ಸದಸ್ಯ:Rubiya mercy/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೆಗೋಷಿಯಬಲ್ ಪತ್ರಗಳ ಶಾಸನ
negotiable instruments act


ನೆಗೋಷಿಯಬಲ್ ಪತ್ರಗಳ ಶಾಸನ[ಬದಲಾಯಿಸಿ]

ಭಾರತದಲ್ಲಿ ನೆಗೋಷಿಯಬಲ್ ಪತ್ರಗಳಿಗೆ ಸಂಬಂಧಿಸಿದ ನ್ಯಾಯವು ೧೮೮೧ನೇ ಭಾರತೀಯ ನೆಗೋಷಿಯಬಲ್ ಪತ್ರಗಳ ಶಾಸನದಲ್ಲಿ ಅಡಕವಾಗಿದೆ. ನೆಗೋಷಿಯಬಲ್ ಪತ್ರ ಎನ್ನುವ ಪದಸಂಕಲನವು ಒಂದು ವಾಗ್ದಾನಪತ್ರ, ವಿನಿಯಪತ್ರ ಅಥವಾ ವಾಹಕನಿಗೆ ಅಥವಾ ಅಜ್ಞಾನುಸಾರ ಪಾವತಿಯಾಗಬೇಕಾದ ಚೆಕ್ಕು(cheque) ಎಂದು ಅರ್ಥವಾಗುತ್ತದೆ, ಎಂಬುದಾಗಿ ಶಾಸನದ ೧೩ನೇ ಪ್ರಕರಣವು ನಿರೂಪಿಸುತ್ತದೆ. ಈ ನಿರೂಪಣೆಯು ಕೇವಲ ನಿದರ್ಶನೀಯವಾಗಿದೆಯೆ ವಿನಾ ನೆಗೋಷಿಯಬಲ್ ಪತ್ರಗಳ ಲಕ್ಷಣ, ಸ್ವಭಾವಗಳನ್ನು ವಿವರಿಸುವುದಿಲ್ಲ. ಆದ್ದರಿಂದ, ಕೆಳಗೆ ಕಾಣಿಸಿರುವ ಎರಡು ಷರತ್ತುಗಳನ್ನು ಪೂರೈಸುವಂಥ ಇನ್ನಾವ ಪತ್ರವಾದರೂ ನೆಹಗೋಷಿಯಬಲ್ ಪತ್ರಗಳ ಪಟ್ಟಗೆ ಸೇರಬಹುದು:- (೧)ಅದು ವ್ಯವಹಾರ ರೂಢಿಯಲ್ಲಿ ಕೇವಲ ಕೈ ಬದಲಾವಣೆಯಿಂದಲೇ ಹಣದಂತೆ ವರ್ಗಯೋಗ್ಯಪಾಗಿದ್ದರೆ, ಮತ್ತು (೨)ತನ್ನ ಹೆಸರಿನ ಮೇಲೆ ತತ್ಕಾಲಕ್ಕೆ ಅದನ್ನು ಹೊಂದಿರುವವನು ಅಥವಾ ಧಾರಕನು ಹಣ ಬರಮಾಡಿಕೊಳ್ಳುವಂತೆ ದಾವ ಹೂಡಲು ಅದು ಅರ್ಹವಾಗಿದ್ದರೆ.ಯಾರಿಂದ ಪಡೆಯಲಾಗಿದೆಯೋ ಅವನ ಸ್ವಾಮಿತ್ವದಲ್ಲಿ ಏನೊಂದು ನ್ಯೂನತೆ ಇದ್ದರೂ ಸಹ, ಸದ್ಭಾವ ನಾಪೂರ್ವಕವಾಗಿ ಬೆಲೆಗೆ ಪ್ರತಿಯಾಗಿ ಪಡೆದ ಪ್ರತಿಯೊಬ್ಬನೂ ಪತ್ರದ ಉತ್ತಮ ಸ್ವಾಮಿತ್ವವನ್ನುಗಳಿಸಲು ಯೋಗ್ಯವಾದ ಒಂದು ಪತ್ರವೇ ನೆಗೋಷೀಯಬಲ್ ಪತ್ರ ಎಂದು ನ್ಯಾಯಮೂರ್ತಿ ವಿಲ್ಲಿಸ್ ಮಹಾಶಯ ನಿರೂಪಿಸಿದ್ದಾನೆ. ಈ ನಿರೂಪಣೆಯೇ ಬಹು ಸಮ್ಮತವಾಗಿದ್ದು, ಕೆಳಗೆ ಕಂಡ ಮುಖ್ಯಾಂಶಗಳನ್ನೊಳಗೊಂಡಿರುತ್ತದೆ:- (೧)ಕೇವಲ ಕೈ ಬದಲಾವಣೆಯಿಂದಲೇ ಅದರಲ್ಲಿನ ಸ್ವಾಮಿತ್ವವು ಒಬ್ಬನಿಂದ ಇನ್ನೊಬ್ಬನಿಗೆ ವರ್ಗವಾಗುತ್ತದೆ. (೨)ವರ್ಗಾಯಿಸಿದವನ ಅಥವಾ ಹಿಂದಿನ ಧಾರಕರ ಸ್ವಾಮಿತ್ವದಲ್ಲಿನ ದೋಷಗಳು ಯಥಾವಿಧಿಧಾರಕನನ್ನು ಬಾಧಿಸುವುದಿಲ್ಲ. (೩)ಯಥಾವಿಧಿಧಾರಕನು ತನ್ನ ಹೆಸರಿನ ಮೇಲೆಯೇ ದಾವಾ ಹೂಡಬಹುದು. ನೆಗೋಷಿಯಬಲ್ ಪತ್ರಗಳಿಗೆ ಸಂಬಂಧಿಸಿದ ಮುಂಭಾವನೆಗಳು ಮತ್ತು ಸ್ವಯಂಕೃತ ಪ್ರತಿಬಂಧಕತ್ವ ನಿಯಮಗಳು ೧೧೮-೧೨೨ನೇ ಪ್ರಕರಣಗಳು:

