ವಿಷಯಕ್ಕೆ ಹೋಗು

ಸದಸ್ಯ:Ranjitha Raja/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ

[ಬದಲಾಯಿಸಿ]
'ಕಾಲ' ಎಂಬ ಪದದ ಪರಿಕಲ್ಪನೆ ಪ್ರಾಚೀನ ಮಾನವನಲ್ಲೇ ಮೂಡಿತ್ತು. ತನ್ನ ಪರಿಸರದಲ್ಲಿ ತನ್ನ ಹಾಗೂ ತನ್ನ ಸಂತತಿ, ಜನಾಂಗದ ಉಳಿವಿಗಾಗಿ ದಿನನಿತ್ಯದ ಕೆಲಸಗಳಿಗಾಗಿ ಪ್ರಾಚೀನ ವ್ಯಕ್ತಿ ಕಾಲವನ್ನು ಕಲ್ಪಿಸಿಕೊಂಡ. ಪ್ರಾಕೃತಿಕವಾಗಿ ನಿರಂತರ ಘಟಿಸುವ ಎರಡು ಸಂದರ್ಭಗಳ ನಡುವಿನ ಅವಧಿಯನ್ನು ಕಾಲ ಎಂದು ಕರೆದ.

ಇಂಥಾ ಲೆಕ್ಕಾಚಾರ,ಕಲ್ಪನೆಗೆ ಸಹಕಾರಿಯಾಗಿದ್ದು ದೈನಂದಿನ ಬದುಕಿನಲ್ಲಿನ ಹಗಲು, ರಾತ್ರಿ, ಬೆಳಗು, ಮುಂಜಾನೆ ಇತ್ಯಾದಿಗಳು. ದಿನದ ಆಹಾರ ಸಂಗ್ರಹಣೆ ಯಾವ ಸಮಯದಲ್ಲಿ ಮಾಡಬೇಕು, ಎಷ್ಟುಹೊತ್ತು ಮಾಡಬೇಕು. ಕಾಡುಪ್ರಾಣಿಗಳಿಂದ ಅಪಾಯ ಎದುರಾಗುವ ನಿರ್ದಿಷ್ಟ ಸಮಯ ಯಾವುದು ಇತ್ಯಾದಿ 'ಕಾಲ'ವನ್ನು ಲೆಕ್ಕ ಹಾಕುವ ಗುರುತಿಸುವ 'ಜ್ಞಾನ'ವು ಪುರಾತನ ಮನುಷ್ಯನ ಬದುಕು ಸಹನೀಯವಾಗುವಂತೆ ಮಾಡಿತು. ಕಾಲವನ್ನು ತಿಳಿಯುವುದು ಒಂದು ರೀತಿ ಭೂಮಿಯ ಮೇಲೆ ಅವನ ಉಳಿಯುವಿಕೆಯನ್ನು ಗಟ್ಟಿಗೊಳಿಸಿತು. ಪ್ರಾಚೀನ ಮಾನವ ನಿಸರ್ಗದ ಬದಲಾವಣೆಗೆ --Ranjitha Raja (talk) ೦೯:೧೩, ೩೦ ಜನವರಿ ೨೦೧೪ (UTC)ಹೊಂದಿಕೊಂಡಂತೆ ತನ್ನ ಇಡೀ ದಿನದ ಚಟುವಟಿಕೆಗಳಿಗೆ ನಿರ್ದಿಷ್ಟ 'ಕಾಲ'ವನ್ನು ಗುರುತಿಸಿಕೊಂಡಿದ್ದ.ಸೂರ್ಯ ಹುಟ್ಟುವುದರೊಂದಿಗೆ ಪ್ರಾರಂಭವಾಗುತ್ತಿದ್ದ ಅವರ ಚಟುವಟಿಕೆ ಸಂಜೆ ಸೂರ್ಯ ಮುಳುಗುವುದರೊಂದಿಗೆ ಮುಕ್ತಾಯಗೊಳ್ಳುತ್ತಿದ್ದವು.ಮುಂದೆ ಮನುಷ್ಯ ಬೆಂಕಿ,--Ranjitha Raja (talk) ೧೦:೩೯, ೩೦ ಜನವರಿ ೨೦೧೪ (UTC)ರಾತ್ರಿ ದೀಪಗಳನ್ನು ಬಳಸಲು ಪ್ರಾರಂಭಿಸಿದ ನಂತರ ರಾತ್ರಿ ಹೊತ್ತಿನಲ್ಲೂ ಅವನ ಚಟುವಟಿಕೆಗಳು ನಡೆಯಲಾರಂಭಿಸಿದವು. ರಾತ್ರಿ ಹೊತ್ತಲ್ಲೂ ಕಾಲವನ್ನು ಅವನು ಅಳೆಯಬೇಕಾದ ಅನಿವಾರ್ಯತೆ ಬಂದೊದಗಿತು.ಇದು ಕಾಲವನ್ನು ಅಳೆಯುವ ಹೊಸ ಸಾಧನಗಳ ಅನ್ವೇಷಣೆಗೆ ನಾಂದಿ ಹಾಡಿತು.ನಾವು ನಮ್ಮ ಜೀವನದ ಗುರಿಯನ್ನು ಮುಟ್ಟಲು ಸಾಧ್ಧ್ಯ ವಾಗಬೇಕಾದ್ದರೆ ನಾವು ಮುಖ್ಯವಾಗಿ ಸಮಯಪ್ರಜ್ಞೆಯನ್ನು ಅಂದಿನ ಕೆಲಸವನ್ನು ಅಂದೇ ಮಾಡಿಮುಗಿಸಬೇಕು.ನಾವು ಸಮಯ ಉಳಿತಾಯ ಮಾಡುವುದು ಆದಷ್ಟು ಒಳ್ಳೆಯದು ಏಕೆಂದರೆ ಇಂದಿನ ಓಡುವ ಯುಗದಲ್ಲಿ ಇರುವ ನಮ್ಮಗೆ ತುಂಬಾ ಮುಖ್ಯವಾಗುತ್ತದೆ.ಒಂದು ದಿನದಲ್ಲಿರುವುದು ಕೇವಲ ಇಪ್ಪತ್ನಾಲ್ಕು ತಾಸುಗಳುಮಾತ್ರ.ನಮ್ಮ ಜೀವನದಲ್ಲಿ ಸಮಯವು ತುಂಬಾ ಉಪಯೋಗವಾಗುತ್ತದೆ.ಸಮವಿಲ್ಲದೆ ನಮ್ಮ ಜೀವ ನಡೆಸಳು ತುಂಬಾ ಕಷ್ಟವಾಗುತ್ತದೆ ಆದ್ದುದರಿಂದ ನಾವು ಸಮಯವನ್ನು ನಮ್ಮ ಒಬ್ಬ ಅತ್ಯುತ್ತಮ ಗೆಳೆಯನಂತೆ ಪರಿಗಣ್ಣಿಸಬೇಕಾಗುತ್ತದೆ.


