ಸದಸ್ಯ:Saifulla5696/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮಿಡಿಯಾ ಮಾಸ್ಟರ್ಸ್ ಒಂದು ವಿಡಿಯೋ ನಿರ್ಮಾಣ ಸಂಸ್ಥೆ. ಹಲವಾರು ಪತ್ರಿಕೆಗಳು ಹಾಗೂ ಕನ್ನಡದ ಹೆಸರಾಂತ ಟಿವಿ ಚಾನೆಲ್ TV9 ಸೇರಿದಂತೆ ಸಾಕಷ್ಟು ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ ಪತ್ರಕರ್ತ ಎಂ.ಎಸ್ ರಾಘವೇಂದ್ರ ಹಾಗೂ ಸಹವರ್ತಿಗಳು ಸೇರಿ ನಿರ್ಮಾಣ ಮಾಡಿಕೊಂಡಿರೋ ಸಂಸ್ತೆ ಮಿಡಿಯಾ ಮಾಸ್ಟರ್ಸ್. ಈ ಸಂಸ್ಥೆ ಎರಡು ಯೂ ಟ್ಯೂಬ್ ಚಾನೆಲ್ ಗಳನ್ನ ಹೊಂದಿದೆ. https://www.youtube.com/channel/UChYmSuQtdcVimTk7jmpq5rgಒಂದು ವೆಬ್ ಪೋರ್ಟಲ್ ಕೂಡಾ ಇದೆ.

https://www.youtube.com/channel/UChYmSuQtdcVimTk7jmpq5rgಮಿಡಿಯಾ ಮಾಸ್ಟರ್ಸ್ ಇತಿಹಾಸ ವಿಜ್ಞಾನ ಭಾರತೀಯ ಪುರಾಣಗಳು ಆಚರಣೆಗಳು ಹಾಗೂ ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಗಳನ್ನ ಬರೆಯುವ ಆಕಾಂಕ್ಷಿಗಳಿಗೆ ಅನುಕೂಲವಾಗುವಂತೆ ವಿಡಿಯೋಗಳನ್ನ you tube ನಲ್ಲಿ ಬಿತ್ತರಿಸುತ್ತಿದೆ. ಅವರ ಮತ್ತೊಂದು ಚಾನೆಲ್ The Reporter https://www.youtube.com/channel/UC3iPRujS_NCJQqJVfdtktKg ಸುದ್ದಿ ಆಧಾರಿತ ವಿಶ್ಲೇಷಣೆಗಳನ್ನ ಹಾಗೂ ಪ್ರಸಕ್ತ ವಿದ್ಯನಮಾನಗಳನ್ನ ಕನ್ನಡಿಗರಿಗೆ ಒದಗಿಸುತ್ತಿದೆ. ಸಾಮಾನ್ಯವಾಗಿ ಕನ್ನಡದಲ್ಲಿ ಯಾರೂ ಕೊಡದ ಹಾಗೂ ಎಲ್ಲಿಯೂ ಸಿಗದ ಸಾಕಷ್ಟು ಮಾಹಿತಿಗಳು ಮಿಡಿಯಾ ಮಾಸ್ಟರ್ಸ್ ಹಾಗೂ ರಿಪೋರ್ಟ್ರ್ ಚಾನೆಲ್ ಗಳ ಮೂಲಕ ದೊರೆಯುವಂತಾಗಿದೆ.

ಎಂ.ಎಸ್ ರಾಘವೇಂದ್ರ[ಬದಲಾಯಿಸಿ]

