ಸದಸ್ಯ:Raghavendra shantgeri/ಬಸವೇಶ್ವರ ಏಕತಾ ಪ್ರತಿಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗದಗ-ಬೇಟಗೆರಿ ೧೧೬ಅಡಿ ಬಸವೇಶ್ವರ ಏಕತಾ ಪ್ರತಿಮೆ

ಗದಗ ನಗರದ ಮಧ್ಯ ಭಾಗದಲ್ಲಿರುವ ೧೦೫ ಎಕರೆ ಭೀಷ್ಮೆ ಕೆರೆ ಪ್ರದೇಶದಲ್ಲಿ ಸ್ಥಾಪಿಸಿರುವ ೧೧೬ ಅಡಿ ಎತ್ತರದ ಜಗಜ್ಯೋತಿ ಶ್ರೀ ಬಸವೇಶ್ವರರ ಬೃಹತ್ ಮೂರ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ. ೨೬ರಂದು ಅನಾವರಣಗೊಳಿಸಿದ್ದಾರೆ.

ಗದಗ ತೋಂಟದಾರ್ಯ ಮಠದ ಶ್ರೀ ಜಗದ್ಗುರು ಸಿದ್ದಲಿಂಗ ಸ್ವಾಮಿಗಳ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಗದಗ ಜಿಲ್ಲಾಡಳಿತ, ಪ್ರವಾಸೋದ್ಯಮ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಅನುದಾನದಲ್ಲಿ ‘ಟರ್ನ್ ಕೀ’ ಆಧಾರದ ಮೇಲೆ ಒಟ್ಟು ೭.೬೪ ಕೋಟಿ ರೂ. ವೆಚ್ಚದಲ್ಲಿ ಈ ಮೂರ್ತಿಯನ್ನು ನಿರ್ಮಿಸಲಾಗಿದೆ.

೨೦೦೯ರ ಆಗಸ್ಟ್ ತಿಂಗಳಲ್ಲಿ ಈ ಕಾಮಗಾರಿ ಪ್ರಾರಂಭವಾಗಿ ಸತತ ಆರು ವರ್ಷ ಕಾಲ ನಡೆಯಿತು. ಲೋಕೋಪಯೋಗಿ ಇಲಾಖೆ ಈ ಮೂರ್ತಿಯ ನಿರ್ಮಾಣ, ನಿರ್ವಹಣೆ ಹೊಣೆ ಹೊತ್ತಿತ್ತು.

ಪ್ರಸಿದ್ಧ ಶಿಲ್ಪಿ ಶ್ರೀಧರ ನೇತೃತ್ವದಲ್ಲಿ ಪಿಎಸ್‌ಎಪಿ ಆರ್ಕಿಟೆಕ್ಟ್ ಆರ್.ವಿ.ಮುಲ್ಕಿಪಾಟೀಲ ಇವರಿಗೆ ಈ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿಯ ಪ್ರತಿ ಹಂತದ ನಿರ್ವಹಣೆಗಾಗಿ ಜಿಲ್ಲಾ ಸಲಹಾ ಸಮಿತಿ, ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ವಿಶೇಷ ಮುತುವರ್ಜಿ ವಹಿಸಿ ಕಾಮಗಾರಿಗೆ ಅಗತ್ಯದ ಸಲಹೆ ನೀಡಿದ್ದಾರೆ. ೩ನೇ ತಾಂತ್ರಿಕ ಸಲಹೆಗಾರರಾಗಿ ಗಲಗಲಿ ಅಸೋಸಿಯೇಟ್ಸ್ನ ಅರವಿಂದ ಹುಬ್ಬಳ್ಳಿ ಕಾರ್ಯ ನಿರ್ವಹಿಸಿದ್ದಾರೆ.

      ಈ ಮೂರ್ತಿಯನ್ನು ಆರ್‌ಸಿಸಿಯಿಂದ ನಿರ್ಮಿಸಲಾಗಿದೆ. ೩೦ ಅಡಿ ಆಳದ ತಳಪಾಯದೊಂದಿಗೆ ವಿನ್ಯಾಸವನ್ನು ನುರಿತ ಆರ್‌ಸಿಸಿ ವಿನ್ಯಾಸಕಾರ ನಾಗಮೂಳೆ, ಆಚಾರ್ಯ ಅವರಿಂದ ಪಡೆದು ಗಾಳಿ ಒತ್ತಡ, ಭೂಕಂಪನ ಮೂರನೇ ಝೋನ್‌ದಲ್ಲಿ ಪರಿಗಣಿಸಿ ನಿರ್ಮಿಸಲಾಗಿದೆ.