ಚಲಿಸುವ ನೆರಳು

[ಬದಲಾಯಿಸಿ]
ಪ್ರಕೃತಿಯಲ್ಲಿ ಪ್ರಾಚೀನ ಜನರ ಕಣ್ಣಿಗೆ ಹಗಲು ಹೊತ್ತಿನಲ್ಲಿ ಕಾಣುತ್ತಿದ್ದ ಒಂದು ಸ್ಪಷ್ಟ ವಿದ್ಯಮಾನವೆಂದರೆ,ಸೂರ್ಯ ಆಕಾಶದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಸಾಗಿದಂತೆ ಮರದ ನೆರಳು,ಕೋಡುಗಲ್ಲುಗಳ ನೆರಳು, ಬೆಟ್ಟ ದಿಬ್ಬಗಳ ನೆರಳುಗಳ ಚಲನೆ.ಒಂದೇ ಪ್ರದೇಶದಲ್ಲಿ ದಿನವೂ ಇಂಥಾ ನೆರಳು ಗಮನಿಸುತ್ತಿದ್ದ ಜನರಿಗೆ ನಿರ್ದಿಷ್ಟ ಸಮಯದಲ್ಲಿ ನೆರಳು ಕೂಡಾ ನಿಗದಿತ ಜಾಗದಲ್ಲೇ ಇರುತ್ತದೆ ಎಂಬುದು ಅನುಭವಕ್ಕೆ ಬಂದಿತು.ಆಗಲೇ ಪ್ರಾಚೀನ ಮನುಷ್ಯ ಇಂಥಾ ನೆರಳ ಮೂಲಕ ಸಮಯವನ್ನು ಅಳೆಯುವ,ತಿಳಿಯುವ ಆಲೋಚನೆ ಮಾಡಿದ.ಇದಕ್ಕಾಗಿ ನಿರ್ದಿಷ್ಟವಾದ ಉಪಕರಣಗಳನ್ನು ನಿರ್ಮಾಣ ಮಾಡುವ ಪ್ರೇರಭಣೆಯೂ ಅವನಿಗೆ ದೊರಕಿತು.--Ranjitha Raja (talk) ೧೨:೪೯, ೩೦ ಜನವರಿ ೨೦೧೪ (UTC)ಪ್ರಾಚೀನ ಗ್ರೀಕರು ಕ್ರಿ.ಪೂ.೩೫೦೦ರಲ್ಲಿ,,ಕ್ರಿ.ಪೂ.೨೦೦೦ದಲ್ಲಿ ಈಜಿಪ್ಟ್ನಲ್ಲಿ ಬ್ಯಾಬಿಲೋನಿಯಾದಲ್ಲಿ ಕ್ರಿ.ಪೂ.೩೦೦ರಲ್ಲಿ ಇಂಥಾ ನೆರಳ ಗಡಿಯಾರಗಳನ್ನು ಬಳಕೆಗೆ ತರಲಾಯಿತೆಂಬ ದಾಖಲೆಗಳಿವೆ.ಹೀಗೆ ನೆರಳನ್ನು ಬಳಸಿ ಕಾಲ ಅಳೆಯುವ ಗಡಿಯಾರ ಸಾಧನಗಳನ್ನು 'ಸೌರ ಗಡಿಯಾರ'ಎಂದು ಕರೆಯಲಾಯಿತು.ಭೂಮಿಯ ಚಲನೆಯ ಕಕ್ಷೆ ಬದಲಾದಂತೆ ನೆರಳಿನ ಚಲನೆಯ ದಿಕ್ಕು ಬದಲಾಗುತ್ತದೆಂಬುದೂ ಅರಿವಿಗೆ  ಬಂದಾಗ,ಅದಕ್ಕೂ ಪರಿಹಾರ ಕಂಡು ಹಿಡಿಯಲಾಯಿತು.ನಿಗದಿತ ಆಕಾರದಲ್ಲಿ ನೆರಳಿನ ಚಲನೆ ಬದಲಾಗುವ ಸಂದರ್ಭಕ್ಕನುಗುಣವಾದ ಸೌರ ಗಡಿಯಾರವನ್ನು ರೂಪಿಸಲಾಯಿತು.ಎಲ್ಲಾ ಕಾಲಕ್ಕೂ ಸರಿಯಾದ ಸಮಯ ತೋರುವ,ಕಾಲವನ್ನು ಅಳೆಯುವ ಗಡಿಯಾರವನ್ನು ಸಿದ್ಧಪಡಿಸಲಾಯಿತು.ಈ ತಯಾರಿಕೆಗೆ ಮಹತ್ವದ ಕೊಡುಗೆ ನೀಡಿದವರು ಈಜಿಪ್ಷಿಯನ್ನರು,ಬ್ಯಾಬಿಲೋನಿಯನ್ನರು,ಗ್ರೀಕರು ಮತ್ತು ಅರಬ್ಬರು.--Ranjitha Raja (talk) ೦೬:೫೩, ೩೧ ಜನವರಿ ೨೦೧೪ (UTC)


ಜಾರುವ ಮರಳು.....ಹರಿಯುವ ನೀರು:

[ಬದಲಾಯಿಸಿ]

