ಸದಸ್ಯ:Reshma1940559

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ರೇಷ್ಮಾ ಗೋಪಿ .ನಾನು ಇಪ್ಪತ್ತ್ ಏಳು ಮೇ ಎರಡು ಸಾವಿರದ ಒಂದರಲ್ಲಿ ಜನಿಸಿದ್ದೇನೆ . ನನ್ನ ಜನ್ಮ ಸ್ಥಳ ಬೆಂಗಳೂರು .ನನ್ನ ತಾಯಿಯ ಹೆಸರು ಜಯಲಕ್ಷ್ಮಿ ಮತ್ತು ನನ್ನ ತಂದೆಯ ಹೆಸರು ಗೋಪಿ .ನಾನು ನನ್ನ ಬಾಲ್ಯ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದೇನೆ .ನಾನು ನನ್ನ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಎಚ್ಎಎಲ್ ಜ್ಞಾನಜ್ಯೋತಿ ಶಾಲೆಯಲ್ಲಿ ಮುಗಿಸಿದ್ದೇನೆ.ನಾನು ನನ್ನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಂಬತ್ತು ಒಂದು ಪರ್ಸೆಂಟ್ ಶೇಕಡ ದೊಂದಿಗೆ ಉತ್ತೀರ್ಣಳಾಗಿ ದ್ದೇನೆ .ನಾನು ನನ್ನ ಮುಂದಿನ ಶಿಕ್ಷಣಕ್ಕಾಗಿ ಜ್ಯೋತಿನಿವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಸೇರಿದೆ ನನ್ನ ದ್ವಿತೀಯ ಪದವಿ ಪೂರ್ವ ಪರೀಕ್ಷೆಯನ್ನು ಇಪ್ಪತ್ತ್ ಒಂದು ಪಾಯಿಂಟ್ ಐದು ಪರ್ಸೆಂಟ್ ಶೇಕಡ ದೊಂದಿಗೆ ಉತ್ತೀರ್ಣಳಾಗಿದ್ದು .ಹಾಗೂ ಈಗಿನ ಬಿಎಸ್ಸಿ ಪದವಿಯನ್ನು ಕ್ರೈಸ್ಟ್ ಡೀಮ್ ರುಬ್ಬಿ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ .


ನಾನು ನನ್ನ ಬಾಲ್ಯದಿಂದಲೂ ಅನನ್ಯ ವಾಗಿರಲು ಬಯಸುತ್ತಿದ್ದೇನೆ ನಾನು ಸೃಜನಾತ್ಮಕವಾಗಿ ಏನಾದರೂ ಮಾಡಲು ಬಯಸುತ್ತಿದ್ದೇನೆ .ನನ್ನ ಹವ್ಯಾಸಗಳೇ ನೆಂದರೆ ನಾನು ದೂರದರ್ಶನವನ್ನು ನೋಡುತ್ತೇನೆ ಹಾಗೂ ಚಿತ್ರಗಳನ್ನು ಬಿಡಿಸುತ್ತೇನೆ ಹಾಗೂ ನನಗೆ ಚಲನಚಿತ್ರ ಹಾಡುಗಳನ್ನು ಕೇಳಿಸಿಕೊಳ್ಳಲು ತುಂಬಾ ಇಷ್ಟ ಹಾಗೂ ನಾನು ನನ್ನ ಅಮ್ಮನಿಗೆ ಅಡುಗೆಯ ಕೆಲಸದಲ್ಲಿ ಸಹಾಯ ಮಾಡುತ್ತೇನೆ ಹಾಗೂ ನನಗೆ ಅಡುಗೆ ಮಾಡಬೇಕೆಂದರೆ ತುಂಬಾ ಇಷ್ಟ .

ನನ್ನ ಮುಂದಿನ ಗುರಿ ಏನೆಂದರೆ ನಾನು ದೇಶಕ್ಕಾಗಿ ಏನಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಹಾಗೆಯೇ ನಾನು ನನ್ನ ತಂದೆ ತಾಯಿಗೆ ಒಂದು ಒಳ್ಳೆಯ ಹೆಸರನ್ನು ತರಬೇಕು .ಓದುವುದರಲ್ಲಿ ಅಮ್ಮ ಮತ್ತು ಅಪ್ಪ ನನಗೆ ತುಂಬಾ ಸಹಾಯ ಮಾಡುತ್ತಾರೆ ಮತ್ತು ಪ್ರೋತ್ಸಾಹಿಸುತ್ತಾರೆ .ನನ್ನ ಪೋಷಕರು ಯಾವಾಗಲೂ ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿರಲು ನನಗೆ ಸಲಹೆ ನೀಡುತ್ತಾರೆ ಬಹುಶಃ ಈ ಕಾರಣದಿಂದ ನಾನು ಅಚ್ಚುಕಟ್ಟಾಗಿರಲಿ ಇಷ್ಟಪಡುತ್ತೇನೆ .


