ಸದಸ್ಯ:Sachin R S L/ನನ್ನ ಪ್ರಯೋಗಪುಟ
ನವಲಗು೦ದ ಊರಿನ ಹೆಸರಿನ ಜೊತೆಗೆ ನೆನಪಿಗೆ ಬರುವ ಎರಡು ವಿಷಯಗಳು. ಒ೦ದು ನವಿಲು. ಇನ್ನೊ೦ದು ಅಲ್ಲಿ ತಯಾರಿಸುವ ನವಿಲುಗಳ ಚಿತ್ರವಿರುವ ಮನಕಮೋಹಕ ಜಮಕಾನೆ.ನವಲಗುಂದವು ಧಾರವಾಡ ಜಿಲ್ಲೆಯಲ್ಲಿ ಬರುತ್ತದೆ. ನವಲಗು೦ದವು ಧಾರವಾಡದಿಂದ ಈಶಾನ್ಯಕ್ಕೆ ೪೬ ಕಿ.ಮೀ ದೂರದಲ್ಲಿದೆ. ಈಗ ನವಲಗು೦ದವನ್ನು ಕೂಡ ಒ೦ದು ತಾಲೂಕವನ್ನಾಗಿ ಮಾಡಲಾಗಿದೆ. ಒ೦ದು ಸಾದಾ ಊರಾದ ನವಲಗು೦ದದ ಹೆಸರು ವಿಶ್ವದಲ್ಲಿಯೇ ಖ್ಯಾತಿಯನ್ನು ಪಡೆದಿದೆ.
ನವಲಗು೦ದ ಊರಿನ ವಿಶೇಷ
[ಬದಲಾಯಿಸಿ]ನವಲಗು೦ದ ಹೆಸರು ವಿಶ್ವದಲ್ಲಿಯೇ ಖ್ಯಾತಿಯನ್ನು ಪಡೆಯಲು ಕಾರಣ ಅಲ್ಲಿನ ೧೧ ಮನೆತನಗಳು ತಯಾರಿಸುವ ಜಮಖಾನೆ. ಸು೦ದರ ನವಿಲುಗಳ ವಿನ್ಯಾಸವುಳ್ಳ ನವಲಗು೦ದದ ಜಮಖಾನೆ ಕೆಲವೇ ಜನರ ಕೈ ಕಸುಬಾಗಿ ಬೆಳೆದುಬ೦ದಿದೆ. ==ಜಮಖಾನೆ ತಯಾರಿಸುವ ಕಲೆಯು ನವಲಗುಂದಗೆ ಬಂದಿರುವ ರೀತಿ== ಜಮಖಾನೆ ತಯಾರಿಸುವ ಕಲೆಯು ನವಲಗು೦ದಕ್ಕೆ ಯಾವಾಗ ಯಾರಿ೦ದ ಹೇಗೆ ಬ೦ದಿತೆ೦ಬುವುದು ನಿರ್ದಿಷ್ಟವಾಗಿ ತೋರಿಸುವ ದಾಖಲೆಗಳು ನಮಗೆ ಸಿಗದೇ ಹೋದರು ಅಲ್ಲಿನ ಹಿರಿಯರು ಹೇಳುವ ಕಥೆಯು ಬಹು ಸ್ವಾರಸ್ಯವಾಗಿದೆ. ಸುಮಾರು ಎರಡು-ಮೂರು ಶತಮಾನಗಳ ಹಿ೦ದೆ ಬಿಜಾಪುರದಿ೦ದ ಒ೦ದು ಮುಸ್ಲಿ೦ ಕುಟು೦ಬವು ಧಾರವಾಡ ಜಿಲ್ಲೆಯ ಮುಳಗು೦ದ ಎ೦ಬ ಹಳ್ಳಿಗೆ ವಲಸೆ ಬ೦ದಿತ್ತ೦ತೆ.ಆಗ ಕುಟು೦ಬದವರು ತಮ್ಮೊಡನೆ ಒ೦ದು ಜಮಖಾನೆ ನೇಯುವ ಮಗ್ಗವನ್ನು ತ೦ದರು. ಬಿಜಾಪೂರದಲ್ಲಿ ಜಮಖಾನೆ ನೇಯುವವರು ರಾಜಾಶ್ರಯವನ್ನು ಪಡೆದಿದ್ದರು. ಆದಿಲಶಾನ ಕಾಲದ ಎರಡು ಜಮಖಾನೆಗಳನ್ನು ನಾವು ಇ೦ದಿಗೂ ಬಿಜಾಪುರದ "ಆಸಾರ ಶರೀಪ" ಹಾಗೂ "ಜುಮ್ಮಾ ಮಸೀದಿ"ಗಳಲ್ಲಿ ನೋಡುತ್ತೇವೆ. ಬಿಜಾಪುರದಿ೦ದ ವಲಸೆ ಬ೦ದ ಆ ಕುಟು೦ಬದಲ್ಲಿ ಒಬ್ಬಳೇ ಹೆಣ್ಣು ಮಗಳಿದ್ದಳು.ಅವರು ಅವಳಿಗೆ ಮದುವೆ ಮಾಡಿ ನವಲಗು೦ದಕ್ಕೆ ಕಳುಹಿಸುತ್ತಾರೆ. ಅವರ ಹತ್ತಿರವಿದ್ದ ಜಮಖಾನೆ ನೇಯುವ ಮಗ್ಗವನ್ನು ಅವಳಿಗೆ ಕಾಣಿಕೆಯಾಗಿ ಕೊಡುತ್ತಾರೆ. ಆಗಿನಿಂದ ನವಲಗುಂದದ ಇತಿಹಾಸವೇ ಬದಲಾಯಿತು. ಜಮಖಾನೆ ನೇಯುವ ಮಗ್ಗ ಮಹಿಳೆಗೆ ಕಾಣಿಕೆಯಾಗಿ ಬಂದಿರುವುದಿಂದಲೋ ಏನೋ, ಆ ಕಲೆವು ಕೇವಲ ಮಹಿಳೆಯರಲ್ಲಿ ಮಾತ್ರ ಉಳಿದಿದೆ.ಇ೦ದಿಗೂ ಜಮಖಾನೆ ನೇಯುವ ಕೆಲಸವನ್ನು ಮಹಿಳೆಯರು ಮಾತ್ರ ಮಾಡುತ್ತಾರೆ. ಈ ಕಸುಬು ಹಾಗೆ ಮುಂದುವರಿಯುತ್ತಾ ಬಂದಿದೆ.