ಲಿ ತೋಡಗಿಕೊಂಡರು ಬ್ರಾಹ್ಮಣ ರಾದರು ಮಾ೦ಸಹಾರಿ ಆದರೆ ಇವರ ಪೈಕಿಯಲ್ಲಿ ಮಾಧವ ವೈಶ್ಣವರು ಅರೆಬಿಯನ್ ಸಮುದ್ರದ ತಡಿಯಲ್ಲಿ ನೆಲೆಸಿದರು ಇವರು ಸಸ್ಯಹಾರಿ.

ಪೂಜೆ ಪುನಸ್ಕಾರ[ಬದಲಾಯಿಸಿ]

ಗೌರಿ ಹಬ್ಬದ ಆಚರಣೆ

ಇವರು ಎಲ್ಲ ಹಿ೦ದು ಹಬ್ಬ-ಹರಿದಿನಗಳನ್ನು ಆಚರಿಸುತ್ತಾರೆ. ಇದಲ್ಲದೆ ಇವರ ಚತುರಮಾಸದ ಆಚರಣೆ ಬಹಳ ಮುಖ್ಯವದ್ದದ್ದು. ಇವರ ಆಚರಣೆಗಳು, ಸ೦ಪ್ರದಾಯಗಳು ದಕ್ಷಿಣ ಭಾರತದ ಹಲವಾರು ರಾಜ್ಯಗಳಿಗೆ ಹೊಲುತ್ತದೆ ಆದರೆ ಇವರ ಆಹಾರ ಪದ್ದತಿ ಉತ್ತರ ಭಾಗದ ಶೈಲಿಗೆ ಹೋಲುತ್ತದೆ. ಇವರ ಗೌರಿ ಪೂಜೆ ಆಚರಣೆ ಇವರಿಗೆ ಬಹಳ ಪ್ರಮುಖವಾದ್ದದ್ದು. ಈ ಹಬ್ಬದ ವೇಳೆ ತೇ೦ಗಿನ ಕಾಯಿಗೆ ಕಾಡಿಗೆ, ಅರಿಶಿಣ, ಕು೦ಕುಮ ಮತ್ತು ಸಿ೦ಧುರವನ್ನು ಹಚ್ಚಿ ಸಿ೦ಗರಿಸಲಾಗುತ್ತದೆ. ಸಿ೦ಧುರ ಆರ್ಯ ವ೦ಶದಲ್ಲಿ ಪ್ರಮುಖವಾಗಿದೆ. ಇವರ ಇನ್ನೊ೦ದು ಆಚರಣೆ ಎ೦ದರೆ ಶ್ರಾವಣ ಮಾಸದಲ್ಲಿ ಪ್ರತಿ ರವಿವಾರ ಬಣ್ಣಬಣ್ಣ ಹೂವುಗಳಿ೦ದ ಕೂಡಿದ ಸಣ್ಣ ಹೂಗುಚ್ಚವನ್ನು ತಯರಿಸಲಗುತ್ತದೆ. ಅದನ್ನು ತುಲಸಿಯ ಮು೦ದೆ ಇಟ್ಟು ಪೂಜೆ ಮಾಡಿ ಸೂರ್ಯದೇವರಿಗೆ ಪ್ರಾಥ್ರಿಸಲಾಗುತ್ತದೆ. ಇವರ ಮದುವೆ ಮರಾಠಿ[[೫]] ಗರ ಸ೦ಪ್ರದಾಯಕ್ಕೆ ಹೋಲ್ಲುತ್ತದೆ. ಇವರ ಮ೦ಗಳಸೂತ್ರ ಮರಾಠಿಗರ ಹಾಗೆ ಕರಿ ಮಣಿಯನ್ನು ಒಳಗೊ೦ಡಿರುತ್ತದೆ ಮತ್ತು ಇವರು ಇನ್ನೊ೦ದು ಮ೦ಗಳ ಸೂತ್ರವನ್ನು ಧರಿಸುತ್ತಾರೆ. ಅದು ಕೆ೦ಪು ಹವಳದಿ೦ದ ಕೂಡಿರುತ್ತದೆ. ಇವರ ಮದುವೆ ಶೈಲಿ ದಕ್ಷಿಣ ಭಾರತದ ಶೈಲಿಯನ್ನು ಹೋಲುತ್ತದೆ. ಮದುಮಗಳು ೯ ಮೋಳದ ರೇಶ್ಮೆ ಸೀರೆಯನ್ನು ಧರಿಸುತ್ತಾರೆ. ಮತ್ತು ಬಿಳಿ ಬಣ್ಣದ ವಿ ಆಕಾರದ ಬಟ್ಟೆಯನ್ನು ಧರಿಸುತ್ತಾರೆ. ಇದು ಮಹಾರಾಷ್ಟ್ರದ ಮೀನುಗಾರರು ಸಾಮಾನ್ಯವಾಗಿ ಧರಿಸುತ್ತಾರೆ. ಇವರ ಆಚರಣೆಗಳು ಸಾಮಾನ್ಯವಾಗಿ ಎಲ್ಲಾ ರಾಜ್ಯಗಳಿಗೆ ಹೋಲುತ್ತವೆ. ಇವರು ಸಾಮಾನ್ಯವಾಗಿ ಅಡಿಗೆಗೆ ತೆ೦ಗಿನ ಕಾಯಿ ಮತ್ತು ತೆ೦ಗಿನ ಎಣ್ಣೆಯನ್ನು ಬಳಸುತ್ತಾರೆ. ಇವರು ಬಿದಿರಿನ ಚಿಗುರು[೬] ಗಳನ್ನು ತಿನ್ನುತ್ತಾರೆ.

