ಸದಸ್ಯ:Samana r upadhyaya/sandbox
ನಮಸ್ಕಾರಗಳು . ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ ಸಿ ಕಲಿಯುತ್ತಿರುವ ವಿಧ್ಯರ್ಥಿನಿ ಸಮನಾ ಉಪಾಧ್ಯಾಯ. ೨೨ ಜೂನ್ ೧೯೯೭ ರಲ್ಲಿ ಡಾ.ರಾಮದಾಸ ಉಪಾಧ್ಯಾಯ ಹಾಗು ಶ್ರೀಮತಿ ಚಂದ್ರಿಕಾ ದಂಪತಿಗಳ ಹಿರಿಯ ಸುಪುತ್ರಿಯಾಗಿ ಜನಿಸಿದ್ದೇ ನೆ. ನನ್ನ ತಂಗಿ ಆರನೇಯ ತರಗತಿಯಲ್ಲಿ ಕಲಿಯುತ್ತಿದ್ದಾಳೆ.ನನ್ನ ತಾಯೀ ಇಂಗ್ಲೀಶ್ ಶಿಕ್ಷಕಿ ತಂದೆ ಡಾಕ್ಟರ್ ಆದ ಕಾರಣವೊ ಎನೊ ಅರಿಯೆನು.. ಆದರೆ ನನಗೆ ಎಂದೆಂದಿನಿಂದಲೂ ವಿಜ್ನಾನ ಹಾಗು ಸಾಹಿತ್ಯ ಅಚ್ಚು ಮೆಚ್ಛಿನ ವಿಷಯಗಳಾಗಿವೆ. ಮಹಾನ್ ಕವಿಯಾದ ದ.ರಾ ಬೇಂದ್ರೆಯವರ ಹೌಟ್ಟೂರಾದ ಧಾರವಾಡದ ಪಕ್ಕದ ಊರು ಹುಬ್ಬಲ್ಳ್ಳೀಯೇ ನನ್ನ ಹುಟ್ಟೂರು.ನನ್ನ ಪ್ರಾಥಮಿಕ ವಿಧ್ಯಾಭ್ಯಾಸ ಹುಬ್ಬಳ್ಳೀಯ ಪ್ರಸಿದ್ಧ ಶಾಲೆ ವಿ .ಎಸ್ ಪಿಳ್ಳೇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು ಮುಂದೆ ನಿರ್ಮಲಾ ಠಕ್ಕರ್ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಶಣ ಮುಗಿಸಿದೆನು. ಎಸ್ ಎಸ್ ಎಲ್ ಸಿ ಯಲ್ಲಿ ೯೪ % ಪಡೆದು ವಿಜ್ಞಾನ ಆಯ್ದುಕೊಂಡು ವಿಧ್ಯಾನಿಕೆತನ ಕಾಲೇಜಿನಲ್ಲಿ ಪಿ ಯು ಸಿ ಮುಗಿಸಿದೆನು. ಪಿ ಯು ಸಿ ಮುಗಿದ ನಂತರ ವೈದ್ಯಕೀಯ ಕ್ಷೇತ್ರಕ್ಕೆ ಹೋಗುವುದೋ ಏನು ಮಾಡುವುದು ಎಂದು ಸಂದಿಗ್ಧತೆಗೆ ಒಳಗಾಗಿದ್ದೆ. ಆಗ ನನಗೆ ಮೆಚ್ಚಿನ ಎರಡು ವಿಷಯಗಳಾದ ರಾಸಾಯನ ಶಾಸ್ತ್ರ ಹಾಗು ಜೀವ ಶಾಸ್ತ್ರಗಳನ್ನು ಒಳಗೊಂಡ ವಿಷಯ ಜೀವ ರಾಸಾಯನ ಶಾಸ್ತ್ರವನ್ನು ಆಯ್ದುಕೊಂಡು ಈಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಜೀವ ರಾಸಾಯನ ಶಾಸ್ತ್ರ,ಜೀವ ಶಾಸ್ತ್ರ, ಹಾಗೂ ರಾಸಾಯನ ಶಾಸ್ತ್ರವನ್ನು ಆಯ್ದುಕೊಂಡು ಅತ್ಯಂತ ಆಸಕ್ತಿಯಿಂದ ಕಲಿಯುತ್ತಿದ್ದೇನೆ. ನನ್ನ ಪ್ರೌಢಶಾಲಾ ದಿನಗಳಲ್ಲಿ ನಾನು ವಿಜ್ಞಾನ ಮಾದರಿ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದೆ ಈಘಗಲೂ ಬಿಡುವಿನ ಸಮಯದಲ್ಲಿ ಯಾವುದಾದರೊಂದು ಮಾದರಿಯ ಮೇಲೆ ಎಲಸ ಮಾಡುತ್ತಿರಿತ್ತೇನೆ. ಮುಂದೆ ಒಂದು ದಿನ ವಿಜ್ಞಾನಿ ಹಾಗು ಶಿಕ್ಷಕಿ ಆಗುವ ಕನಸು ಇಟ್ಟುಕೊಂಡಿದ್ದೇನೆ. ನನ್ನ ಕನಸು ನನಸಾಗಲೆಂದು ಗುರು ಹಿರಿಯರ ಆಶೀರ್ವಾದ ಅಪೇಕ್ಷಿಸುತ್ತ ಸದಾಕಾಲ ಶ್ರಮಿಸುತ್ತೇನೆ, ನನ್ನ ಗುರಿಯನ್ನು ತಲುಪುತ್ತೇನೆ... .
