ವಿಷಯಕ್ಕೆ ಹೋಗು

ಸದಸ್ಯ:Raghukg/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ವಾಲಾಗುಟ್ಟ

ಜ್ವಾಲಾಗುಟ್ಟ ಒಬ್ಬ ಭಾರತೀಯ ಬ್ಯಾಂಡ್ಮಿಟನ್ ಆಟಗಾರ್ತಿ. ಇವರು ಮಹಾರಾಷ್ಟ್ರದ ವಾರ್ದಾದಲ್ಲಿ ಸೆಪ್ಟಂಬರ್ ೧೯೮೩ ರಂದು ಜನಿಸಿದರು. ಅವರು ಬಾಲ್ಯದಲ್ಲಿದ್ದಾಗಲೇ ಬ್ಯಾಂಡ್ಮಿಟನ್ ಆಟದಲ್ಲಿ ಆಸಕ್ತಿ ಹೊಂದಿದ್ದ ಇವರು ಇಂದು ಭಾರತೀಯ ಅತ್ಯಂತ ಯಶಸ್ವಿ ಡಬಲ್ ಬ್ಯಾಂಡ್ಮಿಟನ್ ಆಟಗಾರ್ತಿಯಾಗಿದ್ದಾರೆ. ಅವರು ೧೯೯೦ ರ ಆರಂಭದಿಂದ ೨೦೧೭ ರವರೆಗಿನ ಅಂತರಾಷ್ಟೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ೧೪ ಬಾರಿ ನ್ಯಾಷನಲ್ ಚಾಂಪಿಯನ್ ಪಡೆದಿದ್ದಾರೆ. ವೃತ್ತಿ ಜೀವನದಲ್ಲಿ ಮೊದಲು ಶೂತಿ ಕುರಿಯನ್ ಜೊತೆ ಆಡಿದರು. ಅಶ್ವಿನಿ ಪೊನ್ನಪ್ಪ ಅವರೊಂದಿಗೆ ಅಂತರಾಷ್ಟ್ರೀಯ ಯಶಸ್ಸನ್ನು ಕಂಡುಕೊಂಡರು. ಹಾಗೂ ಬಿ.ಎಮ್. ಡಬ್ಲುನ ವಿಶ್ವಶ್ರೇಯಾಂಕದ ಅಗ್ರ ೨೦ ರೊಳಗಿನ ಜೋಡಿಯಾಗಿ ಸ್ಥಾನ ಗಿಟ್ಟಿಸಿಕೊಂಡರು. ಒಲಂಪಿಕ್ನಲ್ಲಿ ಪೊನ್ನಪ್ಪ ಅವರೊಂದಿಗೆ ಮಿಶ್ರಿತ ಡಬಲ್ಸ್ನಲ್ಲಿ  ಎರಡು ಪಂದ್ಯಗಳಿಗೆ ಅರ್ಹತೆ ಪಡೆದಿರುವ ಭಾರತದ ಮೊದಲ ಚಾಂಪಿಯನ್ ಷಿಪ್ ಆಟಗಾರ್ತಿ. 

ಗುಟ್ಟಾರವರು ನುರಿತ ಎಡಗೈ ಸ್ಟ್ರೋಕ್ ಆಟಕ್ಕೆ ಹೆಸರುವಾಸಿಯಾಗಿದ್ದಾರೆ.