ಹಗಲು ಹೂತ್ತಿನಲ್ಲಿ ಮಾತ್ರ ಸಮಯ ಗುರುತಿಸುವ ಸೌರಗಡಿಯಾರ ಸೂರ್ಯ ಮುಳುಗಿದ ಮೇಲೆ ಕೆಲಸಕ್ಕೆ ಬಾರದಾಯಿತು. ಪ್ರಾಚೀನ ಮನುಷ್ಯನ ಜ್ಞಾನ ವಿಸ್ತರಣೆಯಾದಂತೆ, ಬೆಂಕಿಯ ಬಳಕೆ ಹೆಚ್ಚಿದಂತೆ ಅವನ ಚಟುವಟಿಕೆಗಳೂ ರಾತ್ರಿ ವಿಸ್ತರಣೆಗೊಂಡಿದ್ದವು.ಇದರಿಂದಾಗಿ ರಾತ್ರಿಯಲ್ಲೂ ಕಾಲವನ್ನು ಗುರುತಿಸುವ ಅವಶ್ಯಕತೆ ಬಂಈನ್ದೊದಗಿತ್ತು.ಇಂಥಾ ಅವಶ್ಯಕತೆಯೇ ಮರಳು ಗಡಿಯಾರ,ಜಲಗಡಿಯಾರಗಳು ಸೃಷ್ಟಿಗೆ ಕಾರಣವಾಯಿತು.ಮರಳಿನ ಕಣಗಳನ್ನು ಒಂದೊಂದಾಗಿ ಒಂದು ಪುಟ್ಟ ರಂಧ್ರದ ಮೂಲಕ ಮೇಲಿಂದ ಕೆಳಕ್ಕೆ ಬೀಳುವಂತೆ ಮಾಡುವ ಮರಳಿನ ಗಡಿಯಾರವನ್ನು ಈಜಿಪ್ಟಿನಲ್ಲಿ ಬಳಕೆಗೆ ತರಲಾಗಿತ್ತು.ಇದು ಜನಪ್ರಿಯವೂ ಆಗಿತ್ತು.ಮರಳಿನ ಕಣಗಳು ಸರಿ ಸುಮಾರು ಒಂದೇ ಗಾತ್ರದಲ್ಲಿದ್ದು ನಿರ್ದಿಷ್ಟ ಅಗಲದ ಪುಟ್ಟ ರಂಧ್ರದಿಂದ ಒಂದೊಂದೇ ಕೆಳಗೆ ಬೀಳುವ ತಂತ್ರ ಈ ಗಡಿಯಾರದ ಬಗ್ಗೆ ಎಲ್ಲರಲ್ಲೂ ನಂಬಿಕೆ ಹುಟ್ಟಿಸಿತ್ತು.ಆದರೆ,ಸಾಮಾನ್ಯವಾದ ಅಳತೆಗಷ್ಟೇಇದನ್ನು ಬಳಸಬಹುದು.ಸೂಕ್ಷ್ಮ,,ನಿಖರ ಕಾಲಮಾಪನಕ್ಕೆ ಇದು ಉಪಯೋಗವಾಗದು ಎಂಬುದು ಕೂಡಾ ಈಜಿಪ್ಟಿಯನ್ನರಿಗೆ ತಿಳಿದಿತ್ತು.ಕ್ರಿ.ಶ.೮ನೇ ಶತಮಾನದಲ್ಲಿ 'ಫ್ರಾಂಡ್' ಎಂಬಾತ ನಿರ್ದಿಷ್ಟ ಆಕಾದೊಂದಿಗೆ ಈ ಮರಳು ಗಡಿಯಾರವನ್ನು ತಯಾರಿಸಿದಮರಳು ಗಡಿಯಾರದ ಬಳಕೆಗೂ ಮುಂಚೆ ಚೀನಾದಲ್ಲಿ ಕ್ರಿ.ಪೂ.೪೦೦೦ಕ್ಕೆ ಮೊದಲು ನೀರನ್ನು ಬಲಸಿ ಕಾಲವನ್ನು ಅಳೆಯುವ ತಂತ್ರ ರೂಪಿಸಲಾಗಿತ್ತು.ಈ ನೀರಿನ ಗಡಿಯಾರಗಳು ಕರಾರುವಾಕ್ಕಾಗಿ ಸಮಯ ತೋರಿಸದಿದ್ದರೂ,ಸಣ್ಣಪುಟ್ಟ ದಿನ ಬಳಕೆಯ ಚಟುವಟಿಕೆಗೆ ಮಾರ್ಗಸೂಚಿಯಾಗಿದ್ದವು.ನೀರು ತುಂಬಿದ ಒಂದು ತಪ್ಪಲೆಯ ತಳದಲ್ಲಿ ಒಂದು ಸಣ್ಣ ರಂಧ್ರ ಕೊರೆದು ನಿಧಾನಕ್ಕೆ ನೀರನ್ನು ಹೊರಬಿಟ್ಟರೆ,ನಿರ್ಧಿಷ್ಟ ನೀರು ಹೊರಹೋಗಲು ನಿರ್ದಿಷ್ಟ ಸಮಯ ಬೇಕು ಎಂಬ ಸರಳ ನಿಯಮದ ಮೇಲೆ ಈ ನಿರಿನ ಗಡಿಯಾರವನ್ನು ರೂಪಿಸಲಾಗಿತ್ತು.ಚೈನಾದ 'ಹವಾಂಗಡಿ' ಇದನ್ನು ಮೊದಲು ತಯಾರಿಸಿ ಪಳಕೆಗೆ ತಂದವನು.ಗ್ರೀಕ್ ನಲ್ಲೂ ಇದೇ ಆಧಾರದ ಮೇಲೆ ವಿವಿಧ ರೀತಿಯ ನೀರಿನ ಗಡಿಯಾರಗಳನ್ನು ವಿನ್ಯಾಸಗೊಳಿಸಿ ಬಳಕೆಗೆ ತರಲಾಗಿತ್ತು.ಉರಿಯುವ ಮೇಣದ ಬತ್ತಿ,ದೀಪ ಮುಂತಾದವನ್ನು ಬಳಸಿಯೂ ಕಾಲವನ್ನು ಅಳೆಯು ಪದ್ಧತಿಗಳೂ ಬಳಕೆಯಲ್ಲಿದ್ದವು.ಆದರೆ,ಜಲ,ಮರಳು,ದೀಪ ಈ ಯಾವನ್ನು ಬಳಸಿಯೂ ನಿಖರವಾದ ಕಾಲಮಾಪನ ಸಾಧ್ಯಾವಿಲ್ಲವೆಂಬ ಸತ್ಯ ಎಲ್ಲರ ಅರಿವಿಗೂ ಬಂದಿತ್ತು.ಈ ಅತೃಪ್ತಿಯೇ ಮನುಷ್ಯನನ್ನು ಯಾಂತ್ರಿಕ ಗಡಿಯಾರಗಳ ಸೃಷ್ಟಿಗೆ ಪ್ರೇರೇಪಿಸಿತು.


