ಸದಸ್ಯ:Riya sony thomas/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ: ವಿಶಾಲ ಪ್ರಪಂಚದಲ್ಲಿ ದಿನನಿತ್ಯ ಎನ್ನುವಂತೆ ಅಸಂಖ್ಯಾತ ಘಟನೆಗಳು ಜರಗುತ್ತಿರುತ್ತವೆ. ನೀವು ನಿಮ್ಮ ಸಮಾಜ ಅನೇಕ ಕಾರಣಗಳಿಂದ ತೊಂದರೆ ಅನುಭವಿಸುತ್ತಿದೆ. ನಮ್ಮ ಸಮಾ.ಹಾಳಾಗುತ್ತಿರುವುದಕ್ಕೆ ವಿವಿಧ ಕಾರಣಗಳಿದ್ದು ಅವುಗಳಲ್ಲಿ ಸಾಮಾಜಿಕ ಪಿಡುಗುಗಳು ಒಂದು. ಇವು ಸಮಾಜ ಕಲುಷಿತವಾಗಲು ದಾರಿ ಮಾಡಿಕೊಡುತ್ತಿವೆ. ಸಾಮಾಜಿಕ ಪಿಡುಗುಗಳೆಂದರೇನು?[ಬದಲಾಯಿಸಿ] ಅನಕ್ಷರತೆ,ಸ್ತ್ರೀಶೋಷಣೆ, ಭಿಕ್ಷಾಟನೆ, ಮಕ್ಕಳ ದುಡಿಮೆ, ಮಾದಕ ವಸ್ತುಗಳ ಹಾವಳಿ, ಸಂಪನ್ಮೂಲಗಳ ದುರುಪಯೋಗ, ಸಾರ್ವಜನಿಕ ಸ್ವತ್ತುಗಳನ್ನು ನಾಶ ಪಡಿಸುವುದು, ಕಳ್ಳಸಂತೆ ಇವೇ ಮೊದಲಾದವು ಸಾಮಾಜಿಕ ಪಿಡುಗುಗಳಾಗಿವೆ. ಸಾಮಜಿಕ ಪಿಡುಗಿನಿಂದ ಸಮಾಜಕಾಗುವ ತೊಂದರೆ ಅನಕ್ಷರತೆ "ವಿಷಯ ಬೆಳವಣಿಗೆ"=ಇಂದು ನಮ್ಮ ಸಮಾಜ ಅನುಭವಿಸುತ್ತಿರುವ ಅನಕ್ಷರತೆಯು ಒಂದು ದೊಡ್ಡ ಭೂತವಾಗಿ ಕಾಡುತ್ತಿದೆ. ಅಕ್ಷರ ಕಲಿಯದೆ ಏಳಿಗೆ ನಿರೀಕ್ಷಿಸುವುದಾಕ್ಕಗದು. ಅನಕ್ಷರತೆಯಿಂದಾಗುವ ಅನಾಹುತಗಳು ಹಲವು. 'ಮಕ್ಕಳಿಗೆ ತಂದೆ ಬಾಲ್ಯದೊಳ್ ಅಕ್ಕರದ ವಿದ್ಯೆ ಕಲಿಪದಿರ್ದೊಡೆಕೊಂದು' ಎಂದು ಕವಿ ಚೂಡರತ್ನ ಹೇಳೆದ್ದಾನೆ. ಇದರ ಅರ್ಥ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿಯೇ ವಿದ್ಯೆ ಕಲಿಸದಿದ್ದರೆ ಮಕ್ಕಳನ್ನು ಕೊಂದಂತೆಯೇ. ಇದು ಅಕ್ಷರದ ಮಹತ್ವ ಎಷ್ಟೆಂದು ಹೇಳುತ್ತದೆ. ಅನಕ್ಷರತೆ ಎಂದರೆ ಕೇವಲ ಅಕ್ಷರ ಬಾರದ ಪರಿಸ್ಥಿತಿ ಮಾತ್ರವಲ್ಲ. ಓದು,ಬರಹಗಳನ್ನು ಅರ್ಥ ಮಾಡಿಕೊಳ್ಳ ಲಾರದ ಪರಿಸ್ಥಿತಿ ಎಂದು ವಿವರಿಸಬಹುದು. ಭಾರತದಲ್ಲಿ ಅನಕ್ಷರತೆ ತುಂಬಾ ಗಂಭೀರ ಸ್ವರೂಪದ ಸಮಸ್ಯೆಯಾಗಿದೆ. ರಾಷ್ಟೀಯ ಅಭಿವೃದ್ಧಿಗೆ ಇದೊಂದು ಅಡ್ದಿಯಾಗಿದೆ. ಭಾರತದಲ್ಲಿ ಶೇ. ೫೦%ರಷ್ಟು ಅನಕ್ಷರಸ್ಥರಿದ್ದಾರೆ ಎಂದು ಜನಗಣತಿ ಮಾಹಿತಿ ಹೇಳುತ್ತದೆ. ಅನಕ್ಷರತೆ ನಿವಾರಿಸಲು ಭಾರತ ವ್ಯಾಪಕ ಕಾರ್ಯಕ್ರಮಗಳನ್ನು ಕೈಗೊಂಡಿದೆ. ವಯಸ್ಕರ ಶಿಕ್ಷಣ ಇದರಲ್ಲಿ ಒಂದಾಗಿದೆ. ಅನಕ್ಷರತೆಯ ಪರಿಣಾಮ ನಿರುದ್ಯೋಗ, ಬಡತನ, ಹೆಚ್ಚಾಗುತ್ತಿದೆ. ಮೌಢ್ಯತೆಯೂ ಅನಕ್ಷರತೆಗೆ ಕಾರಣ. ಜನಸಂಖ್ಯೆ ಹೆಚ್ಚಾಗವುದಕ್ಕೆ ಅನಕ್ಷರತೆ ಪರೋಕ್ಷವಾಗಿ ಕಾರಣ ವಾಗುತ್ತದೆ. ನಿರುದ್ಯೋಗ, ಬಡತನಗಳಿಂದಾಗಿ ಜನ ಸಮಾಜ ವಿರೋಧಿ, ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಜನಸಂಖ್ಯೆ ಏರುವುದರಿಂದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳು ಉದ್ಭವಿಸುತ್ತದೆ. ಸಾಕ್ಷರತೆ ಅತಿ ಮುಖ್ಯ ಎಂಬುವುದನ್ನು ಮನಗಾಣಬೇಕು. ಭಿಕ್ಷಾಟನೆ ಸೋಮಾರಿ ಜನಾಂಗದ ಬೆಳವಣಿಗೆಯಿಂದಾಗಿ ಹೆಚ್ಚುತ್ತಿರುವ ಭಿಕ್ಷಾಟನೆಇನ್ನೊಂದು ಸಾಮಾಜಿಕ ಪಿಡುಗಾಗಿದೆ. ಭಾರತದಲ್ಲಿ ಭಿಕ್ಷಾಟನೆಗೆ ಪುರಾಣದ ಹಿನ್ನೆಲೆಯೇ ಇದೆ. ಒಂದು ಕಾಲಕ್ಕೆ ಭಿಕ್ಷುಕ ವೃತ್ತಿ ಸಮಾಜದ ಗೌರವಕ್ಕೆ ಪಾತ್ರವಾಗಿತ್ತು. ಆದರೆ ಇಂದು ಪ್ರಪಂಚದ ಯಾವುದೇ ರಾಷ್ತ್ರಕ್ಕಿಂತ ಭಿಕ್ಷುಕರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳೇ ಹೆಚ್ಚಾಗಿ ಭಿಕ್ಷಾಟನೆ ಮಾಡುತ್ತಿರುವುದು ಆಶ್ಚರ್ಯ ಉಂಟು ಮಾಡುತ್ತಿದೆ. ಅಂಗವಿಕಲ ಭಿಕ್ಷುಕರೂ ಅತಿಯಾಗಿ ಕಾಣಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ರೋಗ, ಮಾನಸಿಕ ವೈಕಲ್ಯಗಳು, ಆಲಸ್ಯತನ, ಭಿಕ್ಷಾಟನೆಗೆ ಕಾರಣವಾಗಿವೆ. ಸಮಾಜಕ್ಕೆ ಭಿಕ್ಷಾಟನೆ ಪಿಡುಗಾಗಿರುವುದು ಸಧೃಡ ಭಿಕ್ಷುಕರಿಂದಾಗಿ ಎನ್ನಬಹುದು. ನಿರುದ್ಯೋಗಿಗಳು ಸೋಮಾರಿಗಳು ಇಂಥವರು ಜನರನ್ನು ಹೆದರಿಸಿ ದುಡ್ಡು ಕೇಳುತ್ತಾರೆ. ಇವರು ವಾಸ್ತವದಲ್ಲಿ ಕಳ್ಳತನ ಮಾಡುವವರೂ ಆಗಿರುತ್ತಾರೆ. ಇಂಥ ಭಿಕ್ಷುಕರಿಂದ ಸಮಾಜಕ್ಕೆ ಹಾನಿ. ಸನ್ಯಾಸಿ, ಸಾಧುಗಳು, ಫಕೀರರು ಇಂಥವರಿಂದ ಸಮಾಜ ಶೋಷಣೆ ಗೊಳಗಾಗಿದೆ. ಧರ್ಮದ ಹೆಸರಿನಲ್ಲಿ ಇವರು ನಡೆಸುವ ಭಿಕ್ಷಾಟನೆ ಅಪಾಯಕಾರಿಯಾಗಿದೆ. ಕೆಲವರು ರಾತ್ರಿ ಪಾಳಿಗಳಲ್ಲಿ ಕಾರ್ಖಾನೆಗಳಲ್ಲಿ ದುಡಿದು ಹಗಲಿನಲ್ಲಿ ಸಾಲದ ದುಡ್ಡಿಗಾಗಿ ಭಿಕ್ಷೆ ಬೇಡುತ್ತಾರೆ. ಇನ್ನು ಕೆಲವು ಭಿಕ್ಷುಕರು ವಂಶ ಪಾರಂಪರ್ಯವಾಗಿ ಭಿಕ್ಷಾಟನೆ ವೃತ್ತಿ ಹಿಡಿದಿರುತ್ತಾರೆ. ಭಿಕ್ಷಾಟನೆಗೆ ಬಹು ಮುಖ್ಯವಾಗಿ ಬಡತನ, ಅರೆ ಉದ್ಯೋಗ, ಕುಟುಂಬ ವಿಘಟನೆ, ರೋಗ ರುಜಿನಗಳು, ದೈಹಿಕ ಮತ್ತು ಮಾನಸಿಕ ವಿಕಲತೆಗಳು, ಪಾಲಕರು ಕೈ ಬಿಡುವುದು. ವೃದ್ದಾಪ್ಯ ಮೊದಲಾದ ಕಾರಣಗಳಿವೆ. ಭಿಕ್ಷಾಟನೆಯ ದುಷ್ಪರಿಣಾಮ ಗಳೆಂದರೆ ವ್ಯಕ್ತಿಯ ವ್ಯಕ್ತಿತ್ವದ ನಾಶ, ರಾಷ್ಟ್ರದ ಘನತೆಗೆ ಧಕ್ಕೆ, ಸೋಮಾರಿತನಕ್ಕೆ ಆಸ್ಪದ, ಕಳ್ಳತನ, ವ್ಯಭಿಚಾರ ಇವುಗಳೇ ಆಗಿವೆ. ಭಿಕ್ಷಾಟನೆ ನಿರ್ಮೂಲನಕ್ಕಾಗಿ ಪುನರ್ ವಸತಿ ಕಾರ್ಯಕ್ರಮ ಗಳನ್ನು ಹಮ್ಮಿ ಕೊಳ್ಳಬೇಕಾಗುತ್ತದೆ. ಅಂದರೆ ಸಧೃಡರಾಗಿರುವ ಭಿಕ್ಷುಕರನ್ನು ವಿವಿಧ ಉದ್ಯೋಗಗಳಲ್ಲಿ ತರಭೇತಿಗೊಳಿಸಿ ಅವರಿಗೆ ಜೀವನೋಪಾಯ ಕಲ್ಪಿಸಿಕೊಡ ಬೇಕಾಗುತ್ತದೆ. ಭಿಕ್ಷಾಟನೆ ನಿಷೇಧ ಕಾನೂನು ಬದ್ದವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವುದು ಶಿಕ್ಷಾರ್ಹ. ಆದರೆ ಭಿಕ್ಷಾಟನೆ ತಪ್ಪಿಲ್ಲ. ಇದರಿಂದ ಸಾಮಾಜಿಕ ಪರಿಸರ ಹದಗೆಟ್ಟಿದೆ. ಬಾಲ ಕಾರ್ಮಿಕರ ಸಮಸ್ಯೆ ಭಾರತವು ಜನಸಂಖ್ಯಾ ಹೆಚ್ಚಳದಲ್ಲಿ ವಿಶ್ವದಲ್ಲಿಯೇ ದ್ವಿತೀಯ ಸ್ಥಾನವನ್ನು ಪಡೆದಿದೆ. ಈ ಏರುತ್ತಲಿರುವ ಜನಸಂಖ್ಯೆಗನುಗುಣವಾಗಿ ನಮ್ಮ ದೇಶದಲ್ಲಿ ಜನಸಾಮಾನ್ಯರಿಗೆ ಬದುಕಲು ಬೇಕಾದ ಕನಿಷ್ಠ ಪ್ರಮಾಣದ ಆವಶ್ಯಕತೆಗಳಾದ ಶಿಕ್ಷಣ, ಉದ್ಯೋಗ ಇವೆಲ್ಲವನ್ನು ಪೂರೈಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಬಡತನವೇ ತುಂಬಿ ತುಳುಕಾಡುತ್ತಿರುವ ಭಾರತ ದೇಶದಲ್ಲಿ ಬಾಲ ಕಾರ್ಮಿಕರ ಸಮಸ್ಯೆ ಒಂದು ದೊಡ್ಡ ಕಂಟಕವಾಗಿದೆ. 1987ರ ಗಣತಿಯ ಪ್ರಕಾರ ಭಾರತ ಸುಮಾರು 15 ಮಿಲಿಯನ್ ಬಾಲ ಕಾರ್ಮಿಕರು ಇದ್ದರು. 1991ರಲ್ಲಿ ಸುಮಾರು 50 ಮಿಲಿಯನ್‌ಗಿಂತ ಹೆಚ್ಚು ಬಾಲ ಕಾರ್ಮಿಕರು ಇದ್ದು, ಈಗ ನಮ್ಮ ದೇಶದಲ್ಲಿ ಸುಮಾರು 2 ಕೋಟಿಯಷ್ಟು ಬಾಲ ಕಾರ್ಮಿಕರಿದ್ದಾರೆ. ಅಲ್ಲದೆ ನಮ್ಮ ರಾಜ್ಯದಲ್ಲಿ ಸುಮಾರು 5 ಲಕ್ಷದಷ್ಟು ಬಾಲ ಕಾರ್ಮಿಕರಿದ್ದಾರೆ. ಬಾಲ ಕಾರ್ಮಿಕ ಸಂಖ್ಯೆಯನ್ನು ಕಡಿಮೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಬಾಲ ಕಾರ್ಮಿಕ ಸಮಸ್ಯೆ ಹೆಚ್ಚುತ್ತಲೇ ಇದೆ. ಬಾಲ ಕಾರ್ಮಿಕ ಸಮಸ್ಯೆ ನಾಗರಿಕ ಸಮಾಜಕ್ಕೆ ಒಡ್ಡಿದ ದೊಡ್ಡ ಸವಾಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಕೇವಲ ಸರಕಾರವಷ್ಟೇ ಅಲ್ಲದೆ ನಾಗರಿಕರು ಸ್ವಯಂ ಸೇವಾ ಸಂಘ ಸಂಸ್ಥೆಗಳು ಎಲ್ಲರೂ ಭಾಗಿಗಳಾಗಲೇ ಬೇಕಾಗುತ್ತದೆ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು, ಇಂದು ನಮ್ಮ ರಾಷ್ಟ್ರದಲ್ಲಿ ಒಂದು ಜ್ವಲಂತ ಸಮಸ್ಯೆಯಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗುವ ತಂದೆ ತಾಯಿಗಳೂ, ಎಲ್ಲರೂ ಅಪರಾಧಿಗಳಾಗುತ್ತಾರೆ. ಇದು ಒಂದು ರೀತಿಯಲ್ಲಿ ಸಂಕೀರ್ಣ ಸಮಸ್ಯೆಯಾಗಿದ್ದು, ಇದರ ನಿವಾರಣೆಗಾಗಿ ಸರಕಾರ ಹಲವಾರು ಕಾಯಿದೆಗಳನ್ನು ಕೂಡ ತಂದಿದೆ. ಬಡತನ, ಅನಕ್ಷರತೆ, ದುಶ್ಚಟಗಳು, ಜಾತಿವ್ಯವಸ್ಥೆ, ಈ ಮೊದಲಾದವುಗಳು ಬಾಲಕಾರ್ಮಿಕ ತೆಗೆ ಪ್ರಮುಖ ಕಾರಣವಾಗಿದೆಯೆಂದು ಹೇಳಬಹುದು. ಅತ್ಯಂತ ಬಡ ಕುಟುಂಬಗಳು ತಮ್ಮ ಮಕ್ಕಳನ್ನು ಕೂಲಿಗೆ ಕಳುಹಿಸುವ ಒತ್ತಡಕ್ಕೆ ಸಿಲುಕುತ್ತಿದೆ. ಅದರಲ್ಲೂ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳು ಕೆಲವು ಮಕ್ಕಳನ್ನು ಮನೆಗೆಲಸದಲ್ಲಿ, ಕೆಲವು ಮಕ್ಕಳನ್ನು ಹೊಟೇಲ್, ಕ್ಯಾಂಟೀನ್, ಅಂಗಡಿಗಳು, ವಾಹನ, ಗ್ಯಾರೇಜ್, ಮರಗೆಲಸ, ಕಬ್ಬಿಣದ ಕೆಲಸ ಇತ್ಯಾದಿ ಕೆಲಸಗಳಲ್ಲಿ ತೊಡಗಿಸುವುದನ್ನು ಕಾಣಬಹುದು. ಸಾಮಾನ್ಯವಾಗಿ ಬಾಲ ಕಾರ್ಮಿಕರು, ಅಮಾನವೀಯ ಪರಿಸ್ಥಿತಿಯನ್ನು ಎದುರಿಸುತ್ತಿರುವುದನ್ನು ಕೂಡ ಕಾಣುತ್ತಿದ್ದೇವೆ. ಹೊಗೆ ಧೂಳಿನಿಂದ ಕೂಡಿದ ವಾತಾವರಣದಲ್ಲಿ ಹಗಲು, ರಾತ್ರಿಯೆನ್ನದೇ ನಿರಂತರ ವಿಶ್ರಾಂತಿ ಇಲ್ಲದ ದುಡಿಮೆಗೆ ಒಳಗಾಗಿ ಮಕ್ಕಳು ದೈಹಿಕ, ಮಾನಸಿಕವಾಗಿ, ಬೌದ್ಧಿಕವಾಗಿ ಬೆಳವಣಿಗೆಯಾಗದೆ, ಬೇರೆ ಬೇರೆ ಕಾಯಿಲೆಗಳಿಂದ ಅಕಾಲಿಕ ಮರಣಕ್ಕೆ ತುತ್ತಾಗುವುದನ್ನು ಕೂಡ ಕಾಣುತ್ತೇವೆ. ಈ ಸಮಸ್ಯೆಯನ್ನು ಪರಿಹರಿಸದೇ ಇದ್ದರೆ ಸಮಾಜಕ್ಕೆ, ದೇಶಕ್ಕೆ ಕಷ್ಟ ತಪ್ಪಿದ್ದಲ್ಲ. ಅದಕ್ಕಾಗಿ ಸರಕಾರ ಕಡ್ಡಾಯ ಶಿಕ್ಷಣ, ಮಹಿಳಾ ಸಬಲೀಕರಣ ಇತ್ಯಾದಿಯನ್ನು ಜಾರಿಗೆ ತಂದಿದೆಯಲ್ಲದೆ ಸರಕಾರ ಬಡ ಕುಟುಂಬಗಳಿಗೆ ಉದ್ಯೋಗಾವಕಾಶ ಯೋಜನೆಯನ್ನು ಜಾರಿಗೆ ತಂದಿದೆ. 6ರಿಂದ 14 ವರ್ಷದೊಳಗಿನ ಮಕ್ಕಳಿಂದ ದುಡಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಮತ್ತು ಅವರಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿದೆ. 