ಸದಸ್ಯ:SUDHAN PRAKASH S

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

Karnataka State Assembly(Bangalore)

ನನ್ನ ಹೆಸರು ಸುಧನ್ ಪ್ರಕಾಶ್ . ಹುಟ್ಟಿದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಿಸೆಂಬರ್ ೧೭ ರಂದು ತಂದೆ ತಾಯಿಯಾದ ಸೂರ್ಯ ಹಾಗೂ ರೀಟಾರವರಿಗೆ ಹುಟ್ಟಿದ್ದ ಮೊದಲನೇ ಮಗುವು ನಾನು. ನನ್ನ ಜನ್ಮದಿಂದ ಅಪ್ಪ -ಅಮ್ಮಗೆ ಬಹಳಷ್ಟು ಖುಷಿ ಕೊಟ್ಟಿತು ಹಾಗು ಅದನ್ನ ಅವರು ಊರಿಗೆಲ್ಲ ಸಿಹಿಯನ್ನು ಹಂಚಿ ಸಂಭ್ರಮಿಸಿದ್ದರು. ನನ್ನ ಒಂದೊಂದು ಕ್ಷಣದಲ್ಲೂ ಪಾಲ್ಗೊಂಡರು. ಎಷ್ಟೇ ಕೆಲಸದ ಒತ್ತಡವಿದ್ದರೂ ಕೂಡ ಅವರಿಗೆ ಸಿಕ್ಕ ಬಿಡುವಿನ ಸಮಯವನ್ನೆಲ್ಲ ನನ್ನ ಜೊತೆ ಕಳೆದರು. ಬಾಲ್ಯದಿಂದಲೂ ಕೇಳಿದನ್ನೆಲಾ ತಂದು ಕೊಡುತಿದ್ದರು.

ಶಿಕ್ಷಣ[ಬದಲಾಯಿಸಿ]

St.Joseph's college church

ನನ್ನ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು ಪ್ರಸಿದ್ದವಾದ ಸಂತ ಜೋಸೆಫ್ ಶಾಲೆಯಲ್ಲಿ ಪೂರ್ಣಗೊಳಿಸಿದ್ದೆ. ಹದಿಮೂರು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಓದಿದ್ದ ಕಾರಣ ಅಲ್ಲಿನ ವಾತಾವರಣಕ್ಕೆ ತುಂಬಾನೇ ಹೊಂದಿಕೊಂಡಿದ್ದೆ, ಆ ವಯಸಿನಲ್ಲಿ ಪರಿಚಯರಾದ ಸ್ನೇಹಿತರು ಈಗಿನವರೆಗೂ ನನ್ನ ಜೊತೆಯಲ್ಲಿ ಕಷ್ಟ ಸುಖಗಳನ್ನು ಹಂಚಿಕೊಂಡು ಒಬ್ಬರಿಗಾಗಿ ಇನ್ನೊಬ್ಬರು ಸಹಾಯ ಮಾಡಿಕೊಂಡು ಇದ್ದೀವಿ. ಚಿಕ್ಕಂದಿನಿಂದಲೂ ಸಂಗೀತ ಹಾಗು ಕಾಲ್ಚೆಂಡಿನ ಆಟವೆಂದರೆ ಅಪಾರವಾದ ಪ್ರೀತಿ. ಶಾಲೆಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದೆ. ಆದರೆ ನನ್ನ ಶಿಕ್ಷಕರು ಯಾವಾಗಲೂ ಪ್ರಶಸ್ತಿಗಾಗಿ ಹಾಗು ಗೆಲುವಿಗಾಗಿ ಭಾಗವಹಿಸಬಾರದೆಂದು ಹಾಗು ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳುವುದಕ್ಕಾಗಿ ಭಾಗವಹಿಸು ಎಂದು ಪ್ರೋತ್ಸಹಿಸುತ್ತಿದರು. ನಾನು ಅದನ್ನೇ ಅನುಸರಿಸುತ್ತ ಇವತ್ತಿನವರೆಗೂ ಮುಂದುವರೆಯುತ್ತಿದ್ದೇನೆ. ಎಸ್.ಎಸ್.ಎಲ್.ಸಿ ಪರೀಕ್ಷೆಗಾಗಿ ಕಷ್ಟಪಟ್ಟು ಓದಿ ಒಳ್ಳೆಯ ಅಂಕಗಳನ್ನು ಪಡೆದೆ. ಅಲ್ಲಿಂದ ಬೆಂಗಳೂರಿನ ಕೋರಮಂಗಲದ ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣಕ್ಕಾಗಿ ಸೇರಿಕೊಂಡೆ. ಮೊದಲ ವರ್ಷ ಆ ವಾತಾವರಣಕ್ಕೆ ಹೊಂದಿಕೊಳಲ್ಲು ಕಷ್ಟ ಪಡುತ್ತಿದ್ದ. ಅಷ್ಟೊಂದು ವಿದ್ಯಾರ್ಥಿಗಳನ್ನ ಒಂದೇ ಸಲ ಕಂಡಾಗ ಹೇಗೆ ಅವರ ಜೊತೆ ಹೊಂದಿಕೊಳ್ಳುತೇನೆವೆಂಬ ಭಯ ಶುರುವಾಗತೊಡಗಿತು. ಮೆಲ್ಲನೆ ಅವರ ಜೊತೆಯಲ್ಲಿ ಬೆರೆತುಹೋದೆ, ಸಂತಸದಿಂದ ಅವರ ಜೊತೆ ಅದ್ಭುತವಾದ ಕ್ಷಣಗಳನ್ನು ಕಳೆದೇ.

