ಸದಸ್ಯ:Saifuddin saif/sandbox
ಹೃದಯದ ವಿದ್ಯುದ್ವಾಹಕ ತೊಂದರೆಗಳು
ಮನುಷ್ಯನ ಹೃದಯವು ಪ್ರತಿ ನಿಮಿಷಕ್ಕೂ 60 ರಿಂದ 100 ಬಾರಿ ಮಿಡಿಯುತ್ತದೆ. ಅಂದರೆ ಒಬ್ಬ ವ್ಯಕ್ತಿಯ ಜೀವನಾವಧಿಯಲ್ಲಿ ಸರಾಸರಿ 2.5 ದಶಲಕ್ಷ ಬಾರಿ ಹೃದಯವು ಬಡಿದುಕೊಳ್ಳುತ್ತದೆ. ಹೃದಯ ಬಡಿತದ ಈ ಪ್ರಕ್ರಿಯೆಯು ಹೃದಯದಲ್ಲಿರುವ ಕಾರ್ಡಿಯಾಕ್ ಕಂಡಕ್ಷನ್ ಸಿಸ್ಟಮ್ ಎಂಬ ವಿಶೇಷ ಕೋಶಗಳ ಸಂಯೋಜನೆಯಿಂದ ನಡೆಯುತ್ತದೆ. ಕಂಡಕ್ಷನ್ ಸಿಸ್ಟಂ, ಅಂದರೆ ಹೃದಯದ ವಾಹಕ ವ್ಯವಸ್ಥೆ.
ಈ ವ್ಯವಸ್ಥೆಯು ಒಂದು ವಿದ್ಯುತ್ ಪ್ರೇರಣೆಯನ್ನು ಉತ್ಪಾದಿಸುತ್ತದೆ, ಇದನ್ನು ಕೋಶಗಳ ಒಂದು ವಿಶೇಷ ಜಾಲವು ನಿರ್ವಹಿಸುತ್ತದೆ. ಇದು ಹೃದಯದ ಸ್ನಾಯುವನ್ನು ತಲುಪಿ, ಅಲ್ಲಿ ಸ್ನಾಯು ಸಂಕುಚನವನ್ನು ಪ್ರಚೋದಿಸುತ್ತದೆ. ಕೋಶಗಳ ಈ ರೋಚಕ ಜಾಲವು ಹೃದಯದ ನಾಲ್ಕು ಕವಾಟಗಳ ನಡುವೆ ಸರಾಗ ಸಮನ್ವಯವನ್ನು ಸಾಧಿಸಿ, ಒಂದರ ಬಳಿಕ ಒಂದರಂತೆ, ನಾಲ್ಕು ಕವಾಟಗಳು ನಿಯಮಿತವಾಗಿ ಬಡಿಯುವಂತೆ ನೋಡಿಕೊಳ್ಳುತ್ತದೆ. ಹೃದಯವು ಸಹಜವಾಗಿ ಕಾರ್ಯವೆಸಗಬೇಕಾದರೆ, ರಕ್ತದ ಸರಬರಾಜು ಸರಾಗವಾಗಿರಬೇಕಾದುದು (ಸಹಜ ರಕ್ತನಾಳ ಗಳು) ಎಷ್ಟು ಆವಶ್ಯಕವೋ, ಹೃದಯದ ಒಟ್ಟಾರೆ ವಿದ್ಯುತ್ ವ್ಯವಸ್ಥೆ, ಅಂದರೆ ಎಲೆಕ್ಟ್ರಿಕಲ್ ಸಿಸ್ಟಂ ಸಮರ್ಪಕವಾಗಿರಬೇಕಾದುದು ಅಷ್ಟೇ ಆವಶ್ಯಕ.
ಕಂಡಕ್ಷನ್ ಸಿಸ್ಟಂ ಅಸಹಜತೆಗಳಿಂದ, ಅರಿಥಿ¾ಯಾಸ್ ಅಥವಾ ಹೃದಯ ಬಡಿತದ ಅಸಹಜತೆಯ ರೋಗ ಲಕ್ಷಣ ಕಾಣಿಸಿ ಕೊಳ್ಳುತ್ತದೆ. ಹೃದಯ ಬಡಿತದ ಅಸಹಜತೆಯ ರೋಗ ಲಕ್ಷಣ ಅಂದರೆ, ಒಂದೋ ಹೃದಯದ ಬಡಿತ ನಿಧಾನವಾಗಿರುವುದು ಅಥವಾ ಹೃದಯದ ಬಡಿತ ಬಹಳ ವೇಗವಾಗಿರುವುದು. (ಟ್ಯಾಕಿಕಾರ್ಡಿಯಾ).
