ವಿಷಯಕ್ಕೆ ಹೋಗು

ಸದಸ್ಯ:Rakshithgowda B.L/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ಯಾಂಕಿಂಗ್‌ ಸೇವೆಗಳು:

ಬ್ಯಾಂಕುಗಳ ಪ್ರಾಥಮಿಕ ಕಾರ್ಯಚರಣೆಗಳೆಂದರೆ:

ಹಣವನ್ನು ಸುರಕ್ಷಿತವಾಗಿರಿಸಿ, ಬೇಕಾದಾಗ ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಒದಗಿಸುವುದು ಚೆಕ್‌ ಪುಸ್ತಕಗಳ ವಿತರಣೆ. ಇದರಿಂದಾಗಿ ಬಿಲ್ಲುಗಳನ್ನು ಪಾವತಿಸಬಹುದು, ಅಲ್ಲದೆ ಇತರ ಪ್ರಕಾರದ ಪಾವತಿಗಳನ್ನು ಅಂಚೆಯ ಮೂಲಕ ರವಾನಿಸಬಹುದು. ವೈಯಕ್ತಕ ಸಾಲಗಳು, ವಾಣಿಜ್ಯ ಸಾಲಗಳು, ಮತ್ತು ಅಡಮಾನ ಸಾಲಗಳನ್ನು (ಮನೆ, ಆಸ್ತಿ ಅಥವಾ ವ್ಯವಹಾರವನ್ನು ಖರೀದಿಸಲು) ಒದಗಿಸುವುದು ಕ್ರೆಡಿಟ್‌ ಕಾರ್ಡ್‌ಗಳ ವಿತರಣೆ ಮತ್ತು ಕ್ರೆಡಿಟ್‌ ಕಾರ್ಡ್‌ ವ್ಯವಹಾರಗಳು ಮತ್ತು ಬಿಲ್ಲಿಂಗ್‌ನ ಪ್ರಕ್ರಿಯೆ ಚೆಕ್‌ಗಳಿಗೆ ಬದಲಿಯಾಗಿ ಬಳಸಲು ಡೆಬಿಟ್‌ ಕಾರ್ಡ್‌ಗಳ ವಿತರಣೆ ಶಾಖೆಗಳಲ್ಲಿ ಅಥವಾ ಆಟೋಮೇಟಿಕ್‌ ಟೆಲ್ಲರ್‌ ಯಂತ್ರ ಗಳನ್ನು (ATMs) ಬಳಸುವ ಮೂಲಕ ಹಣಕಾಸು ವ್ಯವಹಾರಗಳ ಸೌಲಭ್ಯ ಒದಗಿಸುವುದು ಬ್ಯಾಂಕುಗಳ ನಡುವೆ ನಿಧಿಗಳ ತಂತಿ ವರ್ಗಾವಣೆ ಮತ್ತು ವಿದ್ಯುನ್ಮಾನ ನಿಧಿ ವರ್ಗಾವಣೆ ಸೌಲಭ್ಯವನ್ನು ಒದಗಿಸುವುದು ಕಾಯಂ ಆದೇಶಗಳು ಮತ್ತು ನೇರ ಡೆಬಿಟ್‌ಗಳ ಸೌಲಭ್ಯಗಳನ್ನು ಒದಗಿಸುವುದು. ಹೀಗಾಗಿ ಬಿಲ್ಲುಗಳಿಗೆ ಪಾವತಿಯನ್ನು ಸ್ವಯಂಚಾಲಿತವಾಗಿ ಮಾಡಬಹುದಾಗಿದೆ. ಗ್ರಾಹಕರ ಚಾಲ್ತಿ ಖಾತೆಯ ಮಾಸಿಕ ಖರ್ಚಿನ ಬದ್ಧತೆಗಳನ್ನು ಭರಿಸಲು, ಬ್ಯಾಂಕ್‌ ತನ್ನ ಹಣದೊಂದಿಗೆ ತಾತ್ಕಾಲಿಕ ಮುಂಗಡವಾಗಿ ಒವರ್‌ಡ್ರ್ಯಾಫ್ಟ್‌ ಒಪ್ಪಂದಗಳ ಸೌಲಭ್ಯವನ್ನು ಒದಗಿಸುವುದು. ಮಾಸಿಕವಾಗಿ ಸಾಲವನ್ನು ಮರುಪಾವತಿಸಲು ಬಯಸುವ ಗ್ರಾಹಕರಿಗೆ ಬ್ಯಾಂಕ್‌ಗಳು ತಮ್ಮದೆ ಹಣದಿಂದ ಚಾರ್ಚ್‌ ಕಾರ್ಡ್‌ ಮುಂಗಡಗಳನ್ನು ಒದಗಿಸುವುದು. ಬ್ಯಾಂಕ್‌ ಸ್ವತಃ ಖಾತರಿಪಡಿಸಿದ ಮತ್ತು ಗ್ರಾಹಕರು ಪೂರ್ವಭಾವಿಯಾಗಿ ನೀಡುವ ಕ್ಯಾಷಿಯರ್‌ ಚೆಕ್‌ ಅಥವಾ ಪ್ರಮಾಣಿತ ಚೆಕ್‌ಗಳನ್ನು ಒದಗಿಸುವುದು. ಹಣಕಾಸು ಮತ್ತು ಇತರ ದಾಖಲೆಗಳಿಗಾಗಿ ನೋಟರಿ ಸೇವೆ

ಇತರ ಹಣಕಾಸು ಸೇವೆಗಳು: ಮಧ್ಯಸ್ಥಿಕೆ ಅಥವಾ ಸಲಹೆಯ ಸೇವೆಗಳು - ಈ ಸೇವೆಗಳು ಷೇರು ದಲ್ಲಾಳಿಗಳು (ಖಾಸಗಿ ಗ್ರಾಹಕ ಸೇವೆಗಳು) ಮತ್ತು ರಿಯಾಯಿತಿ ದಲ್ಲಾಳಿಗಳ ಸೇವೆಗಳನ್ನು ಒಳಗೊಂಡಿದೆ. ಷೇರು ದಲ್ಲಾಳಿಗಳು ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸುವಲ್ಲಿ ಮತ್ತು ಮಾರುವಲ್ಲಿ ಸಹಾಯವನ್ನು ಮಾಡುತ್ತಾರೆ. ಮುಖ್ಯವಾಗಿ ಅಂತರಜಾಲ ಆಧಾರಿತ ಸಂಸ್ಥೆಗಳನ್ನು ರಿಯಾಯಿತಿ ದಲ್ಲಾಳಿಗಳೆಂದು ಸಾಮಾನ್ಯವಾಗಿ ಉಲ್ಲೇಖಿಸಲಾಗಿದೆ. ಆದರೂ ಹೆಚ್ಚಿನವು ತಮ್ಮ ಗ್ರಾಹಕರಿಗೆ ಸಲಹೆಯನ್ನು ನೀಡಲು ಶಾಖೆಗಳನ್ನು ಹೊಂದಿವೆ. ಈ ದಳ್ಳಾಳಿಗಳು ಮುಖ್ಯವಾಗಿ ವೈಯಕ್ತಿಕ ಹೂಡಿಕೆದಾರರನ್ನು ಗುರಿಯಿರಿಸುತ್ತವೆ. ದೊಡ್ಡ ಕಂಪೆನಿಗಳು,ಶ್ರೀಮಂತ ವ್ಯಕ್ತಿಗಳು ಮತ್ತು ಬಂಡವಾಳ ನಿರ್ವಹಣೆ ನಿಧಿಗಳು ಮುಂತಾದ ಸಂಪೂರ್ಣ ಸೇವೆ ಮತ್ತು ಖಾಸಗಿ ಗ್ರಾಹಕ ಸಂಸ್ಥೆಗಳು ಮುಖ್ಯವಾಗಿ ಹೂಡಿಕೆಗೆ ದೊಡ್ಡ ಪ್ರಮಾಣಗಳ ಬಂಡವಾಳದೊಂದಿಗೆ ಗ್ರಾಹಕರಿಗೆ ವ್ಯಾಪಾರಗಳನ್ನು ನಿರ್ವಹಿಸಲು ನೆರವಾಗುತ್ತವೆ. ಖಾಸಗಿ ಷೇರು - ಖಾಸಗಿ ಷೇರು ನಿಧಿಗಳು ಸೀಮಿತ ವ್ಯಾಪ್ತಿಯ ನಿಧಿಗಳಾಗಿವೆ. ಇವುಗಳು ಸಾಮಾನ್ಯವಾಗಿ ಉದ್ಯಮಗಳಲ್ಲಿ ಖಾಸಗಿ ಅಥವಾ ಸ್ವಾಧೀನಪಡಿಸಿಕೊಂಡ ನಂತರದ ಖಾಸಗಿ ಷೇರುಗಳನ್ನು ನಿಯಂತ್ರಿಸುತ್ತವೆ. ಖಾಸಗಿ ಷೇರು ನಿಧಿಗಳು ಹೆಚ್ಚಾಗಿ ಅವುಗಳು ಹೂಡಿಕೆ ಮಾಡುವ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕಾಗಿ, ಹತೋಟಿ ಖರೀದಿಸುವಿಕೆಯನ್ನು (LBOs) ಸಾಮಾನ್ಯವಾಗಿ ಬಳಸಿಕೊಳ್ಳುತ್ತವೆ. ಅತ್ಯಂತ ಯಶಸ್ವಿ ಖಾಸಗಿ ಷೇರು ನಿಧಿಗಳು ಷೇರು ಮಾರುಕಟ್ಟೆಗಳು ಒದಗಿಸುವ ಪ್ರತಿಫಲಕ್ಕಿಂತ ಹೆಚ್ಚಿನ ಪ್ರತಿಫಲವನ್ನು ಗಳಿಸಬಲ್ಲದು. ಸಾಹಸೋದ್ಯಮ ಬಂಡವಾಳವು ಖಾಸಗಿ ಷೇರು ಬಂಡವಾಳದ ಪ್ರಕಾರವಾಗಿದೆ. ಇದನ್ನು ವೃತ್ತಿಪರ, ಹೊರಗಿನ ಹೂಡಿಕೆದಾರರು ಹೊಸ, ಅತಿ ಹೆಚ್ಚು ಅಭಿವೃದ್ಧಿ ಕಾಣುತ್ತಿರುವ ಸಂಸ್ಥೆಗಳಿಗೆ, IPOಗೆ ಕಂಪೆನಿಯನ್ನು ತೆಗೆದುಕೊಳ್ಳುವ ಅಥವಾ ವ್ಯವಹಾರವನ್ನು ಸ್ವಾಧೀನಪಡಿಸುವ, ವಿಲೀನಗೊಳಿಸುವ ಹಿತಾಸಕ್ತಿ ದೃಷ್ಟಿಯಿಂದ ಕೈಗೊಳ್ಳಲಾಗುತ್ತದೆ. ಏಂಜೆಲ್‌ ಬಂಡವಾಳ ಹೂಡಿಕೆ - ಏಂಜೆಲ್‌ ಹೂಡಿಕೆದಾರ ಅಥವಾ ಏಂಜೆಲ್‌ಗಳೆಂದರೆ (ವ್ಯವಹಾರದ ಏಂಜೆಲ್‌ ಅಥವಾ ಯುರೋಪಿನಲ್ಲಿ ಅನೌಪಚಾರಿಕ ಹೂಡಿಕೆದಾರರು ಎಂದು