ವಿಷಯಕ್ಕೆ ಹೋಗು

ಸದಸ್ಯ:Rolwyn barboza/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕ್ರಿಸ್ಮಸ್ ಕಾರ್ಯಕ್ರಮಕ್ಕೆ ಪ್ರಾರ್ಥನಾ ವಿಧಿ


ಬೆತ್ಲೆಹೆಮ್ ಎಂಬಲ್ಲಿ ಒಂದು ಬಡಕುಟುಂಬದಲ್ಲಿ ಯೇಸುಕ್ರಿಸ್ತರ ಜನನವಾಯಿತು. ಅವರ ತಂದೆ ಜೋಸೆಫ್, ತಾಯಿ ಮರಿಯ. ಯೇಸು ತನ್ನ ಜೀವನದ ಮೊದಲ ಮೂವತ್ತು ವರ್ಷ ಬಡಗಿಯ ವ್ರತ್ತಿ ಮಾಡಿ ನಂತರ ತನ್ನ ತತ್ವಗಳನ್ನು ಬೋಧಿಸಲು ಆರಂಭಿಸಿದರು. ದೇವರು ಎಲ್ಲರ ತಂದೆ, ಜನರೆಲ್ಲರೂ ಸಹೋದರ-ಸಹೋದರಿಯರು , ಶತ್ರುಗಳನ್ನು ಪ್ರೀತಿಸುವುದು, ಪರರಿಗೆ ಒಳಿತನ್ನೇ ಬಯಸುವುದು ಮುಂತಾದ ಸರಳವೂ, ಆಚರಣೆಗೆ ಯೋಗ್ಯವೂ ಆದ ತತ್ವಗಳಿಂದಾಗಿ ಬಹು ಜನರು ಯೇಸುವಿನ ಅನುಯಾಯಿಗಳಾದರು.

ವಿಶ್ವಭ್ರಾತ್ರತ್ವ ಸಾಧನೆಯ ಗುರಿಯನ್ನು ಹೊಂದಿದ್ದ ಯೇಸುಕ್ರಿಸ್ತರ ತತ್ವಗಳು ಹಾಗೂ 'ದೇವರ ರಾಜ್ಯ' ಕಲ್ಪನೆಯು ಸಾಂಪ್ರದಾಯಿಕ ಹಿಬ್ರೂ ತತ್ವವಾದಿಗಳಿಗೆ ಹಿಡಿಸದೇ ಅವರು ಯೇಸುವನ್ನು ಕೊನೆಗಾಣಿಸಬೇಕೆಂದು ಹವಣಿಸಿದರು. ಆತನು ರೋಮ್ ಸಾಮ್ರಾಜ್ಯದ ವಿರುದ್ಧ ದಂಗೆ ಏಳುವಂತೆ ಜನರನ್ನು ಪ್ರಚೋದಿಸುತ್ತಿದ್ದಾರೆಂಬ ಸುಳ್ಳು ಆರೋಪ ಹೊರಿಸಿ ರೋಮನ್ ಅಧಿಕಾರಿ ಪಿಲಾತನ ನಿಣ‌ಯದಂತೆ ಯೇಸುವನ್ನು ಶಿಲುಬೆಗೇರಿಸಿದರು. ಆದರೆ ಸಮಾಧಿಯಾದ ಮೂರನೇಯ ದಿನ ಯೇಸುವು ಪುನರುತ್ಥಾನರಾದರು.

ಪ್ರೇಮ ಕರುಣೆಗಳ ದ್ಯೋತಕವಾಗಿದ್ದ ಯೇಸುಕ್ರಿಸ್ತ ಶಾಂತಿದೂತರು, ಹಲವಾರು ಶಿಷ್ಯರನ್ನು ಹೊಂದಿದ್ದ ಯೇಸುವಿನ ಉಪದೇಶಗಳು, ಸಾಮಿತಿಗಳು, ಕಥೆಗಳು, ಪವಿತ್ರ ಧಾಮಿಕ ಗ್ರಂಥದ ಹೊಸ ಒಡಂಬಡಿಕೆಯಲ್ಲಿ ಅಡಕವಾಗಿವೆ. ಪವಾಡಪುರುಷನಾದ ಯೇಸುಕ್ರಿಸ್ತ ತ್ರಿಯೇಕ ದೇವರಲ್ಲಿಯ ದ್ವಿತೀಯ ವ್ಯಕ್ತಿ. ದೇವರಿಗೆ ಸರಿಸಮಾನರು ಎಂದು ಕ್ರ್ಐಸ್ತರು ನಂಬಿ ಅವರನ್ನು ಆರಾಧಿಸುತ್ತಾರೆ.