ಗೋಪುರ ಗಡಿಯಾರಗಳು:

[ಬದಲಾಯಿಸಿ]

ಕಾಲ ಕಳೆದಂತೆ ಮನುಷ್ಯನ ಬುದ್ಧಿವಂತಿಕೆ, ಜ್ಞಾನ ವಿಕಾಸವಾದಂತೆ,ನಿಖರವಾದ ಕಾಲಮಾಪನದ ಅಗತ್ಯಯೂ ಹೆಚ್ಚಾಯಿತು.ವಿವಿಧ ಸಾಧನೆಗಳು ನಿರ್ಮಾಣದಲ್ಲಿ ತಾಂತ್ರಿಕವಾಗಿಯೂ ಜ್ಞಾನ ಸಂಪಾದಿಸಿದ್ದ ಮನುಷ್ಯನಿಗೆ ೧೩ನೇ ಶತಮಾನದ ಹೊತ್ತಿಗೆ ನಿಖರ ಕಾಲಮಾಪನಕ್ಕಾಗಿ ಯಾಂತ್ರಿಕ ಗಡಿಯಾರಗಳನ್ನು ನಿರ್ಮಿಸುವುದು ಸಾಧ್ಯಾವಾಯಿತು.ಮುಂದೆ ವಿಜ್ಞಾನಿ ಗೆಲಿಲಿಯೋ ಲೋಲಕವನ್ನು ಕಂಡುಹಿಡಿದ ಮೇಲೆ ಗೋಪುರ ಗಡಿಯಾರಗಳು ಎಲ್ಲೆಲ್ಲೂ ಬಳಕೆಗೆ ಬಂದವು.ಈ ಗಡಿಯಾರಗಳಲ್ಲಿ ವಿವಿಧ ಗಾತ್ರದ ಕಚ್ಚು ಗಾಡಿಗಳನ್ನು ಬಳಸಲಾಗುತ್ತಿತ್ತು.ತೂಕದ ಗುಂಡುಗಳನ್ನು ಇಳಿಬಿಟ್ಟು ಆ ಒತ್ತಡಕ್ಕೆ ಗಡಿಯಾರ ಚಾಲನೆಗೊಳ್ಳುವಂತೆ ಮಾಡಲಾಗುತ್ತಿತ್ತು.--Ranjitha Raja (talk) ೧೧:೪೨, ೩೧ ಜನವರಿ ೨೦೧೪ (UTC)