ಕನ್ನಡ ಮಾಧ್ಯಮ ಲೋಕದಲ್ಲಿ MSR ಅಂತಾ ಕರೆಸಿಕೊಳ್ಳಲ್ಪಡುವ ರಾಘವೇಂದ್ರ, ಈ ಹಿಂದೆ ಹಾಯ್ ಬೆಂಗಳೂರು ವಾರ ಪತ್ರಿಕೆಯಲ್ಲಿ, ಹೊಸ ದಿಂಗತ ದಿನ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸಾ ಮಾಡಿದವರು. ಈ ಟಿವಿ ಕನ್ನಡ ವಾಹಿನಿಯಲ್ಲಿ ಸುದ್ದಿ ಮಾಧ್ಯಮದ ಅನುಭವ ಪಡೆದವರು. ಟಿವಿ 9 ಆರಂಭವಾದಾಗ ಕನ್ನಡದ ಮೊಟ್ಟ ಮೊದಲ ಸುದ್ದಿವಾಹಿನಿಯ ಪ್ರಧಾನ ನಿರ್ಮಾಪಕರಾಗಿ ಕೆಲಸಾ ಮಾಡಿದ ರಾಘವೇಂದ್ರ, ಅಲ್ಲಿ ವಾರಂಟ್ ಹೆಸರಿನ ಕ್ರೈಂ ಕಾರ್ಯಕ್ರಮವನ್ನ ನಿರ್ಮಾಣ ಮಾಡಿದ್ರು. ಅದು ಅವತ್ತಿಗೆ ಅತಿ ಹೆಚ್ಚು TRP ಪಡೀತಿದ್ದ ಕಾರ್ಯಕ್ರಮವಾಗಿತ್ತು.

ಹಾಗೇನೇ ಅವರು ಆರಂಭಿಸಿದ್ದ 'ಹೇಳಿದ್ದು ಕೇಳಿದ್ದು' ಹೆಸರಿನ ಪೊಲಿಟಿಕಲ್ ಸಟೈರ್ ಅವತ್ತಿಗೆ ಸಾಕಷ್ಟು ಹೆಸರು ಮಾಡಿತ್ತು. ಇನ್ನು ಕನ್ನಡ ಸುದ್ದಿ ಮಾಧ್ಯಮ ಲೋಕಕ್ಕೆ ಸ್ಟಿಂಗ್ ಆಪರೇಷನ್ ಗಳನ್ನ ಪರಿಚಯಿಸಿದ್ದು ಹಾಗೂ ಮೊಟ್ಟ ಮೊದಲ ಸ್ಟಿಂಗ್ ಆಪರೇಟರ್ ಆಗಿ ಕೆಲಸಾ ಮಾಡಿದ್ದೂ ಅವರೇ. ಅವತ್ತಿಗೆ ಅವರ ಸ್ಟಿಂಗ್ ಆಪರೇಷನ್ ಗಳು ಸಾಕಷ್ಟು ಭ್ರಷ್ಠರನ್ನ ಕೆಲಸ ಕಳಕೊಳ್ಳೋ ಹಾಗೆ ಮಾಡಿದ್ವು.

ಉದಯ ಟಿವಿಗಾಗಿ ರೆಡ್ ಅಲರ್ಟ್ ಹೆಸರಿನ ಕ್ರೈಂ ಕಾರ್ಯಕ್ರಮ ನಡೆಸಿಕೊಟ್ಟ ರಾಘವೇಂದ್ರ, ಸರಳ ಜೀವನ ಕನ್ನಡ ವಾಹಿನಿಯ ಮುಖ್ಯಸ್ಥರಾಗಿ ಹಾಗೂ ದಿಗ್ವಿಜಯ ವಾಹಿನಿಯ ಸಂಪಾದಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ಪ್ರಶಸ್ತಿ[ಬದಲಾಯಿಸಿ]

ಕರ್ನಾಟಕದ ಪತ್ರಿಕೋದ್ಯಮಕ್ಕೆ ಮೊಟ್ಟಮೊದಲ ರಾಮನಾಥ ಗೋಯಂಕಾ ಪ್ರಶಸ್ತಿಯನ್ನ ತಂದು ಕೊಟ್ಟಿದ್ದೂ ಎಂಎಸ್ ರಾಘವೇಂದ್ರ ಅವರೇ. ಹೆಣ್ಣು ಮಕ್ಕಳನ್ನ ಮದುವೆಯ ಹೆಸರಲ್ಲಿ ಉತ್ತರ ಭಾರತಕ್ಕೆ ಮಾರಾಟ ಮಾಡುವ ಬೃಹತ್ ಜಾಲವೊಂದನ್ನ ಬಯಲಿಗೆಳೆದ ವರದಿಯೊಂದಕ್ಕೆ ಪ್ರತಿಷ್ಠಿತ ರಾಮ ನಾಥ ಗೊಯೆಂಕಾ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು.

