ಸದಸ್ಯ:Ramyashri.Dondole/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲೇರಿಯಾ[ಬದಲಾಯಿಸಿ]

ಸೊಳ್ಳೆಯ ಜಾತಿಗಳು[ಬದಲಾಯಿಸಿ]

ಈ ಭಾದೆಗಳಲ್ಲಿ ಸೊಳ್ಳೆಯ ಕಾಟವನ್ನು ನಮ್ಮವರು ಏಕೆ ಸೇರಿಸಲಿಲ್ಲವೋ ತಿಳಿಯದು ಪ್ರಾಯಶಃ ಈತಿಬಾಧೆಗಳ ವಿಷಯವಾದ ಶ್ಲೋಕವಾದ ಬರೆದವರು ವಾಸವಾಗಿದ್ದ ಪ್ರದೇಶಗಳಲ್ಲಿ ಸೊಳ್ಳೆಗಳು ಹೆಚ್ಚಾಗಿಲ್ಲದೆ ಇರಬಹುದು.ಸೊಳ್ಳೆಗಳು ಕೆಲವು ಪ್ರಾಂತಗಳಲ್ಲಿ ಮಾಡುವ ಹಾವಳಿಯನ್ನು ಕೇಳಿದರೆ ಗಾಬರಿಯಾಗುವುದು. ಅಟ್ಲಾಂಟಿಕ್ ಸಾಗರವನ್ನು ಫೆಸಿಪಿಕ್ ಸಾಗರವನ್ನು ಸೇರಿಸುವ ಉದ್ದಿಶ್ಯ ಇತ್ತರ ಅಮೇರಿಕಕ್ಕೂ ದಕ್ಷಿಣ ಅಮೇರಿಕಕ್ಕೂ ಮಧ್ಯೆ ಇರುವ ಭೂ ಸಂಧಿಯನ್ನು ಕಡಿದು ಕಾಲುವೆ ಮಾಡುವುದಕ್ಕಾಗಿ ಫ್ರಾನ್ಸ್ ದೇಶಸ್ಥರು ಸುಮಾರು 1880ನೇ ಇಸವಿಯಲ್ಲಿ ಅಲ್ಲಿಗೆ ಹೋಗಿ ನಿಲ್ಲಲು ಅಲ್ಲಿದ್ದ ಸೊಳ್ಳೆಗಳು ಅವರಲ್ಲಿ ಅನೇಕರನ್ನು ಸಾಯಗೊಳಿಸಿ ಮಿಕ್ಕವರನ್ನು ಭಯದೊಡನೆ ಓಡಿಸಿಬಿಟ್ಟವು. ಕೆಲಸವು ಅಲ್ಲಿಗೆ ನಿಂತು ಹೋಗಿ ಕೋಟ್ಯಾಂತರ ಹಣ ನಷ್ಟವಾಯಿತು. ಆದರೆ ಮನುಷ್ಯನ ಬುದ್ದಿ ಶಕ್ತಿಗೆ ಮೀರಿದ್ದಾವುದು? ಕೆಲವು ವರುಷಗಳ ಮೇಲೆ ಅಮೇರಿಕ ದೇಶಸ್ಥರು ಆ ಕೆಲಸಕ್ಕೆ ತಾವು ಪ್ರವೇಶಿಸಿ, ಈ ಸೊಳ್ಳೆಗಳ ಜೀವ ಚರಿತ್ರೆಯನ್ನು ಚೆನ್ನಾಗಿ ಪರೀಕ್ಷಿಸಿ, ಅವನ್ನು ಜಯಿಸುವುದಕ್ಕೆ ತಕ್ಕ ಉಪಾಯಗಳನ್ನು ಕಲ್ಪಿಸಿ, ಆ ಪ್ರದೇಶದ ಸೊಳ್ಳೆಗಳನ್ನೆಲ್ಲ ನಿರ್ಮೂಲ ಮಾಡಿ, ಆ ಪ್ರಾಂತದ ಆರೋಗ್ಯ ಸ್ಥಿತಿಯನ್ನು, ಸಾಮಾನ್ಯವಾಗಿ ಆರೋಗ್ಯವಾಗಿರುವ ಪ್ರದೇಶಗಳಿಗಿಂತಲೂ, ಮೇಲಾದ ಸ್ಥಿತಿಗೆ ತಂದು, ತಮ್ಮ ಕೆಲಸವನ್ನು ನಿರಾತಂಕವಾಗಿ ನೆರವೇರಿಸಿದ ಚರಿತ್ರೆಯು ಆ ದೇಶದವರ ಅದ್ಬುತ ಶಕ್ತಿಯನ್ನು ಪ್ರಸಿದ್ದ ಪಡಿಸುತ್ತಿದೆ. ಮನುಷ್ಯನು ಅನುಭವಿಸುವ ವರಸೆಯ ಜ್ವರಗಳೆಲ್ಲವೂ ಸೊಳ್ಳೆಗಳೇ ಕಾರಣಬವೆಂದು ಹೇಳಿದರೆ ಅನೇಕರು ನಂಬಲಾರದು.ಆದರೆ ಪಾಶ್ಚಾತ್ಯರು ನಜ್ವರಗಳಿಗೂ ಸೊಳ್ಳೆಗಳಿಗೂ ಸಂಭಂಧವಿರುವುದನ್ನೂ ಸೂಕ್ಷ್ಮದರ್ಶಿನಿಯ ಮೂಲಕ ಕಂಡುಹಿಡಿದು ಆ ವಿಷಯವೂ ನಿಸ್ಸಂಶಯವಾಗುವಂತೆ ನಿದರ್ಶನ ಮಾಡಿರುತ್ತಾರೆ.

  • ಸೊಳ್ಳೆಗಳಲ್ಲಿ ಅನೇಕ ಜಾತಿಗಳುಂಟು. ಅವುಗಳಲ್ಲಿ ಎರಡು ಜಾತಿಗಳನ್ನು ಮಾತ್ರ ಇಲ್ಲಿ ಸಂಕ್ಷೇಪವಾಗಿ ವಿವರಿಸುತ್ತೇವೆ. ಸಾಮಾನ್ಯವಾಗಿ ಎಲ್ಲೆಲ್ಲಿಯೂ ವ್ಯಾಪಿಸಿರುವ ‘ಕ್ಯೂಲೆಕ್ಸ್’ ಎಂಬ ಸೊಲ್ಲೆಯು ಮನುಷ್ಯನ ಜ್ವರಕ್ಕೆ ಕಾರಣವಾಗುವುದಿಲ್ಲ. ಅದು ಪಕ್ಷಿಗಳನ್ನೂ ಮೃಗಗಳನ್ನೂ ನೋಡಿಕೊಳ್ಳುತ್ತದೆ. ಮನುಷ್ಯನಿಗೆ ಮಲೇರಿಯ ಮೊದಲಾದ ವರಸೆಯ ಜ್ವರಗಳನ್ನು ಉಂಟುಮಾಡುವುದು ‘ಅನಾಫೆಲೀಸು’ ಎಂಬ ಸೊಳ್ಳೆ. ಇವೆರಡು ಜಾತಿಗಳಿಗೂ ಭೇದಗಳಿದ್ದರೂ ಸಾಮಾನ್ಯವಾಗಿ ನೋಡುವವರಿಗೆ ಯಾವ ಭೇದವೈ ಕಾಣಿಸುವುದಿಲ್ಲ. ಸೊಳ್ಳೆಗಳು ನೀರು ನಿಂತಿರುವ ಪ್ರದೇಶಗಳಲ್ಲಿಯೂ ಜವುಗು ಪ್ರದೇಶಗಳಲ್ಲಿಯೂ ವಿಶೇಷವಾಗಿರುವುವು. ನೀರಿಲ್ಲದಿದ್ದರೆ ಇವು ಅಭಿವೃದ್ಧಿಯನ್ನು ಹೊಂದಲಾರವು. ಆದುದರಿಂದ ಸೊಳ್ಳೆಗಳು ಕಡಿಮೆಯಾಗಿ ಆರೋಗ್ಯ ಸ್ಥಿತಿಯು ಹೆಚ್ಚಬೇಕಾದರೆ ಮನೆಯ ಸುತ್ತಮುತ್ತಲು ನೆಲದ ಮೇಲಾಗಲೀ ಪಾತ್ರೆಗಳಲ್ಲಾಗಲಿ ನೀರು ಕೊಂಚವು ನಿಲ್ಲದಂತೆ ಮಾಡಬೇಕು.

