ಸದಸ್ಯ:Rakshanda HM/sandbox
ಸಿಸ್ಟೀಸರ್ಕೋಸಿಸ್
[ಬದಲಾಯಿಸಿ]ಸಿಸ್ಟೀಸರ್ಕೋಸಿಸ್ ಎಂಬ ಅಂಗಾಂಗದ ಸೋಂಕು ಟೇಪ್ ವರ್ಮ್(ಲಾಡಿ ಹುಳು) ವಿನ ಸಮಸ್ಯೆಯಿಂದ ಉಂಟಾಗುವುದು. ವರ್ಷಾನುಗಟ್ಟಲೆ ಇದರ ಅರಿವೇ ಇಲ್ಲದಂತೆ, ಯಾವ ಚಿಹ್ನೆಗಳೂ ಇರುವುದಿಲ್ಲ. ಕೆಲ ವರ್ಷಗಳ ಬಳಿಕ ಆರಂಭವಾಗುತ್ತದೆ. ಕೆಲ ವರ್ಷಗಳ ಬಳಿಕ ಚರ್ಮದಡಿಯಲ್ಲಿ ಗಟ್ಟಿಯಾದ ಗಡ್ಡೆ ಕಾಣಿಸಿಕೊಂಡು ಅದನ್ನು ಶಸ್ತ್ರ ಚಿಕೆತ್ಸೆಯ ಮೂಲಕ ತೆಗಿಸಿಕೊಳ್ಳಲು ಹೋದಾಗ ಲಾಡಿ ಹುಳುವು ಜೀವಂತವಾಗಿ ಕಂಡುಬರುತ್ತದೆ. ಮನುಷ್ಯನ ಮೆದುಳಿನೊಳಗೆ, ಕಣ್ಣಿನೊಳಗೆ, ಮಾಂಸಖಂಡದಡಿಯಲ್ಲಿ ಹುಳು ವರ್ಷಗಳ ಕಾಲ ಮುಚ್ಚಿಟ್ಟುಕೊಂಡಿದ್ದು ಅಂಧತ್ವ, ಬ್ರೇನ್ ಹೆಮರೇಜ್ ಮುಂತಾದ ತೊಂದರೆಗಳನ್ನು ಉಂಟುಮಾಡುತ್ತದೆ.
ರೋಗ ಸೂಚನೆ
[ಬದಲಾಯಿಸಿ]ಟೇಪ್ ವರ್ಮ್ ಮೊಟ್ಟೆಯನ್ನೊಳಗೊಂಡ ಸಿಸ್ಟ್(ಪೂತಿಕೋಶ) ದೇಹದೊಳಗೆ ಸೇರುತ್ತದೆ. ಕೆಲ ಸಮಯದ ನಂತರ ಇದು ತೆರೆದುಕೊಂಡು, ಮೊಟ್ಟೆ ಒಡೆದು ಸಿಸ್ಟಿಸರ್ಕ್(ಹುಳುವಿನ ಲಾರ್ವ) ರಕ್ತದಲ್ಲಿ ಬೆರೆತು ವಿವಿಧ ಅಂಗಗಳನ್ನು ಹೊಕ್ಕು ಮನೆ ಮಾಡಿಕೊಂಡು ವಾಸಿಸುತ್ತವೆ. ಕಣ್ಣು, ಮೆದುಳು, ಶ್ವಾಸಕೋಶಗಳು, ಮಾಂಸಖಂಡ, ಚರ್ಮ ಮುಂತಾಗಿ ದೇಹದಾದ್ಯಂತ ಹರಡಿಕೊಂಡಿರುತ್ತದೆ. ಉದ್ದವಾದ ಟೇಪಿನಾಕಾರದ ಈ ಹುಳು ಮನುಷ್ಯನ ಸಣ್ಣ ಕರುಳನ್ನು ಸೇರಿ ಪೌಷ್ಟಿಕ ದ್ರವ್ಯವನ್ನು ಹೀರಿಕೊಳ್ಳುತ್ತದೆ. ಹುಳುವಿನ ದೇಹದಲ್ಲಿ ಚಿಕ್ಕ ಚಿಕ್ಕ ಭಾಗಗಳಿದ್ದು, ಪ್ರತಿ ಭಾಗಗಳಲ್ಲೂ ಅದರ ಮೊಟ್ಟೆಯ ಸಿಸ್ಟ್ಗಳಿದ್ದು, ಆ ಭಾಗ ಬೇರ್ಪಟ್ಟು, ಮಲದೊಂದಿಗೆ ಬೆರೆತು ವಿಸರ್ಜಿತಗೊಳ್ಳುತ್ತದೆ. ಹೀಗೆ ಹುಳುವಿನ ಚಕ್ರ ಮನುಷ್ಯನ ಮತ್ತು ಕಲುಷಿತ ವಾತಾವರಣದ ಸುತ್ತ ಸುತ್ತಿರುತ್ತದೆ. ಕೊತ್ತಂಬರಿ, ಕರಿಬೇವು, ಹಸಿರು ಸೊಪ್ಪುಗಳು, ಹಸಿ ತರಕಾರಿಗಳು, ಕಲುಷಿತ ನೀರು, ಸರಿಯಾಗಿ ಬೇಯದ ಹಂದಿ ಮಾಂಸ ಮುಂತಾದವುಗಳನ್ನು ಸೇವಿಸಿದಾಗ ಸಿಸ್ಟ್ ದೇಹದೊಳಗೆ ಸೇರಿ ಸಿಸ್ಟ್ ಒಡೆದು ಮೊಟ್ಟೆಯಿಂದ ಹುಳು ಆಚೆ ಬಂದು ಬೆಳೆಯಲಾರಂಭಿಸುತ್ತದೆ. ಆ ರೋಗ ಹಂದಿ ಮಾಂಸ ತಿನ್ನುವ ಮಾಂಸಹಾರಿಗಳಲ್ಲಷ್ಟೇ ಅಲ್ಲ, ಸಸ್ಯಹಾರಿಗಳಲ್ಲೂ ಕಂಡು ಬರುತ್ತದೆ. ಮಾನವನ ಮಲ, ಕಲುಷಿತ ನೀರು ಮುಂತಾದವು, ಹಣ್ಣು, ಎಲೆಕೋಸು, ಸೌತೆಕಾಯಿ, ಕ್ಯಾರೆಟ್, ಬೀಟ್ರೂಟ್, ಕೊತ್ತಂಬರಿ ಸೊಪ್ಪು, ಕರಿಬೇವು, ಸೊಪ್ಪು, ತರಕಾರಿಗಳಲ್ಲಿ ಬೆರೆತಿದ್ದು, ಸಿಸ್ಟ್ ಎಷ್ಟೇ ತೊಳೆದರೂ ಹೋಗದೇ ಅಲ್ಲೇ ಅಂಟಿಕೊಂಡಿದ್ದು, ನಮ್ಮ ಹೊಟ್ಟೆಯೊಳಗೆ ಸೇರಿ ವಿವಿಧ ಭಾಗಗಳಿಗೆ ಹರಡಿಬಿಡುತ್ತದೆ. ಇನ್ಟ್ರಾ ಆಕ್ಯುಲಾರ್ ಸಿಸ್ಟೀಸರ್ಕೋಸಿಸ್(ಕಣ್ಣಿನೊಳಗೆ ಉಂಟಾಗುವುದು) 'ಟೇಪ್ ವರ್ಮ್ ನ ಸಿಸ್ಟ್ ಕಣ್ಣಿನಾದ್ಯಂತ ಎಲ್ಲಿ ಬೇಕಾದರೂ ಸೇರಿಕೊಂಡಿರಬಹುದು, ಮುಖ್ಯವಾಗಿ ಕಣ್ಣಿನ ರೆಟಿನ ಪದರದಡಿಯಲ್ಲಿ ಕಂಡು ಬರುವುದು. ವಿಟ್ರಿಯಸ್(ಕಣ್ಣಿನೊಳಭಾಗದಲ್ಲಿರುವ ಜೆಲ್, ರೆಟಿನಾ ಪದರದ ಮೇಲೇ), ಕಂಜಂಕ್ಟಿವ(ಕಣ್ಣಿನ ಮೇಲ್ಪದರ)ದ ಮೇಲೆ, ಕಣ್ಣಿನ ಚಲನೆಗೆ ಸಹಾಯಕವಾದ ಮಾಂಸಖಂಡ ಮೇಲೆ, ಆಪ್ಟಿಕ್ ನರ(ಕಣ್ಣಿನ ನರ)ದ ಮೇಲೆ ಮುಂತಾದೆಡೆಗಳಲ್ಲಿ ಸೇರಿರುತ್ತದೆ.
