ಸದಸ್ಯ:Rashwin Aloy/sandbox/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                ವೈರಾಣು

ವೈರಾಣುವು (ಲ್ಯಾಟಿನ್‌ನಲ್ಲಿ ವೈರಸ್ ಎಂದರೆ ಟಾಕ್ಸಿನ್ - ಜೀವಾಣುವಿನಲ್ಲಿ ಉತ್ಪನ್ನವಾಗುವ ವಿಷ ಅಥವಾ ವಿಷ) ಬೇರೆಯೊಂದು ಜೀವಿಯ ಜೀವಕೋಶಗಳೊಳಗೆ ಮಾತ್ರ ಸಂತಾನೋತ್ಪತ್ತಿ ಮಾಡಬಲ್ಲ ಒಂದು ಚಿಕ್ಕದಾದ ಸೋಂಕುಂಟುಮಾಡುವ ಸೂಕ್ಷ್ಮಜೀವಿ. ವೈರಾಣುಗಳು ದ್ಯುತಿಸೂಕ್ಷ್ಮದರ್ಶಕದಿಂದ ಪ್ರತ್ಯಕ್ಷವಾಗಿ ಕಾಣದಷ್ಟು ಚಿಕ್ಕದಾಗಿರುತ್ತವೆ. ವೈರಾಣುಗಳು ಪ್ರಾಣಿಗಳು ಮತ್ತು ಸಸ್ಯಗಳ ಜೊತೆಗೆ ಬ್ಯಾಕ್ಟೀರಿಯಾ ಮತ್ತು ಆರ್ಕೀಯಾದ ವರೆಗಿನ ಎಲ್ಲ ಬಗೆಯ ಜೀವಿಗಳಲ್ಲಿ ಸೋಂಕು ಉಂಟು ಮಾಡುತ್ತವೆ. ಇವುಗಳು ಡಿ.ಎನ್.ಎ ಅಥವಾ ಆರ್.ಎನ್.ಎ ಎಳೆಗಳನ್ನು ಪ್ರೂಟೀನುಗಳು ಆವರಿಸಿಕೊಂಡಿರುವ ಕಣಗಳಾಗಿವೆ. ಇವುಗಳು ಜೀವಕೋಶಗಳು ಅಲ್ಲ ಎಂಬುದನ್ನು ರುಡಾಲ್ಫ್ ವರ್ಛೊ ಅವರು ಹೊರಡಿಸಿದ ಸೆಲ್ ಥಿಯರಿಯ ಮೂಲಕ ವ್ಯಕ್ತವಾಗಿದೆ. ಆದರು ಇವುಗಳು ಜೀವಿಗಳ ಒಳಗಡೆ ಇದ್ದಾಗ ಜೀವ ತುಂಬಿದಂತೆ ಕಾಣುವುದು. ಇದರಿಂದಾಗಿ ವೈರಾಣುಗಳು ಜೀವಿಗಳ ಹಾಗು ನಿರ್ಜೀವ ಲೋಕದ ಮಧ್ಯೆ ಇರುವ ಒಂದು ಸೇತುವೆ ಆಗಿದೆ. ಇವುಗಳು ಹಲವಾರು ರೋಗಗಳನ್ನು ಹೊರಡಿಸುತ್ತದೆ. ಇದರಿಂದಾಗಿ ನಮ್ಮ ವಿಜ್ಞಾನಿಗಳು ಇವುಗಳ ಬಗ್ಗೆ ತಿಳಿದು, ಜೀವಿಗಳಲ್ಲಿ ರೋಗಗಳನ್ನು ಉಂಟುಮಾಡುವ ರೀತಿಯನ್ನು ಕುರಿತು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿರುವರು. ಜೊತೆಗೆ ಇವುಗಳನ್ನು ಮಾನವನ ಹಾಗು ಪರಿಸರದ ಉಪಯೋಗಕ್ಕಾಗಿಯೂ ಇಂದು ಬಳಸಲಾಗಿದೆ. ವೈರಾಣುಗಳು ಆಕ್ರುತಿಯಲ್ಲಿಯೂ ಗಾತ್ರದಲ್ಲಿಯೂ ವ್ಯತ್ಯಾಸವನ್ನು ತೋರಿಸುವುದು. ಇವುಗಳ ವ್ಯಾಸ ೧೭ ರಿಂದ ೧೦೦೦ ನಾನೋಮೀಟರುಗಳಾಗಿವೆ.

ವೈರಾಣುಗಳ ನಿರ್ಮಾಣ: ಎಲ್ಲಾ ವೈರಾಣುಗಳ ತಳಮಟ್ಟದ ರಚನೆ ಒಂದೇ ಆಗಿದೆ: ನಡುವಲ್ಲಿ ನ್ಯೂಕ್ಲಿಯಿಕ್ ಆಸಿಡ್ ಮತ್ತೆ ಇದರ ಸುತ್ತ ಪ್ರೋಟೀನಿನ ಸುತ್ತುವರಿ. ಎರಡು ತರದ ನ್ಯೂಕ್ಲಿಯಿಕ್ ಆಸಿಡಿನಲ್ಲಿ (ಡಿ.ಎನ್.ಎ ಹಾಗೂ ಆರ್.ಎನ್.ಎ) ಯಾವುದಾದರು ಒಂದು ಪ್ರತಿಯೊಬ್ಬ ವೈರಾಣುವಿನಲ್ಲಿ ಕಂಡುಬರುತ್ತದೆ. ಇದರ ಸುತ್ತ ಒಂದರಿಂದ ಹಲವಾರು ತರದ ಪ್ರೋಟೀನುಗಳು ಪುನರಾವರ್ತಿಗೊಂಡು ನಿರ್ಮಿತವಾಗಿರುವ 'ಕ್ಯಾಪ್ಸಿಡ್' ಎಂಬ ರಕ್ಷಣೆ. ಈ ಪ್ರೋಟೀನುಗಳನ್ನು 'ಕ್ಯಾಪ್ಸೋಮಿಯರ್ಸ್' ಎಂದು ಕರೆಯುವೆವು. ಕೆಲವು ಪ್ರಾಣಿಗಳನ್ನು ಆಕ್ರಮಿಸುವ ವೈರಾಣುಗಳಿಗೆ ಕ್ಯಾಪ್ಸಿಡಿನ ಸುತ್ತ ಪ್ರೋಟೀನ್, ಮೇದಸ್ಸು ಅಥವ ಗ್ಲೈಕೋ-ಪ್ರೋಟೀನ್, ಇವುಗಳಿಂದ ನಿರ್ಮಿತವಾಗಿರುವ 'ಎನ್ವೆಲಪ್' ಎಂಬ ಸುತ್ತಗಟ್ಟ ಇದೆ.

ಬ್ಯಾಕ್ಟೀರಿಯೋಫಾಜ್: ಬ್ಯಾಕ್ಟೀರಿಯಾಗಳನ್ನು ಆಕ್ರಮಿಸುವ ವೈರಾಣುಗಳನ್ನು 'ಬ್ಯಾಕ್ಟೀರಿಯೋಫಾಜ್' ಎಂದು ಕರೆಯಲಾಗಿದೆ. ಇವುಗಳಲ್ಲಿ ಎರಡು ರೀತಿಯ ಸಂತಾನೋತ್ಪತಿಯ ರೀತಿಗಳನ್ನು ಕಂಡು ಬರಬಹುದು. ಒಂದು 'ಲೈಟಿಕ್' ಮತ್ತೊಂದು 'ಲೈಸೋಜೆನಿಕ್' ಜೀವನ ಚಕ್ರ.

ಲೈಟಿಕ್ ಜೀವನ ಚಕ್ರ: (ಲೈಸಿಸ್ ಎಂದರೆ 'ಬೇರ್ಪಡು' ಎಂದರ್ಥ) ವೈರಾಣು ಒಂದು ಬ್ಯಾಕ್ಟೀರಿಯಾದ ಜೀವಕೋಶವನ್ನು ಸೋಂಕಿತಗೊಳ್ಳಿಸಿ, ನಂತರ ಅದೇ ಕೋಶವನ್ನು ಸಂಪೂರ್ಣವಾಗಿ ನಾಶಗೊಳಿಸಿದಾಗ ಆ ಜೀವನ ಚಕ್ರವನ್ನು ಲೈಟಿಕ್ ಜೀವನ ಚಕ್ರ ಎಂದು ಕರೆಯುವೆವು. ಕೆಲವು ವೈರಾಣುಗಳು ಇದನ್ನು ಬ್ಯಾಕ್ಟೀರಯಾದ ಒಳಗೆ ಸೇರಿದ ತಕ್ಷಣ ಮಾಡುವುದು, ಕೆಲವು ವ್ಯತ್ಯಸ್ಥ ಕಾಲಾವಧಿಯಲ್ಲಿ ಮಾಡುವುದು.