ಸೊಳ್ಳೆಯ ಜಾತಿಯ ಗುರುತಿಸುವಿಕೆ[ಬದಲಾಯಿಸಿ]

ನಿಂತ ನೀರನ್ನು ಒಂದು ಗಾಜಿನ ಪಾತ್ರೆಯಲ್ಲಿ ಹಾಕಿ ನೋಡಿದರೆ ಸಾಮಾನ್ಯವಾಗಿ ಅದರಲ್ಲಿ ಬೆಳ್ಳಗಿರುವ ಹುಳಗಳು ನೀರಿನಲ್ಲಿ ಲಾಗಗಳನ್ನು ಹಾಕುತ್ತ ಕೆಳಕ್ಕೂ ಮೇಲಕ್ಕೂ ಈಜಾಡುತ್ತಿರುವುದು ಕಾಣಬಹುದು. ಇದುವೇ ಸೊಳ್ಳೆಯ ಮರಿಗಳು. ಈ ಹುಳುಗಳನ್ನು ಚೆನ್ನಾಗಿ ಪರೀಕ್ಷಿಸಿ ನೋಡಿದರೆ ಇವು ನೀರಿನ ಮೇಲ್ಭಾಗದವರೆಗೂ ಹೋಗಿ, ಅಲ್ಲಿ ಕೊಂಚ ಹೊತ್ತಿದ್ದು, ಪುನಃ ಕೆಳಕ್ಕೆ ಬರುತ್ತದೆ. ಚಲನೆಯು ಇದೇ ರೀತಿಯಲ್ಲಿ ಕ್ರಮವಾಗಿ ನಡೆಯುತ್ತಿರುತ್ತದೆ. ಹುಳಗಳು ಹೀಗೆ ನೀರಿನ ಮೇಲ್ಭಾಗದವರೆಗೆ ಆಗಾಗ ಹೋಗುವುದು ಉಸಿರಾಟಕ್ಕೋಸ್ಕರ. ನೀರಿನ ಮಟ್ಟಕ್ಕೆ ಸರಿಯಾಗಿ ನಿಂತಿರುವ ಹುಳಗಳು ‘ಅನಾಫಿಲಿಸ್’ ಜಾತಿಗೆ ಸೇರಿದವುಗಳು. ತಲೆಕೆಳಗಾಗಿರುವವು ‘ಕ್ಯೂಲೆಕ್ಸ್’ ಜಾತಿಗೆ ಸೇರಿದುವು. ಈ ಪರೀಕ್ಷೆಯಿಂದ ‘ಅನಾಫಿಲಿಸ್’ ಸೊಳ್ಳೆಯು ಯಾವ ಪ್ರದೇಶದಲ್ಲಿ ಹೆಚ್ಚಾಗಿದೆಎಂಬ ಅಂಶ ಸುಲಭವಾಗಿ ಗೊತ್ತು ಮಾಡಬಹುದು. ‘ಕ್ಯೂಲೆಕ್ಸ್’ ಸೊಳ್ಳೆಗೆ ಉಸಿರಾಡುವುದಕ್ಕೆ ದೊಡ್ಡ ಕೊಳವೆ ಇರುವುದು; ಅನಾಫಿಲಿಸ್ ಸೊಳ್ಳೆಗೆ ಒಂದು ಮೊಟಕಾದ ಅಂಗವಿರುವುದು. ನೀರಿನ ಮೇಲೆ ಸೀಮೆ ಎಣ್ಣೆ ಚೆಲ್ಲಿದರೆ ಉಸಿರಾಡಲು ವಾಯು ದೊರೆಯದೆ ಅವು ನಾಶ ಹೊಂದುತ್ತವೆ.

