ಸದಸ್ಯ:Sai1310074/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರೀಯ ಆದಾಯದ ಅರ್ಥವಿವರಣೆ

      ಒಂದು ವರ್ಷದ ಅವಧಿಯಲ್ಲಿ ದೇಶವೊಂದು ಗಳಿಸುವ ಸಮಗ್ರ ಆದಾಯವು ರಾಷ್ಟ್ರೀಯ ಆದಾಯವಾಗಿರುತ್ತದೆ. 
      ಸೈಮನ್ ಕುಜ್ನೆಟ್ಸ್ ಅವರ ಪ್ರಕಾರ, "ದೇಶದ ಉತ್ಪಾದನಾ ವಲಯದಿಂದ ಅಂತಿಮ ಅನುಭೋಗಿಗಳ ಕೈಯಿಗೆ ವರ್ಷದಲ್ಲಿ ಪರಿಚಲನೆಯಾಗುವ ನಿವ್ವಳ ಸರಕು ಮತ್ತು ಸೇವೆಗಳು ರಾಷ್ಟ್ರೀಯ ಆದಾಯವಾಗಿದೆ".

ರಾಷ್ಟ್ರೀಯ ಆದಾಯದ ಪ್ರಮುಖ ಅಂಶಗಳು

೧. ದೇಶವೊಂದರ ಹಣರೂಪಿ ಆದಾಯ
೨. ಉತ್ಪಾದಿಸಿದ ಸರಕು ಮತ್ತು ಸೇವೆಗಳ ಪರಿಚಲನೆಯನ್ನು ಪ್ರತಿನಿಧಿಸುತ್ತದೆ
೩. ಒಂದು ಅಂತಿಮ ಸರಕು ಮತ್ತು ಸೇವೆಗಳನ್ನು ಪರಿಗಣಿಸಲಾಗುತ್ತದೆ
೪. ಕೇವಲ ಅಂತಿಮ ಸರಕು ಮತ್ತು ಸೇವೆಗಳನ್ನು ಪರಿಗಣಿಸಲಾಗುತ್ತದೆ
೫. ಮಧ್ಯವರ್ತಿ ಸರಕುಗಳನ್ನು ಪರಿಗಣಿಸಲಾಗುವುದಿಲ್ಲ
೬. ಸವಕಳಿ ವೆಚ್ಚವನ್ನು ಕಳೆಯಲಾಗುತ್ತದೆ.

ಒಟ್ಟು ರಾಷ್ಟ್ರೀಯ ಉತ್ಪನ್ನ

      ಒಟ್ಟು ರಾಷ್ಟ್ರೀಯ ಉತ್ಪನ್ನ ಎಂದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ದೇಶವು ಉತ್ಪಾದಿಸುವ ಸರಕು ಮತ್ತು ಸೇವೆಗಳ ಸಮಗ್ರ ಮೌಲ್ಯ.
   ಒಟ್ಟು ರಾಷ್ಟ್ರೀಯ ಉತ್ಪನ್ನ = ನಿವ್ವಳ ರಾಷ್ಟ್ರೀಯ ಉತ್ಪನ್ನ + ಸವಕಳಿ ವೆಚ್ಚ

ನಿವ್ವಳ ರಾಷ್ಟ್ರೀಯ ಉತ್ಪನ್ನ

     ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಮಾಡಲಾದ ನಿವ್ವಳ ಉತ್ಪಾದನೆಯ ಮಾರುಕಟ್ಟಿ ಮೌಲ್ಯವನ್ನು ನಿವ್ವಳ ರಾಷ್ಟ್ರೀಯ ಉತ್ಪನ್ನ ಎನ್ನಲಾಗುತ್ತದೆ. ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಸವಕಳಿ ವೆಚ್ಚವನ್ನು ಕಳೆದರೆ ಇದು ಲಭ್ಯವಾಗುತ್ತದೆ.
   ನಿವ್ವಳ ರಾಷ್ಟ್ರೀಯ ಉತ್ಪನ್ನ = ಒಟ್ಟು ರಾಷ್ಟ್ರೀಯ ಉತ್ಪನ್ನ - ಸವಕಳಿ ವೆಚ್ಚ

ಒಟ್ಟು ದೇಶೀಯ ಉತ್ಪನ್ನ

   ಒಟ್ಟು ದೇಶೀಯ ಉತ್ಪನ್ನವು ಆರ್ಥಿಕತೆಯೊಂದು ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು ಮತ್ತು ಸೇವೆಗಳು ಪರಿಚಲನೆಯ ಮಾಪನವಾಗಿದೆ.