ರೋಗ ಲಕ್ಷಣಗಳು
[ಬದಲಾಯಿಸಿ]ಸಿಸ್ಟ್ ಗಾತ್ರದಲ್ಲಿ ಹಿಗ್ಗಲಾರಂಭಿಸಿದಂತೆ ದೃಷ್ಟಿಮಾಂದ್ಯತೆ, ಡಬಲ್ ವಿಷನ್, ಕಣ್ಗುಡ್ಡೆ ಮುಂಚಾಚಿಕೊಳ್ಳುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುವುದು. ಕಣ್ಣಿನಲ್ಲಿ ಸಿಸ್ಟ್ ಚಲಿಸಲಾರಂಭಿಸಿದಂತೆ ಕಣ್ಣಿನ ಉರಿಯೂತ ಹೆಚ್ಚಿ ನೋವು, ಕಣ್ಣು ಕೆಂಪಾಗುವುದು ಪ್ರಾರಂಭವಾಗುತ್ತದೆ. ಸಿಸ್ಟ್ ಕಣ್ಣಿನ ಮೇಲ್ಪದರದ ಹಿಂಭಾಗದಲ್ಲಿದ್ದರೆ ಪರೀಕ್ಷೆ ಮಾಡಿದಾಗ ಕಂಡುಬರುತ್ತದೆ. ಕಣ್ಣಿನ ಒಳಭಾಗಗಳಲ್ಲಿದ್ದರೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಸಿ.ಟಿ.ಸ್ಕ್ಯಾನಿಂಗ್, ಎಮ್.ಆರ್.ಐ. ಮುಂತಾದವುಗಳಿಂದ ತಿಳಿಯಬಹುದು.
ಚಿಕಿತ್ಸಾ ವಿಧಾನ
[ಬದಲಾಯಿಸಿ]ಸಿಸ್ಟ್ ಕಣ್ಣಿನ ಗುಡ್ಡೆಯೊಳಗೆ ಇದ್ದಾಗ ಅದನ್ನು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗುವುದು. ಕಣ್ಣಿನ ಹೊರಭಾಗದಲ್ಲಿ ಕಂಡುಬರುವುದನ್ನು ಸ್ಟೀರಾಯ್ಡ್ ಕೊಟ್ಟು ಗುಣಪಡಿಸಲಾಗುವುದು. ಕಣ್ಣಿನ ಸಿಸ್ಟೀಸರ್ಕೋಸಿಸ್ ಕಣ್ಣಿನ ಯಾವುದೇ ಭಾಗದಲ್ಲಾಗಿರಲಿ, ಕೂಡಲೇ ನರತಜ್ನರನ್ನು ಕಂಡು, ಸಿಸ್ಟ್ ಮೆದುಳನ್ನು ಸೇರಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಚರ್ಮ
[ಬದಲಾಯಿಸಿ]ಸಾಮಾನ್ಯವಾಗಿ, ಸಿಸ್ಟೀಸರ್ಕೋಸಿಸ್ ಗೆ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿಲ್ಲ. ನೋವುಳ್ಳ ಗಡ್ಡೆಗಳನ್ನು ಶಸ್ತ್ರಚಿಕೆತ್ಸೆಯ ಮೂಲಕ ತೆಗೆಯಬಹುದು.
ಕಣ್ಣು
[ಬದಲಾಯಿಸಿ]ಕಣ್ಣಿನ ರೋಗವಿದ್ದಲ್ಲಿ, ಶಸ್ತ್ರಚಿಕೆತ್ಸೆಯ ಮೂಲಕ ನಿರ್ಮೂಲನೆ ಮಾಡುವುದು ಅಗತ್ಯ. ಇಲ್ಲವಾದಲ್ಲಿ ಕಣ್ಣಿನೊಳಗೆ ಗಾಯಗಳಾಗಿ ಹಾನಿ ಉಂಟುಮಾಡುತ್ತವೆ.