ಸಂಗೀತ[ಬದಲಾಯಿಸಿ]

Piano player

ಓದಿನಲ್ಲಿ ಮಾತ್ರವಲ್ಲದೆ ನನ್ನಲಿದ್ದ ಸಂಗೀತದ ಆಸಕ್ತಿಯನ್ನು ಹೊರತರಲು ಕಾಲೇಜಿನಿಂದ ಸಾಕಷ್ಟು ಅವಕಾಶಗಳು ಸಿಕ್ಕಿತು, ಅದನೆಲ್ಲ ಉಪಯೋಗಿಸಿಕೊಂಡೇ. ಕಾಲೇಜಿನ ಸಂಗೀತ ಕಾಯರ್ ತಂಡಕ್ಕೆ ಸೇರಿ ಇಡೀ ಎರಡು ವರ್ಷ ಬೇರೆ ಕಾಲೇಜಿನ ಸಾಂಸ್ಕೃತಿಕ ಸಂಭ್ರಮದಲೆಲ್ಲ ಭಾಗವಹಿಸಿ ಕಾಲೇಜನ್ನು ಪ್ರತಿನಿಧಿಸುತ್ತಿದೆ. ದ್ವಿತೀಯ ಪಿ.ಯು.ಸಿಯ ಪರೀಕ್ಷೆ ಕೂಡ ಬರತೊಡಗಿತ್ತು,ಆ ಭಯ ಹಾಗು ತೀವ್ರತೆಯಿಂದ ನಾನು ಮತ್ತೆ ನನ್ನ ಸ್ನೇಹಿತರು ಜೊತೆ ಕೂಡಿ ಓದಲು ಪ್ರಾರಂಬಿಸಿದ್ದೇವು ಹಾಗು ಒಳ್ಳೆಯ ಫಲಿತಂಶ ಕೂಡ ಪಡೆದೆ. ಆದ ನಂತರ ಸಂಗೀತದ ಮೇಲಿದ್ದ ಪ್ರೀತಿಯಿಂದ ಓದಿನಲ್ಲಿ ಆಸಕ್ತಿ ಕಡಿಮೆಯಾಗಲು ಪ್ರಾರಂಬಿಸಿತ್ತು. ನನ್ನ ಕಾಲೇಜಿನ ಹಿರಿಯರ ಸಲೆಹೆಯನ್ನು ಪಡೆದು ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಸಂಗೀತದಲ್ಲೇ ಡಿಗ್ರೀಯಿರುವ ವಿಷಯ ತಿಳಿದಿತ್ತು. ಹೇಗಾದರೂ ಮಾಡಿ ಅದಕ್ಕೆ ಸೇರಿಕೊಳ್ಳಬೇಕೆಂದು ನನ್ನ ತಂದೆ ತಾಯಿಯನ್ನು ಒಪ್ಪಿಸಿ ಸಂಗೀತ,ಆಂಗ್ಲ ಹಾಗು ಮನೋವಿಜ್ಞಾನ -ಈ ಮೂರು