ಸೊಳ್ಳೆಯ ಉತ್ಪತ್ತಿ[ಬದಲಾಯಿಸಿ]

ಈ ಹುಳಗಳು ಮೇಲೆ ಹೇಳಿದ ರೀತಿಯಲ್ಲಿ ಕೆಲವು ದಿನ ಬೆಳೆಯುತ್ತದೆ. ತರುವಾಯ ಜಡಸ್ಥಿತಿಯನ್ನು ಹೊಂದಿ, ಅಲ್ಲಿಂದ ರೆಕ್ಕೆಗಳು ಬಲಿತು ಸೊಳ್ಳೆಗಳಾಗಿ ಹಾರಿ ಬರುವುದು. ರಕ್ತವನ್ನು ಹೀರುವ ಸೊಳ್ಳೆಗಳು ಸಾಮಾನ್ಯವಾಗಿ ಹೆಣ್ಣು ಹುಳುಗಳು. ಇವುಗಳಲ್ಲಿ ‘ಅನಾಫಿಲಿಸ್’ ಜಾತಿಯ ಸೊಳ್ಳೆಗಳು ಮನುಷ್ಯರನ್ನು ಕಚ್ಚುವುದು ಸಾಧಾರಣವಾಗಿ ಸಾಯಂಕಾಲದ ಮೇಲೆ. ಹಗಲು ಹೊತ್ತಿನಲ್ಲಿ ಸೊಳ್ಳೆಗಳು ಕತ್ತಲಾಗಿರುವ ಕೊಳಕು ಪ್ರದೇಶಗಳಲ್ಲಿ, ಜೋಲಾಡುತ್ತಿರುವ ಚಿಟ್ಟೆಗಳ ಮೇಲೆ, ಅನುಕೂಲವಾದ ಇತರ ಪ್ರದೇಶಗಳಲ್ಲಿ ಇರುತ್ತದೆ. ಸೊಳ್ಳೆಯ ಸೊಂಡಿಲಿನಲ್ಲಿ ರಕ್ತವನ್ನು ಹೀರಲು ಬೇಕಾದ ಸೌಲಭ್ಯ ಇರುತ್ತದೆ. ಸೂಜಿಯಂತಿರುವ ಮೂತಿಯಿಂದ ಚರ್ಮವನ್ನು ಚುಚ್ಚಿ ರಕ್ತ ಹೀರುತ್ತದೆ. ಸೊಳ್ಳೆಯ ಜೊಲ್ಲು ನಮ್ಮ ರಕ್ತಕ್ಕೆ ಸೇರುವುದರಿಂದ ನಮಗೆ ನವೆಯಾಗುವುದು. ರೆಕ್ಕೆ ಬಂದ ಸೊಳ್ಳೆಗಳು ಎಲ್ಲಾದರೂ ಕುಳಿತಿರುವುದನ್ನು ಚೆನ್ನಾಗಿ ಪರೀಕ್ಷಿಸಿ ನೋಡಿದರೆ ‘ಕ್ಯೂಲೆಕ್ಸ್’ ಜಾತಿಯ ಸೊಳ್ಳೆಯು ಗೂನು ಬೆನ್ನು ಮಾಡಿಕೊಂಡು ಅನಾಫಿಲಿಸ್ ಜಾತಿಯ ಸೊಳ್ಳೆಯು ನೆಟ್ಟಗೂ ಇರುತ್ತದೆ. ಈ ರೀತಿಯಾಗಿಯೂ ಸೊಳ್ಳೆಯ ಜಾತಿಯನ್ನು ಕಂಡುಹಿಡಿಯಬಹುದು. ಅನಾಫಿಲಿಸ್ ಜಾತಿಯ ಸೊಳ್ಳೆಯು ಮನುಷ್ಯನನ್ನು ಕಚ್ಚಿದಾಗ ವೈರಾಣುಗಳು ದೇಹವನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಮೇಜರ್ ರೋನಾಲ್ಡ್ ರಾಸ್ ಎಂಬುವವರು ಭಾರತ ದೇಶದಲ್ಲಿ ಸೊಳ್ಳೆಗಳ ಕುರಿತಾಗಿ 1897ನೆಯ ಇಸವಿಯಲ್ಲಿ ತಮ್ಮ ಅಧ್ಯಯನವನ್ನು ಪ್ರಸ್ತುತಪಡಿಸಿದರು. ಅಲ್ಲಿಂದೀಚೆಗೆ ಅನಾಫಿಲಿಸ್ ಜಾತಿಯ ಸೊಳ್ಳೆಯೇ ಮಲೇರಿಯಾ ಮೊದಲಾದ ವೈರಸ್ ಜ್ವರಗಳಿಗೆ ಕಾರಣವೆಂಬ ಸಿದ್ದಾಂತವನ್ನು ಎಲ್ಲರೂ ಅಂಗೀಕರಿಸಿರುತ್ತಾರೆ.