ತದ್ವಿರುದ್ಧವಾದುದನ್ನು ರುಜುವಾತು ಪಡಿಸುವವರೆಗೂ ಕೆಳಗಿನ ಮುಂಭಾವನೆಗಳನ್ನು ಸ್ವೀಕರಿಸಲೇಬೇಕೆಂದು ಶಾಸನದ ೧೧೮ನೇ ಪ್ರಕರಣವು ವಿಧಿಸುತ್ತದೆ:- (೧)ಪ್ರತಿಯೊಂದು ನೆಗೋಷಿಯಬಲ್ ಪತ್ರವೂ ಪ್ರತಿಫಲಕ್ಕಾಗಿಯೇ ಮಾಡಲಾಗಿದೆ ಅಥವಾ ಬರೆಯಲಾಗಿದೆ ಅಥವ ಒಪ್ಪಲಾಗಿದೆ ಅಥವಾ ನೆಗೋಷಿಯಬಲ್ ಆಗಿದೆ. (೨)ಅದು ಮಾಡಲಾದ ಅಥವಾ ಬರೆಯಲಾದ ತಾರೀಖನ್ನೇ ಕಾಣಿಸಿಕೊಂಡಿದೆ (೩)ಒಪ್ಪಲಾದ ಪ್ರತಿಯೊಂದು ವಿನಿಮಯಪತ್ರವೂ ಅದರ ಪರಿಪಕ್ವ ದಿನಪಾವತಿಗೆ ಸಿದ್ದವಾದ ದಿನಕ್ಕೆ ಮುಂಚೆಯೇ ಒಂದು ಯುಕ್ತ ಅವಧಿಯೊಳಗೆ ಒಪ್ಪಲಾಗಿದೆ. (೪)ಒಂದು ನೆಗೋಷಿಯಬಲ್ ಪತ್ರದ ಪ್ರತಿಯೊಂದು ವರ್ಗಾ ವಣೆಯೂ ಅದರ ಪರಿಪಕ್ವ ದಿನಕ್ಕೆ ಮುಂಚೆಯೇ ಆಗಿದೆ. (೫)ಪತ್ರದಮೇಲೆ ಕಾಣುವ ಹಿಂಬರೆಹಗಳು ಅದರಮೇಲೆ ಕಂಡಕ್ರಮದಂತೆಯೇ ಬರೆಯಲಾಗಿವೆ. (೬)ಪತ್ರವು ಕಳೆದುಹೋಗಿದ್ದಾಗ ಅಥವಾ ನಾಶವಾಗಿದ್ದಾಗ, ಅದಕ್ಕೆ ವಿಧಿವತ್ತಾಗಿ ಸ್ಟಾಂಪು ಹಚ್ಚಿತ್ತು ಮತ್ತು ಸ್ಟಾಂಪು ಹೊಡೆದು ಹಾಕಲಾಗಿತ್ತು. (೭)ಒಂದು ನೆಗೋಷಿಯಬಲ್ ಪತ್ರದ ಧಾರಕನು ಯಥಾವಿಧಿ ಧಾರಕನಾಗಿರುತ್ತಾನೆ.