ವಿವಾದಗಳು[ಬದಲಾಯಿಸಿ]

ಅಪರಾಧ ಪತ್ರಿಕೋದ್ಯಮದ ಹಿರಿಯ ವರದಿಗಾರ ರಾಘವೇಂದ್ರ ವಿವಾದಗಳಿಂದಾ ಹೊರತಾದವರಲ್ಲ. ಬೆಂಗಳೂರನ್ನ ನಡುಗಿಸಿದ್ದ ನಿತ್ಯಾನಂದ ಸ್ವಾಮಿಯ ಪ್ರಕರಣದಲ್ಲಿ ಸ್ವಾಮೀ ನಿತ್ಯಾನಂದ ಬಂಧನದ ನಂತರ, ಅವರ ವಿಚಾರಣೆಯ ವಿಡಿಯೋ ಬಳಸಿಕೊಂಡು ಉದಯ ಟಿವಿಯಲ್ಲಿ ಕಾರ್ಯಕ್ರಮ ವೊಂದನ್ನ ಮಾಡಿದ್ದ ಪ್ರಕರಣ ಇವರ ಮೇಲಿತ್ತು. ಸಿಐಡಿ ಕಛೇರಿಯಲ್ಲಿ ಬಿಗಿ ಭದ್ರತೆಯಲ್ಲಿದ್ದ ನಿತ್ಯಾನಂದ ಅವರ ಸೆಲ್ ಹಾಗೂ ವಿಚಾರಣಾ ಕೊಠಡಿಯ ಸಿಸಿಟಿವಿ ಚಿತ್ರಗಳನ್ನ ಸಿಐಡಿ ಕಛೇರಿಯಿಂದಾ ಹೇಗೆ ಹೊರಗೆ ತರಿಸಿಕೊಂಡರು ಅನ್ನೋದು ಅವತ್ತಿಗೆ ಪೊಲೀಸ್ ಇಲಾಖೆಯ ದೊಡ್ಡ ತಲೆ ನೋವಿಗೆ ಕಾರಣವಾಗಿತ್ತು.

ರಾಷ್ಟ್ರಪತಿ ಪದಕ ಪಡೆದ ಪೊಲೀಸ್ ಅಧಿಕಾರಿಯೊಬ್ಬರು, ಅಮಾಯಕರ ಮೇಲೆ ನಕ್ಸಲ್ ಪ್ರಕರಣ ದಾಖಲಿಸ್ತಿದಾರೆ ಅನ್ನೋ ಬಗ್ಗೆ ಹಾಗೂ ಪಾವಗಡದ ಪೊಲೀಸ್ ದೌರ್ಜನ್ಯಗಳ ಬಗ್ಗೆ ಮಾಡಿದ ವರದಿಯ ಹಿನ್ನೆಲೆಯಲ್ಲಿ ಅವರ ಮೇಲೆ ಅಟ್ರಾಸಿಟಿ ಕೇಸು ದಾಖಲಾಗಿತ್ತು.

ಈಗ ಎಂಎಸ್ ರಾಘವೇಂದ್ರ, ಹಾಗೂ ಸಹವರ್ತಿಗಳು Media Masters ಹೆಸರಿನ ವೆಬ್ ಮಿಡಿಯಾ ಆರಂಭಿಸಿದ್ದು, ೧೩ ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಮಿಡಿಯಾ ಮಾಸ್ಟರ್ಸ್, ಕನ್ನಡಿಗರ ಆದರಕ್ಕೆ ಪಾತ್ರವಾಗಿದೆ

References

https://www.ndtv.com/cities/sex-swami-probe-on-cctv-journalist-alleges-harassment-417885 https://www.youtube.com/watch?v=6-859tgAimc