ನಿವ್ವಳ ದೇಶೀಯ ಉತ್ಪನ್ನ ( ಮಾರುಕಟ್ಟೆ ಬೆಲೆ ಮತ್ತು ಉತ್ಪಾದನಾಂಗ ವೆಚ್ಚದಲ್ಲಿ )

   ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶೀಯ ಉತ್ಪನ್ನ ಎಂದರೆ ದೇಶದೊಳಡೆ ಉತ್ಪಾದಿಸಲಾದ ಸರಕು ಮತ್ತು ಸೇವೆಗಳ ಸವಕಳಿ ವೆಚ್ಚವನ್ನು ಹೊರತುಪಡಿಸಿದ ನಿವ್ವಳ ಮಾರುಕಟ್ಟೆ ಮೌಲ್ಯವಾಗಿದೆ.
   ಉತ್ಪಾದನಾಂಗ ವೆಚ್ಚದಲ್ಲಿನ ನಿವ್ವಳ ದೇಶೀಯ ಉತ್ಪನ್ನ ಎಂದರೆ ಉತ್ಪಾದನಾಂಗಗಳು ಪಡೆಯುವ ಆದಾಯಗಳ ಮೊತ್ತವನ್ನು ಪ್ರತಿನಿಧಿಸಿದ ದೇಶದೊಳಗಡೆ ಉತ್ಪಾದಿಸಿದ ಸರಕು ಮತ್ತು ಸೇವೆಗಳ ನಿವ್ವಳ ಮೌಲ್ಯವಾಗಿದೆ.
   ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶೀಯ ಉತ್ಪನ್ನ = ಮಾರುಕಟ್ಟೆ ಬೆಲೆಯಲ್ಲಿ ಒಟ್ಟು ದೇಶೀಯ ಉತ್ಪನ್ನ - ಸವಕಳಿ ವೆಚ್ಚ 
  ಉತ್ಪಾದನಾಂಗ ವೆಚ್ಚದಲ್ಲಿ ನಿವ್ವಳ ದೇಶೀಯ ಉತ್ಪನ್ನ = ಮಾರುಕಟ್ಟೆ ಬೆಲೆಯಲ್ಲಿ ನಿವ್ವಳ ದೇಶೀಯ ಉತ್ಪನ್ನ - ಪರೋಕ್ಷತೆರಿಗೆ + ಸಹಾಯಧನ

ನಾಮರೂಪ (ಹಣರೂಪಿ) ಮತ್ತು ನೈಜ್ಯ ರಾಷ್ಟ್ರೀಯ ಆದಾಯ

       ಪ್ರಸ್ತುತ ಬೆಲೆಗಳಲ್ಲಿ ಅಂದಾಜು ಮಾಡಲಾದ ರಾಷ್ಟ್ರೀಯ ಆದಾಯವನ್ನು ನಾಮರೂಪ (ಹಣರೂಪಿ) ರಾಷ್ಟ್ರೀಯ ಆದಾಯ ಎನ್ನಲಾಗುತ್ತದೆ. ಆಧಾರ ವರ್ಷವನ್ನಾಗಿ ತೆಗೆದುಕೊಂಡ ವರ್ಷದ ಸಾಮಾನ್ಯ ಬೆಲೆಯ ಮಟ್ಟದ ಮುಖೇನ ವ್ಯಕ್ತಪಡಿಸಲಾಗುವ ರಾಷ್ಟ್ರೀಯ ಆದಾಯವನ್ನು ನೈಜ್ಯ ರಾಷ್ಟ್ರೀಯ ಆದಾಯ ಎನ್ನಲಾಗುತ್ತದೆ.

