ಸದಸ್ಯ:Rkanishka/WEP 2018-19
ಬಿಶನ್ ಸಿಂಗ್ ಬೇಡಿ
ಬಿಶನ್ ಸಿಂಗ್ ಬೇಡಿ ಅವರು ಭಾರತದ ಮಾಜಿ ಕ್ರಿಕೆಟ್ ಆಟಗಾರರು. ಇವರು ಮುಖ್ಯವಾಗಿ ನಿಧಾನಗತಿಯ ಎಡಗೈ ಸ್ಪಿನ್ ಬೌಲರ್ ಆಗಿದ್ದರು. ಇವರು 1946ರ ಸೆಪ್ಟೆಂಬರ್ 25ರಂದ ಅಮೃತಸರದಲ್ಲಿ ಜನಿಸಿದರು. ಇವರು 1966ರಿಂದ 1979ರ ತನಕ ಭಾರತ ತಂಡದ ಸದಸ್ಯರಾಗಿ ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನಾಡಿದರು. ಅಂದು ಖ್ಯಾತವಾಗಿದ್ದ ಭಾರತದ ಸ್ಪಿನ್ ಚತುಷ್ಟಯರಾದ (ಬಿ ಎಸ್ ಚಂದ್ರಶೇಖರ್ (ಲೆಗ್ ಸ್ಪಿನ್ ಬೌಲರ್), ಎಸ್ ವೆಂಕಟರಾಘವನ್ ಮತ್ತು ಎರ್ರಾಪಳ್ಳಿ ಪ್ರಸನ್ನ (ಇಬ್ಬರೂ ಆಫ್‌ಸ್ಪಿನ್ ಬೌಲರ್‌ಗಳು) ಮತ್ತು ಬಿಶನ್ ಸಿಂಗ್ ಬೇಡಿ (ಎಡಗೈ ಸ್ಪಿನ್ ಬೌಲರ್) ಅವರುಗಳ ಭಾಗವಾಗಿದ್ದರು. 22 ಟೆಸ್ಟ್ ಪಂದ್ಯಗಳಲ್ಲಿ ಅವರು ಭಾರತ ತಂಡದ ನಾಯಕತ್ವ ವಹಿಸಿಕೊಂಡರು. ಬಿಶನ್ ಸಿಂಗ್ ಬೇಡಿ ವರ್ಣರಂಜಿತ ಪಟ್ಕಾ ರುಮಾಲು ಧರಿಸುವ ಹಾಗೂ ಕ್ರಿಕೆಟ್ ಆಟ ಸಂಬಂಧಿತ ಅಭಿಪ್ರಾಯಗಳನ್ನು ನೇರ ಹಾಗೂ ತೀಕ್ಷ್ಣ ಮಾತುಗಳಲ್ಲಿ ಹೇಳುವಲ್ಲಿ ಖ್ಯಾತರಾಗಿದ್ದರು.
ವೃತ್ತಿ ಜೀವನ
[ಬದಲಾಯಿಸಿ]ಇವರ ಡಎಗೈ ಸ್ಪಿನ್ ಬೌಲಿಂಗ್ ಪೂರ್ಣ ಚತುರತೆ,ಕುಶಲಮಯ ಹಾಗೂ ಕರಾರುವಕ್ಕಾಗಿತ್ತು ಎಂದು ಬಣ್ಣಿಸಲಾಗಿತ್ತು. ಚೆಂಡು ಪಥದಲ್ಲಿ ಹೆಚ್ಚು ಸಮಯ ಗಾಳಿಯಲ್ಲಿ ತೇಲುವಂತೆ ಅವರು ಬೌಲ್ ಮಾಡುತ್ತಿದ್ದರು. ಎದುರಾಳಿ ಬ್ಯಾಟ್ಸ್‌ಮನ್‌ರ ಕಣ್ಣು ತಪ್ಪಿಸಿ ಚೆಂಡನ್ನು ಸಹಜಕ್ಕಿಂತಲೂ ನಿಧಾನಗತಿಯಲ್ಲಿ ಅಥವಾ ತ್ವರಿತ ಗತಿಯಲ್ಲಿ ಬೌಲ್ ಮಾಡುತ್ತಿದ್ದರು. ಅವರ ಬೌಲಿಂಗ್ ವಿಧಾನವು ಬಹಳ ಸರಳ ಮತ್ತು ನಿಯಂತ್ರಿತವಾಗಿದ್ದ ಕಾರಣ, ಲಯ ಕಳೆದುಕೊಳ್ಳದೇ ಇಡೀ ದಿನ ಬೌಲ್ ಮಾಡುವಷ್ಟು ಸಕ್ಷಮರಾಗಿದ್ದರು. ಕ್ರಿಕೆಟ್ ತಂಡದ ಯಾವದೇ ನಾಯಕನಿಗೆ ಬಿಶನ್‌ರದ್ದು ಅತ್ಯಮೂಲ್ಯವಾದ ಕೊಡುಗೆಯಾಗುತ್ತಿತ್ತು. ಅವರು ಹಲವು ಟೆಸ್ಟ್ ಸರಣಿಗಳಲ್ಲಿ ಸಾಫಲ್ಯ ಗಳಿಸಿದ್ದರು :
- ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ 1969–70: 21 ವಿಕೆಟ್‌ಗಳು, 20.57 ಸರಾಸರಿ
- ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ 1972–73: 25 ವಿಕೆಟ್‌ಗಳು, 25.28 ಸರಾಸರಿ
- ವೆಸ್ಟ್ ಇಂಡೀಸ್ ನೆಲೆಯಲ್ಲಿ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ: 18 ವಿಕೆಟ್‌ಗಳು, 25.33 ಸರಾಸರಿ
- ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿ 1976–77: 22 ವಿಕೆಟ್‌ಗಳು, 13.18 ಸರಾಸರಿ
ವೈಯಕ್ತಿಕ ಜೀವನ
[ಬದಲಾಯಿಸಿ]ಪುತ್ರ ಅಂಗದ ಬೇಡಿ ದಿಲ್ಲಿ ತಂಡಕ್ಕಾಗಿ ಅಂಡರ್-19 ಮಟ್ಟದ ವರೆಗೂ ಕ್ರಿಕೆಟ್ ಪಂದ್ಯಗಳನ್ನಾಡಿದ್ದರು. ನಂತರ ರೂಪದರ್ಶಿ ಹಾಗೂ ನಟರಾಗಿ ಕ್ರಿಕೆಟ್‌ನಿಂದ ದೂರ ಸರಿದರು.
ವಿವಾದ
[ಬದಲಾಯಿಸಿ]ಭಾರತ ತಂಡದ ನಾಯಕರಾಗಿದ್ದಾಗ, ಅವರ ವ್ಯಕ್ತಿತ್ವದಿಂದಾಗಿ ಅನಿವಾರ್ಯ ವಿವಾದಗಳುಂಟಾದವು.
ವ್ಯಾಸಿಲೀನ್ (ಲೇಪನದ್ರವ್ಯ) ಘಟನೆ - 1976-77 ಋತುವಿನಲ್ಲಿ, ಭಾರತ ಪ್ರವಾಸ ನಡೆಸುತ್ತಿದ್ದ ಇಂಗ್ಲೆಂಡ್ ತಂಡದ ವಿರುದ್ಧ ಚೆನ್ನೈಯಲ್ಲಿ ಮೂರನೆಯ ಟೆಸ್ಟ್ ಪಂದ್ಯದ ಸಮಯ, ಇಂಗ್ಲೆಂಡ್ ವೇಗದ ಬೌಲರ್ ಜಾನ್ ಲೀವರ್ ಚೆಂಡನ್ನು ನುಣುಪುಗೊಳಿಸಲು ವ್ಯಾಸಿಲೀನ್‌ನ್ನು ನಿಯಮಬಾಹಿರವಾಗಿ ಲೇಪಿಸಿದರೆಂದು ಆರೋಪಿಸಿದ್ದರು. ತಮ್ಮ ಹಣೆಯಿಂದ ಕಣ್ಣುಗಳಿಗೆ ಬೆವರಿಳಿಯುವುದನ್ನು ತಪ್ಪಿಸಲು ಜಾನ್ ಲೀವರ್ ವ್ಯಾಸಿಲೀನ್ ಪಟ್ಟಿ ಧರಿಸಿದ್ದರು. ಆನಂತರದ ವಿಚಾರಣೆಯಲ್ಲಿ ಜಾನ್ ಲೀವರ್‌ರನ್ನು ಆರೋಪಮುಕ್ತ ಗೊಳಿಸಲಾಯಿತು.