ನನ್ನ ಜೀವನದಲ್ಲಿ ನನಗೆ ಕನ್ನಡದ ಮೇಲೆ ಅಭಿಮಾನ ಬೆಳೆಯಲು ನನ್ನ ಶಿಕ್ಷಕರೇ ಕಾರಣ .ನಾನು ನನ್ನ ಜೀವನದಲ್ಲಿ ಒಂದು ಮಾದರಿಯ ವ್ಯಕ್ತಿಯಾಗಿ ಇರಬೇಕೆಂದು ಇಷ್ಟಪಡುತ್ತೇನೆ .ಕನ್ನಡದ ಅರ್ಥವನ್ನು ತಿಳಿಸಿಕೊಟ್ಟಿದ್ದು ನನ್ನ ಜ್ಯೋತಿ ನಿವಾಸಿನ ಶಿಕ್ಷಕರು ಮಂಜುನಾಥ್ ಸರ್.ಅವರಿಗೆ ನಾನು ಧನ್ಯವಾದವನ್ನು ಹೇಳುತ್ತೇನೆ . ನನ್ನ ಜೀವನದ ಹಾಗೂ ನನ್ನ ಮುಂದಿನ ಗುರಿ ಏನೆಂದರೆ ನಾನು ಒಳ್ಳೆಯ ನಾಗರಿಕರಾಗಿ ಬದುಕಬೇಕು ಎಂದು .ನಾನು ಇದುವರೆಗೂ ಯಾವ ಪತ್ರಿಕೆಯಲ್ಲೂ ಬರಲಿಲ್ಲ .ನನ್ನ ಮುಂದಿನ ಗುರಿ ನಾನು ಒಂದು ಪತ್ರಿಕೆಯಲ್ಲಿ ಬರಬೇಕು ಅದು ಒಂದು ಒಳ್ಳೆಯ ಕಾರಣದಿಂದಾಗಿ ..ನನ್ನ ಬಗ್ಗೆ ನಾನು ಹೇಳುವುದಾದರೆ ,ನಾನು ತುಂಬಾ ತುಂಟಿ ,ನನಗೆ ನೃತ್ಯದ ಮೇಲೆ ಬಹಳಷ್ಟು ಆಸಕ್ತಿ ಇದೆ ಹಾಗೂ ಹಾಡುವುದರಲ್ಲಿ ನನಗೆ ಬಹಳಷ್ಟು ಆಸಕ್ತಿ .ಆದರೆ ಇವೆರಡನ್ನೂ ನಾನು ಎಲ್ಲೂ ಕಲಿತಿಲ್ಲ .ನನಗೆ ಒಂದು ಕೆಟ್ಟ ಹವ್ಯಾಸವೆಂದರೆ ಪುಸ್ತಕ ಓದುವ ಅಭ್ಯಾಸವೇ ಇಲ್ಲ ..ನನಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ .ನನಗೆ ಕೋಪ ಬರುವುದಿಲ್ಲ .ಎಲ್ಲ ಸಮಯವನ್ನು ನಾನು ಒಂದು ಹಿಡಿತದಲ್ಲಿ ಅದನ್ನು ಪೂರ್ತಿಗೊಳಿಸುತ್ತೇವೆ ..ನನಗೆ ಬಹಳಷ್ಟು ತಾಳ್ಮೆ ಇದೆ .ಇದು ನನ್ನ ಬಗ್ಗೆ .