ಹೃದಯದ ಬಡಿತ ನಿಧಾನವಾಗುವುದು ಬ್ರಾಡಿಅರಿಥಿ¾ಯಾಸ್ ಅಥವಾ ಹೃದಯದ ಬಡಿತ ನಿಧಾನವಾಗುವುದು ಎಂಬುದು ಹಿರಿಯ ವಯಸ್ಸಿನವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆ. ವಯಸ್ಸಿನ ಕಾರಣದಿಂದಾಗಿ ಕಂಡಕ್ಷನ್ ಸಿಸ್ಟಂ ಅಂದರೆ ಹೃದಯದ ವಾಹಕ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಯಿಂದಾಗಿ ಹೃದಯ ಬಡಿತದ ದರವು (ಬ್ರಾಡಿಕಾರ್ಡಿಯಾ) ನಿಧಾನಗೊಳ್ಳುತ್ತದೆ ಅಥವಾ ಇಲೆಕ್ಟ್ರಿಕಲ್ ಕಂಡಕ್ಷನ್‌ನಲ್ಲಿನ ಅಡಚಣೆಯಿಂದಾಗಿ, ಹೃದಯದ ಮೇಲಿನ ಕವಾಟದಲ್ಲಿ ಉತ್ಪತ್ತಿಯಾಗುವ ಪ್ರೇರಣೆಯು ಹೃದಯದ ಕೆಳಗಿನ ಎರಡು ಕವಾಟಗಳನ್ನು ತಲುಪಲು ವಿಫಲವಾಗುತ್ತದೆ ( ಎ ವಿ ಬ್ಲಾಕ್). ಈ ಪರಿಸ್ಥಿತಿ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ಆಗಾಗ ಕೆಲವು ಸೆಕೆಂಡುಗಳವರೆಗೆ ಪ್ರಜ್ಞೆ ತಪ್ಪಿ,$ಮತ್ತೆ ಚೇತರಿಸಿಕೊಳ್ಳುವ ಲಕ್ಷಣಗಳ ಕಾರಣದಿಂದ ವೈದ್ಯರಲ್ಲಿ ಬರುತ್ತಾರೆ. ಇಂತಹ ಜನರಿಗೆ ತಲೆಸುತ್ತುವುದು, ಒಮ್ಮಿಂದೊಮ್ಮೆಯೇ ದೃಷ್ಟಿ ಮಂಜಾಗುವುದು ಮತ್ತು ನಡೆಯುವಾಗ ಆಯಾಸವಾಗುವುದು... ಇತ್ಯಾದಿ ಲಕ್ಷಣಗಳು ಸಹ ಇರುತ್ತವೆ.
ಹೃದಯದ ಅಸ್ವಸ್ಥತೆಯ ಈ ಲಕ್ಷಣಗಳು ಕೆಲವೊಮ್ಮೆ ಮಾತ್ರ ಬಾಧಿಸುವುದರಿಂದ, ಬಾಹ್ಯ ರೋಗಲಕ್ಷಣವೂ ಸಹ ದಿನದಲ್ಲಿ ಕೆಲವು ಬಾರಿ ಮಾತ್ರ ಕಾಣಿಸಿಕೊಂಡು, ಅಥವಾ ಕೆಲವು ತಿಂಗಳಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಂಡು ಮರೆಯಾಗುತ್ತದೆ. ಆದರೆ ಈ ರೀತಿಯ ಒಂದು ಪರಿಸ್ಥಿತಿಯನ್ನು ಪತ್ತೆ ಮಾಡದಿದ್ದರೆ, ಅಥವಾ ಚಿಕಿತ್ಸೆ ನೀಡದೆ ಹೋದರೆ ಜೀವಕ್ಕೆ ತೊಂದರೆಯಾಗಬಹುದು. ಹೃದಯದ ಅಸ್ವಸ್ಥತೆಯ ಕಾರಣದಿಂದಾಗಿ ರೋಗಿಯು ಆಗಾಗ ಬೀಳುವುದರಿಂದಾಗಿ, ಮೂಳೆ ಮುರಿತ ಅಥವಾ ತಲೆಗೆ ಪೆಟ್ಟಾಗುವುದು... ಇತ್ಯಾದಿ ಅಪಾಯಗಳಾಗುವ ಸಾಧ್ಯತೆಗಳಿವೆ. ಶಾಶ್ವತ ಪೇಸ್‌ಮೇಕರ್ ಅನ್ನು ಉಪಯೋಗಿಸಿ ಬ್ರಾಡಿಅರಿಥಿ¾ಯಾಸ್ ಅಂದರೆ ಹೃದಯದ ನಿಧಾನ ಬಡಿತಕ್ಕೆ ಸುಲಭ ಚಿಕಿತ್ಸೆ ಸಾಧ್ಯವಿದೆ. ಸ್ಥಳೀಯ ಅರಿವಳಿಕೆಯನ್ನು ನೀಡಿ ಎಡ ಅಥವಾ ಬಲಭಾಗದ ಕತ್ತಿನ ಮೂಳೆಯ ಸ್ವಲ್ಪವೇ ಕೆಳಗೆ ಚರ್ಮದ ಅಡಿಯಲ್ಲಿ ಶಾಶ್ವತ ಪೇಸ್‌ಮೇಕರ್ ಅನ್ನು ಅಳವಡಿಸುತ್ತಾರೆ. ಈ ಪೇಸ್‌ಮೇಕರ್ ಮುಂಚಿತವಾಗಿಯೇ ನಿರ್ದೇಶಿಸಿದ ದರದಲ್ಲಿ ಅಂದರೆ ನಿಮಿಷಕ್ಕೆ 60-70ರ ದರದಲ್ಲಿ ಇಲೆಕ್ಟ್ರಿಕಲ್ ಪ್ರೇರಣೆಯ ಬ್ಯಾಕ್ ಅಪ್ ಅನ್ನು ನೀಡಿ, ಆವಶ್ಯಕ ಪ್ರಮಾಣದ ಸ್ನಾಯು ಸಂಕುಚನೆ ಮತ್ತು ಪ್ರೇರಣೆಯನ್ನು ಒದಗಿಸುತ್ತದೆ.