ಸದಸ್ಯ:Raghavendrapk/sandbox

ವಿಕಿಪೀಡಿಯ ಇಂದ
Jump to navigation Jump to search
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ

'ಮಾನ್ಯಶ್ರಿ ಅಬ್ದುಲ್ ಕಲಾಂ'ರವರು ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ತಮ್ಮ ಅಗಾಧವಾದ ಕೊಡುಗೆಯನ್ನು ನೀಡಿದ್ದಾರೆ. ಅವುಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ, ಅಂತರಿಕ್ಷದಲ್ಲಿ ಜೀವನ, ವಿಜ್ಞಾನದಿಂದ ಸಾಮಾನ್ಯ ಮನುಷ್ಯನಿಗಾಗುವ ಅನಕೂಲತೆಗಳ ಬಗ್ಗೆ ತಿಳಿಸಿದ್ದಾರೆ. ಮಕ್ಕಳಿಗೋಸ್ಕಾರ ತಮ್ಮ ಭಾಷಣಗಳಿಂದ ಅವರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮತ್ತು ಆಸಕ್ತಿಯನ್ನು ಕೆರಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ. ತಮ್ಮ ಸರಣಿ ಲೇಖನಗಳ ಮುಖಾಂತರ ಯುವಕರಲ್ಲಿ ಒಂದು ಚಿಂತನೆಯ ಸೆಲೆಯನ್ನು ಆರಂಭಿಸಿದ್ದಾರೆ. ಅವರು ರಾಷ್ಟ್ರಪತಿಗಳಾದ ಕ್ಷಣದಿಂದಲೂ ಮಕ್ಕಳ ಕಲಿಕೆಯ ಬಗ್ಗೆ ಹಾಗೂ ಅವರಲ್ಲಿ ಉಂಟಾಗುವ ಪ್ರಶ್ನೆಗಳ ಬಗ್ಗೆ ಪರಿಹಾರ ಸೂಚಿಸುವಲ್ಲಿ ಸಹಾಯ ಹಸ್ತವನ್ನು ನೀಡಿದ್ದಾರೆ. ವೈಜ್ಞಾನಿಕ ಬೆಳವಣಿಗೆಯನ್ನು ಸಾಮಾನ್ಯ ಮನುಷ್ಯನ ಬಳಕೆಗೆ ಯಾವ ರೀತಿ ಸಹಾಯಕಾರಿ ಎಂಬುದರ ಬಗ್ಗೆ ವಿವರಣೆಗಳನ್ನು ನೀಡಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಅನೇಕ ದೇಶಗಳನ್ನು ಸುತ್ತಾಡಿ ವಿಜ್ಞಾನದ ಬಗ್ಗೆ ಸರಣಿ ಭಾಷಣಗಳನ್ನು ನೀಡಿದ್ದಾರೆ.

ಅಬ್ದುಲ್ ಕಲಾಂರವರ ಪರಿಚಯ[ಬದಲಾಯಿಸಿ]

