ವಿಷಯಕ್ಕೆ ಹೋಗು

ಸದಸ್ಯ:Reena Dsa/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                                         ಮೊಬೈಲ್ ಫೋನ್‌ ದಪ್ಪಗಿನ ಅಕ್ಷರ 
                

ಮೊಬೈಲ್ ಫೋನ್‌ ಎಂಬುದು ಸಂವಹನಕ್ಕೆ ಬಳಸಲಾಗುವ್ ಒಂದು ವಿದ್ಯುನ್ಮಾನ ಉಪಕರಣ ಸಾಧನ . ಸೆಲ್ ಸೈಟ್ಸ್ ಎನ್ನಲಾದ ವಿಶಿ‌‍‌ಷ್ಟ ಬೇಸ್ ಸ್ಟೇಟನ್ ಗಳ ಸೆಲುಲರ್ ಜಾಲದ ಮೂಲಕ ಮೊಬೈಲ್ ದೂರ ಸಂವಹನ ಮಾಡಲು ಈ ದೂರವಾಣಿಯನ್ನು ಬಳಸಲಾಗುತ್ತದೆ . ಮೊಬೈಲ್ ಗಳು ನಿಸ್ತಂತು ದೂರವಾಣಿಗಿಂತ ಬಿನ್ನವಾಗಿವೆ. ನಿಸ್ತಂತು ದೂರವಾಣಿಗಳು ಸೀಮಿತ ವ್ಯಾಪ್ತಿಯಲ್ಲಿ ಸಂವಾಹನ ವ್ಯವಸ್ತೆಯನ್ನು ಒದಗಿಸುತ್ತದೆ. ಜೊತೆಗೆ ಸಾರ್ವಜನಿಕ ಸ್ಥಿರಮೊಬೈಲ್ ಜಾಲವೊಂದಕ್ಕೆ ಸ್ವಯಂ ಚಾಲಿತ ಕರೆ ಮಾಡುವ ಅಥವಾ ಅದರಿಂದ ಪೇಜಿಂಗ್ ಸೇವೆಯನ್ನು ಕಲ್ಪಿಸುತ್ತದೆ. ಇದಲ್ಲದೆ ದೂರವಾಣಿ ಕರೆ ಸಮಯದಲ್ಲಿ ಬಳಕೆದಾರ ಒಂದು ಸೆಲ್ ಬೇಸ್ ಸ್ಟೇಷನ್ ವ್ಯಾಪ್ತಿಯಿಂದ ಇನ್ನೊಂದಕ್ಕೆ ಹೋದಾಗ ಹ್ಯಾಂಡಾಫ್ ವ್ಯವಸ್ಥೆಯನ್ನೂ ಕಲ್ಪಿಸುತ್ತದೆ ಮೊಬೈಲ್ ಜಾಲ ನಿರ್ವಾಹಕರ ಸಿಯಂತ್ರಣದಲ್ಲಿರುವ ಸ್ವಿಚಿಂಗ್ ಪಾಯಿಂಟುಗಳುಳ್ಳ ಸೆಲುಲರ್ ಜಾಲ ಮತ್ತು ಬೇಸ್ ಸ್ಟೇಷನ್ ಗಳಿಗೆ ಪ್ರಸ್ತುತ ಸೆಲ್ ಪೋನ್ ಗಳಲ್ಲಿ ಬಹಳಷ್ಟು ದೂರವಾಣಿಗಳು ಸಂಪರ್ಕ ಪಡೆಯುತ್ತದೆ. ಮೂಲ ಭೂತ ಧ್ವನಿ ಆಧಾರಿತ ಸಂವಹನವಲದೆ, ಪ್ರಸ್ತುತ ಮೊಬೈಲ್ ದೂರವಾಣಿಗಳು ಹೆಚ್ಚುವರಿ ಸೇವೆ ಹಾಗೂ ಪರಿಕರಗಳನ್ನು ಒದಗಿಸುತ್ತದೆ. ಪಠ್ಯ ರಚನೆ ಸಂದೇಶ ರವನೆಗಾಗಿ ಇಂಟರ್ನೆಟ್ ವೀಕ್ಷಿಸಲು ಪ್ಯಾಕೆಟ್ ಸ್ವಿಚಿಂಗ್ ಗೇಮಿಂಗ್ ಬ್ಲೂಟುತ್ ಇನ್ಪ್ರಾರೆಡ್ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ರವಾನಿಸಲು ವಿಡಿಯೊ ರೆಕಾರ್ಡರ್ ಹಾಗೂ ಎಂ ಎಂ ಎಸ್ ಹೊಂದಿರುವ ಕ್ಯ್ವಾಮರ ಎಂಪಿ ೩ ಪ್ಲೇಯರ್ , ರೇಡಿಯೋ ಮತ್ತು ಜಿ.ಪಿ.ಎಸ್

ಸುಮಾರು ೧೯೦೮ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಕೆಂಟಕಿ ರಾಜ್ಯದ ಮರ್ರೇ ನಿವಾಸಿ ನಾಥನ್‌ ಬಿ. ಸ್ಟಬಲ್ಫೀಲ್ಡ್‌ ಎಂಬವರಿಗೆ ನಿಸ್ತಂತು ದೂರವಾಣಿ ಯು.ಎಸ್ ಪೇಟೆಂಟ್ ೮,೮೭,೩೫೭ಒಂದನ್ನು ನೀಡಲಾಯಿತು. ಅವರು ನೇರವಾಗಿ ಸೆಲ್ಯುಲರ್‌ ದೂರವಾಣಿ ವ್ಯವಸ್ಥೆಯ ಬದಲಿಗೆ 'ಕೇವ್‌ ರೇಡಿಯೊ' ದೂರವಾಣಿಗಳ ಈ ಪೆಟೆಂಟ್‌ ಗಾಗಿ ಅರ್ಜಿ ಸಲ್ಲಿಸಿದರು ಬೆಲ್ ಲ್ಯಾಬ್ಸ್‌ನ ತಂತ್ರಜ್ಞಾನಿಗಳು ಮೊಬೈಲ್‌ ದೂರವಾಣಿ ಬೇಸ್‌ ಸ್ಟೇಷನ್‌ಗಳಿಗಾಗಿ ಸೆಲ್‌ಗಳನ್ನು ಆವಿಷ್ಕರಿಸಿದರು. ೧೯೬೦ ರ ದಶಕದಲ್ಲಿ ಇದನ್ನು ಬೆಲ್ ಲ್ಯಾಬ್ಸ್‌ನವರು ಇನ್ನಷ್ಟು ಅಭಿವೃದ್ಧಿಪಡಿಸಿದರು. ರೇಡಿಯೊಫೋನ್‌ಗಳದ್ದು ಸುದೀರ್ಘ ಮತ್ತು ವಿಭಿನ್ನ ಇತಿಹಾಸವಿದೆ. ಇದು ರಿಜಿನಾಲ್ಡ್‌ ಫೆಸೆನ್ಡೆನ್‌ರ ಆವಿಷ್ಕಾರದ ಹಿಂದಿರುವ ಇತಿಹಾಸ ಹೊಂದಿದೆ. ಎರಡನೆಯ ಜಾಗತಿಕ ಸಮರದ ಸಮಯದಲ್ಲಿ ರೇಡಿಯೊ ದೂರವಾಣಿ ವ್ಯವಸ್ಥೆಯ ಪ್ರದರ್ಶನ ನೀಡಲಾಗಿತ್ತು. ರೇಡಿಯೊ ದೂರವಾಣಿ ವ್ಯವಸ್ಥೆಯ ಮೂಲಕ ಸೇನಾ ಮತ್ತು ನಾಗರಿಕ ಸೇವೆಯನ್ನು೧೯೫೦ರ ದಶಕದಲ್ಲಿ ಆರಂಭಗೊಳಿಸಲಾಯಿತು. ಅಂಗೈಲ್ಲಿ ಹಿಡಿಯಬಹುದಾದ ಮೊಬೈಲ್‌ ರೇಡಿಯೊ ಉಪಕರಣಗಳು ೧೯೭೩ರಿಂದಲೂ ಲಭ್ಯವಿವೆ. ನಮಗೆ ತಿಳಿದಿರುವ ಮೊದಲ ನಿಸ್ತಂತು ದೂರವಾಣಿಗಾಗಿ ಪೆಟೆಂಟನ್ನು೧೯೬೯ರ ಜೂನ್‌ ೧೦ರಂದು ನೀಡಲಾಯಿತು. ಒಹಾಯೊ ರಾಜ್ಯದ ಯುಕ್ಲಿಡ್‌ ನಿವಾಸಿ ಜಾರ್ಜ್‌ ಸ್ವೇಜರ್ಟ್‌ರಿಗೆ ಯು ಎಸ್ ಪೆಟೆಂಟ್‌ ಸಂಖ್ಯೆ ೩೪೪೯,೭೫೦ ನೀಡಲಾಯಿತು.