ಸದಸ್ಯ:Roshnidsilva/sandbox5

ವಿಕಿಪೀಡಿಯ ಇಂದ
Jump to navigation Jump to search

ಚಳ್ಳೆ ಹಣ್ಣು[ಬದಲಾಯಿಸಿ]

Bird plum ಇದು ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು.

ಕನ್ನದದಲ್ಲಿ[ಬದಲಾಯಿಸಿ]

ಸೊಳ್ಳೆ, ಬೊಟ್ಟೆ, ಚೆಡ್ಲು, ಕೆಂದಲ್, ಮಣ್ಣಡಿಕೆ, ಚಳ್ಳಂಟು.

ಇತರ ಭಾಷೆಯಲ್ಲಿ[ಬದಲಾಯಿಸಿ]

(ಹಿಂದಿ) ಲಸುರ, (ಇಂ) ಅಸ್ಸಿರಿಯನ್ ಪ್ಲಮ್, ಬರ್ಡ್ ಲೈಮ್, (ಸಂ) ಉದ್ದಾಲಕ, ಬೌವರಕ, (ತ) ನರುವಿಲಿ, (ತೆ) ಬಂಕನೆಕ್ಕೆರ.

ಸಸ್ಯಶಾಸ್ತ್ರೀಯ ವಿಂಗಡಣೆ[ಬದಲಾಯಿಸಿ]

ಕಾರ್ಡೀಯ ಮಿಕ್ಸ Cordia myxa L.C. obliqua

ಕುಟುಂಬ[ಬದಲಾಯಿಸಿ]

ಬೊರಾಗಿನೇಸಿ Boraginaceae

ಹಣ್ಣಾಗುವ ಕಾಲ[ಬದಲಾಯಿಸಿ]

ಮೇ- ಜುಲೈ

ಪೌಷ್ಟಿಕಾಂಶಗಳು[ಬದಲಾಯಿಸಿ]

ಪ್ರೋಟೀನ್, ಶರ್ಕರಪಿಷ್ಟ, ಕಬ್ಬಿಣ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣ.

ಆಹಾರ ಪದಾರ್ಥಗಳು[ಬದಲಾಯಿಸಿ]

ಹಣ್ಣಿನಿಂದ ಮದ್ಯ, ಕಾಯಿಗಳಿಂದ ಉಪ್ಪಿನಕಾಯಿ, ಸಾಂಬಾರ್.

ಔಷಧೀಯ ಗುಣ[ಬದಲಾಯಿಸಿ]

  • ಹಣ್ಣು ವಿರೇಚಕ, ಮೂತ್ರವರ್ಧಕ, ಶಾಮಕ ಮತ್ತು ಕೆಮ್ಮು ನಿವಾರಕ.
  • ಚರ್ಮ ರೋಗ ಮತ್ತು ತುರಿಕೆ ನಿವಾರಣೆಗೆ, ತಲೆಗೂದಲು ಬೆಳೆಯಲು ಉತ್ತಮ.
  • ಗರ್ಭಕೋಶದ ಹಾಗೂ ಯಕೃತ್ ತೊಂದರೆಗೆ ಹಣ್ಣಿನ ಔಷಧಿ.
  • ಚಳ್ಳೆ ಬೀಜದ ಪುಡಿಯಿಂದ ಹುಳಕಡ್ಡಿಯ ಶಮನ
  • ತೊಗಟೆಯ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖ.
  • ಗಾಯಕ್ಕೆ ತೊಗಟೆಯ ಗಂಧ ಲೇಪನ.

ಸಸ್ಯ ಮೂಲ, ಸ್ವರೂಪ[ಬದಲಾಯಿಸಿ]

ಏಷ್ಯಾ ಮೂಲದ ಚಳ್ಳೆಗಿಡ ೮-೧೦ ಮೀ ಎತ್ತರಕ್ಕೆ ಬೆಳೆಯಬಲ್ಲದು. ತೆಳ್ಳನೆಯ ಇಳಿ ಬಿಡ್ಡ ರೆಂಬೆಗಳಲ್ಲಿ ಅಂಡಾಕಾರದ ಚೂಪು ತುದಿಯ ದಟ್ಟ ಹಸಿರು ಎಲೆಗಳು.ಛಿಕ್ಕ ಬಿಳಿ ಹೂಗೂಂಚಲು ಹಸಿರು ಕಾಯಿಗಳಿಗೆ ರೂಪಾಂತರ. ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಿನಲ್ಲಿ ಸುತ್ತುವರೆದ ಪಾರದರ್ಶಕ ಸಿಹಿ ಅಂಟಿನ ತಿರುಳು.

ಸಸ್ಯ ಪಾಲನೆ[ಬದಲಾಯಿಸಿ]

ಉಷ್ಣವಲಯದಲ್ಲಿ, ಸಮುದ್ರಮಟ್ಟದಿಂದ ೨೦೦-೧೫೦೦ ಮೀ ಎತ್ತರದಲ್ಲಿ ಬೆಳೆಯುವ ಮರ. ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಬೀಜ ಮತ್ತು ದಂಟುಸಸಿಗಳಿಂದ ಸಸ್ಯಾಭಿವೃದ್ಧಿ. ಹಕ್ಕಿ ಕೋತಿಗಳಿಂದ ಬೀಜಪ್ರಸಾರ.

ವಿಶಿಷ್ಟತೆ[ಬದಲಾಯಿಸಿ]

ಹಣ್ಣಿನ ಅರೆಪಾರದರ್ಶಕ ತಿರುಳು ಉತ್ತಮ ಅಂಟು. ಸೊಪ್ಪು ಪಶ್ನು ಗಳಿಗೆ ಮೇವು. ದೋಣಿ,ಆಟಿಗೆ, ಕೃಷಿ ಉಪಕರಣಗಳು ಮತ್ತು ಕೆತ್ತನೆ ಕಲಸಕ್ಕೆ ಮರದ ಬಳಕೆ ಕನ್ನಡ ಸಾಹಿತ್ಯದಲ್ಲಿ 'ಚಳ್ಳೆ ಹಣ್ಣು ತಿನ್ನಿಸು' ಎಂಬ ನುಡಿಗಟ್ಟಿನ ಪ್ರಯೊಗ ಸಾಮಾನ್ಯ.

ಉಲ್ಲೇಖ[ಬದಲಾಯಿಸಿ]

Kingdom: Plantae (unranked): Angiosperms (unranked): Eudicots (unranked): Asterids Order: Lamiales Family: Boraginaceae Genus: Cordia Species: C. myxa Binomial name Cordia myxa L. Synonyms

Cordia obliqua Cordia domestica