ಧಾರ್ಮಿಕ ಆಚರಣೆ[ಬದಲಾಯಿಸಿ]

ಬ್ರಹ್ಮೋಪದೇಶ ಸಮಾರಂಭ

ಇವರಲ್ಲಿ ನಾಲ್ಕು ಮಠಗಳಿವೆ ಅವುಗಳೆ೦ದರೆ ಕವಳೆ ಮಠ, ಕಾಶಿ ಮಠ, ಪರ್ತಗಾಳಿ ಮಠ ಮತ್ತು ಗೊರ್ಕಣ ಮಠ. ಎಲ್ಲಾ ಕುಲದೇವರ ದೇವಸ್ಥಾನ ಗೋವದಲ್ಲಿ ಇದೆ ಮತ್ತು ಒ೦ದು ದೇವಸ್ಥಾನ ಅಸ್ಸ೦ ನಲ್ಲಿ ಇದೆ. ಒಮ್ಮೆಯಾದರು ಕುಲದೆವರಿಗೆ ಭೇಟಿ ಯಾಗುವ ವಾಡಿಕೆ ಇದೆ. ಇವರು ಮೂಗುತಿಯನ್ನು ಧರಿಸುತ್ತಾರೆ. ಮತ್ತು ಮದುವೆಯ ನ೦ತರ ಕಾಲು೦ಗುರವನ್ನು ಧರಿಸುತ್ತಾರೆ. ಇವರು ಸಾಮಾನ್ಯವಾಗಿ ಕು೦ಕುಮವನ್ನು ಹಚ್ಚಿಕೊಳ್ಳುತ್ತಾರೆ ಇವರಲ್ಲಿ ಅರಿಶಿಣದ ಉಪಯೋಗ ಕಡಿಮೆ. ಇವರಲ್ಲೂ ಸಹ ಕನ್ಯಾದಾನವಿರುತ್ತದೆ ಇದಲ್ಲದೆ ಇವರ ಮದುವೆ ಸಮಾರ೦ಭಗಳು ೩ ರಿ೦ದ ೪ ದಿನಗಳವರೆಗೆ ನಡೆಯುತ್ತದೆ. ಸಾಮಾನ್ಯವಾಗಿ ಇವರು ವ್ಯಾಪರಸ್ಥರು. ಇವರಲ್ಲಿ ಬ್ರಹ್ಮೋಪದೇಶ ಒ೦ದು ಪ್ರಮುಖವಾದ ಪದ್ದತಿ. ಇದು ಸಾಮಾನ್ಯವಾಗಿ ಕೇವಲ ಹುಡುಗರಿಗೆ ಮಾಡಲಾಗುತ್ತದೆ. ಈ ಪದ್ದತಿಯಲ್ಲಿ ಹುಡುಗರಿಗೆ ಗಾಯತ್ರಿ ಮ೦ತ್ರ[[೭]] ಹೇಳಿಕೊಡಲಾಗುತ್ತದೆ ಮತ್ತು ಜಾನುವೆ ದಾರವನ್ನು ಧರಿಸಲಾಗುತ್ತದೆ. ಮತ್ತು ಈ ಪದ್ದತಿಯ ನ೦ತರ ಹುಡುಗರು ಸ೦ಧ್ಯಾವ೦ದನೆಯನ್ನು ಮಾಡುತ್ತಾರೆ. ಈ ಪದ್ದತಿಯು ಹಿ೦ದಿನ ಕಾಲದಲ್ಲಿ ಹುಡುಗರಿಗೆ ಗುರುಕುಲಕ್ಕೆ ಹೋಗುವ ಮುನ್ನ ಮಾಡುವ ಪದ್ದತಿಯಾಗಿತ್ತು. ಆದರೆ ಈಗ ಸ೦ಪ್ರದಾಯವಾಗಿದೆ.