ಸದಸ್ಯ:SHASHIKUMAR S.G./ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಗರಶೆಟ್ಟಳ್ಳಿ ಬಗ್ಗೆ ಮಾಹಿತಿ[ಬದಲಾಯಿಸಿ]

ಇತಿಹಾಸ[ಬದಲಾಯಿಸಿ]

ಸಂಗರಶೆಟ್ಟಳ್ಳಿ ಬೆಟ್ಟದಪುರ ಹೋಬಳಿ, ಪಿರಿಯಾಪಟ್ಟಣದಿಂದ (ತಾ ),ಮೈಸೂರು ಜಿಲ್ಲೆಯಲ್ಲಿದೆ. ಮೈಸೂರಿನಿಂದ ಸುಮಾರು 80km,ಮತ್ತು ಪಿರಿಯಾಪಟ್ಟಣದಿಂದ 25 km ದೂರವಾಗುತ್ತದೆ. ಊರಿನಲ್ಲಿ ಪ್ರಾಥಮಿಕ ಶಿಕ್ಷಣ ಶಾಲೆ ಇದೆ. ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದೆ.

ಭೌಗೋಳಿಕ ಹಿನ್ನಲೆ[ಬದಲಾಯಿಸಿ]

ಊರು ಸಮತಟ್ಟಾದ ಪ್ರದೇಶದಲ್ಲಿದ್ದು ಅರೆ ಮಲೆನಾಡು ಪ್ರದೇಶವಾಗಿದೆ. ಇಲ್ಲಿನ ಅತಿ ಹೆಚ್ಚು ಭೂಮಿ ಕೃಷಿ ನೀರಾವರಿ ಪ್ರದೇಶವಾಗಿದೆ.ಇಲ್ಲಿನ ಜನತೆ ಹಾರಂಗಿ ಜಲಾಶಯದ ಕಾಲುವೆ ನೀರನ್ನು ಭತ್ತ ಬೆಳೆಯಲು ಅವಲಂಬಸಿದ್ದಾರೆ. ಇಲ್ಲಿ ಮಳೆ ಮತ್ತು ನೀರಾವರಿ ಆಶ್ರಿತ ಬೆಳೆಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ -

1-ಧಾನ್ಯಗಳು

2-ತಂಬಾಕು

3-ರಾಗಿ

4-ಜೋಳ

5-ಭತ್ತ

6-ಇತರೆ ಬೆಳೆಗಳು.

ಜನಸಂಖ್ಯೆ[ಬದಲಾಯಿಸಿ]

ಸುಮಾರು 250 ಮನೆಗಳನ್ನು ಹೊಂದಿರುವ ಈ ಊರಿನಲ್ಲಿ 2000 ಜನರು ವಾಸಿಸುತ್ತಿದ್ದು, 1500 ಕ್ಕಿಂತ ಹೆಚ್ಚಿನ ಮತದಾರರಿದ್ದಾರೆ.

ವಿಶೇಷತೆ[ಬದಲಾಯಿಸಿ]

ಊರಿನಲ್ಲಿ ಪ್ರತಿ ವರ್ಷ ಶ್ರೀ ಬಸವೇಶ್ವರ ಜಾತ್ರೆ ಮತ್ತು ದೊಡ್ಡಮ್ಮ ತಾಯಿ ಉತ್ಸವ ರಮೇ ನಲ್ಲಿ ನಡೆಯುತ್ತದೆ, ಈ ಜಾತ್ರೆ ಎರಡು ದಿನಗಳ ಕಾಲ ನಡೆಯುತ್ತದೆ. ಮತ್ತೆ ಮೂರು ವರ್ಷಗಳಿಗೊಮ್ಮೆ ಕನ್ನಂಬಾಡಿ ಅಮ್ಮನ ಉತ್ಸವ ನಡೆಯುತ್ತೆ. ಇಲ್ಲಿನ ದೊಡಮ್ಮ ವಿಶೇಷ ದೇವತೆ ಆಗಿದೆ.

ಊರಿನ ಪ್ರಮುಖ ದೇವಾಲಯ ಗಳು[ಬದಲಾಯಿಸಿ]

ಊರಿನಲ್ಲಿ ಅನೇಕ ದೇವಾಲಗಳಿವೆ ಅಂತಹ ಪ್ರಮುಖ ದೇವಾಲಯಗಳೆಂದರೆ -

1.ಶ್ರೀ ಗಣಪತಿ ಸ್ವಾಮಿ ದೇವಾಲಯ

2.ಮೈಲಾರಲಿಂಗೇಶ್ವ ದೇವಾಲಯ

3.ದೊಡಮ್ಮ ದೇವಾಲಯ

4.ರಂಗ ಮಂಟಪ.

5.ಬಸವೇಶ್ವರ ದೇವಾಲಯ.

ಊರ ಸುತ್ತಲಿನ ಪ್ರಮುಖ ಪ್ರವಾಸಿತಾಣಗಳು .[ಬದಲಾಯಿಸಿ]

ಸಂಗರಶೆಟ್ಟ ಹಳ್ಳಿ ಸುತ್ತಮುತ್ತ ಅನೇಕ ಪ್ರವಾಸಿತಾಣಗಳಿವೆ ಅವುಗಳೆಂದರೆ -

1.ಚಿಕ್ಕ ಹನಸೋಗೆಯ ತ್ರಿ ಕೂಟ ಜೈನ ಬಸದಿ

2.ಸರಗೂರಿನ ಜಪದ ಕಟ್ಟೆ

3.ಬೆಟ್ಟದಪುರ ಬೆಟ್ಟ

4. ಚುಂಚನಕಟ್ಟೆ ಧನುಶ್ಕೋಟಿ ಜಲಪಾತ

5. ಹೊಸೂರಿನ ರಾಮಲಿಂಗೇಶ್ವರ ದೇವಾಲಯ

6. ರಾಮನಾಥಪುರದ ಸುಬ್ರಮಣ್ಯ ಸ್ವಾಮಿ ದೇವಾಲಯ.