ವಿಭಾಗವಿದ್ದ ಡಿಗ್ರೀಗೆ ಸೇರಿದ್ದೇ. ಸ್ವಲ್ಪ ದಿನಗಳ ನಂತರ ನನ್ನ ಆಶ್ಚರ್ಯಕ್ಕೆ ನನ್ನ ಫ್ರಾನ್ಸಿಸ್ ಕಾಲೇಜಿನ ಗೆಳೆಯರನ್ನು ಈ ಕಾಲೇಜಿನಲ್ಲಿ ನೋಡಿದ್ದೇ,ಖುಷಿಯಾಯಿತು. ದಿನ ಊಟದ ಸಮಯದಲ್ಲಿ ಬೇಗ ಊಟ ಮುಗಿಸಿಕೊಂಡು ಪಿಯಾನೋ ಅಭ್ಯಾಸಕ್ಕಾಗಿ ಹೋಗುತಾಯಿದ್ದೀನಿ. ಅಪ್ಪ-ಅಮ್ಮಾನು ಕೂಡ ಮನೆಯಲ್ಲಿ ಅಭ್ಯಾಸ ಮಾಡಲು ಒಂದು ಪಿಯಾನೋ ನನ್ನಗಾಗಿ ತಂದುಕೊಟ್ಟರು. ಸಿಗುವ ಸಮಯವನ್ನೆಲ್ಲ ಅದರ ಜೊತೆಯೇ ಕಳೆಯುತಿದ್ದೆ. ಬಹಳ ಸಂತೋಷದಿಂದ ನನ್ನ ಓದಿನ ಜೊತೆ ಭಾವೋದ್ರೇಕವನ್ನು ಕೂಡ ಬೆಳೆಸಿಕೊಳ್ಳುತಿದೆ.ಕ್ರೈಸ್ಟ್ ಕಾಲೇಜಿನಲ್ಲಿ ಸಿಗುತ್ತಿರುವ ಅವಕಾಶಗಳಿಗಾಗಿ ಜೀವನದ ಪೂರ್ತಿ ತುಂಬಾನೇ ಕೃತಜ್ಞರಾಗಿರುವೇನು. ಈ ಮೂರು ವರ್ಷದಲ್ಲಿ ಒಳ್ಳೆ ಸಂಗೀತಗಾರ ಹಾಗು ಹಾಡುಗಾರವಾಗ ಬೇಕೆಂದು ಇಚ್ಚಿಸುತಿದ್ದೇನೆ. ಮುಂದೆ ಜೀವನದಲ್ಲಿ ಸಂಗೀತದಲ್ಲಿ ಏನಾದರೂ ಸಾಧಿಸಬೇಕು ಹಾಗು ನನ್ನದೇ ಆದ ಒಂದು ಸಂಗೀತ ಶಾಲೆಯನ್ನು ತೆರೆಯಬೇಕೆಂಬುವ ಆಸೆ ಕೂಡ ಇದೆ. ನನ್ನ ತಂದೆ ತಾಯಿಗೆ ಒಳ್ಳೆಯ ಹೆಸರು ತಂದುಕೊಡಬೇಕೆಂಬುದು ನನ್ನ ಜೀವನದ ಮೊದಲನೇ ಗುರಿಯಾಗಿದೆ.