ಸದಸ್ಯ:Ranjeet kumar/sandbox
ರವೀಂದ್ರನಾಥ ಠಾಗೋರ್ ರವೀಂದ್ರನಾಥ ಠಾಗೋರ್ Tagore3.jpg ೧೯೧೫ರಲ್ಲಿ ಕೊಲ್ಕತ್ತದಲ್ಲಿ ಠಾಗೋರ್ ಜನನ: 7 ಮೇ 1861 ಜನನ ಸ್ಥಳ: ಕಲ್ಕತ್ತ ನಿಧನ: 7 ಆಗಸ್ಟ್ 1941 (ತೀರಿದಾಗ ವಯಸ್ಸು ೮೦) ಕಲ್ಕತ್ತ ವೃತ್ತಿ: ಕವಿ, ಬರಹಗಾರ, ತತ್ವಶಾಸ್ತ್ರಜ್ಞ, ಕಲಾವಿದ ಬರವಣಿಗೆಯ ಕಾಲ: ಬಂಗಾಳ ನವೋದಯ ಪ್ರಭಾವಿತರು: ಡಿ.ಆರ್. ಬೇಂದ್ರೆ, André Gide, ಯಾಸುನಾರಿ ಕವಬಾತ, ಕುವೆಂಪು, ಗೇಬ್ರಿಯೆಲಾ ಮಿಸ್ತ್ರಾಲ್, ಪಾಬ್ಲೊ ನೆರುದ, Octavio Paz ಪ್ರಶಸ್ತಿಗಳು: ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ (1913) ಹಸ್ತಾಕ್ಷರ: Rabindranath Tagore Signature.svg
ರವೀಂದ್ರನಾಥ ಠಾಗೋರ್ ಅವರು (ಬಂಗಾಳಿ:রবীন্দ্রনাথ ঠাকুর)α[›]β[›](೭ ಮೇ ೧೮೬೧ – ೭ ಆಗಸ್ಟ್ ೧೯೪೧), γ[›] ಅಂಕಿತ ನಾಮ:ಗುರುದೇವ್ δ[›]. ಅವರು ಬಂಗಾಳಿ ಮಹಾ ವಿದ್ವಾಂಸ. ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ ಅವರು ೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಕೊಟ್ಟರು. ಅವರು ರಚಿಸಿದ "ಸೂಕ್ಷ್ಮ ಸಂವೇದನೆಯ, ನವನವೀನವೂ ಮತ್ತು ಸುಂದರವೂ ಆದ ಪದ್ಯ" ಗೀತಾಂಜಲಿ ಕಾವ್ಯಕ್ಕೆ ೧೯೧೩ರ ನೊಬೆಲ್ ಸಾಹಿತ್ಯ ಪ್ರಶಸ್ತಿದಕ್ಕಿತು. ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾದರು.
ಕಲ್ಕತ್ತಾದ ಪಿರಾಲಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಟಾಗೋರ್ [೧][೨][೩][೪] ತಮ್ಮ ಎಂಟನೇ ವಯಸ್ಸಿನಲ್ಲಿ ಪದ್ಯ ರಚನೆ ಆರಂಭಿಸಿದರು.[೫] ಹದಿನಾರನೇ ವಯಸ್ಸಿನಲ್ಲಿ ಅವರು ಭಾನುಶಿಂಘೊ ("ಸೂರ್ಯ ಸಿಂಹ")[೬] ಎಂಬ ಗುಪ್ತನಾಮದಡಿ ಮೊದಲ ಮಹತ್ವದ ಕವನವನ್ನು ಪ್ರಕಟಿಸಿದರು ಮತ್ತು ಅವರು ಮೊದಲು ಸಣ್ಣ ಕಥೆಗಳು ಮತ್ತು ನಾಟಕಗಳನ್ನು ೧೮೭೭ರಲ್ಲಿ ಬರೆದರು. ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಟಾಗೋರ್ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ ವಿಶ್ವ-ಭಾರತಿ ವಿಶ್ವಾವಿದ್ಯಾನಿಲಯ-ಇವು ಅವರ ಪ್ರಮುಖ ಕೊಡುಗೆ.
ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು. ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳು, ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನೆಲ್ಲಾ ಅನುರಣಿಸಿವೆ. ಗೀತಾಂಜಲಿ (ಗೀತೆಗಳು), ಗೋರ (ಸುಂದರ ಮುಖಿ)ಮತ್ತು ಘರೇ ಬೈರೆ((ಮನೆ ಮತ್ತು ಪ್ರಪಂಚ)) ಇವರ ಹಸರಾಂತ ಕೃತಿಗಳು. ಅವರು ರಚಿಸಿದ ಕವನಗಳು, ಸಣ್ಣ ಕಥೆಗಳು, ಮತ್ತು ಕಾದಂಬರಿಗಳು ಅವುಗಳ ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲ ವಾಸ್ತವಿಕತೆ ಗೆ, ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಪ್ರಶಂಸನೀಯವಾಗಿವೆ. ಟಾಗೋರ್ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದೆ. 'ಜನ ಗಣ ಮನ' ಭಾರತದ ರಾಷ್ಟ್ರ ಗೀತೆಯಾಗಿ ಅಂಗೀಕರಿಸಲಾದರೆ 'ಅಮರ್ ಶೋನರ್ ಬಾಂಗ್ಲಾ' ಬಾಂಗ್ಲಾದೇಶದ್ದು.