ಕೆಂಪು ರಕ್ತ ಕಣಗಳು
[ಬದಲಾಯಿಸಿ]ನಮ್ಮ ರಕ್ತ ಕೆಂಪು ಆಗಿರಲು ಕಾರಣ ಅದರಲ್ಲಿ ಇರುವ ಕೆಂಪು ರಕ್ತ ಕಣಗಳು. ಆಮ್ಲ ಜನಕವನ್ನು ದೇಹದ ಎಲ್ಲಾ ಭಾಗಕ್ಕೂ ವಿತರಿಸುವ ಕಾರ್ಯ, ಹಾಗು ಇಂಗಾಲದ ಡೈಆಕ್ಸೈಡನ್ನು ಶ್ವಾಸಕೋಶಕ್ಕೆ ತಲುಪಿಸುವ ಕೆಲಸ ಈ ಕಣಗಳು ಮಾಡುತ್ತವೆ, ಹೀಮೋಗ್ಲೋಬಿನ್ ಎನ್ನುವ ಪ್ರೋಟೀನ್ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸ್ತನಿಗಳಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳಲ್ಲಿ ಕೋಶ ಕೇಂದ್ರ ಇರುವುದಿಲ್ಲ, ಆದರೆ ಒಂಟೆಯ ಕೆಂಪು ರಕ್ತ ಕಣಗಳಲ್ಲಿ ಮಾತ್ರ ಕೋಶ ಕೇಂದ್ರ ಕಂಡು ಬರುತ್ತದೆ. ರತಕ್ತದಲ್ಲಿ ಶೆಖಡಾ 20–30 ಟ್ರಿಲಿಯನ್ ಕೆಂಪು ರಕ್ತ ಕಣಗಳು ಇರಿತ್ತವೆ.
ಮೂಳೆ ಮಜ್ಜೆಯಲ್ಲಿ ಇವುಗಳ ಉತ್ಪಾದನೆ ಆಗುತ್ತದೆ. ಒಂದು ಸೆಕೆಂಡಿನಲ್ಲಿ ೨ ಮಿಲಿಯನ್ ಕೆಂಪು ರಕ್ತ ಕಣಗಳು ಉತ್ಪಾದನೆ ಆಗುತ್ತದೆ.ಈ ಕಾರ್ಯವನ್ನು ಎರಿಥ್ರೊಪೊಎಟಿನ್ ಎಂಬ ಹಾರ್ಮೊನ್ ನಿಯಂತ್ರಿಸುತ್ತದೆ.ಮೂತ್ರಪಿಂಡದಲ್ಲಿ ಇರುವ ಜಕ್ಸ್ಟಾ ಗ್ಲೋಮೆರ್ಯುಲಾರ್ ಜೀವ ಕೊಶಗಳು ಆಮ್ಲ ಜನಕದ ಕೊರತೆಯ ಪ್ರತಿಕ್ರಿಯೆಯಾಗಿ ಎರಿಥ್ರೊಪೊಎಟಿನ್ ತಯಾರಿಸಊತ್ತವೆ.ಇದಲ್ಲದೆ ಕೆಂಪು ರಕ್ತ ಕಣಗಳ ಉತ್ಪಾದನೆಗೆ ವಿಟಮಿನ್ ಬೀ೧೨,ಫೋಲೇಟ್ ಹಾಗು ಕಬ್ಬಿಣದ ಅಂಶವು ಬೇಕಾಗಿತ್ತದೆ. ಈ ಕಣಗಳ ಜೀವಾವಧಿ ೧೨೦ ದಿನಗಳು.ನಂತರ ಇವು ತಮ್ಮ ಜೀವಕೋಶದ ಪೊರೆಗಳನ್ನು ಕಳೆದುಕೊಳ್ಳುತ್ತದೆ.ಇದನ್ನು ಪ್ಲೀಹ, ಪಿತ್ತಕೋಶ ಮತ್ತು ಮೂಳೆ ಮಜ್ಜೆಯ ಕೋಶಗಳು ಸಂಛಲನದಿಂದ ಹೊರ ತೆಗೆಯುತ್ತದೆ. ಕೆಂಪು ರಕ್ತ ಕಣಗಳಲ್ಲಿ ಇರುವ ಹೀಮೋಗ್ಲೋಬಿನನ್ನು ಮೂತ್ರ ಪಿಂಡದ ಹೀಮ್ ಆಕ್ಸಿಜಿನೇಸ್ ವ್ಯವಸ್ಥೆಯ ಮೂಲಕ ಆಗುತ್ತದೆ.