ಅನಾದರಿಸಲ್ಪಟ್ಟ೯೦ಪತ್ರದ ಮೇಲೆ ಹೂಡಿದ ದಾವಾದಲ್ಲಿ, ತದ್ವಿರುದ್ಧವಾದುದನ್ನು ರುಜುವಾತುಪಡಿಸುವವರೆಗೂ ಪ್ರತಿ ಭಟನಾ ಸಮರ್ಥನೆ ದಾಖಲೆಯನ್ನು ರುಜುವಾತು ಮಾಡಿದ ಕೂಡಲೆ, ನ್ಯಾಯಾಲಯವು ಅನಾದರಣೆಯ ವಾಸ್ತವಾಂಶವನ್ನು ಮುಂಭಾವಿಸಬೇಕು.

ಯಥಾವಿಧಿಧಾರಕನು ನೆಗೋಷಿಯಬಲ್ ಪತ್ರದ ಮೇಲೆ ಹೂಡಿದ ದಾವಾದಲ್ಲಿ, ಪತ್ರದ ಮೂಲತಃ ಸೃಷ್ಟಿ ಅಥವಾ ಬರೆಹದ ನ್ಯಾಯಸಮ್ಮತ ಅಥವಾ ಊರ್ಜಿತತ್ವವನ್ನು ನಿರಾಕರಿಸಲು ವಾಗ್ದಾನಪತ್ರದ ಕರ್ತ, ವಿನಿಮಯ ಪತ್ರ ಬರೆಹಗಾರ,ಚೆಕ್ಕು ಬರೆದು ಕೊಟ್ಟುವ ಮತ್ತು ವಿನಿಮಯಪತ್ರ ಬರೆಹಗಾರನ ಮಾನಕ್ಕೋಸ್ಕರ ಒಪ್ಪಿಗೆ ಕೊಟ್ಟವರೆಲ್ಲರಿಗೂ ಪ್ರತಿಬಂಧಕವಿರುತ್ತದೆ.

ಯಥಾವಿಧಿಧಾರಕನು ನೆಗೋಷಿಯಬಲ್ ಪತ್ರದ ಮೇಲೆ ಹೂಡಿದ ದಾವಾದಲ್ಲಿ, ಹಣಪಾವತಿ ಹಕ್ಕುದಾರನುವಾಗ್ದಾನ ಪತ್ರ ಅಥವಾ ವಿನಿಮಯಪತ್ರ ಕಾಲಕ್ಕೆ ಹಿಂಬರೆಹದ ಮೂಲಕ ವರ್ಗಾವಣೆ ಮಾಡುವ ಸಾಮರ್ಥ್ಯವನ್ನು, ಅಜ್ಞಾನುಸಾರ ಪಾವತಿಯಾಗಬೇಕಾದ ಒಂದು ವಾಗ್ದಾನಪತ್ರ ಅಥವಾ ಒಂದು ವಿನಿಮಯಪತ್ರದ ಕರ್ತನಾಗಲಿ, ಅಥವಾ ಬರೆಹಗಾರನಾಗಲಿ ನಿರಾಕರಿಸಲು ಪ್ರತಿಬಂಧಕವಿರುತ್ತದೆ.