 • ರಾಷ್ತ್ರಪತಿ ಆಗುವುದಕ್ಕೂ ಮುನ್ನ ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್ : ಡಿ.ಆರ್.ಡಿ.ಓ.) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ)ದಲ್ಲಿ ವೈಮಾನಿಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಇವರು ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಾಂತ್ರಜ್ಞಾನವನ್ನು ತಯಾರಿಸಿರುವ ಕಾರಣ ,ಕ್ಷಿಪಣಿಗಳ ಜನಕ (ಮಿಸೈಲ್ ಮ್ಯಾನ್ ಆಫ್ ಇಂಡಿಯ)ಎ೦ದು ಕರೆಯಲ್ಪಡುತ್ತಾರೆ.
 • ಸನ್ 1998 ರಲ್ಲಿ ಪೋಖ್ರನ್-2 ನ್ಯುಕ್ಲಿಯರ್ ಪರೀಕ್ಷೆಯಲ್ಲಿ, ತಾಂತ್ರಿಕವಾಗಿ,ರಾಜಕೀಯವಾಗಿ ಪ್ರಧಾನ ಪಾತ್ರವನ್ನು ವಹಿಸಿದರು.[೧] ಆದರೂ ಇವರು ಅಪವಾದಗಳಿಂದ ದೂರವಿರಲ್ಲಿಲ್ಲ, ಕೇವಲ ಹೋಮಿ ಜಹಂಗೀರ್ ಭಾಬಾ ಮತ್ತು ವಿಕ್ರಮ್ ಸಾರಾಭಾಯಿಯವರ ಕೆಲಸವನ್ನು ಮುಂದುವರಿಸಿದರೆಂದು ಹಾಗು ನೂಕ್ಲಿಯರ್ ವಿಜ್ಞಾನದಲ್ಲಿ ಪ್ರಾವೀಣ್ಯವಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟರು.
 • ಪ್ರಸ್ತುತ ಈ ಮಹಾನ್ ಚೇತನವು ಸಂದರ್ಶಕ ಪ್ರಾಧ್ಯಾಪಕರಾಗಿ ಐ.ಐ.ಎಮ್, ಅಹಮದಾಬಾದ್ ಮತ್ತು ಐ.ಐ.ಎಮ್, ಇಂದೋರಿನಲ್ಲಿ ಸೇವೆ ಸಲ್ಲಿಸುತ್ತಿದರು.[೨]
 • ಅಣ್ಣಾ ವಿಶ್ವವಿದ್ಯಾಯಲಯ(ಚೆನ್ನೈ), ಜೆ.ಎಸ್.ಎಸ್ ವಿಶ್ವವಿದ್ಯಾಲಯ (ಮೈಸೂರು) ಮತ್ತು ಅನೇಕ ಸಂಶೋಧನಾಲಯದಲ್ಲಿ ವೈಮಾನಿಕ ಪ್ರಾದ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಭ್ರಷ್ಟಾಚಾರದ ವಿರುದ್ಧ 2011ರ ಮೇ ನಲ್ಲಿ ತಮ್ಮ ಧ್ವನಿಯೆತ್ತಿದ್ದರು. ಕಲಾಮ್ ಓರ್ವ ವಿಜ್ಞಾನಿಯು, ತಮಿಳು ಕವಿಯು ಹಾಗೂ ವೀಣಾ ವಾದಕರೂ ಆಗಿದ್ದಾರೆ.

ಅಬ್ದುಲ್ ಕಲಾಂರವರು ಬರೆದ ಪುಸ್ತಕಗಳು[ಬದಲಾಯಿಸಿ]

 1. ಡೆವೆಲಪ್ಮೆಂಟ್ಸ್ ಇನ್ ಫ್ಲುಯಿಡ್ ಮೆಖಾನಿಕ್ಸ್ ಅಂಡ್ ಸ್ಪೇಸ್ ಟೆಕ್ನಾಲಜಿ-
 2. ವಿಂಗ್ಸ್ ಆಫ್ ಫೈಯರ್
 3. ಇಂಡಿಯಾ 2020
 4. ಇಗ್ನೈಟೆಡ್ ಮೈಂಡ್ಸ್
 5. ಎನ್ವಿಶನಿಂಗ್ ಅನ್ ಎಂಪವರ್ಡ್ ನೇಷನ್
 6. ಮೈ ಜರ್ನೀ
 7. ದಿ ಲೈಫ್ ಟ್ರೀ
 8. ಚಿಲ್ರೆನ್ ಆಸ್ಕ್ ಕಲಾಂ

ಉಲ್ಲೇಖ[ಬದಲಾಯಿಸಿ]

 1. http://www.indiatvnews.com/news/india/know-more-about-the-india-s-major-nuclear-test-pokhran-ii-21296.html
 2. http://www.abdulkalam.nic.in/fluid.html