ವಿಷಯಕ್ಕೆ ಹೋಗು

ಸದಸ್ಯ:Riya ed/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Request review at WP:AFC

[ಬದಲಾಯಿಸಿ]
                                                  ಮಹಾಯೋಗಿ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು
  ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು ಧರ್ಮ ಜಾಗ್ರತಿಗೈದು ಮಹಾಯೋಗಿ ಎಂದು ಪ್ರಸಿಧ್ಹರಾದವರು. ಶ್ರೀ ಶ್ರೀಧರ ಸ್ವಾಮಿಗಳು ನಾರಾಯಣರಾಯರು ಮತ್ತು ಕಮಲಬಾಯಿ ದಂಪತಿಗಳಿಗೆ ೭-೨-೧೯೦೮ ರಂದು ಸುಪುತ್ರನಾಗಿ ಜನಿಸಿದರು.ಬಾಲ್ಯದಲ್ಲಿಯೇ ಶ್ರೀಧರ ಸ್ವಾಮಿಗಳಿಗೆ ಭಕ್ತಿ,ಜ್ನಾನ,ವೈರಾಗ್ಯದಲ್ಲಿ ಆಸಕ್ತಿ ಬೆಳೆದಿತ್ತು. ಶ್ರೀಧರರು ವಿವೇಕ ವರ್ಧಿನಿ ಎಂಬ ಶಾಲೆಯಲ್ಲಿ ವಿಧ್ಯಾಭ್ಯಾಸವನ್ನು ಮಾಡಿದರು. ತಮ್ಮ ೧೨ನೇ ವರ್ಷದಲ್ಲಿ ತಾಯಿ ದೈವಾಧೀನಳಾದ ನಂತರ ಶ್ರೀಧರರು ಏಕಾಂಕಿಯಾದರು. ಗುಲ್ಬರ್ಗಕ್ಕೆ ಬಂದು ಚಿಕ್ಕಮನ ಮನೆಯಲ್ಲಿ ವಾಸವಿದ್ದರು. ಚಿಕ್ಕಂದಿನಲ್ಲಿಯೇ ಸರ್ವಧರ್ಮ ಸಮನ್ವಯ ತತ್ವವನ್ನು ಆಚರಿಸುತ್ತ ಧರ್ಮ,ಸಮಾಜ,ರಾಷ್ತ್ರದ ಏಳಿಗೆಗಾಗಿ ಸೇವಾಕಾಂಕ್ಷಿಯಾಗಿ ಬೆಳೆದರು. ಧರ್ಮದ ಅಪಮಾನ ಅವರಿಗೆ ಸಹನೆಯಾಗುತ್ತಿರಲ್ಲ. ಶ್ರೀಧರ ಸ್ವಾಮಿಗಳು ಧರ್ಮಜಾಗ್ರತಿಯನ್ನು ಮಾಡಿದ್ದಾರೆ,ಅನೇಕ ವಿಧವಾದ ಸ್ತುತಿಸ್ತ್ರೊತ್ರಗಳನ್ನು,ಸದ್ಗ್ರಂಥಗಳನ್ನು ರಚಿಸಿದ್ದಾರೆ. ಶ್ರೀ ಶ್ರೀಧರ ಸ್ವಾಮಿಗಳು ವರದಪುರದ ಗುಹಾಕುಟಿಯಲ್ಲಿ ೧೯-೪-೧೯೭೩ ರಂದು ಬ್ರಹ್ಮೆಕ್ಯರಾದರು.ಅವರ ದಿವ್ಯ ಜೀವನ ಇನ್ನು ಆದರ್ಶವಾಗಿಯೇ ಉಳಿದಿದೆ.

Request review at WP:AFC

[ಬದಲಾಯಿಸಿ]
                                                  ಪು.ತಿ.ನರಸಿಂಹಾಚಾರ್

ಆಧುನಿಕ ಕನ್ನಡ ಸಾಹಿತ್ಯದ ಕವಿವರರಲ್ಲಿ ಪು.ತಿ.ನ ರವರೂ ಒಬ್ಬರಾಗಿದ್ದಾರೆ. ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ ಎಂಬುದು ಇವರ ಪೂರ್ಣ ಹೆಸರು. ಪು.ತಿ.ನ ಎಂದೇ ಪ್ರಸಿದ್ದರಾಗಿದ್ದರೆ. ಮೇಲುಕೋಟೆ ಇವರ ಜನ್ಮಸ್ಥಳ. ಜನ್ಮ ದಿನಾಂಕ ೧೭-೩-೧೯೦೫. ತಂದೆಯ ಹೆಸರು ತಿರುನಾರಯಣ ಅಯ್ಯಂಗಾರ್. ತಾಯಿಯ ಹೆಸರು ರಾಮಮ್ಮ. ಪು.ತಿ.ನರವರ ವಿಧ್ಯಾಭ್ಯಾಸವು ಮೇಲುಕೋಟೆ ಮತ್ತು ಮ್ಯೆಸೂರುಗಳಲ್ಲಿ ನಡೆಯಿತು. ಇವರು ಸಾತ್ವಿಕ ಗುಣ ಸಂಪನ್ನರೂ,ವಿಚಾರವಂತರೂ,ಸಂಯಮಶೀಲರೂ ಆಗಿದ್ದಾರೆ. ಪುತಿನರವರು ಕವಿತೆ,ಪ್ರಬಂಧ,ಸಣ್ಣ ಕತೆ,ಗೀತರೂಪಕ,ನಾಟಕ ಮುಂತಾದ ಸಾಹಿತ್ಯಪ್ರಕಾರಗಳಲ್ಲಿ ಅನೇಕ ಕ್ರತಿಗಳನ್ನು ರಚಿಸಿದ್ದಾರೆ. ಇವರ ಕವೆತೆಗಳಲ್ಲಿ ಸಂಗೀತದ ಸುಗಂಧವು ಅಭಿನ್ನವಾಗಿ ಮೂಡಿಬಂದಿದೆ. ಪುತಿನ ರವರಿಗೆ ಅನೇಕ ಬಹುಮಾನಗಳೂ ಪ್ರಶಸ್ತಿಗಳೂ ದೊರೆತಿವೆ. ೧೯೬೬ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನವೂ ೧೯೭೧ರಲ್ಲಿ ಮೈಸೂರು ವಿಶ್ವ ವಿಧ್ಯಾನಿಲಯದ ಡಾಕ್ಟರೇಟ್ ಪದವಿಯೂ ದೊರೆತಿದೆ. ೧೯೮೧ರಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಟವನ್ನು ಇವರು ಅಲಂಕರಿಸಿದ್ದರು. ಪುತಿನ ಅನುಭಾವಿ ಕವಿ. ಕನ್ನಡ ಕೀರ್ತಿಯನ್ನು ಹೆಚ್ಚಿಸಿದ ಹಾಗೂ ಕನ್ನಡದ ಏಳಿಗೆಗಾಗಿ ದುಡಿದ ಸಂತಕವಿ