ಸದಸ್ಯ:Ranjitha 1315343/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಶಿಥಲೀಕರಣ ಮತ್ತು ಸವೆತ[ಬದಲಾಯಿಸಿ]

ಶಿಥಿಲೀಕರಣ

ಭೂಮೇಲ್ಮೈ ಸ್ವರೂಪಗಳು ಎರಡು ರೀತಿಯ ನೈಸರ್ಗಿಕ ಕರ್ತೃಗಳಿಂದ ಹಿಂದಿನ ಕಾಲದಿಂದಲೂ ಬದಲಾಗುತ್ತಾ ಬಂದಿವೆ, ಅವು ೧) ಅಂತರ್ ಜನಿತ ಶಕ್ತಿಗಳು ಮತ್ತು ೨) ಬಹಿರ್ ಜನಿತ ಶಕ್ತಿಗಳು.

೧)ಅಂತರ್ ಜನಿತ ಶಕ್ತಿಗಳು (Endogenous/Hypogene Process) ಭೂ ಅಂತರಾಳದಲ್ಲಿ ತಮ್ಮ ಕಾರ್ಯನಿರ್ವಹಿಸುವ ಭೂ ಅಂತರಾಳ ಶಕ್ತಿಗಳು. ಉದಾ:ಜ್ವಾಲಮುಖಿ[[೧]] ಸ್ಟೋಟನೆ,ಭೂಕಂಪಗಳು ಮತ್ತು ಭೂಚಲನೆ (ಭೂವಿಕೃತಿ)

೨)ಬಹಿರ್ ಜನಿತ ಶಕ್ತಿಗಳು(Exogenous/Epigene process) ಭೂ ಮೇಲ್ಮೈ ಮೇಲೆ ನೇರವಾಗಿ ತಮ್ಮ ಕರ್ತವ್ಯ ನಿರ್ವಹಿಸುವ "ಬಾಹ್ಯಶಕ್ತಿಗಳು" ಉದಾ: ಬೀಸುತ್ತಿರುವ ಗಾಳಿ, ಸುರಿಯವ ಮಳೆ, ಚಲಿಸುವ ನೀರು ಮತ್ತು ಅಂತರ್ ಜಲ ಸಮುದ್ರ ಅಲೆ ಮತ್ತು ಪ್ರವಾಹಗಳು ಹಿಮನದಿ,ಇತ್ಯಾದಿ.

  • 'ಬಾಹ್ಯಶತಕ್ತಿ'ಗಳು ಭೂ ಮೇಲ್ಮೈಯನ್ನು ನಿರಂತರವಾಗಿ ಕ್ಷಯಿಸುತ್ತಾ ಇರುತ್ತವೆ. ಈ ಕಾರಣದಿಂದ 'ನಗ್ನೀಕರಣ'[[೨]](Gradation/denudation) ಉಂಟಾಗುತ್ತದೆ. ನಗ್ನೀಕರಣವು 'ಸವೆತ' ಮತ್ತು 'ಸಂಚಯನ' ಕಾರ್ಯಗಳನ್ನು ಒಳಗೊಂಡಿದೆ(Degradation and Agredation)
  • ಅನೇಕ ಭೂಗರ್ಭದ ಅಂಶಗಳಿಂದಾಗಿ (ಚಲಿಸುವ ನೀರು ಮತ್ತು ಹಿಮ, ಬೀಸುವ ಗಾಳಿ ಇತ್ಯಾದಿ) ಉನ್ನತ ಭಾಗಗಳನ್ನು ಕ್ಷಯಿಸಿ ಮಟ್ಟಸ ಮಾಡುವ ಪ್ರಕ್ರಿಯೆಗೆ 'ಸವೆತ' ಅಥವಾ 'ಡೀಗ್ರೆಡೇಶನ್' ಎನ್ನುವರು.
  • ಹಳ್ಳ/ತಗ್ಗಿನ ಪ್ರದೇಶಳಲ್ಲಿ ವಸ್ತುಗಳ ಶೇಖರಣೆ ಮಾಡಿ, ಭೂಭಾಗವನ್ನು ಮಟ್ಟಸಮಾಡುವ ಪ್ರಕ್ರಿಯೆಗೆ ಸಂಚಯನ/ಅಗ್ರಡೇಶನ್ ಎನ್ನುವರು.
  • 'ಸವೆತವು' ಮುಖ್ಯವಾಗಿ ಶಿಥಿಲೀಕರಣದಿಂದ ಉಂಟಾಗುತ್ತದೆ.

ಶಿಥಿಲೀಕರಣ[ಬದಲಾಯಿಸಿ]

ಭೂ ಮೇಲ್ಮೈಯಲ್ಲಿನ ಕಠಿಣವಾದ ಶಿಲೆಗಳು ಹವಾಮಾನದ ಮೂಲಾಂಶಗಳಾದ ಉಷ್ಣಾಂಶ, ವೃಷ್ಟಿ, ಒತ್ತಡ, ತೇವಾಂಶ, ಮುಂತಾದವುಗಳ ಕ್ರಿಯೆಗಳಿಂದ ಒಡೆದು ಚೂರಾಗುವ ಅಥವಾ ಕ್ಷಯಿಸುವ ಪ್ರಕ್ರಿಯೆಗೆ ಶಿಥಿಲೀಕರಣ ಎನ್ನುವರು. ಅಂದರೆ 'ವೆದರ್' ಮೂಲಾಂಶಗಳಿಂದ ಉಂಟಾಗುವುದರಿಂದ 'ವೆದರಿಂಗ್' ಎನ್ನಲಾಗಿದೆ.

  • ಶಿಥಿಲೀಕರಣವು ಶಿಲೆಗಳ 'ಡಿಸ್ ಇಂಟಿಗ್ರೇಶನ್' ಮತ್ತು 'ಡೀಕಾಂಪೊಜಿಶನ್' ಅನ್ನು ಒಳಗೊಂಡಿದ್ದು, ಉತ್ಪತ್ತಿಯಾದ ಉತ್ಪನ್ನಗಳ ಸಾಗಾಣಿಕೆ ಕಾರ್ಯ ನಡೆಯುವುದಿಲ್ಲ.