ನೈಜ್ಯನಿವ್ವಳ ರಾಷ್ಟ್ರೀಯ ಉತ್ಪನ್ನ = ಪ್ರಸ್ತುತ ವರ್ಷದ ನಿವ್ವಳ ರಾಷ್ಟ್ರೀಯ ಉತ್ಪನ್ನ * ಆಧಾರ ವರ್ಷದ ಸೂಚ್ಯಂಕ (=೧೦೦) / ಪ್ರಸ್ತುತ ವರ್ಷದ ಸೂಚ್ಯಂಕ

ತಲಾದಾಯ

     ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವರ್ಷದ ಸರಾಸರಿ ಆದಾಯವನ್ನು ತಲಾದಾಯ ಎನ್ನಲಾಗುತ್ತದೆ.
    ತಲಾದಾಯ = ರಾಷ್ಟ್ರೀಯ ಆದಾಯ / ಒಟ್ಟು ಜನಸಂಖೆ.

ರಾಷ್ಟ್ರೀಯ ಆದಾಯದ ಮಾಪನ

    ೩ ವಿಧಾನಗಳಲ್ಲಿ ಮಾಪನ ಮಾಡಲಾಗುತ್ತದೆ.

೧. ಉತ್ಪನ್ನ ವೆಧಾನ :

          ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಸರಕು ಮತ್ತು ಸೇವೆಗಳ ಅಂತಿಮ ಮೌಲ್ಯವು ಉತ್ತಮ ವಿಧಾನದ ಮೂಲಕ ಅಳೆಯಲಾದ ರಾಷ್ತ್ರೀಯ ಆದಾಯವಾಗುತ್ತದೆ.

೨. ಆದಾಯ ವಿಧಾನ :

          ಈ ವಿಧಾನದ ಮೂಲಕ ಉತ್ಪಾದನಾಂಗಗಳಾದ ಭೂಮಿ , ಶ್ರಮ , ಬಂಡವಾಳ ಮತ್ತು ಸಂಘಟನೆಗಳು ಪಡೆಯುವ ಪ್ರತಿಫಲವಾದ ಗೇಣಿ , ಕೂಲಿ , ಬಡ್ಡಿ ಮತ್ತು ಲಾಭಗಳನ್ನು ಒಟ್ಟು ಸೇರಿಸಿ ರಾಷ್ಟ್ರೀಯ ವರಮಾನವನ್ನು ಪಡೆಯಲಾಗುತ್ತದೆ.

೩. ಖರ್ಚಿನ ವಿಧಾನ :

         ರಾಷ್ಟ್ರದಲ್ಲಾಗುವ ಒಟ್ಟು ಖರ್ಚುಗಳನ್ನು ಒಟ್ಟುಗೂಡಿಸಿದರೆ ಈ ವಿಧಾನದಲ್ಲಿ ರಾಷ್ಟ್ರೀಯ ಆದಾಯ ಲಭ್ಯವಾಗುತ್ತದೆ. ಇಲ್ಲಿ ಅನುಭೋಗದ ವೆಚ್ಚ , ಬಂಡವಾಳ ಸರಕುಗಳ ಮೇಲಿನ ವೆಚ್ಚ ಮತ್ತು ಸರ್ಕಾರದ ವೆಚ್ಚಗಳನ್ನು ಪರಿಗಣಿಸಲಾಗುತ್ತದೆ.

ರಾಷ್ಟ್ರೀಯ ಆದಾಯದ ಮಾಪನದ ತೊಡಕುಗಳು ೧. ಅನಕ್ಷರತೆ ೨. ಅಂಕಿ ಅಂಶಗಳ ಅಲಭ್ಯತೆ ೩. ಸಾಟಿ ಪದ್ದತಿಯ ಅಸ್ತಿತ್ವ ೪. ಸವಕಳಿ ಲಿಖ್ಖಾಚಾರದ ಕಷ್ಟ ೫. ವ್ಯಕ್ತಿ ನೈಪುಣ್ಯ ರಹಿತತೆ ೬. ಸರಕುಗಳ ಪರಿಗಣನೆಯ ಸಮಸ್ಯೆ ೭. ಸೇವೆಗಳ ಪರಿಗಣನೆ ಸಮಸ್ಯೆ ೮. ಸ್ವಾನುಭೋಗದ ಸರಕುಗಳು ೯. ವಿಧಾನಗಳ ನಡುವಿನ ಆಯ್ಕೆಯ ಸಮಸ್ಯೆ ೧೦. ಕಾನೂನು ಬಾಹಿರ ಚಟುವಟಿಕೆಗಳು ೧೧. ವರ್ಗಾವಣೆ ಪಾವತಿಗಳು.