ಈಗ ನನಗೆ ಕನ್ನಡದ ಮೇಲೆ ಇರುವ ಅಭಿಮಾನಕ್ಕೆ ಬಂದರೆ ,ನನಗೆ ಕನ್ನಡ ಅಂದರೆ ತುಂಬಾ ಇಷ್ಟ .ನಮ್ಮ ಸಂಸ್ಕೃತಿ ನಮ್ಮ ನಡೆ ನಮ್ಮ ನುಡಿ ಇವೆಲ್ಲವೂ ನನಗೆ ತುಂಬಾ ಇಷ್ಟ .ನನಗೆ ಕನ್ನಡದ ಇತಿಹಾಸದ ಪುಸ್ತಕಗಳನ್ನು ಓದಲು ಬಹಳ ಇಷ್ಟ .ಆದರೆ ನಾನು ಓದದಿದ್ದರೂ ಯಾರ ಬಳಿಯಾದರೂ ಕೇಳಿ ತಿಳಿದುಕೊಳ್ಳಲು ನನಗೆ ಇನ್ನೂ ಇಷ್ಟ .ನನಗೆ ಕನ್ನಡ ಮಾತನಾಡುವವರ ಮೇಲೆ ತುಂಬಾ ಅಭಿಮಾನ .ನನ್ನ ಈ ಅಭಿಮಾನ ಬೆಳೆಯಲು ನನ್ನ ಶಿಕ್ಷಕರೇ ಕಾರಣ .ನನಗೆ ಕನ್ನಡ ಎಂದರೆ ಮೊದಲು ಒಂದು ಭಾಷೆಯಷ್ಟೇ ಆದರೆ ಈಗ ಕನ್ನಡ ಪದ ಕೇಳಿದರೆ ಮೈಯೆಲ್ಲಾ ರೋಮಾಂಚನವಾಗುತ್ತದೆ .ನನಗೆ ನಮ್ಮ ಕನ್ನಡದ ಸಂಸ್ಕೃತಿ ಇವೆಲ್ಲವೂ ನಾಶವಾಗಲು ಇಷ್ಟ ಇಲ್ಲ .ಒಂದು ವೇಳೆ ಏನಾದರೂ ನಾಶವಾದರೆ ನಾನು ಅದನ್ನು ಎತ್ತಿ ಹಿಡಿಯಲು ಪ್ರಯತ್ನ ಮಾಡೇ ಮಾಡುತ್ತೇನೆ .ನನಗೆ ನಮ್ಮ ನಾಡಿನ ಪುರಾತನ ದೇವಾಲಯಗಳು ಹಾಗೂ ಮಂಟಪಗಳನ್ನು ವಿಶ್ಲೇಷಣೆ ಮಾಡುವುದು ಎಂದರೆ ತುಂಬಾ ಆಸಕ್ತಿ .ಅದರ ಬಗ್ಗೆ ತಿಳಿಯಲು ಅದನ್ನು ಹೇಗೆ ಅವರು ಅಷ್ಟು ಚೆನ್ನಾಗಿ ಮಾಡಿದ್ದಾರೆ ಅದನ್ನು ತಿಳಿಯಲು ನನಗೆ ತುಂಬಾ ಇಷ್ಟ .ನನಗೆ ಕನ್ನಡದಲ್ಲಿ ಪದಗಳನ್ನು ಬಳಸುವುದು ಬರುವುದಿಲ್ಲ ನನಗೆ ಗೊತ್ತಿರುವ ಅಷ್ಟರಲ್ಲಿ ನಾನು ಹೇಳಿದ್ದೇನೆ .ಹಾಗೂ ನಮ್ಮ ಕನ್ನಡಿಗರು ಸಂಗೊಳ್ಳಿ ರಾಯಣ್ಣ ಇರಬಹುದು ಇತರರ ಚರಿತ್ರೆಯನ್ನು ತಿಳಿಯಲು ನನಗೆ ಬಹಳ ಇಷ್ಟ .ಅವರು ಹೇಗೆ ನಮ್ಮ ನಾಡಿಗಾಗಿ ಹೋರಾಟ ನಡೆಸಿದರೂ ಅವರು ಹೇಗೆ ನಮ್ಮ ಸಂಸ್ಕೃತಿಯನ್ನು ಕಾಪಾಡಿದರು ಇವೆಲ್ಲವನ್ನೂ ತಿಳಿಯಲು ಆಸಕ್ತಿ .

ನಮ್ಮ ಮನೆಯಲ್ಲಿ ನಾವು ಮಾತನಾಡುವುದು ಮಲಯಾಳಂ ಆದರೆ ಶಾಲೆಯಲ್ಲಿ ಓದಿದ್ದೆಲ್ಲ ಕನ್ನಡ .ಅದಕ್ಕೆ ಕನ್ನಡದ ಮೇಲೆ ಇಷ್ಟೊಂದು ಪ್ರೀತಿ, ಅಭಿಮಾನ ,ಗೌರವ .ನನಗೆ ಮೊದಲು ನಮ್ಮ ಕನ್ನಡ ನಾಡಿನಲ್ಲಿ ಕರ್ನಾಟಕದಲ್ಲಿ ಈ ರಾಜಕಾರಣದ ಪದ್ಧತಿಯನ್ನು ಬದಲಾಯಿಸಬೇಕು .ಮುಖ್ಯವಾಗಿ ಎಲ್ಲೆಲ್ಲಿ ಹೆಣ್ಣುಮಕ್ಕಳ ಮೇಲೆ ಶೋಷಣೆಯಾಗುತ್ತಿದೆ ಅಲ್ಲೆಲ್ಲಾ ಒಂದು ಕಠಿಣವಾದ ಶಿಕ್ಷೆಯನ್ನು ಕೊಡಬೇಕು .ಇದು ಬದಲಾದರೆ ಚೆನ್ನಾಗಿರುತ್ತದೆ ಎಂದು ನನ್ನ ಅನಿಸಿಕೆ .


ಧನ್ಯವಾದಗಳು.