ಕೆಂಪು ರಕ್ತ ಕಣಗಳಲ್ಲಿ ಇರುವ ಕಬ್ಬಿಣದ ಮರುಹೀರಿಕೆ,ಹೀಮ್ ನಿಂದ ಬಿಲಿರುಬಿನ್ ತಯಾರಿಕೆ, ಹಾಗು ಇತರ ಪ್ರೋಟೀನ್ಗಳ ಮರುಹೆರಿಕೆಯನ್ನು ಕಾಣಬಹುದು.ಆನುವಂಶಿಕ ಕಾರಣಗಳಿಂದಲೋ, ಪೌಷ್ಟಿಕಾಶಗಳಾ ಕೊರತೆ ಇಂದಲೋ, ಅಥವಾ ಮತ್ತಿತರ ಕಾರಣಗಳಿಂದಲೋ ಕೆಂಪು ರಕ್ತ ಕಣಗಳು ಕಮ್ಮಿ ಆದರೆ ಸ್ಥಿತಿಯನ್ನು ರಕ್ತಹೀನತೆ ಅಥವಾ ಎನೀಮಿಯಾ ಎನ್ನುತ್ತರೆ.
ಉಲ್ಲೇಖ
[ಬದಲಾಯಿಸಿ]
ಯಕೃತ್ತು
[ಬದಲಾಯಿಸಿ]ಯಕೃತ್ತು ಮಾನವನ ದೆಹದ ಅತ್ಯಂತ ದೊಡ್ಡ ಗ್ರಂಥಿ. ಇದರ ತೂಕ ಸುಮಾರು ೧.೪ ಕಿಲೋಗ್ರಾಂ. ಕೆಂಪು ಕಂದು ಬಣ್ಣದ ಈ ಗ್ರಂಥಿ ಧ್ವನಿಫಲಕದ ಕೆಳಗೆನೆಲೆಗೊಂಡಿದೆ. ಇದರಲ್ಲಿ ನಾಲ್ಕು ಅಂಗರಚನಾ ಹಾಲೆಗಳು ಇವೆ. ಬಲ,ಎಡ,ಕ್ವಾಡ್ರೇಟ್ ಹಾಗು ಕಾಡೇಟ್ ಹಾಲೆಗಳು. ಯಕೃತ್ತೈನ ಪಕ್ಕದಲ್ಲಿಯೆ ಪಿತ್ತಕೋಶ ಇದೆ, ಇದು ಯಕೃತ್ತು ತಯಾರಿಸಿದ ಪಿತ್ತರಸವನ್ನು ಸಂಗ್ರಹಿಸುತ್ತದೆ. [೧]
ಮಾನವನ ದೆಹದಲ್ಲಿ ಕೋಶಗಳ ಪುನರುತ್ಪಾದನೆ ನಾವು ಯಕೃತ್ತೈನಲ್ಲಿ ಕಾಣಬಹುದು. ಯಕೃತ್ತಿನ ಯಾವುದಾದರು ಒನ್ದು ಸಣ್ಣ ಭಾಗವನ್ನು ತೆಗೆದರೆ ಉಳಿದ ಭಾಗಗಳೂ ಪುನಃ ಮೊದಲಿನ ಹಂತಕ್ಕೆ ಬೆಳೆಯುತ್ತದೆ. ಯಕೃತ್ತಿಗೆ ರಕ್ತದ ಪೂರೈಕೆ ಎರಡು ದಿಕ್ಕಿನಿಂದ ಆಗುತ್ತದೆ. ೧) ಯಕೃತ್ತಿನ ಅಪಧಮನಿ ೨)ಯಕೃತ್ತಿನ ಅಭಿಧಮನಿ. ಯಕೃತ್ತಿನ ಕಾರ್ಯಗಳು:೧) ಪಿತ್ತರಸದ ತಯಾರಿಕೆ: ಪಿತ್ತರಸದಲ್ಲಿ ಪಿತ್ತ ಲವಣಗಳು, ಪಿತ್ತ ವರ್ಣದ್ರವ್ಯಗಳು ,ಕೊಲೆಸ್ಟರಾಲ್,ಮ್ಯೂಸಿನ್, ಲೆಸಿಥಿನ್ ಇರುತ್ತದೆ. ಇದು ಕರುಳಿನ ಕೊಬ್ಬು ಹೀರಿಕೊಳ್ಳುವಿಕೆಯ ಕಾರ್ಯದಲ್ಲಿ ಪಾಲ್ಗೊಳ್ಳುತ್ತದೆ. ೨)ಪ್ಲಾಸ್ಮಾ ಪ್ರೊಟೀನ್ ಸಂಶ್ಲೇಷಣೆ:ಸೆರಂ ಆಲ್ಬುಮಿಂ, ಸೆರಮ್ ಗ್ಲೋಬಿನ್ ಆಹಾರದಿಂದ ಹೀರಲ್ಪಟ್ಟ ಅಮೈನೊ ಆಮ್ಲಗಳಿಂದ ತಯಾರಿಸಲಾಗುತ್ತದೆ.