ಸದಸ್ಯ:Rakshitha 2/ನನ್ನ ಪ್ರಯೋಗಪುಟ
ಎಂ ಆರ್ ಪೂವಮ್ಮ
[ಬದಲಾಯಿಸಿ]ಮಾಚೆಟ್ಟಿರಾ ರಾಜು ಪೂವಮ್ಮ (ಜನನ ೫ ಜೂನ್ ೧೯೯೦) ಒಬ್ಬ ಭಾರತೀಯ ಓಟಗಾರ್ತಿ, ೪೦೦ಮೀಟರ್ ಸ್ಪರ್ಧೆಯಲ್ಲಿ ಸ್ಪರ್ಧಿಸುತ್ತಾಳೆ. ಅವರು ೨೦೦೮ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು.ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ತನ್ನ ಕೊಡುಗೆಗಳಿಗಾಗಿ೨೦೧೫ರಲ್ಲಿ ಅರ್ಜುನ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.
ಜೀವನ
[ಬದಲಾಯಿಸಿ]ಪೂವಮ್ಮ ಎಂ ಜಿ ರಾಜು ೫ ಜೂನ್ ೧೯೯೦ರಲ್ಲಿ ಜನಿಸಿದರು.ಮಂಗಳೂರಿನಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮತ್ತು ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಮಂಗಳೂರು ಎನ್.ಡಿ ಕಾಲೇಜ್ ಆಫ್ ಬಿಸಿನೆಸ್ ಮಾನೇಜ್ ಮೆಂಟಿನಿಂದ ವ್ಯವಹಾರ ನಿರ್ವಹಣೆಯಲ್ಲಿ ಪದವಿಯನ್ನು ಪಡೆದರು.[೧]
- ವೃತ್ತಿ ಜೀವನ*
ಪೂವಮ್ಮರವರು ೨೦೦೮ರ ಬೀಜಿಂಗ್ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದು ಪ್ರಸ್ತುತ ೪೦೦ಮೀಟರ್ ವಿಭಾಗದಲ್ಲಿ ಏಷ್ಯಾದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ೨೦೦೮ರ ಯುಥ್ ಕಾಮನ್ ವೆಲ್ತ್ ಕ್ರೀಡಾಕೂಟ ಮತ್ತು ೪*೪೦೦ಮೀಟರ್ ವಿಭಾಗದಲ್ಲಿ ನಡೆದ ೪೦೦ ಮೀಟರ್ ಪಂದ್ಯಾವಳಿಯಲ್ಲಿ ಅವರು ಸಿಲ್ವರ್ ಪ್ರಶಸ್ತಿಯನ್ನು ಗೆದ್ದರು. ೨೦೧೧ರಲ್ಲಿ ಕೊಲ್ಕತ್ತಾದಲ್ಲಿ ಅವರು ಓಪನ್ ನ್ಯಾಷನಲ್ಸ್ ನಲ್ಲಿ ಮೊದಲಬಾರಿಗೆ ನಿಂತಾಗ ಆಕೆಯ ಅದೃಷ್ಟ ಕುಲಾಯಿಸಿಯಿತು. ಆಕೆಯು ತನ್ನ ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯವಾಯಿತು.
ಪ್ರಶಸ್ತಿಗಳು
[ಬದಲಾಯಿಸಿ]ಪೂವಮ್ಮರವರು ೨೦೧೨ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಎರಡು ಏಷ್ಯನ್ ಗ್ರ್ಯಾಂಡ್ ಫಿಕ್ಸ್ ನಲ್ಲಿ ಎರಡು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದುಕೊಂಡರು. ಅವರು ಬ್ಯಾಂಕಾಕ್‌ನಲ್ಲಿ ೨೦೧೩ ಏಷ್ಯನ್ ಗ್ರ್ಯಾಂಡ್ ಫ್ರಿಕ್ಸ್ ನಲ್ಲಿ ಚಿನ್ನದ ಪದಕವನ್ನು ಗೆದ್ದರು[೨].
ವಿಶೇಷ ಸಾಧನೆಗಳು
[ಬದಲಾಯಿಸಿ]- ಕ್ರೀಡಾ ಸಾಧನೆ*
ಆಕೆಯು ೫೨.೭೫ ಸೆಕೆಂಡುಗಳ ವೇಗದ ಸಮಯವನ್ನು ತೆಗೆದುಕೊಂಡು ೨೦೧೩ರಲ್ಲಿ ಭಾರತದಲ್ಲಿ ಪಟಿಯಾಲದ ಫೆಡರೇಷನ್ ಕಪ್‌ನಲ್ಲಿ ಮೊದಲ ಸ್ಥಾನವನ್ನು ಪಡೆದರು. ಪೂವಮ್ಮರವರು ಮಾಸ್ಕೋ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ೨೦೧೩ರಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅಲ್ಲಿ ಅವರು ೪*೪೦೦ ಮೀಟರ್ ರಿಲೇ ತಂಡದಲ್ಲಿ ಭಾಗವಹಿಸಿದ್ದರು. ಕೌರ್ ಮತ್ತು ಪ್ರಿಯಾಂಕಾ ಪವಾರ್ ಅವರ ೨೦೧೪ರ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ೪*೪೦೦ಮೀಟರ್ ರಿಲೇನಲ್ಲಿ ಅವರು ಚಿನ್ನದ ಪದಕವನ್ನು ಪಡೆದರು[೩].
ಉಲ್ಲೇಖಗಳು
[ಬದಲಾಯಿಸಿ]<reference/>
- ↑ http://www.veethi.com/india-people/m._r._poovamma-profile-9409-15.htm
- ↑ https://currentaffairs.gktoday.in/m-r-poovamma-babita-kumari-conferred-arjuna-awar...
- ↑ http://www.dnaindia.com/sports/report-asian-athletics-championship-despite-absence-of-big-names-india-s-achievement-is-truly-noteworthy-2497373