ಸದಸ್ಯ:Raghavendrafoundation/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನಕದಾಸರ ಪದಗಳು[ಬದಲಾಯಿಸಿ]

ಅಂಧಂತಮಸು ಇನ್ನಾರಿಗೆ ಗೋವಿಂದನ ನಿಂದಿಸುವರಿ[ಬದಲಾಯಿಸಿ]

ಅಂಧಂತಮಸು ಇನ್ನಾರಿಗೆ ಗೋವಿಂದನ ನಿಂದಿಸುವರಿಗೆ ಪ

ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ಅ

ಮಾತುಮಾತಿಗೆ ಹರಿಯ ನಿಂದಿಸಿ ಸ-ರ್ವೋತ್ತಮ ಶಿವನೆಂದು ವಾದಿಸಿಧಾತುಗ್ರಂಥಗಳೆಲ್ಲ ತೋರಿಸಿ ವೇದಾಂತ ಪ್ರಮಾಣಗಳ ಹಾರಿಸಿಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟುನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ 1

ಮೂಲಕವತಾರಕ್ಕೆ ಭೇದವು - ಮುಖ್ಯಶೀಲ ಪಂಡಿತರೊಳಗೆ ವಿವಾದವುಲೀಲಾ ಸಾದೃಶ್ಯವ ತೋರುತ -ಲಿಂಗಭಂಗವಿಲ್ಲದ ದೇಹ ಹಾರುತಮೂಲ ಗುರುವು ಕುಂತೀಬಾಲನೆನ್ನದೆ ವೃಥಾಶೀಲಗೆಟ್ಟಂಥ ಖೂಳರಿಗಲ್ಲದೆ ಮತ್ತೆ 2

ವ್ಯಾಸರ ಮಾತುಗಳಾಡುತ ವಿ-ಶ್ವಾಸ ಘಾತಕತನ ಮಾಡುತದೋಷವೆಂದರೆ ನುಡಿ ಕೇಳದೆ ಸಂತೋಷವೆಂದರೆ ನೋಡಿ ಬಾಳದೆಶೇಷಶಯನನಾದಿಕೇಶವರಾಯನದಾಸರೊಡೆಯ ಮಧ್ವದ್ವೇಷಿಗಳಿಗಲ್ಲದೆ 3

ಅಂಬುಜದಳಾಕ್ಷಗೆ ಮಂಗಳ[ಬದಲಾಯಿಸಿ]

ಅಂಬುಜದಳಾಕ್ಷಗೆ ಮಂಗಳ ಪ

ಸರ್ವ ಜೀವರಕ್ಷಕಗೆ ಮಂಗಳ ಅ

ಜಲಧಿಯೊಳಾಮ್ನಾಯ ತಂದಗೆ ಮಂಗಳಕುಲಗಿರಿ ತಾಳ್ದಗೆ ಜಯಮಂಗಳನೆಲನ ಕದ್ದಸುರನ ಗೆಲಿದಗೆ ಮಂಗಳಚೆಲುವ ನರಸಿಂಹಗೆ ಶುಭಮಂಗಳ1

ವಸುಧೆಯ ಈರಡಿಗೈದಗೆ ಮಂಗಳವಸುದಾಧಿಪರಳಿದಗೆ ಜಯಮಂಗಳದಶಕಂಧರನನ್ನು ಗೆಲಿದಗೆ ಮಂಗಳಪಶುಗಳ ಕಾಯ್ದಗೆ ಶುಭ ಮಂಗಳ 2

ಪುರ ತ್ರಯ ವಧುಗಳ ಗೆಲಿದಗೆ ಮಂಗಳತುರಗ ವಾಹನನಿಗೆ ಜಯ ಮಂಗಳವರ ನೆಲೆಯಾದಿಕೇಶವನಿಗೆ ಮಂಗಳಪರಮ ಪತ್ನಿವ್ರತಗೆ ಶುಭ ಮಂಗಳ 3