ಲೈಟಿಕ್ ಮತ್ತು ಲೈಸೋಜೆನಿಕ್ ಜೀವನ ಚಕ್ರ: ವೈರಾಣು ಮೊದಲು ಬ್ಯಾಕ್ಟೀರಿಯ ಕೋಶದ ಮೇಲೆ ಇರುವ ಗ್ರಾಹಕ ಕಣಗಳ ಒಂದಿಗೆ ಅಂಟಿಕೊಂಡು, ತಮ್ಮ ನ್ಯೂಕ್ಲಿಕ್ ಆಸಿಡನ್ನು ಕೋಶಕ್ಕೆ ಒಳನುಗ್ಗಿಸುತ್ತದೆ. ಕೋಶದ ಒಳಗಡೆ ಈ ಒಂದು ನ್ಯೂಕ್ಲಿಕ್ ಆಸಿಡಿನ ಸಂಖ್ಯೆ ಹೆಚ್ಚಾಗುತ್ತದೆ ಜೊತೆಗೆ ಕ್ಯಾಪ್ಸಿಡ್ ಪ್ರೋಟೀನುಗಳ ಉತ್ಪಾದನೆಯು ನಡೆಯುತ್ತದೆ. ನಂತರ ನಿರ್ಮಿತವಾದ ಎಲ್ಲಾ ಕಣಗಳು ಸೇರಿಸಿ ಹಲವಾರು ವೈರಾಣುಗಳನ್ನು ಹೊರಡಿಸುತ್ತದೆ. ಹೀಗೆ ಉತ್ಪಾದಿತವಾದ ವೈರಾಣುಗಳಿಂದ ಕೋಶದ ಒಳಗಿನ ಒತ್ತಡ ಹೆಚ್ಚಾಗಿ ಕೋಶವನ್ನು ಕೀಳಿ ಅವುಗಳು ಹೊರಹೊಮ್ಮುವವು. ಸೋಂಕಿತಗೊಂಡ ಪ್ರತಿಯೊಂದು ಕೋಶದಿಂದ ನೂರಾರು ವೈರಾಣುಗಳು ಹೊರಬರುವವು.

ಲೈಸೋಜೆನಿಕ್ ಜೀವನ ಚಕ್ರ: ಈ ಜೀವ ಚಕ್ರದಲ್ಲಿ ಬ್ಯಾಕ್ಟೀರಿಯಾದ ಕೋಶಗಳು ನಾಶವಾಗುವುದಿಲ್ಲ. ಆದರೆ ಕೋಶದ ಒಳಗಿರುವ ವೈರಾಣುವು ಯಾವುದಾದರು ರೀತಿಯಲ್ಲಿ ಪ್ರಚೋದಕಗೊಂಡರೆ ಅದು ಲೈಟಿಕ್ ಜೀವಚಕ್ರವನ್ನು ಮುಂದುವರಿಸುತ್ತದೆ. ಇಲ್ಲಿ ವೈರಾಣುವಿನ ಗುಣಾಕಾರ ನಡೆಯುವುದಿಲ್ಲ, ಬದಲಾಗಿ ಕೋಶದ ಒಳಗಡೆ ಸೇರಿದ ನ್ಯೂಕ್ಲಿಕ್ ಆಸಿಡ್, ಬ್ಯಾಕ್ಟೀರಿಯಾದ ನ್ಯೂಕ್ಲಿಕ್ ಆಸಿಡಿನ ಜೊತೆ ಸೇರಿರುತ್ತದೆ. ವೈರಾಣುವಿನ ಸಂತಾನೋತ್ಪತಿ ನಡೆಯುವ ಮೂಲಕ ವೈರಾಣುವಿನ ಗುಣಾಕಾರವು ನಡೆಯುತ್ತದೆ.ಕೆಲವು ವೈರಾಣುಗಳಲ್ಲಿ ಎರಡು ತರದ ಜೀವನ ಚಕ್ರವನ್ನು ಕಂಡುಬರುವುದು (λ ಫಾಜ್).