೨)ಹೆಪ್ಪುಗಟ್ಟುವಿಕೆಯ ಅಂಶಗಳ ಸಂಶ್ಲೇಷಣೆ: ಹೆಪ್ಪುಗಟ್ಟುವಿಕೆಗೆ ಬೇಕಾದ ಅಂಶಗಳಾದ ಫೈಬ್ರಿನೋಗೆನ್ ಪ್ರೊಥ್ರೋಮ್ಬಿನ್ ಹಾಗು ಹೆಪ್ಪುಗಟ್ಟುವಿಕೆಯ ಅಂಶ V,VII,IX,X ಯಕೃತ್ತಿನಲ್ಲಿ ಆಗುತ್ತದೆ.೩) ಸಂಗ್ರಹಿಕೆ:ಯಕೃತ್ತಿನಲ್ಲಿ ಗ್ಳೈಕೋಗೆನ್, ವಿಟಾಮಿನ್ A,B12,D,E,K, ಕಬ್ಬಿಣ,ತಾಮ್ರಗಳ ಸಂಗ್ರಹಿಕೆ ಆಗುತ್ತದೆ. ೩)ಯೂರಿಯಾ ಉತ್ಪಾದನೆ: ನಮ್ಮ ದೆಹಕ್ಕೆ ಅಮೈನೋ ಆಮ್ಲಗಳನ್ನು ಅಥವಾ ಅದರ ಚಯಾಪಚಯಗಲಳನ್ನು ಸಂಗ್ರಹಿಸುವ ಸಾಮರ್ಥ್ಯ ನಮ್ಮ ದೇಹಕ್ಕೆ ಇಲ್ಲ.ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಸಣ್ಣ ಕರುಳಿನಿಂದ ಯಕೃತ್ತಿಗೆ ಸಾಗಿಸಲಾಗುತ್ತದೆ. ಅಮೈನೋ ಆಮ್ಲಗಲಳು ಉತ್ಕರ್ಷಣಗೊಳ್ಳುತ್ತವೆ ಅದೇ ಸಮಯದಲ್ಲಿ ಅಮೈನ್ ಗುಂಪುಗಳನ್ನು , -NH2 , ಮತ್ತು ಒಂದು ಜಲಜನಕ ಅಮೈನೊ ಆಮ್ಲದ ಮುಖ್ಯ ರಚನೆಯಿಂದ ತೆಗೆಯಲಾಗುತ್ತದೆ 2NH2CHRCOOH + O2 --> 2CROCOOH + 2NH3
ಹೀಗೆ ತಯಾರಿಸಲ್ಪಟ್ಟ ಅಮೋನಿಯಾ ಕಿಣ್ವ ಹಾಗೂ ವೇಗವರ್ಧಕಗಳ ಸಹಾಯದಿಂದ ಇಂಗಾಲದ ಡೈಆಕ್ಸೈಡ್ ನೊಂದಿಗೆ ಪ್ರತಿಕ್ರಯಿಸಿ ನೀರು ಹಾಗು ಯುರಿಯಾ ತಯಾರಿಕೆ ಆಗುತ್ತದೆ.
CO2 + 2NH3 --> (NH2)2CO + H2O
ಈ ಕ್ರಿಯೆಗೆ ಒರ್ನಿತೈನ್ ಸೈಕಲ್ ಎನ್ನಲಾಗುತ್ತದೆ. ಯೂರಿಯಾ ಮತ್ತು ನೀರು ನೇರವಾಗಿ ರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತದೆ.ಇದು ಮೂತ್ರ ಪಿಂಡದಲ್ಲಿ ಫಿಲ್ಟರ್ ಆಗಿ ಮೂತ್ರದ ಮೂಲಕ ದೇಹದಿಂದ ರವಾನಿಸಲಾಗುತ್ತದೆ.