ನೆಗೋಷಿಯಬಲ್ ಪತ್ರದ ಹಕ್ಕು ವರ್ಗಾವಣೆ ಕೊಟ್ಟವನು ಅವನ ನಂತರದ ಯಾರೊಬ್ಬ ಧಾರಕನು ಹೂಡಿದದಾವಾದಲ್ಲಿ, ಆ ಪತ್ರದ ತನ್ನ ಹಿಂದಿನ ಕಕ್ಷಿಗಳ ರುಜುವನ್ನಾಗಲಿ ಅಥವಾ ಒಪ್ಪಂದ ಮಾಡಿ ಕೊಳ್ಳವ ಅವರ ಸಾಮರ್ಥ್ಯವನ್ನಾಗಲಿ ನಿರಾಕರಿಸಲು ಪ್ರತಿಬಂಧಕವಿರುತ್ತದೆ.

ವಾಗ್ದಾನಪತ್ರ[ಬದಲಾಯಿಸಿ]

ವಾಗ್ದಾನಪತ್ರ ಎಂದರೆ"ಕರ್ತನಿಂದ ರುಜುಮಾದಡಲ್ಫಟ್ಟು, ಗೊತ್ತಾದ ಒಬ್ಬ ವ್ಯಕ್ತಿಗೆ ಅಥವಾ ಅವನ ಅಜ್ಞಾನುಸಾರ ಗೊತ್ತಾದ ಒಂದು ಮೊತ್ತದ ಹಣವನ್ನು ಮಾತ್ರ ಪಾವತಿ ಮಾಡುತ್ತೇನೆಂದ್ಯ್ ಷರತ್ತು ಹಿತವಾದ ವಾಗ್ದಾನವನ್ನೊಳಗೊಂಡ ಒಂದು ಲಿಖಿತಪತ್ರವೇ(ಒಂದು ಬ್ಯಾಂಕ್ ನೋಟು ಅಥವಾ ಕರೆನ್ಸಿ ನೋಟು ಆಗಿರದ)ಒಂದು ವಾಗ್ದಾನಪತ್ರ." ಒಂದು ವಾಗ್ದಾನಪತ್ರವು ಕೆಳಗೆ ಕಂಡ ಅವಶ್ಯಕ ಅಂಶಗಳನ್ನೊಳ ಗೊಂಡಿರುತ್ತದೆ:- (೧)ಅದು ಲಿಖಿತನಾದುದಾಗಿರಬೇಕು; ಕೇವಲ ಬಾಯಿಮಾತಿನ ವಾಗ್ದಾನವು ಸಾಲದು. (೨)ಅದು ಹಣಕೊಡುತ್ತ್ಟೇನೆಂಬ ಸ್ಪಷ್ಟ ಅಥವಾ ವ್ಯಕ್ತ ವಾಗ್ದಾನ ವನ್ನೊಳ್ಗೊಂಡಿರಬೇಕು. (೩)ವಾಗ್ದಾನವು ಷರತ್ತು ರಹಿತವಾಗಿರಬೇಕು. (೪)ಕೊಡಬೇಕಾದ ಹಣದ ಮೊತ್ತವೂ ನಿಶ್ಚಿತವಾಗಿರಬೇಕು.

ವಿನಿಮಯ ಪತ್ರ[ಬದಲಾಯಿಸಿ]

