ಸದಸ್ಯ:Rupesh gowda/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Rupesh gowda/ನನ್ನ ಪ್ರಯೋಗಪುಟ
Tokyo Stock Exchange 1146
Titleಟೋಕಿಯೋ ಸ್ಟಾಕ್ ಎಕ್ಸ್ಚೇಂಜ್

ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್.

ಪರಿಚಯ[ಬದಲಾಯಿಸಿ]

ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಆನ್ನು ಸಂಕ್ಷಿಪ್ತವಾಗಿ ತೋಶೊ ಅಥವಾ ಟಿಎಸ್ಇ ಎಂದು ಕರೆಯಲಾಗುತ್ತದೆ.ಈ ಸ್ಟಾಕ್ ಎಕ್ಸ್ಚೇಂಜ್ ಜಪಾನಿನ ಟೋಕಿಯೋದಲ್ಲಿ ಇದೆ.ಇದರ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳದಿಂದ ಈ ಸ್ಟಾಕ್ ಎಕ್ಸ್ಚೇಂಜ್ ಜಗತ್ತಿನ ನಾಲ್ಕನೆಯ ದೊಡ್ಡದ್ದಾದ ಸ್ಟಾಕ್ ಎಕ್ಸ್ಚೇಂಜ್ ಎಂದು ಹೆಸರುವಾಸಿಯಾಗಿದೆ.ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಪೂರ್ವ ಏಷ್ಯಾ ಮತ್ತು ಏಷ್ಯಾದ ದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಆಗಿದೆ.

ರಚನೆ[ಬದಲಾಯಿಸಿ]

ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್, ಒಂಬತ್ತು ನಿರ್ದೇಶಕರು, ನಾಲ್ಕು ಆಡಿಟರ್ ಮತ್ತು ಎಂಟು ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಕಬುಶಿಕಿ ಗೈಷಾ ಎಂದು ಸಂಘಟಿತವಾಗಿದೆ.ಇದರ ಪ್ರದಾನ ಕಛೇರಿ ಕಬುಟೋಛೊ ಎಂಬ ಜಪಾನಿನಲ್ಲಿನ ಅಥೀ ದೊಡ್ಡ ಆರ್ಥಿಕ ಜಿಲ್ಲೆಯಲ್ಲಿ ಸ್ಥಾಪನೆಯಾಗಿದೆ.ಇದರ ಕಾರ್ಯ ಗಂಟೆಗಳ ಸಮಯ ಬೆಳ್ಳಿಗೆ ೮:೦೦ ರಿಂದ ೧೧:೩೦ ಗಂಟೆಯವರೆಗು, ನಂತರ ಮಧ್ಯಾಹ್ನ ೧೨:೩೦ ರಿಂದ ಸಂಜೆ ೫ ಗಂಟೆಯವರೆಗು ತೆರೆದಿರುತ್ತೆದೆ.ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಪಟ್ಟಿಸಲಾಗಿರುವ ಸ್ಟಾಕ್ಗಳನ್ನು ಹೀಗೆ ಬೇರ್ಪಡಿಸಲಾಗಿದೆ, ಮೊದಲ ವಿಭಾಗವನ್ನು ದೊಡ್ಡ ಕಂಪನಿಗಳಿಗೆ, ಎರಡನೆಯ ವಿಭಾಗವನ್ನು ಮಧ್ಯಮ-ಗಾತ್ರದ ಕಂಪನಿಗಳಿಗೆ ಮತ್ತು ಮದರ್ಸ್ ಎಂಬ ವಿಭಾಗವನ್ನು ಉನ್ನತ ಬೆಳವಣಿಗೆ ಆರಂಭಿಕ ಕಂಪನಿಗಳಿಗೆಂದು ಬೇರ್ಪಡಿಸಲಾಗಿದೆ.ಅಕ್ಟೋಬರ್ ೩೧-೨೦೧೦ ರ ಪ್ರಕಾರ, ೧೬೭೫ ಮೊದಲ ವಿಭಾಗ ಕಂಪನಿಗಳು, ೪೩೭ ಎರಡನೇ ವಿಭಾಗ ಕಂಪನಿಗಳು ಮತ್ತು ೧೮೨ ಮದರ್ಸ್ ಕಂಪನಿಗಳಿವೆ.೯೪ ದೇಶೀಯ ಮತ್ತು 10 ವಿದೇಶೀ ಭದ್ರತಾ ಕಂಪನಿಗಳು ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ವ್ಯಾಪಾರದಲ್ಲಿ ಭಾಗವಹಿಸುತ್ತಿದೆ.

ಪ್ರಸಿದ್ಧ ಯುದ್ಧಪೂರ್ವ ಇತಿಹಾಸ[ಬದಲಾಯಿಸಿ]

ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಅನ್ನು ಮೇ ೧೫, ೧೮೭೮ ರಂದು ಟೋಕಿಯೋ ಕಬುಷಿಕಿ ಟೊರಿಹಿಕಿಜೊ ಎಂದು ಆಗಿನ ಹಣಕಾಸು ಸಚಿವ ಒಕುಮಾ ಶಿಗೆನೊಬು ಮತ್ತು ಬಂಡವಾಳಶಾಹಿ ವಕೀಲ ಶಿಬುಸಾವ ಎಇಚಿ ನಿರ್ದೇಶನದಲ್ಲಿ ಸ್ಥಾಪಿಸಲಾಯಿತು.ಈ ಸ್ಟಾಕ್ ಎಕ್ಸ್ಚೇಂಜಿನಲ್ಲಿ ವ್ಯಾಪಾರ ಜೂನ್ ೧, ೧೮೭೮ ರಂದು ಪ್ರಾರಂಭವಾಯಿತು.೧೯೪೩ರಲ್ಲಿ, ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಜಪಾನಿ ಸಿಟಿಗಳಲ್ಲಿದ್ದ ಇತರೆ ಸ್ಟಾಕ್ ಎಕ್ಸ್ಚೇಂಜಗಳೊಂದಿಗೆ ಸಂಯೋಜನೆಗೊಂಡು ಒಂದು ಸ್ಟಾಕ್ ಎಕ್ಸ್ಚೇಂಜಅನ್ನು ರೂಪಿಸಲಾಯಿತ್ತು.ನಾಗಸಾಕಿ ಬಾಂಬ್ ಘಟನೆಯ ನಂತರ ಸಂಯೋಜಿತ ಸ್ಟಾಕ್ ಎಕ್ಸ್ಚೆಂಜಗಳನ್ನು ಮುಚ್ಚಲಾಯಿತ್ತು ಮತ್ತು ಸ್ವಲ್ಪ ದಿನಗಳ ನಂತರ ಮರುಸಂಘಟನೆಯಾಯಿತು.

ಯುದ್ಧಾನಂತರದ ಇತಿಹಾಸ[ಬದಲಾಯಿಸಿ]

ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಮೇ ೧೬, ೧೯೪೯ ರಂದು ಹೊಸ ಸೆಕ್ಯುರಿಟೀಸ್ ಎಕ್ಸ್ಚೇಂಜ್ ಕಾಯಿದೆಗೆ ಅನುಸಾರವಾಗಿ ತನ್ನ ಪ್ರಸ್ತುತ ಜಪಾನಿನ ಹೆಸರಿನಲ್ಲಿ ಪುನಃ ತೆರೆದಿತ್ತು.ಟೋಕಿಯೋ ಸ್ಟಾಕ್ ಎಕ್ಸ್ಚೇಂಜಿನ ರನೌಪ ೧೯೮೩ ಇಂದ ೧೯೯೦ ರ ವರೆಗು ಅಭೂತಪೂರ್ವವಾಗಿತ್ತು.೧೯೯೦ ರಲ್ಲಿ ವಿಶ್ವದ ೬೦% ಸ್ಟಾಕ್ ಮಾರುಕಟ್ಟೆ ಬಂಡವಾಳದ ಪಾಲಿಗೆ ಕಾರಣವಾಗಿತ್ತು.ಟೋಕಿಯೋ ಸ್ಟಾಕ್ ಎಕ್ಸ್ಚೇಂಜಿನ ೧೯೩೧ರಲ್ಲಿ ಕಟ್ಟಿದ ಕಟ್ಟಡ್ಡದ ಬದಲಿಗೆ ಹೊಸ ಕಟ್ಟಡ್ಡವನ್ನು ಮೇ ೨೩, ೧೯೮೮ ತೆರೆಯಲಾಗಿತ್ತು ಮತ್ತು ಇದರ ವ್ಯಾಪಾರಿ ಮಹಡಿಯನ್ನು ಎಪ್ರಿಲ್ ೩೦, ೧೯೯೯ ರಂದು ಮುಚ್ಚಲಾಗಿತ್ತು ಎಕೆಂದೆರೆ ಆಗಿನ ಎಲ್ಲಾ ಎಕ್ಸ್ಚೇಂಜಿನ ವ್ಯವಹಾರಗಳನ್ನು ಎಲೆಕ್ಟ್ರಾನಿಕ್ ವ್ಯಾಪಾರಗಳಿಗೆ ಬದಲಾಯಿಸಲು.ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಬಾಣಗಳು ಎಂದು ಹೊಸ ಸೌಲಭ್ಯವನ್ನು ಮೇ ೯, ೨೦೦೦ ರಂದು ಪ್ರಾರಂಭಿಸಿದರು.೨೦೧೦ ರಲ್ಲಿ, ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಅದರ ಬಾಣದತುದಿಯ ವ್ಯಾಪಾರಿ ಕೇಂದ್ರವನ್ನು ಪ್ರಾರಂಭಿಸಿತು.೨೦೦೧ ರಲ್ಲಿ, ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಸ್ಟಾಕ್ ಕಂಪನಿಯಾಗಿ ಪುನರ್ರಚನೆಯಾಗಿತ್ತು, ಈ ಮೊದಲು ಇದು ಸಂಘಟಿತ ಸಂಸ್ಥೆಯಾಗಿ ರಚನೆಯಾಗಿತ್ತು ಮತ್ತು ಅದರ ಸದಸ್ಯರೆ ಅದರ ಷೇರುದಾರರಾಗಿದ್ದರು.

ತಂತ್ರಜ್ಞಾನ ಸಮಸ್ಯೆಗಳನ್ನು[ಬದಲಾಯಿಸಿ]

ನವೆಂಬರ ೧, ೨೦೦೫ ರಂದು ಈ ಸ್ಟಾಕ್ ಎಕ್ಸ್ಚೇಂಜ್ ಕೇವಲ ೯೦ನಿಮಿಷಗಳ ಕಾಲ ಕೆಲಸ ಮಾಡಿತ್ತು ಎಕೆಂದೆರೆ ಆಗ ಹೊಸದಾಗಿ ಅಳವಡಿಸಲಾಗಿದ್ದ ವ್ಯವಹಾರ ವ್ಯವಸ್ಥೆಯ ದೋಷಗಳೆ ಅದಕ್ಕೆ ಕಾರಣವಾಗಿತ್ತು, ಈ ಹೊಸದಾಗಿ ಅಳವಡಿಸಲಾಗಿದ್ದ ವ್ಯವಹಾರ ವ್ಯವಸ್ಥೆಯನ್ನು ಫುಜಿತ್ಸು ಎಂಬ ಒಂದು ಕಂಪನಿಯು ತಯಾರಿಸಿತ್ತು ಆದರೆ ಈ ವ್ಯವಹಾರ ವ್ಯವಸ್ತೆಯು ಹೆಚ್ಚಿನ ವ್ಯಾಪಾರ ಸಂಪುಟಗಳನ್ನು ನಿಭಾಯಿಸಲು ಸಹಾಯ ಮಾಡುವಂತಹಾ ವ್ಯವಸ್ತೆಯಾಗಿತ್ತು.ಈ ವ್ಯಪಾರದಲ್ಲಿನ ತಡೆ ಇಡಿ ಇತಿಹಾಸದಲ್ಲೆ ಟೋಕಿಯೋ ಕಂಡ ಕೆಟ್ಟ ದಿನಗಳೆನ್ನಬಹುದು.ವ್ಯಾಪಾರವನ್ನು ನಾಲ್ಕು ಮತ್ತು ಒಂದು ಅರ್ಧ ಗಂಟೆಗಳ ಕಾಲದವರೆಗೆ ಸ್ಥಗಿತಗೊಳಿಸಲಾಯಿತು.