ರಾಷ್ತ್ರೀಯ ಆದಾಯದ ಮಹತ್ಚ ೧. ಆರ್ಥಿಕಾಭಿವೃದ್ಧಿ ಮತ್ತು ಜೀವನ ಮಟ್ಟದ ಚಿತ್ರಣ ೨. ರಾಷ್ಟ್ರದ ಬೆಳವಣಿಗೆ ದರದ ಚಿತ್ರಣ ೩. ವಿವಿಧ ವಲಯಗಳ ಸಾಪೇಕ್ಷ ಕೊಡುಗೆಯ ಅರಿವು ೪. ವರಮಾನ ಹಂಚಿಕೆ ಮೇಲೆ ಬೆಳಕು ೫. ವಿವಿಧ ದೇಶಗಳ ಜೀವನ ಮಟ್ಟದ ಹೋಲಿಕೆ ೬. ಆರ್ಥಿಕ ಯೋಜನೆಗಳ ಅನುಷ್ಠಾನ ೭. ಆರ್ಥಿಕ ಧೋರಣೆಗಳ ನಿರ್ಮಾಣ.

ರಾಷ್ಟ್ರೀಯ ಆದಾಯ ಮತ್ತು ಆರ್ಥಿಕ ಕ್ಷೇಮಾಭ್ಯುದಯ

      ನಿಘಂಟಿನ ಪ್ರಕಾರ ಕ್ಷೇಮಾಭ್ಯುದಯ ಎಂದರೆ "ಚೆನ್ನಾಗಿ ಬಾಳು (ಬದುಕು) , ಬಯಕೆಯಿಂದ ಸ್ವತಂತ್ರ , ಸೃಮೃದ್ಧಿಯ ಸ್ಥಿತಿ ".
      ಎ.ಸಿ. ಪಿಗು ಅವರ ಪ್ರಕಾರ , ಆರ್ಥಿಕ ಕ್ಷೇಮಾಭ್ಯುದಯ ಎಂದರೆ " ಹಣದ ಮಾನದಂಡಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧ ಕಲ್ಪಿಸಲು ಸಾಧ್ಯವಿರುವ ಸಾಮಾಜಿಕ ಯೋಗಕ್ಷೇಮದ ಒಂದು ಭಾಗವಾಗಿದೆ ".
      ಕೆಲ ಅರ್ಥಶಾಸ್ತ್ರಜ್ಞರ ಪ್ರಕಾರ ರಾಷ್ಟ್ರೀಯ ಆದಾಯ ಮತ್ತು ಜನಸಮುದಾಯದ ಆರ್ಥಿಕ ಕ್ಷೇಮಾಭ್ಯುದಯ ಧನಾತ್ಮಕವಾಗಿ ಸಂಬಂಧಿಸಿವೆ. ಅವರ ಅಭಿಪ್ರಾಯದಲ್ಲಿ ರಾಷ್ಟ್ರೀಯ ಆದಾಯದಲ್ಲಿನ ಹೆಚ್ಚಳವು ಆರ್ಥಿಕ ಕ್ಷೇಮಾಭ್ಯುದಯವನ್ನು ಸುಧಾರಿಸುತ್ತದೆ.

ಕ್ಷೇಮಾಭ್ಯುದಯದ ಸೂಚಿಯಾಗಿ ರಾಷ್ಟ್ರೀಯ ಆದಾಯದ ಮಿತಿಗಳು ೧. ಉತ್ಪಾದನೆಯ ಸಂರಚನೆ ೨. ವಿರಾಮ ೩. ಹಣರಹಿತ ವಿನಿಮಯಗಳು ೪. ಜನಸಂಖ್ಯಾ ಬೆಳವಣಿಗೆ ೫. ಸಾಮಾನ್ಯ ಬೆಲೆ ಮಟ್ಟದಲ್ಲಿನ ಬದಲಾವಣೆ ೬. ಜೀವನದ ಗುಣಮಟ್ಟ ೭. ಆದಾಯದ ವಿತರಣೆ ೮. ಜನರ ನೈತಿಕ ಮೌಲ್ಯ. https://www.google.co.in/search?q=%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B3%80%E0%B2%AF+%E0%B2%86%E0%B2%A6%E0%B2%BE%E0%B2%AF&ie=utf-8&oe=utf-8&aq=t&rls=org.mozilla:en-US:official&client=firefox-a&channel=fflb&gfe_rd=cr&ei=8rXVVLCWDqOM8QegpIHABQ