ವಿನಿಮಯ ಪತ್ರ ಎಂದರೆ"ಕರ್ತನಿಂದ ರುಜು ಮಾಡಲ್ಪಟ್ಟು, ಗೊತ್ತಾದ ಒಬ್ಬ ವ್ಯಕ್ತಿಯು, ಗೊತ್ತಾದ ಇನ್ನೊಬ್ಬ ವ್ಯಕ್ತಿಗೆ ಅಥವಾ ಅವನ ಅಜ್ಞಾನುಸಾರ ಗೊತ್ತಾದ ಒಂದು ಮೊತ್ತದ ಹಣವನ್ನು ಪಾವತಿ ಮಾಡುವಂತೆ ಷರತ್ತು ರಹಿತವಾದ ಅಜ್ಞಾಯನ್ನೊಳಗೊಂಡ ಲಿಖಿತಪತ್ರವೇ ಒಂದು ವಿನಿಮಯ ಪತ್ರ." ಒಂದು ವಿನಿಮಯ ಪತ್ರವು ಕೆಳಗೆ ಕಂಡ ಮುಖ್ಯಾಂಶಗಳನ್ನೊಳಗೊಂಡಿರುತ್ತದೆ:- (೧)ಅದು ಲಿಖಿತವಾದುದಾಗಿರಬೇಕು. (೨)ಅದು ಹಣ ಪಾವತಿ ಮಾಡಬೇಕೆಂಬ ಒಂದು ಷರತ್ತು ದಹಿತ ಮತ್ತು ಸ್ಪಷ್ಟ ಅಥವಾ ವ್ಯಕ್ತ ಅಜ್ಞಾಯನ್ನೊಳಗೊಂಡಿರಬೇಕು. (೩)ವಿನಿಮಯಪತ್ರ ಬರೆಹಗಾರ, ಅಜ್ಞಾಪಿತ ಮತ್ತು ಹಣಪಾವತಿ ಹಕ್ಕುದಾರರು ಗೊತ್ತಾದ ವ್ಯಕ್ತಿಗಳಾಗಿರಬೇಕು. (೪)ಕೊಡಬೇಕಾದ ಹಣದ ಮೊತ್ತವೂ ನಿಶ್ಚಿತವಾಗಿರಬೇಕು.

ಅನುಗ್ರಹ ವಿನಿಮಯಪತ್ರ[ಬದಲಾಯಿಸಿ]

ಅನುಗ್ರಹ ವಿನಿಮಯಪತ್ರ ಎಂದರೆ ಇನ್ನೊಬ್ಬ ವ್ಯಕ್ತಿಯು ಒಂದು ವಿನಿಮಯಪತ್ರವನ್ನು ಪ್ರಯೋಗಿಸಿಕೊಂಡುವಾಯಿದ ದಿನ ಹಣಪಾವತಿ ಮಾಡುವನೆಂಬ ನಿರೀಕ್ಷಣೆಯಿಂದ ಅವನಿಗೆ ಅನುಕೂಲ ಮಾಡಿಕೊಡುವ ಉದ್ದೇಶ, ಒಬ್ಬ ವ್ಯಕ್ತಿಯು ಯಾವ ಪ್ರತಿ ಫಲವನ್ನೂ ಪಡೆಯದೆ ಆ ಪತ್ರದ ಮೇಲೆ, ವಿನಿಮಯಪತ್ರ ಬರೆಹಗಾರ ಅಥವಾ ಒಪ್ಪಿಗೆ ನೀಡಿದವ ಅಥವಾ ಹಿಂಬರೆಹಗಾರನಾಗಿ ರುಜು ಮಾಡಿರುವಂಥ ಪತ್ರವನ್ನ ಅನುಗ್ರಹ ವಿನಿಮಯಪತ್ರ ಎಂದು ಕರೆಯಬಹುದು. ಆ ರೀತಿ ಅನುಕೂಲಪಡೆದ ವ್ಯಕ್ತಿಯು ಪತ್ರ ನಮೂದಿತ ಹಣ ಕೊಟ್ಟ ಮೇಲೆ, ಅವನ ಅನುಕೂಲಕ್ಕಾಗಿಯೇ ಪತ್ರದ ಕಕ್ಷಿಯಾದವನಿಂದ ಆ ಹಣವನ್ನು ಬರಮಾಡಿಕೊಳ್ಳಲಾರ, ಆದರೆ ಅಂಥ ಪತ್ರವು ಯಥಾವಿಧಿಧಾರಕನ ವಶಕ್ಕೆ ಬಂದಾಗ, ಅವನು ಪತ್ರದಲ್ಲಿ ನಮೂದಿತವಾದ ಹಣವನ್ನು ಹಿಂದಿನ ಯಾವ ಕಕ್ಷಿಯಿಂದಲಾದರೂ ಕೇವಲ ಇನ್ನೊಬ್ಬನ ಅನುಕೂಲಕ್ಕಾಗಿಯೇ ರುಜು ಮಾಡಿರುವವನನ್ನೂ ಒಳಗೊಂಡು ಸಹ, ಬರಮಾಡಿಕೊಳ್ಳಬಹುದು.

ಪರಿಪಕ್ವತೆ ಎಣಿಕೆಗೆ ಸಂಬಂಧಿಸಿದ ನಿಯಮಗಳು: ಒಂದು ವಾಗ್ದಾನ ಪತ್ರ ಅಥವಾ ವಿನಿಮಯಪತ್ರದ ಪರಿಪಕ್ವ ದಿನವನ್ನು ಈ ಕೆಳಕಂಡ ರೀತಿ ಎಣಿಸಲಾಗುತ್ತದೆ:- (೧)ಅದು ಹುಟ್ಟದ ದಿನದ ಆನಂತರ ಅಥವಾ ದರ್ಶಿಸಿದ ಆನಂತರಗೊತ್ತಾದ ಕೆಲವು ತಿಂಗಳುಗಳಿಗೆ ಹಣಪಾವತಿ ಯೋಗ್ಯವಾಗಿದ್ದರೆ, ಆ ತಿಂಗಳುಗಳು ಕಳೆದು ಅನುಗುಣವಾದ ತಿಂಗಳಿನಲ್ಲಿ ಅದೇ ತಾರೀಖಿನ ಆನಂತರ ಮೂರನೇ ದಿವಸ ಹಣಪಾವತಿ ಯೋಗ್ಯವಾರುತ್ತದೆ. (೨)ಅವಧಿ ಮುಕ್ತಾಯವಾಗುವ ತಿಂಗಳಿನಲ್ಲಿ ಅನುಗುಣವಾದ ತಾರೀಖು ಇರದಿದ್ದರೆ,ಅದೇ ತಿಂಗಳಿನ ಕೊನೆಯ ದಿನ ಅವಧಿ ಮುಕ್ತಾಯ ವಾಗುತ್ತದೆ. (೩)ಮೇಲ್ಕಂಡ ಎಲ್ಲಾ ಸಂದರ್ಭಗಳಲ್ಲೂ ಪರಿಪಕ್ವ ದಿನದ ಎಣಿಕೆ ಮಾಡುವಾಗ, ಅದನ್ನು ಬರೆಯಲಾದ ದಿನ ಅಥವಾ ಒಪ್ಪಿಗೆಗೋಸ್ಕರ ಹಾಜರ್ಮಾಡಲಾದ ದಿನವನ್ನು ಬಿಟ್ಟುಬಿಡಬೇಕು. (೪)ಒಂದು ವಿನಿಮಯಪತ್ರ ಅಥವಾ ವಾಗ್ದಾನಪತ್ರ ಪರಿಪಕ್ವವಾಗುವ ದಿನವು ಒಂದು ರಜಾ ದಿನವಾಗಿದ್ದರೆ ಅದರ ಹಿಂದಿನ ವ್ಯವಹಾರ ದಿನವೇ ಹಣ ಪಾವತಿಮಾಡಲು ಕೂಡಿಬಂದಿತ್ತು ಎಂದು ಭಾವಿಸಲಾಗುತ್ತದೆ. ಹಿಂಬರೆಹ:ಒಂದು ನೆಗೋಷಿಯಬಲ್ ಪತ್ರದ ಒಬ್ಬ ಕರ್ತ ಅಥವಾ ಧಾರಕನು ನೆಗೋಷಿಯಬಲ್ ಮಾಡುವ ಉದ್ದೇಶಕ್ಕೋಸ್ಕರ ಸಹಿ ಅಥವಾ ರುಜು ಮಾಡುವುದೇ ಹಿಂಬರೆಹ. ಇದು ಪತ್ರದ ಮುಖಭಾಗದಮೇಲೆ ಅಥವಾ ಪತ್ರದಮೇಲೆ ಸ್ಥಳವಿರದಿದ್ದರೆ ಅದಕ್ಕೆ ಅಂಟಿಸಿರುವ ಚೀಟಿಯ ಮೇಲೆ ಇರಬಹುದಾದರೂ, ಸಾಮಾನ್ಯವಾಗಿ ಪತ್ರದ ಹಿಂಭಾಗದಮೇಲೆ ಇರುತ್ತದೆ.