1966ರಲ್ಲಿ ಸುಪ್ರೀಂ ಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ, ಅಪಾಯಕಾರಿ ಕಠಿಣ ಕೆಲಸಗಳಲ್ಲಿ ದುಡಿಯುತ್ತಿರುವ ಮಕ್ಕಳನ್ನು ಮುಕ್ತಗೊಳಿಸಬೇಕು. ಇತರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಕ್ಕಳ ಪರಿಸ್ಥಿತಿಯನ್ನು ಸುಧಾರಿಸಬೇಕು. ಬಾಲ ಕಾರ್ಮಿಕರಿಗಾಗಿ, ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಬೇಕು ಎಂದು ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪೊಂದನ್ನು ನೀಡಿ, ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮಾಲಕರು ಅಂತಹ ಮಕ್ಕಳ ಶಿಕ್ಷಣಕ್ಕಾಗಿ ಮೀಸಲು ನಿಧಿಗೆ 20 ಸಾವಿರ ರೂಪಾಯಿ ನೀಡಬೇಕು. ಆ ಬಾಲಕಾರ್ಮಿಕರ ಮನೆಯ ವಯಸ್ಕರೊಬ್ಬರಿಗೆ ಕೆಲಸ ನೀಡಬೇಕು ಅಥವಾ 5000 ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ. ಇವುಗಳ ಸರಿಯಾದ ಅನುಷ್ಠಾನದಿಂದಾಗಿ ಮುಂದಿನ ದಿನಗಳಲ್ಲಿ ಬಾಲ ಕಾರ್ಮಿಕರ ಸಮಸ್ಯೆಗೆ ಸರಿಯಾದ ಪರಿಹಾರ ಮೋಕ್ಷ ಸಿಗಬಹುದೆಂದು ಆಶಿಸೋಣ. ಮಾದಕ ವಸ್ತುಗಳಿಂದಾಗುವ ಹಾನಿಗಳು ಮಾದಕ ವಸ್ತುಗಳೂ ಇಂದಿನ ಯುವ ಜನಾಂಗವನ್ನು ದಿಕ್ಕುಗೆಡಿಸುತ್ತಿವೆ. ಮದ್ಯಪಾನ, ಅಫೀಮು, ಗಾಂಜ, ಹಶೀಶ್, ಹೆರಾಯಿನ್ ಮೊದಲಾದವುಗಳ ಸೇವನೆ, ಧೂಮಪಾನ ಇವೇ ಮೊದಲಾದವು ದುಶ್ಚತಟಗಳಾಗಿ ಸಮಾಜದ ಶಾಂತಿಗೆ ಭಂಗ ತರುತ್ತಿವೆ. ಜನರು ಮದ್ಯ ಹಾಗೂ ಮತ್ತು ಬರಿಸುವ ವಸ್ತುಗಳನ್ನು ಫ್ಯಾಶನ್ ಆಗಿ ಬಳಸುತ್ತಿದ್ದಾರೆ. ಮಾನವ ಸಮಾಜದ ಕ್ಷೇಮಕ್ಕೆ ಮಾರಕವೆನಿಸುವಷ್ಟು