ಸದಸ್ಯ:Raviraj Rai 34/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಸು[ಬದಲಾಯಿಸಿ]

ಕಣಿ ಕಾಣುವ ಹಬ್ಬ ವೆಂದೇ ಖ್ಯಾತಿ ಪಡೆದ ಬಿಸಿಲು ಆಚರಣೆಯನ್ನು ಜನರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಚಂದ್ರನ ಚಲನೆಯನ್ನು ಆಧರಿಸಿ ಚಾಂದ್ರಮಾನ ಯುಗಾದಿ ಆಚರಿಸುವಂತೆ ಸೂರ್ಯನ ಚಲನೆಯನ್ನು ಆಧರಿಸಿ ಸೌರಮಾನ ಯುಗಾದಿಯನ್ನು ಆಚರಿಸುತ್ತಾರೆ. ಇದುವೇ ಬಿಸು. ತುಳು ಸಂಸ್ಕೃತಿ ಪ್ರಕಾರ ಈ ಆಚರಯೊಂದಿಗೆ ವರ್ಷದ ಆರಂಭ. ಈ ದಿನ ಹೊಸ ವರ್ಷಾಚರಣೆಯ ಸಂಭ್ರಮ. ತುಳುನಾಡಿನಲ್ಲಿ'ಬಿಸು'ವಾಗಿಯೂ ಕೇರಳದಲ್ಲಿ 'ವಿಷು'ವಾಗಿಯೂ ಅಚರಿಸಲ್ಪಡುವ ವಿಷು ಹಬ್ಬವೂ ಸುಗ್ಗಿಯನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ದೇಶದ ಇತರೆಡೆಗಳಲ್ಲೂ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಅಸ್ಸಾಂನಲ್ಲಿ 'ಬಿಶು' ಎಂಬುದಾಗಿ ಇದನ್ನು ಸಂಭ್ರಮಿಸಿದರೆ ಪಂಜಾಬ್ ನಲ್ಲಿ 'ಬೈಸಾಕಿ' ಮತ್ತು ತಮಿಳುನಾಡಿನಲ್ಲಿ 'ಪುತ್ತಾಂಡ್' ಎಂದಾಗಿ ಸುಗ್ಗಿಯ ಸಂಭ್ರಮವನ್ನು ಕೊಂಡಾಡುತ್ತಾರೆ. ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಎಪ್ರಿಲ್ ತಿಂಗಳ ಎರಡನೇ ವಾರ ಅಂದರೆ ಎಪ್ರಿಲ್ ೧೪ರಂದು ಬಿಸುವನ್ನು ಆಚರಿಸುತ್ತಾರೆ.[೧]

ಆಚರಣೆ ಹೇಗೆ[ಬದಲಾಯಿಸಿ]

ಹಬ್ಬದ ದಿನದಂದು ಬೆಳಿಗ್ಗೆ ಬೇಗನೆ ಎದ್ದು ದೇವರ ಕೋಣೆ ಅಥವಾ ನಡುಮನೆಯಲ್ಲಿ ಹಾಸು ಮಣೆಯ ಮೇಲೆ ಮಡಿ ಹಾಕಿ ಗಣಪತಿಗೆ ಇಡಬೇಕು. ಕಾಲು ದೀಪ ಹಚ್ಚಿಟ್ಟು ಎರಡು ತುದಿ ಬಾಳೆಯಲ್ಲಿ ೧ ಒಂದು ಸೇರು ಅಕ್ಕಿ, ೫ ಎಲೆ, ೧ ಅಡಿಕೆ, ಗಂಧದ ಕಡ್ಡಿ ಉರಿಸಿ, ತೇದ ಗಂಧವನ್ನು ಅರೆದು ಇಡಬೇಕು. ಇದರ ಮುಂಭಾಗದಲ್ಲಿ ಬೆಳೆದ ತರಕಾರಿ, ಹೂ, ಹಿಂಗಾರ, ಹಣ್ಣು ಹಂಪಲು, ಚಿನ್ನದ ಆಭರಣ, ಕನ್ನಡಿಯನ್ನಿಡುವುದು. ನಂತರ ಮನೆಯವರೆಲ್ಲ ಸೇರಿ ಪ್ರಾರ್ಥನೆ ಮಾಡಿ ದೇವರಿಗೆ ನಮಸ್ಕರಿಸುವುದು. ಕುಟುಂಬದ ಸದಸ್ಯರೊಂದಿಗೆ ಸಾಮರಸ್ಯ ಅಂತೆಯೇ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ತಿಳಿಸುತ್ತದೆ. ಹಿರಿಯರ ಆಶೀರ್ವಾದವನ್ನು ಕಿರಿಯರು ಈ ಸಂದರ್ಭದಲ್ಲಿ ಪಡೆದುಕೊಳ್ಳುತ್ತಾರೆ. ಮನೆಯ ಹಿರಿಯರು ಕಿರಿಯರೆಲ್ಲರಿಗೂ ಹಣವನ್ನು ನೀಡಿ ಹಬ್ಬದಂದು ಅವರು ಖುಷಿಪಡಿಸುತ್ತಾರೆ. ವರ್ಷ ಪೂರ್ತಿ ಇದು ಸೌಭಾಗ್ಯವನ್ನು ನೀಡುತ್ತದೆ ಎಂಬುದು ಪ್ರತೀತಿ. ಬಿಸು ಹಬ್ಬದ ಅಂಗವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ವಿಶೇಷ ಪೂಜೆ, ದೇವರ ಬಲಿ ಉತ್ಸವ ನಡೆಯುತ್ತದೆ. ಈ ವಿಶೇಷ ದಿನಕ್ಕೆ ಸಾಂಪ್ರದಾಯಿಕ ತಿನಿಸನ್ನು ತಯಾರಿಸಿ ಸವಿಯುವುದು ಸಾಮಾನ್ಯ. ಎಲ್ಲರೂ ಪ್ರತಿ ಮನೆ-ಮನೆಗೂ ಹೋಗಿ ಅಲ್ಲಿರುವ ಹಿರಿಯರ ಆಶೀರ್ವಾದ ಪಡೆದು ತಿನಿಸನ್ನು ಸವಿಯುವುದು ಪದ್ಧತಿ ಇದೆ. ಮನೆಯ ಚಾವಡಿಯಲ್ಲಿ ಬಿಸು ಕಣಿ ಇಟ್ಟಾದ ನಂತರ ಮನೆಯ ಯಜಮಾನಕ್ಯೆ ಬಿತ್ತು ಹಾಕುವ ಕ್ರಿಯೆಯನ್ನು ಗದ್ದೆಯ ಹುಣೆಯಲ್ಲಿ ನಡೆಸುತ್ತಾರೆ. ಹುಣೆಯ ಬದಿಯಲ್ಲಿ ಮಣ್ಣನ್ನು ಹದಗೊಲಳಿಸಿ ಭತ್ತದ ಬೀಜವನ್ನು ಹಾಕಿ ಅದಕ್ಕೆ ನೆರಳಾಗಿ 'ಸರೋಳಿ' ಎನ್ನುವ ಗಿಡದ ಕಣೆಗಳನ ಕ್ಕುತ್ತುತಾರೆ. ಅದೇ ದಿನ ಗದ್ದೆಯಲ್ಲಿ ಬೀಜ ಬಿತ್ತಿ ಉಳುಮೆ ಮಾಡುತ್ತಾರೆ. ಇದೇದಿನೊಕ್ಕಲುಗಳು ಬಿಸು ಕಣಿ ಇಟ್ಟಾದ ಬಳಿಕ ತಮ್ಮ ಧನಿಗಳ ಗುತ್ತು ಮನೆಗಳಿಗೆ ಬೆಳೆ ಕಾಣಿಕೆ ಅಂದರೆ ತರಕಾರಿ ಇತ್ಯಾದಿಗಳನ್ನು ಅರ್ಪಿಸುದು ಪದ್ಧತಿ.ಅಲ್ಲದೆ ಆ ದಿನ ಮುಂದಿನ ವರ್ಷವೂ ತಾನು ಒಕ್ಕಲು ಮಾಡುವುದಕ್ಕೆ ಅನುಮತಿ ಪಡೆಯುವ ಕ್ರಮವಾಗಿ ಈ ಬೆಳೆಕಾಣಿಕೆಯನ್ನು ಅರ್ಪಿಸುವ ಪದ್ಧತಿ ಚಾಲ್ತಿಯಲ್ಲಿಯಿತ್ತು.[೨]

ಉಪಸಂಹಾರ[ಬದಲಾಯಿಸಿ]

ಬಿಸು ಹಬ್ಬ ಪ್ರಕೃತಿ ಆರಾಧನೆಯ ಒಂದು ವಿಧಾನವಾಗಿದೆ.ಹೊಸ ವರ್ಷದ ಉನ್ನತಿಯ ಪ್ರಥಮ ಹೆಜ್ಜೆ.ಸುಗ್ಗಿಯ ಸಂಭ್ರಮವು ಜನರಲ್ಲಿ ಸಂತೋಷ , ರೈತರಿಗೆ ತೃಪ್ತಿಯನ್ನು ಇದು ನೀಡುತ್ತದೆ. ತುಳುವರು ಭತ್ತದ ಬೆಳೆಯನ್ನು ಒಂದು ಆರಾಧನಾ ಭಾವದಿಂದ ಕಾಣತ್ತಾರೆ. ವಾಸ್ತವವಾಗಿ ಈ ಆಚರಣೆಯಲ್ಲಿ ಭೂಮಿ ಮತ್ತು ಹೆಣ್ಣನ್ನು ಏಕತ್ರವಾಗಿ ಕಂಡಿದ್ದಾರೆ. .[೩]

ಉಲ್ಲೇಖಗಳು[ಬದಲಾಯಿಸಿ]

  1. https://vijaykarnataka.indiatimes.com/lavalavk/languages/tulu/tuluverena-posa-varsha/articleshow/46851482.cms
  2. https://www.indiatoday.in/fyi/story/vishu-2017-april-14-kerala-festival-history-legends-practices-971219-2017-04-13
  3. https://www.amritapuri.org/3598/vishu.aum