ಹಿಂಬರೆಹ ವರ್ಗಗಳು[ಬದಲಾಯಿಸಿ]

(೧)ತೆರದ ಅಥವಾ ಸಾಮಾನ್ಯ ಹಿಂಬರೆಹ:ಹಿಂಬರೆಹಗಾರನು ಪತ್ರದ ಹಿಂಭಾಗದ ಮೇಲೆ ತನ್ನ ರುಜು ಅಥವಾ ಸಹಿಯನ್ನು ಮಾತ್ರ ಬರೆದರೆ, ಅದು ತೆರೆದ ಅಥವಾ ಸಾಮಾನ್ಯ ಹಿಂಬರೆಹವೆಂದು ಹೇಳಬಹುದು. ಮೊದಲಿಗೆ ಅಜ್ಞಾನುವರ್ತಿ ಹಣಪಾವತಿ ಯೋಗ್ಯವಾಗಿದ್ದರೂ, ಆ ರೀತಿಯ ಹಿಂಬರೆಹ ಹೊಂದಿರುವ ಪತ್ರವು, ವಾಹಕಾನುವರ್ತಿ ಹಣ ಪಾವತಿ ಯೋಗ್ಯವಾಗುತ್ತದೆ. (೨)ವಿಸ್ಗಿಷ್ಟ ಅಥವಾ ಪರಿಪೂರ್ಣ ಹಿಂಬರೆಹ: ಹಿಂಬರೆಹಗಾರನು ತನ್ನ ರುಜುಮಾಡಿ ಮತ್ತು ಪತ್ರದಲ್ಲಿ ನಮೂದಿಸಿರುವ ಹಣವನ್ನು ಗೊತ್ತಾದ ಒಬ್ಬ ವ್ಯಕ್ತಿಗೆ ಅಥವಾ ಅವನ ಅಜ್ಞಾನುಸಾರ ಪಾವತಿಮಾಡಬೇಕೆಂಬ ಸೂಚನೆಯನ್ನು ಸೇರಿಸಿ ಬರೆದಾಗ, ಅದು ವಿಶಿಷ್ಟ ಅಥವಾ ಪರಿಪೂರ್ಣ ಹಿಂಬರೆಹವಾಗುತ್ತದೆ. ಒಂದು ತೆರೆದ ಹಿಂಬರೆಹವನ್ನು, ಪತ್ರ ವರ್ಗಪಡೆದವನ ಅಜ್ಞಾನುಸಾರ ಹಣ ಪಾವತಿಮಾಡಬೇಕೆಂದು ಸೇರಿಸುವುದರ ಮೂಲಕ, ಒಂದು ವಿಶಿಷ್ಟ ಅಥವಾ ಪರಿಪೂರ್ಣ ಹಿಂಬರೆಹವನ್ನಾಗಿ ಮಾಡಬಹುದು. (೩)ಪರಿಮಿತಿಗೊಳಪಡಿಸುವ ಹಿಂಬರೆಹ:ಪತ್ರದಲ್ಲಿನ ಸ್ವಾಮಿತ್ವದ ಪೂರ್ಣ ಮತ್ತು ಷರತ್ತುದಹಿತ ವರ್ಗಾವಣೆ ಮಾಡದೆ, ಹಿಂಬರೆಹದಲ್ಲಿ ಸೂಚಿಸಿರುವಂತೆ ಪತ್ರ ಸಂಬಂಧ ವರ್ತಿಸಲು ಅಧಿಕಾರ ಸ್ಪಷ್ಟಪಡಿಸುವ ಅಥವಾ, ಪತ್ರದ ಮುಂದಿನ ನೆಗೋಷಿಯಷನ್ ನನ್ನು ಮಿತಿಗೊಳಿಸುವ ಅಥವಾ ನಿಷೇಧಿಸುವ, ಹಿಂಬರೆಹವೇ ಪರಿಮಿತಿಗೊಳಪಡಿಸುವ ಹಿಂಬರೆಹ. (೪)ಭಾಗ ಮಾತ್ರದ ಹಿಂಬರೆಹ : ಪತ್ರದಮೇಲಿನ ಹಣದಲ್ಲಿ ಒಂದು ಭಾಗ ಮಾತ್ರ, ಹಿಂಬರೆಹಧಾರಕನಿಗೆ ವರ್ಗವಾಗುವಂತೆ ಅರ್ಥಕೊಡುವ ಹಿಂಬರೆಹವು, ಭಾಗ ಮಾತ್ರದ ಹಿಂಬರೆಹವಾಗಿರುತ್ತದೆ. ಭಾಗ ಮಾತ್ರದ ಹಿಂಬರೆಹವು ಪತ್ರದ ನೆಗೋಷಿಯೇಷನ್ನಿನ ಪರಿಣಾಮವನ್ನುಂಟುಮಾಡುವುದಿಲ್ಲ. ಬರಬೇಕಾದ ಹಣದಲ್ಲಿ ಒಂದು ಭಾಗ ಮಾತ್ರಕ್ಕೆ, ಪತ್ರ ನೆಗೋಷಿಯೇಟ್ ಮಾಡುವುದನ್ನು ೫೬ನೇ ಪ್ರಕರಣವು ನಿಷೇಧಿಸುತ್ತದೆ. ನೆಗೋಷಿಯೇಷನ್ ನ ಉದ್ದೇಸ್ಗಕ್ಕಾಗಿ ಒಂದು ಹಿಂಬರೆಹವು ನ್ಯಾಯಸಮ್ಮತವಾಗಿರಲು, ಪತ್ರದ ಪೂರ್ಣ ಮೊಬಲಗನ್ನು ಒಳಗೊಂಡಿರಬೇಕು.ಏಕೆಂದರೆ, ಒಂದು ವೈಯಕ್ತಿಕ ಒಪ್ಪಂದವನ್ನು ವಿಭಾಗಮಾಡಲು ಸಾಧ್ಯವಿಲ್ಲ. (೫)ಷರತ್ತಿಗೊಳಪಟ್ಟ ಹಿಂಬರೆಹ:ಹಿಂಬರೆಹಗಾರನ ಜವಾಬ್ದಾರಿಯನ್ನು ಮಿತಿಗೊಳಿಸುವಂಥ ಅಥವಾ ಇಲ್ಲವೆನಿಸುವಂಥ ಹಿಂಬರೆಹನೇ ಷರತ್ತಿಗೊಳಪಟ್ಟ ಹಿಂಬರೆಹ. ಇದು ಪರಿಮಿತಿಗೊಳಪಡಿಸುವ ಹಿಂಬರೆಹವು ಪತ್ರದ ಮುಂದಿನ ನೆಗೋಷಿಯೇಷನ್ ನನ್ನು ಮಿತಿಗೊಳಿಸಿದರೆ ಅಥವಾ ನಿಷೇಧಿಸಿದರೆ, ಈ ಹಿಂಬರೆಹವು ಹಿಂಬರೆಹಗಾರನ ಜವಾಬ್ದಾರಿಯನ್ನು ಮಿತಿಗೊಳಿಸುತ್ತದೆ. ಒಬ್ಬ ಹಿಂಬರೆಹಗಾರನು ಹಿಂಬರೆಹದಲ್ಲಿ ಸ್ಪಷ್ಟಪಡಿಸುವುದರ ಮೂಲಕ ಧಾರಕನ ಕಡೆಗಿರುವ ತನ್ನ ಜವಾಬ್ದಾರಿಯನ್ನು ಮಿತಿಹೊಳಿಸಬಹುದು ಅಥವಾ ಕಡೆಗಿರುವ ತನ್ನ ಜವಾಬ್ದಾರಿಯನ್ನು ಮಿತಿಗೊಳಿಸಬಹುದು ಅಥವಾ ಇಲ್ಲವೆನಿಸಬಹುದು. ಇದನ್ನು ಈ ಕೆಳಗಿನ ಯಾವ ರೀತಿಯಿಂದಲಾದರೂ ಮಾಡಬಹುದು.[೧],[೨],[೩]

ಉಲ್ಲೇಖನಗಳು[ಬದಲಾಯಿಸಿ]