ಮೆದುಳಿನಲ್ಲಿ
[ಬದಲಾಯಿಸಿ]ಮೆದುಳಿನಲ್ಲಿ ಅನೇಕ ತೊಂದರೆಗಳು ಕಂಡುಬರುವುವು. ಸಾಮಾನ್ಯವಾಗಿ ಉಂಟಾಗುವುದು ಸೀಶರ್ ಕನ್ವಲ್ಷ್ನ್ಸ್ ಅಥವಾ ಫಿಟ್ಸ್. ಸಿಸ್ಟ್ ಗಳು ಹೆಚ್ಚಾಗಿದ್ದರೆ ತಲೆ ಶೂಲೆ ಹೆಚ್ಚುತ್ತದೆ. ಸಿಸ್ಟ್ ಗಳು ಕರುಳಿನಲ್ಲಲ್ಲದೇ ಬೇರೆಡೆ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ. ಹಾಗಾಗಿ ಅವು ಸತ್ತಡೆಯೆಲ್ಲಾ ವಿಷ ಉತ್ಪತ್ತಿಯಾಗಿ, ಕಣ್ಣು ಮತ್ತು ಮೆದುಳಿಗೆ ಹಾನಿ ಉಂಟು ಮಾಡುತ್ತದೆ. ಇದರಿಂದ ಮೆದುಳಿನ ಜ್ವರ ಬರಬಹುದು. ಸಿಸ್ಟ್ ಗಾತ್ರದಲ್ಲಿ ಹಿರಿದಾಗಿ, ಬ್ರೈನ್ ಟ್ಯೂಮರ್ ಆಗಿ, ಸೆರೆಬ್ರೋ ಸ್ಪೈನಲ್ ಫ್ಲೂಯಿಡ್ ನ ಚಲನೆಗೆ ಅಡ್ಡಿ ಮಾಡಿ ಹೈಡ್ರೋಸಿಫ್ಯಾಲಸ್ ಉಂಟು ಮಾಡುತ್ತದೆ.
ಸಿಸ್ಟೀಸರ್ಕೋಸಿಸ್ ತಡೆಗೆ ಕ್ರಮಗಳ
[ಬದಲಾಯಿಸಿ]ಕುಡಿಯುವ ನೀರನ್ನು ಶುದ್ಧೀಕರಿಸಿ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುವುದು. ಸ್ವಚ್ಚತೆ ಕಾಪಾಡುವುದು. ಶುಚಿತ್ವವನ್ನು ಪಾಲಿಸುವುದು.
ಸಾವು
[ಬದಲಾಯಿಸಿ]೧೯೯೦ ಸಾವಿನ ಸಂಖ್ಯೆಯು ೭೦೦ ಇದ್ದು, ೨೦೧೦ ರಲ್ಲಿ, ವಿಶ್ವಾದ್ಯಂತ ೧೨೦೦ ಜನ ಸಾವನಪ್ಪಿದರು. ಅಮೇರಿಕಾದಲ್ಲಿ ೧೯೯೦-೨೦೦೨ ಅವಧಿಯಲ್ಲಿ, ೨೨೧ ಸಿಸ್ಟೀಸರ್ಕೋಸಿಸ್ ಸಾವುಗಳನ್ನು ಗುರುತಿಸಲಾಗಿದೆ. ಮರಣ ಪ್ರಮಾಣ ಲ್ಯಾಟಿನ್ ಮತ್ತು ಪುರುಷರ ಅತ್ಯಧಿಕವಾಗಿದ್ದವು. ಸಾವಿನ ಸರಾಸರಿ ವಯಸ್ಸು ೪೦.೫ ವರ್ಷಗಳು (ಶ್ರೇಣಿ ೨-೮೮) ಆಗಿತ್ತು. ಹೆಚ್ಚಿನ ರೋಗಿಗಳು, ೮೪.೬% ವಿದೇಶಿ ಜನನ, ಮತ್ತು ೬೨% ಮೆಕ್ಸಿಕೋದಿಂದ ವಲಸೆ ಹೋಗಿದ್ದವರು. ಸಿಸ್ಟೀಸರ್ಕೋಸಿಸ್ ನಿಂದ ನಿಧನರಾದ ೩೩ ಯುಎಸ್ ಮೂಲದ ವ್ಯಕ್ತಿಗಳು ಎಲ್ಲಾ ಸಿಸ್ಟೀಸರ್ಕೋಸಿಸ್ ಸಂಬಂಧಿತ ೧೫% ಸಾವುಗಳನ್ನು ನಿರೂಪಿಸುತ್ತವೆ. ೬೦% ರಷ್ಟು ಸಿಸ್ಟೀಸರ್ಕೋಸಿಸ್ ಮರಣ ಪ್ರಮಾಣವನ್ನು ಅತಿ ಹೆಚ್ಚಾಗಿ ಕ್ಯಾಲಿಫೋರ್ನಿಯಾದಲ್ಲಿ ಕಾಣಬಹುದು.