ಪ್ರಮಾಣದಲ್ಲಿ ಮದ್ಯ ಮತ್ತು ಮಾದಕವಸ್ತುಗಳನ್ನು ಉತ್ಪಾದಿಸಲಾಗುತ್ತಿದೆ. ಮದ್ಯ ಮೊದಲಾದವುಗಳ ಮಾರಾಟದಿಂದ ಹಣವನ್ನು ಗಳಿಸುವ ಉದ್ದೇಶವೇ ಅವುಗಳ ಮಿತಿ ಮೀರಿದ ಉತ್ಪಾದನೆಗೂ ಕಾರಣವಾಗಿದೆ. ಮದ್ಯ ಹಾಗೂ ಮತ್ತು ಬರಿಸುವ ಮಾದಕ ವಸ್ತುಗಳನ್ನು ಸೇವಿಸುವವರು ಮುಖ್ಯವಾಗಿ ಮಾನಸಿಕ ಕ್ಲೇಶಗಳಿಗೆ ಬಲಿಯಾಗಿರುತ್ತಾರೆ. ವೃತ್ತಿ ಅಂಶವೂ ಇದಕ್ಕೆ ಪೂರಕ. ದೈಹಿಕ ಮತ್ತು ಮಾನಸಿಕ ಶ್ರಮದಿಂದ ಉಂಟಾದ ಆಯಾಸ ಪರಿಹರಿಸಿಕೊಳ್ಳಲು ವ್ಯಕ್ತಿ ಕುಡಿಯತೊಡಗುತ್ತಾನೆ. ಸಹವಾಸ ದೋಷ, ಕುಡಿಯು ತ್ತಿರುವುದು ತನ್ನ ಪಾಪದ ಫಲ ಎಂಬುದಾಗಿ ತಿಳಿದಿರುವುದು, ಕನಿಷ್ಠ ಸೌಲಭ್ಯಗಳು ದೊರೆಯದಿರುವುದು, ನಗರೀಕರಣ, ಫ್ಯಾಷನ್ ಇವುಗಳೂ ಕುಡಿತಕ್ಕೆ ಕಾರಣಗಳು. ಮಿತಿಮೀರಿ ಮದ್ಯಪಾನ ಮಾಡುವುದರಿಂದ ವ್ಯಕ್ತಿಯ ಆರೋಗ್ಯಕೆಡುತ್ತದೆ. ಮಾನಸಿಕ ತುಮುಲಕ್ಕೆ ಒಳಗಾಗುವ ವ್ಯಕ್ತಿ ಸಮಾಜದಲ್ಲಿ ಅಗೌರವಕ್ಕೆ ಪಾತ್ರನಾಗುತ್ತಾನೆ. ಆರ್ಥಿಕ ಸಮಸ್ಯೆ ತೀವ್ರವಾಗುತ್ತದೆ. ಮದ್ಯಪಾನದಿಂದ ಆಗುವ ದುಷ್ಪರಿಣಾಮಗಳ ಅರಿವು ವ್ಯಕ್ತಿಗೆ ಆಗುವಂತೆ ಮಾಡಬೇಕಲ್ಲದೆ ಅವನು ಕುಡಿಯದಂತೆ ನಿರ್ಧರಿಸುವ ಮನೋಶಕ್ತಿ ಬೆಳೆಸಲೂ ಬೇಕು. ಉಪಸಂಹಾರ:ಮಾದಕ ವಸ್ತುಗಳು ಯುವಜನಾಂಗದ ಏಳಿಗೆಗೆ ಮಾರಕ ಅಫೀಮು, ಗಾಂಜಾ, ಕೊಕೇನ್, ಎಲ್.ಎಸ್.ಡಿ ಮೊದಲಾದವು ಮಾದಕವಸ್ತುಗಳಾಗಿದ್ದು ಇವು ಸೇವಿಸುವ ವ್ಯಕ್ತಿಗಳು ಕಡೆ ಕಡೆಗೆ ಮನಃಕ್ಲೇಷದಿಂದ ನಿವಾರಣೆ ಪಡೆಯಲು ನಿದ್ರಾಮಾತ್ರೆಗಳನ್ನು ಬಳಸುತ್ತ ಒಂದು ದಿನ ಸಾವನ್ನಪ್ಪುತ್ತಾರೆ. ಮಾದಕವಸ್ತುಗಳನ್ನು ಸೇವಿಸುವವರು ಮೈಮೇಲೆ ಚಿಂದಿ ಧರಿಸಿ ಅಸಹ್ಯ ರೀತಿಯಲ್ಲಿ ವಿಚಿತ್ರವಾಗಿ ವರ್ತಿಸುತ್ತಾರೆ. ವ್ಯಕ್ತಿಯ ಕುಟುಂಬ ಜೀವನ ಅಸ್ತವ್ಯಸ್ತಗೊಂಡು ಛಿಧ್ರವಾಗುತ್ತಿದೆ. ಗಾಂಜಾ ಸೇದಿದೊಡನೆಯೆ ಹೃದಯದ ಬಡಿತದ ವೇಗ ಅಧಿಕವಾಗಿ ಕಣ್ಣು ಕೆಂಡವಾಗಿ ಕ್ರಮೇಣ ಅದು ಬಾಳಿನ ಬಹುಮುಖ್ಯ ಭಾಗವನ್ನೇ ನಾಶಪಡಿಸಿ ಬಿಡುತ್ತದೆ. ಗಾಂಜದಿಂದ ಉಂಟಾಗುವ ಉತ್ಸಾಹ, ಮನಸ್ಸು ಹಗುರಾದ ಹಾಗೆ ಅನುಭವವಾಗುವುದು. ಅಫೀಮನ್ನು ಸಿಗರೇಟಿನಂತೆ ಸೇದುವವರಿದ್ದಾರೆ. ಅಫೀಮು ಗುಣಪಡೆದಿದ್ದರೂ ಅದು ಚಟವಾಗಿ ವ್ಯಕ್ತಿ ಸೊರಗಿಹೋಗುತ್ತನೆ. ಈ ಮಾದಕ ವಸ್ತುಗಳು ಯುವ ಜನಂಗದ ಅಧಃಪತನಕ್ಕೆ ಮೂಲವಾಗುತ್ತಿವೆ. ಮಾದಕವಸ್ತುಗಳ ಸೇವನೆ ಯಿಂದ ಸಾಮಾಜಿಕ ಸಮಸ್ಯೆಗಳು ಹುಟ್ಟಿ ಕೊಳ್ಳುತ್ತಿವೆ. ಉದ್ವೇಗ, ವಿಶ್ರಾಂತಿ ಇಲ್ಲದಿರುವಿಕೆಗಳಿಂದ ಮನಃಕ್ಲೇಷ ಉಂಟಾಗಿ ಅದನ್ನು ಮರೆಯಲು ನಿದ್ರಾಮಾತ್ರೆಗಳನ್ನು ಸೇವಿಸುವುದು ಹೆಚ್ಚಾಗಿದೆ. ಚರಸ್ ಗಾಂಜಾ ಚಟಕ್ಕೆ ಬಿದ್ದವರು ಅವುಗಳಿಂದುಂಟಾಗುವ ಭ್ರಮೆಯನ್ನೆ ಶಾಂತಿ ಸಮಾಧಾನವೆಂದು ತಿಳಿದು ಅವುಗಳ ಬೆನ್ನು ಹತ್ತಿದ್ದಾರೆ. ದೊಡ್ಡ ನಗರಗಳಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಯುವಕ ಯುವತಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ದುಶ್ಚಟಕ್ಕೊಳಗಾದವರು ಅಪಘಾತಗಳಿಗೀಡಾಗುತ್ತಾರೆ. ಅಲ್ಲದೆ ಹಲವು ಅಪಘಾತಗಳಿಗೂ ಕಾರಣರಾಗುತ್ತಾರೆ. ಮಾದಕ ವಸ್ತುಗಳು ಒಟ್ಟಿನಲ್ಲಿ ಯುವಜನಾಂಗದ ಏಳಿಗೆಗೆ ಮಾರಕ. ಯುವ ಜನರೇ ಅವುಗಳನ್ನು ಹೆಚ್ಚಾಗಿ ಸೇವಿಸುತ್ತಿರುವುದು ಅವರ ಚಿತ್ತಕ್ಷೋಭೆಯಿಂದಾಗಿ ಎನ್ನಲು ಅಡ್ಡಿ ಇಲ್ಲ. ಪರಿಹಾರೋಪಾಯವಾಗಿ ಯುವಜನರಿಗೆ ಸ್ಪೂರ್ತಿದಾಯಕವಾದ ಉದ್ಯೋಗಗಳ ಸೃಷ್ಟಿ, ನಿರುದ್ಯೋಗ ನಿರ್ಮೂಲನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ.