ಸದಸ್ಯ:SHANKAR NARAYANAMURTHY/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಮೋಚನಾ ವೇಗ[ಬದಲಾಯಿಸಿ]

ವಿಮೋಚನಾ ವೇಗವು ಒಂದು ವಸ್ತುವು ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಮೀರಿ ಹೋಗಬೇಕಾದರೆ ಪಡೆದುಕೊಳ್ಳಬೇಕಾದ ಚಲನ ಶಕ್ತಿ. ವಿಮೋಚನಾ ವೇಗವು ಎರಡು ವಸ್ತುಗಳ ಸಾಪೇಕ್ಷ ವೇಗವನ್ನು ಅವಲಂಬಿಸಿದೆ. ಆದ್ದರಿಂದ ಸಾಪೇಕ್ಷ ವಿಮೋಚನಾ ವೇಗವನ್ನು ಎರಡು ವಸ್ತುಗಳ ತುಲನೆಯಲ್ಲಿ ಮಾತ್ರ ಹೇಳಬಹುದು. ವಿಮೋಚನಅ ಶಕ್ತಿಯ ಅಸ್ತಿತ್ವವು ಶಕ್ತಿನಿತ್ಯತೆಯ ನಿಯಮವನ್ನು ಆಧರಿಸಿದೆ. ಆದ್ದರಿಂದ ಗುರುತ್ವಾಕಷ‍ಣೆಯ ಪ್ರಚ್ಛನ್ನ ಶಕ್ತಿಯನ್ನು ಒಂದು ನಿರ್ದಿಷ್ಟ ಸ್ಥಾನದಲ್ಲಿ ಮೀರಬೇಕಾದರೆ ಅಗತ್ಯವಿರುವ ಕನಿಷ್ಟವೇಗವನ್ನು ವಿಮೋಚನಾ ವೇಗ ಎನ್ನಬಹುದು. ಈ ವೇಗದಲ್ಲಿ ವಸ್ತುವು ಸಂಚರಿಸಿದಾಗ ಅದು ಗುರುತ್ವಾಕಷ‍ಣೆಯನ್ನು ಮೀರಿಹೋಗುತ್ತದೆ. ಮತ್ತೊಂದು ದೃಷ್ಟಿಕೋನದಿಂದ ನೋಡುವುದಾದರೆ ವಿಮೋಚನಾವೇಗವು ವಾಸ್ತವದಲ್ಲಿ ಒಂದು ಜವ ಅಷ್ಟೆ. ಇದು ವೇಗವಲ್ಲ . ಎಕೆಂದರೆ ಯಾವುದೇ ನಿರ್ದಿಷ್ಟ ದಿಕ್ಕನ್ನು ವಿಮೋಚನಾ ವೇಗವು ಹೊಂದಿರುವುದಿಲ್ಲ. ಇದು ಒಂದು ಅದಿಶ ಪರಿಮಾಣ. ವಿಮೋಚನಾ ವೇಗವನ್ನು ಒಂದು ಸೂತ್ರದ ಮೂಲಕ ಹೇಳುವುದಾದರೆ ಇದು ಗುರುತ್ವಾಕರ್ಷಣ ಸ್ಥಿರಾಂಕ ಮತ್ತು ಭೂಮಿಯ ದ್ರವ್ಯರಾಶಿ ಇವುಗಳ ಗುಣಲಬ್ದದ ಎರಡರಷ್ಟನ್ನು ಭೂಮಿಯ ತ್ರಿಜ್ಯದಿಂದ ಭಾಗಿಸಿದಾಗ ದೊರೆಯುವ ಭಾಗಲಬ್ದದ ವರ್ಗಮೂಲವೇ ಆಗಿರುತ್ತದೆ. Ve=ವಿಮೋಚನಾವೇಗ G=ಗುರುತ್ವಾಕರ್ಷಣ ಸ್ಥಿರಾಂಕ M=ಭೂಮಿಯ ದ್ರವ್ಯರಾಶಿ r= ಭೂಮಿಯ ತ್ರಿಜ್ಯhttps://en.wikipedia.org/wiki/Escape_velocity ಇಂದು ಎಲ್ಲಾ ಕೃತಕ ಉಪಗ್ರಹಗಳ ಉಡಾವಣೆಯಲ್ಲಿ ಇದೇ ವಿಮೋಚನಾ ತತ್ವ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ವಿಮೋಚನಾ ವೇಗದ ಪರಿಮಾಣವು ಸರ್ ಐಸಾಕ್ ನ್ಯೂಟನ್ ರವರ ವಿಶ್ವ ಗುರುತ್ವಾಕರ್ಷಣ ನಿಯಮವನ್ನು ಅವಲಂಬಿಸಿದೆ. ೨೦ ನೇ ಶತಮಾನದಲ್ಲಿ ಗುರುತ್ವಾಕರ್ಷಣೆಗೆ ಸಂಬಂಧಿಸಿದಂತೆ ಅಲ್ಬರ್ಟ್ ಐನ್ಸ್ಟೈನ್ ರವರ ಪರಿಕಲ್ಪನೆಯು ಅತ್ಯಂತ ಪ್ರಮುಖವಾದುದು

ಶಿರೋಲೇಖ[ಬದಲಾಯಿಸಿ]

ಉಲ್ಲೇಖ: ೧.[೧][೨]

  1. https://en.wikipedia.org/wiki/Isaac_Newton
  2. https://en.wikipedia.org/wiki/Gravity