ಸೊಳ್ಳೆಯ ಅಭಿವೃದ್ಧಿ[ಬದಲಾಯಿಸಿ]

ಮನುಷ್ಯನ ರಕ್ತಕ್ಕೆ ಕೆಂಪು ಬಣ್ಣವನ್ನು ಕೊಡುವ ಪದಾರ್ಥ ಚಪ್ಪಟೆಯಾಗಿ ಗುಂಡಗಿರುವ ಕೆಂಪು ರಕ್ತಕಣಗಳು. ಇವು ಅತೀ ಸೂಕ್ಮವಾಗಿರುವುದರಿಂದ ಬರೀ ಕಣ್ಣಿಗೆ ಕಾಣಿಸುವುದಿಲ್ಲ. ಸೂಕ್ಮದರ್ಶಿನಿಯ ಮೂಲಕ ನೋಡಬಹುದು. ಈ ಕಣಗಳು ಎಷ್ಟು ಸೂಕ್ಮವಾಗಿರುವುವೆಂದರೆ 3000 ಕಣಗಳನ್ನು ಒಂದರ ಪಕ್ಕದಲ್ಲೊಂದು ಇಟ್ಟರೆ ಅವೆಲ್ಲಾ ಸೇರಿ ಒಂದಂಗುಲ ಉದ್ದ ಮಾತ್ರ ಆಗುವುದು. ಈ ಕೆಂಪು ಕಣದ ಮಧ್ಯೆ ಕೆಲವು ಬಿಳಿಯ ಕಣಗಳು ಇರುವುವು. ಈ ಬಿಳಿಯ ಕಣಗಳು ಯಾವಾಗಲೂ ಚಲಿಸುತ್ತ ರೂಪವನ್ನು ಬದಲಾಯಿಸುತ್ತ ರಕ್ತದಲ್ಲಿ ವಿಷ ಪದಾರ್ಥಗಳು ಸೇರಿ ವೃದ್ದಿಯಾಗದಂತೆ ತಮ್ಮಿಂದಾಗುವ ಮಟ್ಟಿಗೂ ನೋಡಿಕೊಳ್ಳುತ್ತದೆ. ಇರುವುವು. ಜ್ವರದ ಬೀಜವು ಕೆಂಪು ರಕ್ತಕಣಗಳಲ್ಲಿಯೇ ಅಭಿವೃದ್ಧಿಯಾಗುವುವು. ಮಲೇರಿಯಾ ಜ್ವರದ ಬೀಜವನ್ನುಳ್ಳ ಸೊಳ್ಳೆಯು ಮನುಷ್ಯನನ್ನು ಕಚ್ಚುತ್ತವೆ. ಕೆಂಪು ರಕ್ತಕಣಕ್ಕಿಂತಲೂ ಅತಿ ಸೂಕ್ಮವಾದ ವಿಷಬೀಜವು ಸೊಳ್ಳೆಯ ಜೊಲ್ಲಿನ ಮೂಲಕ ಮನುಷ್ಯನ ರಕ್ತವನ್ನು ಸೇರುವುದು. ಈ ಬೀಜವು ಉದ್ದನಾಗಿಯೂ, ತೆಳ್ಳಗೂ, ಎರಡು ಕೊನೆಗಳಲ್ಲಿಯೂ ಸೂಜಿಯಂತೆ ಚೂಪಾಗಿಯೂ ಇರುವುದರಿಂದ ಕೂಡಲೇ ಒಂದು ಕೆಂಪು ರಕ್ತ ಕಣದೊಳಕ್ಕೆ ನುಗ್ಗಿ ಕ್ರಮೇಣ ರೂಪ ಭೇದವನ್ನು ಹೊಂದುತ್ತ ರಕ್ತ ಕಣದೊಳಗೆಯೇ ಒಂದೆಡೆಯಿಂದ ಮತ್ತೊಂದೆಡೆಗೆ ಚಲಿಸುತ್ತಾ ರಕ್ತಕಣದಿಂದಲೇ ಬೇಕಾದ ಆಹಾರವನ್ನು ತೆಗೆದುಕೊಳ್ಳುತ್ತಾ ದುಂಡಾಗಿ ಬೆಳೆಯುವುದು. ಈ ‘ಸರಸತ್ವೋಸಜೀವಿ’ಯಾದ ವಿಷಬೀಜವೂ ರಕ್ತಕಣದಿಂದ ಸಂಗ್ರಹಸಿದ ಪದಾರ್ಥಗಳನ್ನು ಉಪಯೋಗಿಸಿಕೊಂಡು ಕೆಲವು ಕಪ್ಪು ಕಣಗಳನ್ನು ಉಂಟುಮಾಡುವುದು. ವಿಷ ಬೀಜವೂ ಬೆಳೆದು