ವಿಷಯಕ್ಕೆ ಹೋಗು

ಸದಸ್ಯ:Rakshitha v d/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೇವ ಇದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ದೇವಚಳ್ಳ ಗ್ರಾಮದಲ್ಲಿರುವ ಒಂದು ಪುಟ್ಟ ಹಳ್ಳಿಯಾಗಿದೆ.

ಇತಿಹಾಸ

[ಬದಲಾಯಿಸಿ]

ಈ ಊರು ತನ್ನದೆ ಆದಂತಹ ಐತಿಹ್ಯವನ್ನು ಹೊಂದಿದೆ.ಈ ಊರಿನಲ್ಲಿ ಬಹಳ ಹಿಂದಿನ ಕಾಲದಲ್ಲಿ ಜೈನಧರ್ಮದ ಜನರು ವಾಸವಿದ್ದರು. ಅವರು ಈಶ್ವರ ದೇವರ ಆರಾಧಕರಾಗದ್ದರಿಂದ ಈಶ್ವರ ದೇವರ ಸಣ್ಣದಾದ ಪ್ರತಿಷ್ಟೆಯನ್ನು ಮಾಡಿ ದೇವತಾರಾಧನೆ ಮಾಡಿಕೊಂಡಿದ್ದರು.ಹೀಗಿರುವಾಗ ಪೂಜೆಗೋಸ್ಕರ ಒಂದು ಬ್ರಾಹ್ಮಣ ಕುಟುಂಬವೊಂದನ್ನು ನೇಮಿಸಿದ್ದರು.ಕಾಲಕ್ರಮೇಣವಾಗಿ ಆ ಜೈನರು ಜಾಗ ಮತ್ತು ದೇವಾಲಯವನ್ನು ಬ್ರಾಹ್ಮಣರಿಗೆ ವಹಿಸಿಕೊಟ್ಟು ಹೋದರು.ಆ ಬ್ರಾಹ್ಮಣ ಕುಟುಂಬದವರು ದೇವರ ಪೂಜೆಯನ್ನು ಮಾಡುತ್ತಾ ಇದ್ದರು.ತದನಂತರ ಆ ಕುಟುಂಬ ಅಳಿದು ಹೋಗುತ್ತದೆ. ನಂತರ ಅಲ್ಲಿದ್ದಂತಹ ದೇವರ ವಿಗ್ರಹಗಳೆಲ್ಲ ಮಣ್ಣು ಪಾಲಾಗಿ ಹೋಗುತ್ತದೆ.ಕೆಲವು ಕಾಲಗಳ ನಂತರ ಅಲ್ಲಿನ ಜನರು ಸ್ಥಳಸಾನಿಧ್ಯದ ಬಗ್ಗೆ ಚಿಂತನೆ ಮಾಡಿದಾಗ ಅದರ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ.ಆದರೆ ಆ ಸ್ಥಳದಲ್ಲಿ ದೇವರ ಪ್ರತಿಷ್ಠೆ ಇದೆ ಎಂದು ನಂಬಿ ಈ ಸ್ಥಳಕ್ಕೆ ದೇವ ಹೆಸರು ಬರುತ್ತದೆ.ಈಗ ಈ ಹೆಸರು ಜನಜನಿತವಾಗಿದೆ.

ಸುತ್ತಮುತ್ತಲಿನ ಹಳ್ಳಿಗಳು

[ಬದಲಾಯಿಸಿ]

ದಂಡಿನ ಮನೆ ಮಡಪ್ಪಾಡಿ ಮಾವಿನಕಟ್ಟೆ ದೇವ ಚಳ್ಳ

ಕೃಷಿಗಳು

[ಬದಲಾಯಿಸಿ]

ಅಡಿಕೆ ತೆಂಗು ಕರಿಮೆಣಸು ಬಾಳೆ

ಶಿಕ್ಷಣಸಂಸ್ಥೆ

[ಬದಲಾಯಿಸಿ]

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ದೇವ

ಮಾತನಾಡುವ ಭಾಷೆಗಳು

[ಬದಲಾಯಿಸಿ]

ಕನ್ನಡ ಅರೆಭಾಷೆ ತುಳು