ಪರಿಚಿತರಾಗಿರುವ) ಒಂದು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಪರಿವರ್ತಿಸಬಹುದಾದ ಸಾಲಪತ್ರ ಅಥವಾ ಮಾಲೀಕತ್ವದ ಷೇರುಗಳಿಗೆ ಪ್ರತಿಯಾಗಿ ಬಂಡವಾಳವನ್ನು ಒದಗಿಸುವ ಶ್ರೀಮಂತ ವ್ಯಕ್ತಿ. ಚಿಕ್ಕ ಪ್ರಮಾಣದಲ್ಲಿದ್ದರೂ, ಏರಿಕೆಯನ್ನು ಕಾಣುತ್ತಿರುವ ಏಂಜಲ್ ಹೂಡಿಕೆದಾರರು ಏಂಜೆಲ್‌ ಸಮೂಹಗಳು ಅಥವಾ ಏಂಜೆಲ್‌ ಜಾಲಗಳಂತೆ ಸಂಘಟಿತರಾಗಿ ಸಂಶೋಧನೆಯನ್ನು ಹಂಚಿಕೊಂಡು ಹೂಡಿಕೆ ಬಂಡವಾಳವನ್ನು ಸಂಚಯಿಸುತ್ತಾರೆ. ವಾಣಿಜ್ಯ ಒಕ್ಕೂಟಗಳು - ಹಣಕಾಸು ಸೇವಾ ಒಕ್ಕೂಟವು ಹಣಕಾಸು ಸೇವೆಗಳ ಸಂಸ್ಥೆಯಾಗಿದ್ದು, ಇದು ಹಣಕಾಸು ಸೇವೆಗಳ ಮಾರುಕಟ್ಟೆಯ ಒಂದಕ್ಕಿಂತ ಹೆಚ್ಚಿನ ವಲಯಗಳಲ್ಲಿ ಸಕ್ರಿಯವಾಗಿರುವುದು. ಉದಾ. ಜೀವ ವಿಮೆ, ಸಾಮಾನ್ಯ ವಿಮೆ, ಆರೋಗ್ಯ ವಿಮೆ, ಆಸ್ತಿ ನಿರ್ವಹಣೆ, ಚಿಲ್ಲರೆ ಬ್ಯಾಂಕಿಂಗ್‌, ಸಗಟು ಬ್ಯಾಂಕಿಂಗ್‌, ಬಂಡವಾಳ ಹೂಡಿಕೆ ಬ್ಯಾಂಕಿಂಗ್‌, ಇತ್ಯಾದಿ. ವಿವಿಧ ಪ್ರಕಾರದ ವ್ಯವಹಾರಗಳು ಒಟ್ಟುಗೂಡಿದಾಗ ಸಂಭವಿಸುವ ವೈವಿಧ್ಯೀಕರಣ ಅನುಕೂಲತೆಗಳು ಅಂತಹ ವ್ಯವಹಾರಗಳ ಅಸ್ಥಿತ್ವಕ್ಕಿರುವ ಪ್ರಮುಖ ತರ್ಕಾಧಾರವಾಗಿದೆ. ಅಂದರೆ ಒಂದೇ ಸಂದರ್ಭದಲ್ಲಿ ಕೆಟ್ಟ ಘಟನೆಗಳು ಸಂಭವಿಸುವುದಿಲ್ಲ. ಇದರ ಪರಿಣಾಮದಿಂದಾಗಿ, ಈ ವಾಣಿಜ್ಯ ಒಕ್ಕೂಟಕ್ಕೆ ಬೇಕಾಗುವ ಆರ್ಥಿಕ ಬಂಡವಾಳವು ಸಾಮಾನ್ಯವಾಗಿ ಅದರ ಭಾಗಗಳ ಒಟ್ಟುಮೊತ್ತಕ್ಕೆ ಬೇಕಾಗುವ ಆರ್ಥಿಕ ಬಂಡವಾಳಕ್ಕಿಂತ ಗಣನೀಯವಾಗಿ ಕಡಿಮೆಯಿರುವುದು.