ಕೆಲಸದ ಸಮಯ[ಬದಲಾಯಿಸಿ]

ಟೋಕಿಯೋ ಸ್ಟಾಕ್ ಎಕ್ಸ್ಚೇಂಜಿನ ಸಾಮಾನ್ಯ ವಹಿವಾಟಿನ ಸಮಯವು ಬೆಳಿಗ್ಗೆ ೯:೦೦ ರಿಂದ ೧೧:೩೦ ಯವರೆಗು, ಮಧ್ಯಾಹ್ನ ೧೨:೩೦ ರಿಂದ ೩:೩೦ ಯವರೆಗು ಈ ಸಮಯವು ಶನಿವಾರ, ಬಾನುವಾರ ಮತ್ತು ಎಕ್ಸ್ಚೇಂಜ್ ಘೋಷಿಸಿರುವ ರಜೆ ದಿನಗಳನ್ನು ಬಿಟ್ಟು ಬೇರೆ ದಿನಗಳಿಗೆ ಅನ್ವಯಿಸುತ್ತದೆ.ಎಕ್ಸ್ಚೇಂಜಿನ ಕೆಲವು ರಜೆ ದಿನಗಳೆಂದೆರೆ: ಹೊಸ ವರ್ಷದ ದಿನ, ಕಮಿಂಗ ಆಫ಼ ಎಜ್ ದಿನ, ರಾಷ್ಟ್ರೀಯ ಫೌಂಡೇಶನ್ ದಿನ, ಮೇಷ ಸಂಕ್ರಾಂತಿಯ ದಿನ, ಶೋವಾ ದಿನ, ಸಂವಿಧಾನದ ಸ್ಮಾರಕ ದಿನ, ಹಸಿರು ದಿನ, ಮಕ್ಕಳ ದಿನ, ಮೆರೈನ ದಿನ, ವಯಸ್ಸಾದವರಿಗೆ ಗೌರವ ಸೂಚಿಸುವ ದಿನ, ಶರತ್ಕಾಲದ ವಿಷುವತ್ ಸಂಕ್ರಾಂತಿ, ಆರೋಗ್ಯ ಮತ್ತು ಕ್ರೀಡೆ ದಿನ, ಕಲ್ಚರ್ ದಿನ, ಲೇಬರ್ ಥ್ಯಾಂಕ್ಸ್ಗಿವಿಂಗ್ ದಿನ, ಮತ್ತು ಚಕ್ರವರ್ತಿಯ ಜನ್ಮದಿನಕ್ಕೆ ರಜೆಗಳನ್ನು ಕೊಡಲಾಗುತ್ತದೆ.

ಮೈತ್ರಿಗಳು[ಬದಲಾಯಿಸಿ]

ಲಂಡನ್ ಸ್ಟಾಕ್ ಎಕ್ಸ್ಚೇಂಜ್ (ಎಲ್ಎಸ್ಇ) ಮತ್ತು ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಜಂಟಿಯಾಗಿ ವ್ಯಾಪಾರ ಉತ್ಪನ್ನಗಳು ಮತ್ತು ಪಾಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರಲ್ಲಿ ಮುಂದುವರೆದಿದ್ದಾರೆ, ಇದು ಅಂತರಾಷ್ಟ್ರಿಯ ಮಟ್ಟದಲ್ಲಿ ಸ್ಪರ್ಧೆಯನ್ನು ಹುಟ್ಟುಹಾಕಿದೆ.ಜುಲೈ ೨೦೦೮ ರಲ್ಲಿ ಲಂಡನ ಸ್ಟಾಕ್ ಎಕ್ಸ್ಚೇಂಜ್ ಮತ್ತು ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಒಂದು ಹೊಸ ಜಂಟಿಯನ್ನು ಘೋಷಿಸಿತು, ಈ ಜಂಟಿಯು ಎಲ್ಎಸ್ಇ ರವರ ಪರ್ಯಾಯ ಹೂಡಿಕಾ ಮಾರುಕಟ್ಟೆಯ ಮೇಲೆ ಆಧಾರಿತವಾಗಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

http://www.jpx.co.jp/english/corporate/jpx-profile/tse/05.html http://www.slideshare.net/FrancineZacharyKwan/tokyo-stock-exchange-35782650