ಶಿಥಿಲೀಕರಣವನ್ನು ನಿಯಂತ್ರಿಸುವ ಅಂಶಗಳು[ಬದಲಾಯಿಸಿ]

ಇವು ಭೌಗೋಳಿಕ, ಭೂಮೇಲ್ಮೈ, ವಾಯುಗುಣದ ಮತ್ತು ರಾಸಾಯನಿಕ ಅಂಶಗಳಿವೆ.

a) ಭೌಗೋಳಿಕ ಅಂಶಗಳು

(೧) ಮೂಲಶಿಲೆಯ ಸ್ವಭಾವ (Nature of Parent Rock) : ಗ್ರಾನೈಟ್ ಶಿಲೆಗಳಿಂದ ಮೆರಳುಶಿಲೆಗಳಲ್ಲಿ ಕಾಳಾದ ಮತ್ತು ಹರಳಿನ ರಚನೆಗಳು ಬಂಧಿಸಲ್ಪಟ್ಟಿರುವುದರಿಂದ ಶಿಥಲೀಕರಣದಲ್ಲಿ ಬೇಗ ವಿಭಜನೆ ಹೊಂದುತ್ತವೆ. ಅಂದರೆ ಶಿಥಿಲೀಕರಣಕ್ಕೆ ಮರಳು ಶಿಲೆಗಳ ಪ್ರತಿ ರೋಧ ಗ್ರಾನೈಟ್ ಶಿಲೆಗಳಿಗಿಂತ ಕಡಿಮೆ.

  • ಶಿಲೆಗಳ ಖನಿಜೀಯ ಮತ್ತು ರಾಸಾಯನಿಕ ಸಂಯೋಜನೆಯೂ ಶಿಲೆಗಳ ಸ್ವಭಾವವನ್ನುತಿಳಿಸುತ್ತದೆ, ಮತ್ತು ಶಿಥಿಲೀಕರಣದ ದರ ಮತ್ತು ವಿಧವನ್ನು ತಿಳಿಸುತ್ತದೆ .

ಉದಾ: ಕಾರ್ಬೋನೇಟ್ ಶಿಲೆಗಳಿಂದ ಸುಣ್ಣಕಲ್ಲು 'ಕ್ಯಾಲ್ಸಿಯಂ ಕಾರ್ಬೋನೇಟ್'ಖನಿಜದಿಂದ ಸಂಯೋಜನಗೊಂಡಿದ್ದು ಶೀಘ್ರವಾದ ಮತ್ತು ರಾಸಾಯನಿಕ ರೀತಿಯ ಶಿಥಿಲೀಕರಣವುಂಟು ಮಾಡುತ್ತದೆ.

(೨) ಮೂಲಶಿಲೆಯ ರಚನೆ (Structure of Parent Rock) : ಇದು ಖನಿಜಗಳ ಸಂಯೋಜನೆ, ಬಿರುಕುಗಳಿರುವಿಕೆ, ಬೆಡ್ಡಿಂಗ್, ಪ್ಲೇನ್ಸ್ ಇತ್ಯಾದಿಗಳಿರಿವಿಕೆಯನ್ನೋಳಗೋಂಡಿದೆ.

  • ಬಿರುಕುಗಳು ಅಥವಾ ಜಾಯಿಂಗಳಿದ್ದರೆ,ದ್ರಾವಣ ಸುಲಭವಾಗಿ ಪ್ರವೇಶಿಸಿ ವಿಭಜಿಸುವುದರಿಂದ ಶಿಥಿಲೀಕರಣಕ್ಕೆ ಪ್ರತಿರೋಧ ಕಡಿಮೆ ಅಂತೆಯೇ ಬೆಡ್ಡಿಂಗ್,ಪ್ಲೇನ್ಸ್ ಇದ್ದರೆ ಪ್ರತಿರೋಧ ಕಡಿಮೆ.

(b) ಭೂಮೇಲ್ಮೈ ಅಂಶಗಳು (Topagraphic Factors) :

(೧) ಎತ್ತರ : ಎತ್ತರ ಹೆಚ್ಚಾದಂತೆ ಹರಿಯುವ ನೀರಿನ ಶಕ್ತಿಯು ಹೆಚ್ಚಾಗಿ, ಹೆಚ್ಚು ಶಿಥಿಲೀಕರಣವುಂಟಾಗುತ್ತದೆ. ಆದರೆ ತಗ್ಗಿನ ಪ್ರದೇಶಗಳಲ್ಲಿನ ನೀರಿನ ಇಂಗುವಿಕೆ ಸಮಸ್ಯೆ ಇರುವುದರಿಂದ ದ್ರಾವಿಕರಣ ಕ್ರಿಯೆ ಕಡಿಮೆ, ಆದ್ದರಿಂದ ಸವೆತವೂ ಕಡಿಮೆ.

(೨) ಇಳಿಜಾರು : ಹೆಚ್ಚು ಮತ್ತು ಕಡಿದಾದ ಇಳಿಜಾರುಗಳಲ್ಲಿ ಶಿಥಿಲೀಕರಣ ಹೆಚ್ಚು. ಇಲ್ಲಿ ನೀರಿನ ಕ್ರಿಯೆಯೂ ಹೆಚ್ಚು.

(೩) ಇಳಿಜಾರು ಸ್ವಭಾವ : ಮಳೆ ಮತ್ತು ಮಾರುತಗಳಿಗೆ ಎದುರಾಗುವ ಇಳಿಜಾರುಗಳಲ್ಲಿ, ರಕ್ಷಿಸಲ್ಪಟ್ಟ ಇಳಿಜಾರುಗಳಿಗಿಂತ ಶಿಥಿಲೀಕರಣ ಹೆಚ್ಚು. ಸೂರ್ಯನಿಗೆ ಎದುರಾಗುವ ಹೆಚ್ಚು ಎತ್ತರದ ಇಳಿಜಾರು ಹೆಪ್ಪುಗಟ್ಟುವಿಕೆ ಪ್ರಕ್ರಿಯೆಗೊಳಗಾಗುತ್ತದೆ. ಮತ್ತು ಧ್ರುವ ಪ್ರದೇಶಗಳ ದಿಕ್ಕಿನ ಇಳಿಜಾರುಗಳು ಸೂರ್ಯನಿಗೆದುರಾಗದೆ ತುಂಬಾ ಶೀತವಾಗಿರುತ್ತದೆ.

(c) ವಾಯುಗುಣದ ಅಂಶಗಳು : ಉಷ್ನಾಂಶ ಮತ್ತು ಆರ್ದ್ರತೆಗಳು ಶಿಥಿಲೀಕರಣದ ದರ ಮತ್ತು ವಿಧವನ್ನು ನಿರ್ಧರಿಸುತ್ತವೆ. ಉದಾ: ತೇವಯುತ ಪ್ರದೇಶಗಳಲ್ಲಿ ವಾಯುಗುಣವು ಮತ್ತು ಬೆಚ್ಚನೆಯದ್ದಾಗಿರುವುದರಿಂದ ಶೀಘ್ರದರದಲ್ಲಿ ರಾಸಾಯನಿಕ ಶಿಥಿಲೀಕರಣವೂ ಹಾಗೂ ಮರುಭೂಮಿಗಳಲ್ಲಿನ ಒಣ ವಾಯುಗುಣಗಳಲ್ಲಿ ಮತ್ತು ಹಿಮಹೊದಿಕೆ ಪ್ರದೆಶಗಳಲ್ಲಿ ಭೌತಿಕ ಮತ್ತು ನಿಧಾನಗತಿಯ ಶಿಥಿಲೀಕರಣವೂ ಕಂಡುಬರುತ್ತದೆ.

(d) ಯಾಂತ್ರಿಕ ಅಂಶಗಳು (ಭೌತಿಕ) : (೧) ಹಿಮ (೨) ಉಷ್ಣಾಂಶದ ವೈಪರೀತ್ಯತೆ (೩) ಜೀವಿಗಳು

(e) ರಾಸಾಯನಿಕ ಅಂಶಗಳು : (೧)ಉಷ್ಣಾಂಶ (೨) ಮಳೆ (೩) ಜೀವಿಗಳು

(f) ಸಮಯ : ಅಂದರೆ ಶಿಲೆಗಳ ಶಿಥಿಲೀಕರಣದ ಕರ್ತೃಗಳು ನದೆಸುವ ಪ್ರತಿಕ್ರೆಯ ತೆಗೆದುಕೊಳ್ಳುವ ಕಾಲ. ಹೆಚ್ಚು ಸಮಯದವರೆಗೆ ಶಿಲೆಗಳು ಪ್ರಕ್ರಿಯೆಗೊಳಗಾದರೆ, (Interval of Exposure) ಹೆಚ್ಚು ಶಿಥಿಲೀಕರಣ ಉಂಟಾಗುತ್ತದೆ.

ಶಿಥಲೀಕರಣದ ವಿಧಗಳು[ಬದಲಾಯಿಸಿ]

ಮುಖ್ಯವಾಗಿ ೩ ವಿಧಗಳುಂಟು. (೧) ಭೌತಿಕ ಶಿಥಿಲೀಕರಣ (Physical Weathering) (೨) ರಾಸಾಯನಿಕ ಶಿಥಿಲೀಕರಣ (Chemical Weathering) (೩) ಜೀವ ರಾಸಾಯನಿಕ ಶಿಥಿಲೀಕರಣ (Bio Chemical Weathering)

ಭೌತಿಕ ಶಿಥಿಲೀಕರಣ[ಬದಲಾಯಿಸಿ]

ಭೌತಿಕ ಶಿಥಿಲೀಕರಣ
  • ಇದು ಶಿಲೆಗಳ ಯಾಂತ್ರಿಕ / ಭೌತಿಕ ವಿಭಜನೆಯನ್ನು ಒಳಗೊಂಡಿದೆ.
  • ಉನ್ನತ ಅಕ್ಷಾಂಶಗಳಲ್ಲಿನ / ಒಣವಾಯುಗುಣ ಪ್ರದೇಶಗಳಲ್ಲಿ ಕಂಡುಬರುತ್ತದೆ.
  • ಪರ್ವತ, ಮರುಭೂಮಿ, ಹಿಮ ಮತ್ತು ಮಂಜಿನಿಂದಾವೃತವಾದ ಪ್ರದೇಶಗಳಲ್ಲಿ ವಿಘಟನೆ (ಡೀಕಾಂಪೊಜಿಶನ್) ಇಲ್ಲದಿರುವುದರಿಂದ ಈ ವಿಧವು ಹೆಚ್ಚಾಗಿ ಉಂಟಾಗುತ್ತದೆ.

(೧) ಭಾರ ಇಳಿಕೆಯಿಂದ ವಿಕಸನ ಸವೆತದಿಂದಾಗಿ, ಮೇಲ್ಭಾಗದ ಶಿಲೆಗಳ ಭಾರ ಕಡಿಮೆಯಾದಾಗ, ಕೆಳಶಿಲೆಗಳ ಮೇಲಿನ ಭಾರವೂ ಕಡಿಮೆಯಾಗುತ್ತದೆ (ಒತ್ತಡ ಕಡಿಮೆ) ಆಗ ಕೆಳಗಿನ ಶಿಲೆಗಳ ವಿಕಸನ ಗೊಳ್ಳುವುದರಿಂದ ಅವುಗಳಲ್ಲಿ ಹಾಳೆಗಳಂತೆ ರಚನೆ ಉಂಟಾಗುತ್ತದೆ (Sheety Structure) ಉದಾ: ಗ್ರಾನೈಟ್ ಮತ್ತು ಸಂಭದಪಟ್ಟ ಶಿಲೆಗಳು.

(೨) ಹಿಮ ವಿಕಸನ (Frost Wedging)

  • ನೀರು ಘನರೂಪವಾದ 'ಹಿಮ' ರೂಪಕ್ಕೆ ಹೆಪ್ಪುಗಟ್ಟಿದಾಗ ವಿಕಸನ ಹೊಂದುತ್ತದೆ.ಈ ವಿಕಸನವು ಸುಮಾರು ತನ್ನ ವಾಲ್ಯೂಮ್ನ ಶೇ.10 ರಷ್ಟಿರುತ್ತದೆ.
  • ಶಿಲೆಗಳ ಬಿರುಕುಗಳಲ್ಲಿ, ಸಂಧಿಗಳಲ್ಲಿ ಮತ್ತು ಜಾಯಿಂಟ್ ಗಳಲ್ಲಿ ಶೇಖರವಾಗಿರುತ್ತದೆ. ರಾತ್ರಿ ವೇಳೆ ಉಷ್ಣಾಂಶ ಹೆಪ್ಪು ಗಟ್ಟುವಿಕೆಗಿಂತಲೂ ಕಡಿಮೆಯಾದಾಗ (ಘನೀಕರಣದಿಂದ) ನೀರಿನ ಗಾತ್ರದಲ್ಲಿ ಹೆಚ್ಚಳವಾಗಿ, ಹಿಮದ ಹರಳುಗಳು ನಿರಂತರವಾಗಿ ಶಿಲೆಗಳ ಗೋಡೆಗಳ ಮೇಲೆ ಹೆಚ್ಚು ಒತ್ತಡ ಉಂಟು ಮಾಡುತ್ತವೆ. ಆದರೆ ಹಗಲಿನ ವೇಳೆ ಹಿಮ ನೀರಾಗಿ ಪರಿರ್ವತನೆಯಾಗುವುದರಿಂದ ಒತ್ತಡ ಶಿಲೆಗಳ ಏಲೆ ಕಡಿಮೆಯಾಗುತ್ತದೆ.ಇದೇ ರೀತಿಯ ಪ್ರಕ್ರಿಯೆಯು ಬೇಸಿಗೆ ಮತ್ತು ಚಳಿಗಾಲದಲ್ಲಿ(ಕಡಿಮೆ ಒತ್ತಡ ಮತ್ತು ಹೆಚ್ಚು ಒತ್ತದ) ಕಂಡು ಬರುತ್ತದೆ.
  • ಈ ಪ್ರಕ್ರಿಯೆ ನಿರಂತರವಾಗಿ ಸಾಗುವುದರಿಂದ ಬಿರುಕು/ಸೀಳುಗಳು ವಿಸ್ತಾರಗೊಂಡು ಶಿಲೆಗಳು ಚೂರುಗಳಾಗುತ್ತವೆ.
  • ಈ ಪರಿಸ್ಥಿತಿ ಹೆಚ್ಚು ಎತ್ತರದ ಮತ್ತು ಉನ್ನತ ಆಕ್ಷಾಂಶಗಳಲ್ಲಿ (ಶೀತ ಮತ್ತು ಸಮಶೀತೋಷ್ಣ ವಲಯ) ಕಂಡುಬರುತ್ತದೆ.
  • ಹೆಚ್ಚು ಹಗಲಿನ ಉಷ್ಣಾಂಶದ ವ್ಯತ್ಯಾಸವು 'ಹಿಮ ವಿಕಸನವನ್ನು' ಉಂಟು ಮಾಡುತ್ತದೆ.

(೩) ಉಷ್ನಾಂಶದ ಪರಿಣಾಮ - 'ಶಿಲಾ ಪಲ್ಲವ' (Thermal Effect-Exfoliation)

  • ಶುಷ್ಕ ಮತ್ತು ಅರೆಶುಷ್ಕ ಪ್ರದೆಶಗಳಲ್ಲಿ ಹಗಲಿನ ಮತ್ತು ರಾತ್ರಿಯ ಉಷ್ಣಾಂಶಗಳಲ್ಲಿ ಹೆಚ್ಚು ವ್ಯತ್ಯಾಸವಿರುತ್ತದೆ.
  • ಶಿಲೆಗಳು ಹಗಲಿನ ವೇಳೆ ಹೆಚ್ಚು ಉಷ್ಣಾಂಶದಿಂದಾಗಿ ವಿಕಾಸ ಹೊಂದಿ ಹಿಗ್ಗುತ್ತವೆ.ಆದರೆ ರಾತ್ರಿ ವೇಳೆ ಕಡಿಮೆ ಉಷ್ಣಾಂಶದಿಂದಾಗಿ ಸಂಕುಚಿತಗೊಂಡು ಕುಗ್ಗುತ್ತವೆ.
  • ಈ ರೀತಿಯ ಗರಿಷ್ಠ ದೈನಂದಿನ ಉಷ್ಣಾಂಶದ ವ್ಯತ್ಯಾಸವು ಶಿಲೆಗಳು ಭೌತಿಕವಾಗಿ ಅಶಕ್ತವಾಗುವಂತೆ ಮಾಡುತ್ತದೆ.
  • ಶಿಲೆಗಳಲ್ಲಿನ ಖನಿಜಗಳು ವಿಭಿನ್ನ ವಿಕಸನದ ಕೋ-ಎಪಿಷಿಯಂಟ್ ಗಳನ್ನು ಹೊಂದಿರುವುದರಿಂದ ಶಿಲೆಗಳೂ ಸಹಾ ಡೆಪೆರೆನ್ಸಿಯಲ್ ವಿಕಸನದ ಮತ್ತು ಸಂಕುಚನಗೊಳಗಾಗುತ್ತವೆ.ಅಲ್ಲದೆ ಭೂಹೊರಮೆಲ್ಮೈಯಲ್ಲಿ ವಾಯುಮಂಡಲಕ್ಕೆ ತೆರೆಯಲ್ಪಟ್ಟಿರುವ(Exposed) ಹೊರ ಪದರುಗಳು ಹೆಚ್ಚಿನ ವಿಕಸನ ಮತ್ತು ಸಂಕುಚನ ಹೊಂದುತ್ತದೆ.
  • ಈ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಕಾರ್ಯದಿಂದ ಬಿರುಕು ಮತ್ತು ಸೀಳುಗಳು ಉಂಟಾಗಿ ಅನಂತರ ವಿಸ್ತಾರಗೊಂಡು ಅಂತಿಮವಾಗಿ ಶಿಲೆಗಳು ಚೂರುಗಳಾಗಿ ಶಿಥಿಲೀಕರಣ ಹೊಂದುತ್ತವೆ.
  • ಉಷ್ಣಾಂಶದ ಪರಿಣಾಮದಿಂದಾಗಿ ಶಿಲೆಗಳ ಹೊರ ಪದರುಗಳು ಬಳೇಗಳ ಅಥವಾ ವೃತ್ತಾಕಾರದಲ್ಲಿ ಕಳಚಲ್ಪವುದಕ್ಕೆ 'ರಾಶಿಶಿಲಾಪಲ್ಲವ'/'ಪದರು ವಿಭಜನೆ' (Mass Exfoliation) ಅಥವಾ ವೃತ್ತಾಕಾರದ ಶಿಥಿಲೀಕರಣ (Spheroidal Weathering) ಎನ್ನುವರು.
  • ವಿಭಿನ್ನ ವಿಕಸನ ಮತ್ತು ಸಂಕುಚನದಿಂದಾಗಿ ಉಂಟಾಗುವ ಶಿಲೆಗಳ ವಿಭಜನೆಯನ್ನು (ಸಣ್ಣ ಸಣ್ಣ ಕಣಗಳಾಗಿ) 'ಕಣ ವಿಭಜನೆ' (Granular Disintegration or Granular Exfoliation) ಎನ್ನುನರು.
  • ವರ್ತುಲಾಕಾರದ ಶಿಥಿಲೀಕರಣ ಗ್ರಾನೈತ್ ಮತ್ತು ಬಸಾಲ್ಟ್ ಶಿಲೆಗಳಲ್ಲಿ ಹೆಚ್ಚಾಗಿದ್ದು ಅವುಗಳ ಪದರ ವಿಭಜನೆಯು 'ಶಿಲಾ ಪಲ್ಲವದ ಗುಮ್ಮಟ' (Exfoliation Domes) ಗಳನ್ನುಂಟು ಮಾಡುತ್ತದೆ.

(೪) ಗಾಳಿಯ ಪರಿಣಾಮ :

  • ಬೀಸುವಾಗ ತಮ್ಮಾಡನೆ ಕೊಂಡೊಯ್ಯುವ ಸಣ್ಣ ಮರಳಿನ ಚೂರುಗಳು ಶಿಲೆಗಳಿಗೆ ಉಜ್ವಲ್ಪಡುವುದರಿಂದ ಶಿಥಿಲೀಕರಣ ಉಂಟಾಗುತ್ತದೆ.
  • ಈ ರೀತಿ ಶಿಥಿಲೀಕರಣ ಸಸ್ಯರಹಿತ ಮತ್ತು ಒಣ ಮರುಭೂಮಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

(೫) ಮಳೆಯ ಪರಿಣಾಮ :

  • ಶೇಲ್ ಗಳಂತಹ ಮೃದು ಶಿಲೆಗಳು ರಭಸದಿಂದ ಬೀಳುವ ಟಾರೆನ್ಸಿಯಲ್ ಮಳೆಗೆ ತೆರೆಯಲ್ಪಟ್ಟಾಗ, ಕುಳಿಗಳು ಉಂಟಾಗುತ್ತವೆ ಮತ್ತು ಕೆಲವೊಮ್ಮೆ ರಭಸದ ಹನಿಗಳಿಂದ ಶಿಲಾಕಣಗಳು ಸಡಿಲಗೊಳ್ಳುತ್ತವೆ.ಅನಂತರ ನಿಧಾನವಾಗಿ ಕ್ಷೀಣಿಸುತ್ತಾ ಶಿಲೆಗಳು ವಿಭಜನೆ ಹೊಂದುತ್ತವೆ.
  • ಈ ಶಿಥಿಲತೆ ತೇವಯುತ ಉಷ್ಣಾವಲಯದ ವಾಯುಗುಣದ ಪ್ರದೇಶಗಳಲ್ಲಿ ಕಂಡುಬರುತ್ತದೆ.

(೫) ಅಲೆಗಳು :

  • ಅಲೆಗಳು ಅಪ್ಪಳಿಸಿ ಒತ್ತಡವುಂಟು ಮಾಡಿ ಅನಂತರ ಹಿಂದೆ ಬಂದಾಗ ಕಡೆಮೆಯಾಗಿ ಪುನ ಈ ನಿರಂತರ ಕ್ರುಯೆಯಿಂದ ಶಿಲಾಕಣಗಳ ವಿಭಜನೆಯಿಂದ ತೀರ ಪ್ರದೇಶದಲ್ಲಿ ಈ ರೀತಿಯ ಶಿಥಿಲೀಕರಣವನ್ನು ಅಲೆಗಳು ಉಂಟುಮಾಡುತ್ತವೆ.

(೬) ಜೀವಿಗಳ ಚಟುವಟಿಕೆ :

  • ಶಿಲೆಗಳಲ್ಲಿನ ಸಂದುಗಳವರೆಗೆ ಸಸ್ಯಗಳು ಬಿಡುವುದರಿಂದ ಹಿಮ ಉಂಟುಮಾಡುವ ಪರಿಣಾಮವನ್ನು ಉಂಟುಮಾಟುತ್ತವೆ. ಅಂದರೆ ಬೇರುಗಳು ಶಿಲಾಹೋಡೆಗಳ ಮೇಲೆ ಒತ್ತಡವನ್ನುಂಟು ಮಾಡುವುದರಿಂದ ಶಿಥಿಲೀಕರಣ ಉಂಟಾಗುತ್ತದೆ.
  • ಎರೆಹುಳುಗಳು,ಇರುವೆ ಮುಂತಾದ ಜೀವಿಗಳು ಶಿಲಾವಸ್ತುಗಳನ್ನು ತೆರೆಯಲ್ಪಡುವುದರಿಂದ (Exposed)ಇತರ ಶಿಥಿಲೀಕರಣ ಉಂಟಾಗುತ್ತವೆ.

(೭) ಗುರುತ್ವಾಕರ್ಷಣಾ ಶಕ್ತಿ (Gravitational Force)

  • ಭೌತಿಕ ಅಂಶಗಳಾದ ಉಷ್ಣಾಂಶ,ಗಾಳಿ,ಹಿಮ,ವೃಷ್ಠಿ ಮುಂತಾದ ಕರ್ತೃಗಳಿಂದ ಈಗಾಗಲೇ ಶಿಥಿಲೀಕರಣ ಹೊಂದಿದ ಶಿಲಾಚೂರುಗಳು ಎತ್ತರದ ಭಾಗಗಳಿಂದ ಗುರುತ್ವಬಲದಿಂದ ಕೆಳಗಿಳಿಯುವಾಗ ಮಾರ್ಗದಲ್ಲಿನ ಶಿಲೆಗಳನ್ನು ಘರ್ಷಿಸಿ, ಸಣ್ಣದಾಗಿ ಉಂಟುಮಾಡುತ್ತವೆ.
  • ಪರ್ವತ ಮತ್ತು ಬೆಟ್ಟ ಪ್ರದೇಶಗಳಲ್ಲಿ ಈ ರೀತಿಯ ಶಿಥಿಲೀಕರಣ ಕಂಡು ಬರುತ್ತದೆ.

ರಾಸಾಯನಿಕ ಶಿಥಿಲೀಕರಣ[ಬದಲಾಯಿಸಿ]

(Chemical Weathering)

ರಾಸಾಯನಿಕ ಶಿಥಿಲೀಕರಣ

(೧) ಅರ್ಥ: ವಾಯುಮಂಡಲದ ಅವಶ್ಯಕಗಳಾದ ಅನಿಲಗಳು ಮಳೆನೀರಿನೊಂದಿಗೆ ಮಿಶ್ರಣ ಹೊಂದಿ ಉಂಟಾದ ದ್ರಾವಣ ಮತ್ತು ಶಿಲಾಪದಾರ್ಥಗಳಲ್ಲಿನ ಖನಿಜಗಳ ನಡುವಿನ ರಾಸಾಯನಿಕ ಕ್ರಿಯೆಗಳಿಂದ ಉಂಟಾಗುವ ಶಿಥಿಲೀಕರಣಕ್ಕೆ ರಾಸಾಯನಿಕ ಶಿಥಿಲೀಕರಣ ರಾಸಾಯನಿಕ ಶಿಥಿಲೀಕರಣ ಎಂದು ಹೆಸರು.

  • ಉಷ್ಣ ಮತ್ತು ತೇವಯುತ ವಾಯುಗುಣ ಪ್ರದೇಶಗಳಲ್ಲಿ ಈ ರೀತಿಯ ಶಿಥಿಲೀಕರಣ ಉಂಟಾಗುತ್ತದೆ

. (೨) ರಾಸಾಯನಿಕ ಶಿಥಿಲೀಕರಣದ ಬದಲಾವಣೆಗಳು :

  • ಶಿಲೆಗಳ ಗಾತ್ರದ ಹೆಚ್ಚಳ ಮತ್ತು ಅದರಿಂದಾಗಿ ಸ್ಟ್ರೈನ್ ಹೆಚ್ಚಳ.
  • ಶಿಲಾ ಪದಾರ್ಥಗಳ ಗಾತ್ರ ಕಡಿಮೆಯಾಗುವಿಕೆ ಮತ್ತು ಇದರಿಂದಾಗಿ ಪ್ರತಿ ಘಟಕ ಗಾತ್ರದ ಶಿಲೆಗಳ ಮೇಲ್ಮೈ ಹೆಚ್ಚಳ.
  • ಸಾಪೇಕ್ಷವಾಗಿ ಕಡಿಮೆ ಸಾಂದ್ರ ಮತ್ತು ಸ್ಥಿರ ಖನಿಜಗಳುಂಟಾಗುವಿಕೆ.

(೩) ವಿಧಗಳು:

  • ಆಮ್ಲಜನಕ ಸಂಯೋಜನೆ
  • ಇಂಗಾಲ ಸಂಯೋಜನೆ
  • ಜಲಸಂಯೋಜನೆ
  • ದ್ರಾವಣಿಕರಣ

(೪) ಆಮ್ಲಜನಕ ಸಂಯೋಜನೆ:

  • "ಆಮ್ಲಜನಕವು" ಇತರ ಖನಿಜಗಳ ಧಾತುಗಳೊಂದಿಗೆ ಸಂಯೋಗ ಹೊಂದಿದಾಗ,ದ್ರಾವಣದಲ್ಲಿ ಆಮ್ಲಜನಕಕ್ಕೆ ಧಾತುಗಳು ಎಲೆಕ್ಟ್ರಾನ್ಗಳನ್ನು ಬಿಟ್ಟುಕೊಡುತ್ತವೆ.ಈ ಕ್ರಿಯೆಗೆ 'ಭಸ್ಮೀಕರಣ'(Oxidation) ಎನ್ನುವರು.
  • ಶಿಲೆಗಳಲ್ಲಿನ ಸಲ್ಮೈಡ್,ಮೈಕಾ,ಪೆರಸ್,ಸ್ಥಿತಿಯ ಕಬ್ಬಿಣ ಮತ್ತು ಇಂಗಾಲಮ್ಲದ ಸಾವಯುವ ವಸ್ತುಗಳ ಗೊತೆ ಆಮ್ಲಜನಕ ಭಸ್ಮೀಕರಣ ಹೋಂದಿ ಶಿಥಿಲೀಕರಣ ಹೊಂದುತ್ತವೆ.
  • ಬಸಾಲ್ಟ್, ಹಾರ್ನ್ ಬ್ಲೆಂಡ್,ಅಗಾಯಿಟ್, ಮತ್ತು ಪೈರೇಟ್ ಶಿಲೆಗಳು ಈ ರೀತಿಯ ಶಿಥಿಲೀಕರಣಕ್ಕೆ ಒಳಗಾಗುತ್ತವೆ.

(೫) ಜಲ ಸಂಯೋಜನೆ (Hydration)

  • ನೀರಿನ ಅಣುಗಳು ಶಿಲೆಗಳ ಖನಿಜಗಳೊಂದಿಗೆ ಸಂಯೋಜನೆ ಹೊಂದಿ ಖನಿಜಗಳ ಗಾತ್ರ ದಪ್ಪದಾಗುವುದಕ್ಕೆ ಜಲಸಂಯೋಜನೆ ಎನ್ನುವರು.
  • ಶಿಲೆಗಳಲ್ಲಿನ ಕೆಲ ಖನಿಜಗಳ (ಪೊಟ್ಯಾಶ್ ಪೆಲ್ಡ್ ಸ್ಪಾರ್) ನೀರನ್ನು ಹೀರುವ ಗುಣವನ್ನು ಹೊಂದಿವೆ. ನೀರನ್ನು ಹೀರಿ ಖನಿಜಗಳು ದಪ್ಪದಾದಾಗ, ಶಿಲೆಗಳು ವಿಸ್ತಾರಗೊಂಡು,ಶಿಲಾ ಚೂರಿಗಳಾಗುತ್ತವೆ.

ಉದಾ: ಪೊಟ್ಯಾಶ್ ಪೆಲ್ಡ್ ಸ್ಟಾರ್ ಜಲಸಂಯೋಜನೆಯಿಂದ ಜಿಪ್ಲಂ ಮತ್ತು ಹೆಮಟೈಟ್ ಜಲಸಂಯೋಜನೆಯಿಂದ ಲಿಮಾನೈಟ್ ಉಂಟಾಗುತ್ತವಿ.

(೬) ಇಂಗಾಲ ಸಂಯೋಜನೆ (Carbonation)

  • ವಾಯುಮಂಡಲದ ಇಂಗಾಲಾಮ್ಲ ಮಳೆ ನೀರಿನೊಂದಿಗೆ ಸಂಯೋಜನೆ ಹೊಂದಿ ದುರ್ಬಲ ಇಂಗಾಲಾಮ್ಲವಾಗಿ ಪರಿವರ್ತನೆಯಾಗಿ, ಕಾರ್ಬೋನೇಟ್ (ಕ್ಯಾಲ್ಸಿಯಂ ಉಳ್ಳ ಶಿಲೆಗಳು) ಶಿಲೆಗಳೊಂದಿಗೆ ಸಂಪರ್ಕ ಹೊಂದಿದಾಗ ಬೈಕಾರ್ಬೋನೇಟ್ಗಳಾಗಿ, ಆ ಶಿಲೆಗಳು ನೀರಿನಲ್ಲಿ ಸುಲಭವಾಗಿ ಕರಗಲ್ಪಡುವುದರಿಂದ ಶಿಲೆಗಳ ಶಿಥಿಲೀಕರಣಕ್ಕೆ 'ಇಂಗಾಲ ಸಂಯೋಜನೆ'ಯ ಶಿಥಿಲೀಕರಣ ಎನ್ನುವರು.

ಉದಾ: ಸುಣ್ಣಕಲ್ಲಿನ ಶಿಲೆಗಳ ಪ್ರದೇಶಗಳಲ್ಲಿ ಈ ವಿಧದ ಶಿಥಿಲೀಕರಣ ಹೆಚ್ಚು.

(೭) ದ್ರಾವನೀಕರಣ (Hydrolysis)

  • ನೀರಿನಿಂದ ಅನೇಕ ಖನಿಜಗಳು ಕರಗಲ್ಪಡುವ ರಾಸಾಯನಿಕ ಕ್ರಿಯೆಯೇ ದ್ರಾವಣೀಕರಣ.
  • ಮಳೆನೀರು ಶಿಲೆಗಳನ್ನು ಪ್ರವೇಶಿಸಿದಾಗ, ಅವು ಕರಗಲ್ಪಟ್ಟು ಈ ರೀತಿಯ ಶಿಥಿಲೀಕರಣ ಉಂಟಾಗುತ್ತದೆ. ಉದಾ: ರಾಕ್ ಸಾಲ್ಟ್ (ಕಲ್ಲುಪ್ಪು), ಜಿಪ್ಸ್ಂ, ಪೊಟಾಷ್, ಇತ್ಯಾದಿ ಶಿಲೆಗಳು.
  • ತೇವಯುತ ಪ್ರದೇಶಗಳಲ್ಲಿ ಇದನ್ನು ತೊಳಸುವೆಕೆ (Leachiing) ಎನ್ನುವರು.

ಜೀವ-ರಾಸಾಯನಿಕ ಶಿಥಿಲೀಕರಣ[ಬದಲಾಯಿಸಿ]

(Bio-Chemical Weathring)

  • ಕ್ಯಾಟ್ಅಯನ್ ವಿನಿಯಮ ಬೇರುಗಳಿಂದ ಹೊರ ಬೀಳುವ ಆಮ್ಲಗಳು (ಲವಣಗಳು) ಮತ್ತು ಸಾವಯವ ಆಮ್ಲಗಳ ಉತ್ಪನ್ನದಿಂದಾಗಿ ಈ ವಿಧದ ಶಿಥಿಲೀಕರಣ ಉಂಟಾಗುತ್ತದೆ.
  • ಸತ್ತ ಸಸ್ಯಗಳಿಂದ ದೊರೆಯುವ ಜೈವಿಕಾಂಶವು ಶಿಲೆಗಳ ವಿಘಟನೆಯನ್ನು ಉಂಟು ಮಾಡುತ್ತದೆ,
  • ಪ್ರಾಣಿಗಳ ವಿಸರ್ಜನೆಯಿಂದ ಉತ್ಪತ್ತಿಯಾಗುವ ಮಣ್ಣು ಮತ್ತು ಶಿಲೆಗಳನ್ನು ಶಿಥಿಲೀಕರಿಸಲು ಸಹಾಯ ಮಾಡುತ್ತವೆ.
  • ಹುಳುಗಳು, ಮೊಲಗಳು, ಬಿಲ್ಲಗಳನ್ನುಂಟುಮಾಡುವುದರ ಮೂಲಕ ಮಣ್ಣನ್ನು ಸಡಿಲಗೊಳಿಸುತ್ತವೆ.
  • ಮಾನವ ಚಟುವಟಿಕೆಗಳಾದ ಗಣಿಗಾರಿಕೆ, ತೀಡುವಿಕೆ(Quarrying) ,ಅರಣ್ಯನಾಶ,ರಸ್ತೆ ಮತ್ತು ಕಟ್ಟಡಗಳ ನಿರ್ಮಾಣಗಳಿಂದ ಶಿಲೆಗಳು ಶಿಥಿಲೀಕರಣಕ್ಕೊಳಗಾಗುತ್ತವೆ.

ಶಿಥಿಲೀಕರಣದ ಉತ್ಪನ್ನಗಳು[ಬದಲಾಯಿಸಿ]

(೧) ಎಲ್ಯೂವಿಯಂ : ಶಿಥಿಲೀಕರಣದಿಂದ ಉಂಟಾಗಿ ಮೂಲಶಿಲೆಯ ಮೇಲೆ ಪದರವಾಗಿ ಇರುವ ಶಿಥಿಲೀಕರಣದ ಕೊನೆ ಉತ್ಪನ್ನವೇ ಇದು.ಇದನ್ನು 'ರಿಗೋಲಿತ್'(Regolith) ಅಂತಲೂ ಕರೆಯುವರು.

(೨) ಡೆಲ್ಯೂವಿಯಂ : ಗುರುತ್ವದ ಪ್ರಭಾವದಿಂದಾಗಿ ಇಳಿಜಾರು ಮತ್ತು ಪರ್ವತಪಾದಗಳಿಗೆ ಸ್ಥಳಾಂತರಿಸಲ್ಪಟ್ಟ ಶಿಥಿಲೀಕರಣದ ಕೊನೆ ಉತ್ಪನ್ನವೇ ಇದು.

ಸವೆತ[ಬದಲಾಯಿಸಿ]

(Erosion)

ಸವೆತ

ಭೂ ಮೇಲ್ಮೈನ ಭಾಗಗಳು ನೈಸರ್ಗಿಕ ಕರ್ತೃಗಳಿಂದ ಸವೆಸಿ ಕ್ಷಯಿಸುವ ಕಾರ್ಯಕ್ಕೆ ನಗ್ನೀಕರಣ ಎನ್ನುವರು.ನಗ್ಗೀಕರಣ ೩ ರೀತಿಯಲ್ಲಿ ಉಂಟಾಗಿತ್ತದೆ ೧) ಸವೆತ ೨) ಸಾಗಾಣಿಕೆ ೩) ಸಂಚಯನ.

  • ನಗ್ನೀಕರಣ ಮೊದಲ ಹಂತವೇ ಸವೆತ

ಭೂರಚನಾ ಅಂಶಗಳಾದ ಗಾಳಿ,ನೀರು ಹಿಮ,ಅಲೆಗಳು ಪ್ರವಾಹಗಳು ಇತ್ಯಾದಿಗಳಿಂದ ಕೊರೆಯುವಿಕೆ, ಉಜ್ಜುವಿಕೆ ಮತ್ತು ಕಿತ್ತೆಸೆಯುವಿಕೆ ಇತ್ಯಾದಿ ಕ್ರಿಯೆಗಳಿಂದ ಶಿಲಾದ್ರವ್ಯಗಳನ್ನು/ಭೂಮೇಲ್ಮೈವಲಯವನ್ನು ಸವೆಸುವುದಕ್ಕೆ 'ಸವೆತ' ಎನ್ನುವರು.

ವಿಧಗಳು[ಬದಲಾಯಿಸಿ]

a) ಹೈಡ್ರಾಲಿಕ್ ಕ್ರಿಯೆ (Hydraulic Action ) : ಚಲಿಸುತ್ತಿರುವ ನೀರು ಶಿಲಾ ಪದಾರ್ಥಗಳನ್ನು ಸವೆಸುವುದಕ್ಕೆ "ನೀರೊತ್ತಡ ಕ್ರಿಯೆ" ಎನ್ನುವರು. b) ಅಪವಹನ (Deflation) : ಸಡಿಲ ಶಿಲಾ ಚೂರುಗಳನ್ನು ಗಾಳಿ ಮೇಲಕ್ಕೆ ಹಾರಿಸಿಕೊಡು ಹೋಗುವುದಕ್ಕೆ " ಅಪವಹನ" ಎನ್ನುವರು. c) ಗೀಚುವಿಕೆ (Scouring) ; ಭೂಮೇಲ್ಮೈ ಮೇಲಿನ ವಸ್ತುಗಳನ್ನು ಹಿಮನದಿಯು ಚಲಿಸುವುದರಿಂದ ಸಡಿಲಗೊಳಿಸುವುದಕ್ಕೆ 'ಗೀಚುವಿಕೆ' ಎನ್ನುವರು. d) ಕರೊಷನ್ (Corrosion) : ದ್ರಾವಣದಿಂದಾಗಿ ವಸ್ತುಗಳು ಸವೆಯಪ್ಪಡುವುದಕ್ಕೆ ಕರೋಷನ್ ಎನ್ನುವರು. e) ಘರ್ಷಣೆ (Attrition) : ಶಿಲಾ ಚೂರುಗಳು ಗಾಳಿಯಿಂದ ಕೊಂಡೊಯ್ಯಲ್ಪಟ್ಟಾಗ ತಮ್ಮ ತಮ್ಮಲ್ಲೇ ಉಜ್ಜಲ್ಪಟ್ಟು ಮತ್ತು ತಾಕಲಾಟದಿಂದ ಪುಡಿಯಾಗುವ ಸವೆತಕ್ಕೆ ಘರ್ಷಣೆ ಎನ್ನುವರು. f) ಪ್ಲಕ್ಕಿಂಗ್ (Plucking) : ಶಿಲೆಗಳ ಸೀಳು/ಸಂಧಿಗಳಲ್ಲಿ ನೀರು ಪ್ರವೇಶಿಸಿ, ಘನೀಭವಿಸಿ/ಹೆಪ್ಪುಗಟ್ಟಿ ಹಿಮನದಿಯಾಗಿ ಶಿಲೆಗಳ ಮೂಲಶಿಲಾಭಾಗಕ್ಕೆ ಪ್ರವೇಶಿಸಿ, ಚಲಿಸುತ್ತಿರುವ ಹಿಮನದಿಯಿಂದಾಗಿ ಸಡಿಲಗೊಂಡು ಕಳಚಲ್ಪಡುವ ಶಿಲಾ ಪದಾರ್ಥಗಳಿಗೆ 'ಪ್ಲಕ್ಕಿಂಗ್' ಎನ್ನುವರು.

ಸಾಗಾಣಿಕೆ ವಿಧಗಳು[ಬದಲಾಯಿಸಿ]

ಸಾಗಾಣಿಕೆಯ ಸವೆತದ ಒಂದು ಭಾಗವಾದ್ದರಿಂದ ಸವೆತ ವಧಗಳಂತೆ ಸಾಗಾಣಿಕೆಯ ವಿಧಗಳನ್ನು ಅಕ್ಯವಶ್ಯಕ. a) ಉರುಳುವೆಕೆ (Traction) :ಗಾಳಿ/ನೀರಿನಿಂದ ಶಿಲಾ ಪಧಾರ್ಥಗಳ ಸಾಗಾಣಿಕೆ. b) ಜಿಗಿತ ಚಲನೆ (Saltation) : ಎಗುರತ್ತಾ ಕುಪ್ಪಳಿಸುತ್ತಾ ಬಹುದೂರದ ವರೆಗೆ ಗಾಳಿಯಿಂದ ಸಾಗಿಸಲ್ಪಡುವ ಮರಳಿನ ಕಣಗಳನ್ನು ಜಿಗಿತ ಚಲನೆ ಎನ್ನುವರು. c) ತೇಲುವಿಕೆ (Suspension) : ಚಲಿಸುವ ನೀರು ಅಥವಾ ಗಾಳಿಯಲ್ಲಿ ತೇಲುತ್ತಾ ಸಾಗುವ ಹಗುರ ಸೂಕ್ಷ್ಮಶಿಲಾಕಣಗಳಿಗೆ 'ತೇಲುವಿಕೆ' ಎನ್ನುವರು. d) ದ್ರಾವಣೀಕರಣ (Solution) : ನೀರಿನಲ್ಲಿ ಶಿಲಾ ಮತ್ತು ಖನಿಜ ವಸ್ತುಗಳು ಕರಗಿ ಸಾಗಿಸಲ್ಪಡುವುದೇ ದ್ರಾವಣೀಕರಣ.

'ಸವೆತ' ವನ್ನುಂಟು ಮಾಡುವ ನೈಸರ್ಗಿಕ ಕೃರ್ತಗಳು[ಬದಲಾಯಿಸಿ]

a) ನದಿಕಾರ್ಯ-(Fluvial Process) - ಚಲಿಸುವ ನೀರು b) ಚಲಿಸುವ ಹಿಮನದಿ-(ಹಿಮನದಿ ಕಾರ್ಯ-Glacial Process) c) ಅಂತರ್ ಜಲ-(ಅಂತರ್ ಜಲ ಕಾರ್ಯ - Krast Process) d) ಗಾಳಿ-(ಗಾಳಿಯ ಕಾರ್ಯ-Aeolian Process) e) ಸಮುದ್ರ/ಸಾಗರಗಳ ಅಲೆ/ಪ್ರವಾಹಗಳು (ಸಮುದ್ರ ಅಲೆಗಳ ಕಾರ್ಯ-Marine Process)

ಉಲ್ಲೇಖಗಳು[ಬದಲಾಯಿಸಿ]

<refrences http://hkss.cedd.gov.hk/hkss/eng/education/GS/eng/hkg/chapter4.htm/>

<refrences https://en.wikipedia.org/wiki/Weathering/>

<refrences https://en.wikipedia.org/wiki/Erosion/>

<refrences http://education.nationalgeographic.com/education/encyclopedia/weathering/?ar_a=1/>