ಅದರ ಜೀವಾಣುಗಳ ಸಂಖ್ಯೆಯು ಹೆಚ್ಚಿ ಕೊನೆಗೆ ಇವೆಲ್ಲಾ ರಕ್ತಕಣವನ್ನು ಭೇದಿಸಿಕೊಂಡು ರಕ್ತದೊಳಕ್ಕೆ ಸಿಡಿದು ಬಿಳುವುವು. ಚಳಿ ಬರುವುದು ಈ ಸಂದರ್ಭದಲ್ಲಿಯೇ. ಹೀಗೆ ಸಿಡಿದು ಬಿದ್ದ ಪ್ರತಿಯೊಂದು ಅಣುವು ಹೊಸ ಕೆಂಪು ರಕ್ತಕಣವನ್ನು ಸೇರುವುದು. ಅಲ್ಲಿ ರಕ್ತದಲ್ಲಿನ ಪದಾರ್ಥದಿಂದ ಬೆಳೆದು ಬಾಲಚಂದ್ರಾಕೃತಿಯನ್ನು ಹೊಂದುವುದು. ಈ ಸ್ಥಿತಿಯಲ್ಲಿ ಅನಾಫಿಲೀಸ್ ಸೊಳ್ಳೆಯೂ ಬಾಲಚಂದ್ರಾಕೃತಿಯ ಅಣುಗಳಿರುವ ರಕ್ತವನ್ನು ಹೀರಿದರೆ ಸೊಳ್ಳೆಯ ಹೊಟ್ಟೆಯಲ್ಲಿ ಇವುಗಳು ಕ್ರಮೇಣ ಗಂಡು ಹೆಣ್ಣಾಗಿ ವಿಭಾಗ ಹೊಂದಿ ಬೆಳೆಯುತ್ತ ಗುಂಡುತಿರುಗುವುವು. ಇವೆರಡಕ್ಕೂ ಪ್ರಾಯ ಬಂದ ಮೇಲೆ ಸಂಗಮ ಉಂಟಾಗಿ ಹೆಣ್ಣು ಗರ್ಭವನ್ನು ಧರಿಸುವುದು. ಇದು ಸೊಳ್ಳೆಯ ಹೊಟ್ಟೆಯಲ್ಲಿ ಬೆಳೆದು ಚಟುವಹಿಕೆಯಿಂದ ಸುತ್ತುತ್ತಾ ಸೊಳ್ಳೆಯ ಆಹಾರಕೋಶದ ಗೋಡೆಯೊಳಕ್ಕೆ ನುಗ್ಗುವುದು. ಇಲ್ಲಿ ಪುನಃ ಗುಂಡುತಿರುಗಿ ಬೇಗ ಬೆಳೆಯುವುದು. ತರುವಾಯ ಅದರ ಮೈಯಲ್ಲಿನ ಜೀವಾಣುವು ಬೇರೆ ಬೇರೆ ಭಾಗಗಳಾಗುವುದು. ಇವೇ ನಾವು ಹಿಂದೆ ಹೇಳಿದ ಜ್ವರದ ಬೀಜಗಳು. ಈ ಸಣ್ಣ ಭಾಗಗಳೆಲ್ಲವೂ ಅವುಗಳಿದ್ದ ಗುಂಡು ಒಡೆಯುದರಿಂದ ಚದರಿ, ಸೊಳ್ಳೆಯ ಮೈಯ್ಯ ನಾನಾ ಭಾಗಗಳನ್ನು ಹೊಕ್ಕು ಜೊಲ್ಲಿನ ಗ್ರಂಥಿಯನ್ನು ಸೇರುವುದು. ಈ ಸ್ಥಿತಿಯಲ್ಲಿ ಇರುವಾಗ ಸೊಳ್ಳೆಯು ಮನುಷ್ಯನನ್ನು ಕಚ್ಚಿದರೆ ವಿಷಬೀಜಗಳು ಖಂಡಿತವಾಗಿ ಅವನ ರಕ್ತವನ್ನು ಸೇರುವುವು. ವರಸೆಯ ಜ್ವರಗಳಲ್ಲಿ ದಿನಂ ಪ್ರತಿ ಬರುವ ಜ್ವರ ಅನಾಫೆಲಿಸು ಸೊಳ್ಳೆಯೇ ಕಾರಣವಾದರೂ ಅದು ಬಿತ್ತುವ ವಿಷಬೀಜಗಳು ಮಾತ್ರ ಬೇರೆ ಬೇರೆ. ಈ ಬೀಜವು ಅಭಿವೃದ್ಧಿ ಸ್ಥಿತಿಯನ್ನು ಹೊಂದುವ ಕಾಲವೂ ವ್ಯತ್ಯಾಸವಾಗಿರುವುವು.